PEN Literary Award: ಮೇ 23ರಂದು ಲೇಖಕಿ ಜೇದಿ ಸ್ಮಿತ್​ಗೆ ‘ಪೆನ್ ಸಾಹಿತ್ಯ ಸೇವಾ ಪುರಸ್ಕಾರ’ ಪ್ರದಾನ

Zadie Smith : ಪ್ರಸಕ್ತ ಸಾಲಿನ ಪೆನ್ ಅಮೆರಿಕಾ ಸಾಹಿತ್ಯ ಸೇವಾ ಪುರಸ್ಕಾರಕ್ಕೆ ಭಾಜನರಾಗಿರುವ ‘ವೈಟ್ ಟೀಥ್’ ಖ್ಯಾತಿಯ ಲೇಖಕಿ ಜೇದಿ ಸ್ಮಿತ್, ಅತ್ಯಂತ ಕಿರಿಯ ವಯಸ್ಸಿನ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರಿಗೆ ಕೇವಲ 46 ವರ್ಷ.

PEN Literary Award: ಮೇ 23ರಂದು ಲೇಖಕಿ ಜೇದಿ ಸ್ಮಿತ್​ಗೆ ‘ಪೆನ್ ಸಾಹಿತ್ಯ ಸೇವಾ ಪುರಸ್ಕಾರ’ ಪ್ರದಾನ
ಲೇಖಕಿ ಜೇದಿ ಸ್ಮಿತ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 15, 2022 | 12:13 PM

Pen Literary Award : ಮನುಷ್ಯನ ಮನಸ್ಥಿತಿ, ಆಲೋಚನೆಯನ್ನು ಅರ್ಥ ಮಾಡಿಕೊಳ್ಳಲು ಓದು ನಮಗೆ ಸಶಕ್ತ ಮಾಧ್ಯಮ. ಇದನ್ನು ಬರೆವಣಿಗೆಯಲ್ಲಿ ಕಟ್ಟಿಕೊಡುವ ಮೂಲಕ ಅಪಾರ ಸಂಖ್ಯೆಯಲ್ಲಿ ಓದುಗರನ್ನು ಹಿಡಿದಿಡುವ ಶಕ್ತ ಬರಹಗಾರರಿಗೆ ಪೆನ್ ಸಾಹಿತ್ಯ ಪುರಸ್ಕಾರವನ್ನು ನೀಡಲಾಗುತ್ತ ಬಂದಿದೆ. ಪ್ರಸಕ್ತ ಸಾಲಿನ ಪೆನ್/ಆಡಿಬಲ್ ಲಿಟರರಿ ಸರ್ವೀಸ್ ಅವಾರ್ಡ್ ಲೇಖಕಿ ಜೇದಿ ಸ್ಮಿತ್ (Zadie Smith) ಅವರಿಗೆ ಲಭಿಸಿದ್ದು. ಪುರಸ್ಕಾರ ಸಮಾರಂಭವನ್ನು ಇದೇ ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈತನಕ ಈ ಪ್ರಶಸ್ತಿಯನ್ನು ಪಡೆದ ಲೇಖಕರಲ್ಲಿ ಜೇದಿ ಅತ್ಯಂತ ಕಿರಿಯ ವಯಸ್ಸಿನ (46ವಯಸ್ಸಿನ) ಲೇಖಕರು ಎಂಬುದು ಗಮನಾರ್ಹ. ‘ಅವರ ಕಾದಂಬರಿಗಳಲ್ಲಿರುವ ಸಮಕಾಲೀನ ದೃಷ್ಟಿಕೋನ, ಒಳನೋಟ, ವಿಮರ್ಶಾತ್ಮಕ ನಿಲುವುಳ್ಳ ಗಟ್ಟಿಧ್ವನಿ ಅತ್ಯಂತ ಪ್ರಭಾವಶಾಲಿಯುಳ್ಳದ್ದಾಗಿದೆ.’ ಎಂದು ಪೆನ್ ಅಮೆರಿಕಾದ (PEN America) ಅಧ್ಯಕ್ಷ ಅಧ್ಯಕ್ಷ ಅಯಾದ್ ಅಖ್ತರ್ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಜೇದಿ ಸ್ಮಿತ್ ಬರೆದ ಕಾದಂಬರಿಗಳಲ್ಲಿ ‘White Teeth’ ಮತ್ತು ‘NW’ ಬಹುಪ್ರಸಿದ್ಧಿ ಪಡೆದಿವೆ. ‘ಚೇಂಜಿಂಗ್ ಮೈ ಮೈಂಡ್’ ಮತ್ತು ‘ಇಂಟಿಮೇಷನ್ಸ್’ ನಂತಹ ಪ್ರಬಂಧ ಸಂಗ್ರಹಗಳು ಸಾಕಷ್ಟು ಓದುಗರನ್ನು ಸೆಳೆದಿವೆ. 2002 ರಲ್ಲಿ, ಸ್ಮಿತ್ ಅಮೆರಿಕದ ಪ್ರತಿಷ್ಠಿತ ರಾಯಲ್ ಸೊಸೈಟಿ ಆಫ್ ಲಿಟರೇಚರ್‌ನ ಫೆಲೋ ಆಗಿ ಆಯ್ಕೆಯಾಗಿದ್ದರು. ನಂತರ 2006 ರಲ್ಲಿ ತಮ್ಮ ಕಾದಂಬರಿ ‘ವೈಟ್ ಟೀತ್’ ಗಾಗಿ ಆರೆಂಜ್ ಪ್ರಶಸ್ತಿಗೆ ಭಾಜನರಾದರು. ‘ಟೈಮ್ ನಿಯತಕಾಲಿಕದ 100 ಅತ್ಯುತ್ತಮ ಇಂಗ್ಲಿಷ್ ಭಾಷೆಯ ಕಾದಂಬರಿಗಳ ಪಟ್ಟಿಯಲ್ಲಿ (1923-2005) ಈ ಕಾದಂಬರಿಯೂ ಒಳಗೊಂಡಿದೆ.

