
ಮನೆ ಸ್ವಚ್ಛವಾಗಿರಬೇಕು ಎಂದು ಎಲ್ಲರಿಗೂ ಇಷ್ಟ. ಆದರೆ ಪ್ರತಿದಿನ ಮನೆ ಕ್ಲೀನ್ (Cleaning) ಮಾಡುವುದು, ವಸ್ತುಗಳನ್ನು ಜೋಡಿಸುವುದು, ಧೂಳು ತೆಗೆಯುವುದು ಎಂದರೆ ದೊಡ್ಡ ಕೆಲಸದಂತೆ ಅನಿಸುತ್ತದೆ. ವಾಸ್ತವವಾಗಿ ಪ್ರತಿದಿನ ಒಂದೇ ಬಾರಿಗೆ ಗಂಟೆಗಟ್ಟಲೆ ಸಮಯ ಮೀಸಲಿಡುವ ಬದಲು, ಕೇವಲ 10 ನಿಮಿಷಗಳನ್ನು ಸರಿಯಾಗಿ ಬಳಸಿಕೊಂಡರೆ ಮನೆ ಅಚ್ಚುಕಟ್ಟಾಗಿ ಕಾಣುವಂತೆ ನೋಡಿಕೊಳ್ಳಬಹುದು. ಇದಕ್ಕಾಗಿ ದೊಡ್ಡ ಬದಲಾವಣೆಗಳೇನೂ ಬೇಕಿಲ್ಲ. ಕೆಲವು ಸಣ್ಣ ಅಭ್ಯಾಸಗಳನ್ನು ದಿನಚರಿಯ ಭಾಗವಾಗಿಸಿಕೊಂಡರೆ ಸಾಕು.
ಮನೆಯ ಹಾಲ್ ಅಥವಾ ಬೆಡ್‌ರೂಂನಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಬಟ್ಟೆ, ಪುಸ್ತಕ, ರಿಮೋಟ್, ಆಟಿಕೆ ಅಥವಾ ಇತರ ವಸ್ತುಗಳನ್ನು ಅವುಗಳ ಜಾಗಕ್ಕೆ ಇಡಿ. ಮನೆಯ ಯಾವುದೇ ಭಾಗದಲ್ಲಿ ವಸ್ತುಗಳು ಅಸ್ತವ್ಯಸ್ತವಾಗಿ ಕಾಣುವುದೇ ಮನೆ ಗಲೀಜಾಗಿದೆ ಎಂಬ ಭಾವನೆ ಮೂಡಿಸುಲು ಪ್ರಮುಖ ಕಾರಣ.
ಅಡುಗೆ ಮುಗಿದ ನಂತರ ಪಾತ್ರೆಗಳನ್ನು ಸಿಂಕ್‌ನಲ್ಲಿ ಹಾಗೆಯೇ ಬಿಡುವುದರಿಂದ ಅಡುಗೆಮನೆ ಬೇಗ ಅಸ್ತವ್ಯಸ್ತವಾಗಿ ಕಾಣುತ್ತದೆ. ಸಾಧ್ಯವಾದಷ್ಟು ಪಾತ್ರೆಗಳನ್ನು ತೊಳೆದು ಜಾಗದಲ್ಲಿ ಇಡಿ. ಕೌಂಟರ್ ಮೇಲೆ ಬಿದ್ದಿರುವ ಪ್ಯಾಕೆಟ್‌ಗಳು, ಬಾಟಲಿಗಳು ಅಥವಾ ಇತರ ವಸ್ತುಗಳನ್ನು ಕೂಡ ಜೋಡಿಸಿ. ಅಡುಗೆಮನೆಯ ಮೇಲ್ಮೈ ಸ್ವಚ್ಛವಾಗಿ ಕಂಡರೆ ಇಡೀ ಮನೆ ಹೆಚ್ಚು ಅಚ್ಚುಕಟ್ಟಾಗಿ ಕಾಣುತ್ತದೆ.
ಸೋಫಾದ ಮೇಲೆ ಬಿದ್ದಿರುವ ಕುಶನ್‌ಗಳನ್ನು ಸರಿಯಾದ ಜಾಗದಲ್ಲಿ ಇಡಿ. ಹೊದಿಕೆ ಇದ್ದರೆ ಮಡಚಿ ಇಡಿ. ಬೆಳಗ್ಗೆ ಎದ್ದ ನಂತರ ಹಾಸಿಗೆಯನ್ನು ಸರಿಪಡಿಸುವ ಅಭ್ಯಾಸವನ್ನೂ ರೂಢಿಸಿಕೊಳ್ಳಿ. ಹಾಸಿಗೆ ಅಚ್ಚುಕಟ್ಟಾಗಿದ್ದರೆ ಬೆಡ್‌ರೂಂನ ಒಟ್ಟಾರೆ ನೋಟವೇ ಬದಲಾಗುತ್ತದೆ.
ಈ ಸಿಂಪಲ್ ಟಿಪ್ನಿಂದ ನಿಮ್ಮ ಸ್ವಿಚ್‌ಬೋರ್ಡ್ ಅನ್ನು ಸೆಕೆಂಡುಗಳಲ್ಲಿ ಹೊಳೆಯುವಂತೆ ಮಾಡಿ
ಮನೆಯ ಎಲ್ಲೆಡೆ ಸ್ವಚ್ಛಗೊಳಿಸುವ ಅಗತ್ಯವಿಲ್ಲ. ಹೆಚ್ಚು ಓಡಾಡುವ ಜಾಗದಲ್ಲಿ ನೆಲದ ಮೇಲೆ ಕಾಣುವ ಕಸ, ಕೂದಲು ಅಥವಾ ಸಣ್ಣ ಕಣಗಳನ್ನು ಮಾತ್ರ ತೆಗೆದುಹಾಕಿ. ಮುಖ್ಯವಾಗಿ ಹಾಲ್, ಅಡುಗೆಮನೆ ಮತ್ತು ಪ್ರವೇಶದ್ವಾರದಂತಹ ಜಾಗಗಳಿಗೆ ಗಮನ ಕೊಡಿ. ಪ್ರತಿದಿನ ಸ್ವಲ್ಪ ಸ್ವಚ್ಛಗೊಳಿಸುವುದರಿಂದ ಕಸ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುವುದನ್ನು ತಪ್ಪಿಸಬಹುದು.
ಈ ಎರಡು ನಿಮಿಷವನ್ನು ಮನೆಯಲ್ಲಿ ತಪ್ಪು ಜಾಗದಲ್ಲಿರುವ ವಸ್ತುಗಳನ್ನು ಅವುಗಳ ಸ್ಥಳಕ್ಕೆ ಮರಳಿಸಲು ಬಳಸಿ. ಚಾರ್ಜರ್, ಕೀ, ಬಟ್ಟೆ, ಪುಸ್ತಕ ಅಥವಾ ಇತರ ಸಣ್ಣ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿದ್ದರೆ ಅವುಗಳನ್ನು ಜೋಡಿಸಿ. ಮನೆಯ ಪ್ರತಿಯೊಂದು ವಸ್ತುವಿಗೂ ಒಂದು ನಿಗದಿತ ಜಾಗ ಇಟ್ಟುಕೊಂಡರೆ ಈ ಕೆಲಸ ಇನ್ನಷ್ಟು ಸುಲಭವಾಗುತ್ತದೆ.
ಮನೆ ಅಚ್ಚುಕಟ್ಟಾಗಿ ಇಡುವುದೆಂದರೆ ಪ್ರತಿದಿನ ದೊಡ್ಡ ಸ್ವಚ್ಛತಾ ಕಾರ್ಯ ಮಾಡಬೇಕು ಎಂದಲ್ಲ. ವಸ್ತುಗಳನ್ನು ಬಳಸಿದ ನಂತರ ಮತ್ತೆ ಅವುಗಳ ಜಾಗದಲ್ಲಿ ಇಡುವುದು, ಅಡುಗೆಮನೆಯ ಮೇಲ್ಮೈಯನ್ನು ಸ್ವಚ್ಛವಾಗಿಡುವುದು, ಹಾಸಿಗೆ ಮತ್ತು ಸೋಫಾವನ್ನು ಸರಿಪಡಿಸುವುದು, ಕಸವನ್ನು ತಕ್ಷಣ ತೆಗೆದುಹಾಕುವುದು ಮುಂತಾದ ಸಣ್ಣ ಅಭ್ಯಾಸಗಳೇ ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 am, Thu, 24 September 26