ಬರೆವಣಿಗೆ ವಿಷಯವಾಗಿ ಸ್ಮಿತ್ ಅಭಿಪ್ರಾಯ ಹೀಗಿದೆ, ‘ನಿಮ್ಮ ದೌರ್ಬಲ್ಯ ಅಥವಾ ನಿಮ್ಮಿಂದ ಸಾಧ್ಯವಾಗದ ವಿಷಯ, ವಿಚಾರದ ಬಗ್ಗೆ ಹೆಚ್ಚು ಒತ್ತು ಕೊಡುವುದು ಬೇಡ. ಹಾಗೆಂದು ನಿಮ್ಮಿಂದ ಅಸಾಧ್ಯವಾದದ್ದೆಲ್ಲಾ ದೊಡ್ಡ ಸಂಗತಿ ಎಂಬ ನಿರ್ಲಕ್ಷ್ಯವೂ ಬೇಡ. ಅಂಥ ಸಂಗತಿಯನ್ನು ಮಾನ್ಯವಾಗಿಯೇ ಕಂಡು ನಿಮ್ಮ ಮಿತಿಯನ್ನು ಸ್ವೀಕರಿಸುವ ಮನೋಭಾವ ರೂಢಿಸಿಕೊಳ್ಳಿ.’

ಇದನ್ನೂ ಓದಿ
Image
Literature: ಅನುಸಂಧಾನ; ಕಲಾತ್ಮಕ ಅಭಿವ್ಯಕ್ತಿಯಲ್ಲಿ ಸತ್ಯಕ್ಕೆ ಮುಸುಕು ತೊಡಿಸಿ ಹೇಳಿ ಪರವಾಗಿಲ್ಲ
Image
Toto Awards 2022 : ‘ಕವಿತೆ ಒಳಗಿಳಿಸಿಕೊಳ್ಳಬೇಕಿತ್ತು, ಓದನ್ನು ಅರ್ಧಕ್ಕೇ ನಿಲ್ಲಿಸಿದೆ’ ಟೊಟೊ ಪುರಸ್ಕೃತ ಕೃಷ್ಣ ದೇವಾಂಗಮಠ
Image
ಋತುವಿಲಾಸಿನಿ: ಅನಾಥ ಕಣ್ಣೀರ ಬಿಂದುವೊಂದು ನಿಮ್ಮ ನೋಟಕ್ಕೆ ಬೀಳದೆ ಓಡಾಡುತ್ತಿದ್ದವರ ಚಪ್ಪಲಿಯಡಿ ಸತ್ತುಹೋಯಿತು

ಮೇ 23 ರಂದು ಮ್ಯಾನ್‌ಹ್ಯಾಟನ್‌ನಲ್ಲಿ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ನಡೆಯಲಿರುವ ಪೆನ್ ಅಮೆರಿಕದ ವಾರ್ಷಿಕ ಸಾಹಿತ್ಯ ಉತ್ಸವದಲ್ಲಿ ಸ್ಮಿತ್ ಪೆನ್ ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ. ಈ ಹಿಂದೆ ಪೆನ್ ಸಾಹಿತ್ಯ ಸೇವಾ ಪುರಸ್ಕಾರವನ್ನು ಟೋನಿ ಮಾರಿಸನ್, ಸ್ಟೀಫನ್ ಸೋನ್‌ಹೈಮ್ ಮತ್ತು ಮಾರ್ಗರೇಟ್ ಅಟ್‌ವುಡ್‌ ಪಡೆದುಕೊಂಡಿದ್ದರು.

Published On - 12:09 pm, Sun, 15 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