ಮಾವಿನ ಎಲೆಯಲ್ಲಿದೆ ರೋಗ ನಿವಾರಕ ಗುಣ, ಆರೋಗ್ಯ ಸಮಸ್ಯೆಗಳಿಗೆ ಈ ಮನೆ ಮದ್ದು ಟ್ರೈ ಮಾಡಿ
ಹಿತ್ತಲ ಗಿಡ ಮದ್ದಲ್ಲ ಎನ್ನುವುದನ್ನು ನಮ್ಮ ಹಿರಿಯರು ಸುಖಾ ಸುಮ್ಮನೆ ಹೇಳಿಲ್ಲ ಬಿಡಿ. ನಮ್ಮ ಸುತ್ತಮುತ್ತಲಿರುವ ಮರ ಗಿಡಗಳು ಔಷಧೀಯ ಗುಣವನ್ನು ಹೊಂದಿದ್ದು, ಇದರಿಂದಲೇ ನಮ್ಮ ಹಿರಿಯರು ಆರೋಗ್ಯ ಸಮಸ್ಯೆಗಳನ್ನು ಗುಣ ಪಡಿಸಿಕೊಂಡಿದ್ದಾರೆ. ಈ ಸಾಲಿಗೆ ಮಾವಿನ ಎಲೆಯೂ ಕೂಡ ಸೇರಿಕೊಳ್ಳುತ್ತದೆ. ಮಾವಿನ ಎಲೆ ಹಿಂದೂ ಧರ್ಮದಲ್ಲಿ ಈ ಎಲೆಗೆ ವಿಶೇಷವಾದ ಸ್ಥಾನಮಾನವನ್ನು ನೀಡಲಾಗಿದೆ. ಈ ಮಾವಿನ ಎಲೆಯನ್ನು ಧಾರ್ಮಿಕ ವಿಧಿವಿಧಾನಗಳ ಸಂದರ್ಭದಲ್ಲಿ ಅಲಂಕಾರಕ್ಕಾಗಿ ಬಳಸುವ ಈ ಎಲೆಯೂ ಶುಭದ ಸಂಕೇತವಾಗಿದೆ. ಈ ಮಾವಿನ ಎಲೆಯೂ ರೋಗ ಶಮನಕಾರಿ ಗುಣವನ್ನು ಹೊಂದಿದೆ. ಮಾವಿನ ಎಲೆಯನ್ನು ಅನೇಕ ರೋಗಗಳಿಗೆ ಔಷಧೀಯನ್ನಾಗಿ ಬಳಸಲಾಗುತ್ತದೆ. ಮಾವಿನ ಎಲೆಯೂ ಯಾವೆಲ್ಲಾ ರೋಗಗಳಿಗೆ ರಾಮಬಾಣವಾಗಿದೆ ಎಂದು ತಿಳಿಯೋಣ ಬನ್ನಿ.
ಮಾವಿನ ಹಣ್ಣು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹಣ್ಣುಗಳ ರಾಜ ಎಂದೇ ಕರೆಯುವ ಈ ಮಾವಿನ ಹಣ್ಣನ್ನು ಚಪ್ಪರಿಸಿ ತಿನ್ನುವವರೇ ಹೆಚ್ಚು. ಮಾವಿನ ಹಣ್ಣು ಎಷ್ಟು ರುಚಿಕರವೋ, ಆರೋಗ್ಯದ ದೃಷ್ಟಿಯಿಂದ ಮಾವಿನ ಎಲೆಯೂ ಕೂಡ ತುಂಬಾ ಪ್ರಯೋಜನಕಾರಿ ಆಗಿದೆ. ಈ ಮಾವಿನ ಎಲೆಯು ಆರೋಗ್ಯದಾಯಕ ಪೋಷಕಾಂಶಗಳನ್ನು ಒಳಗೊಂಡಿದ್ದು, ವಿಟಮಿನ್ ಸಿ, ಎ ಮತ್ತು ಬಿ ವಿಟಮಿನ್ ಅಂಶಗಳು ಹೇರಳವಾಗಿದ್ದು, ಹೀಗಾಗಿ ಇದನ್ನು ಔಷಧಕ್ಕಾಗಿ ಬಳಸಲಾಗುತ್ತದೆ. ಹೀಗಾಗಿ ಆರೋಗ್ಯ ಸಮಸ್ಯೆಯನ್ನು ಗುಣಪಡಿಸುವಲ್ಲಿ ಈ ಮಾವಿನ ಎಲೆಯೂ ಪ್ರಮುಖ ಪಾತ್ರವಹಿಸುತ್ತದೆ.
ಮಾವಿನ ಎಲೆಯ ಆರೋಗ್ಯ ಪ್ರಯೋಜನಗಳು
* ಮಾವಿನ ಚಿಗುರೆಲೆಯ ಕಷಾಯವನ್ನು ದಿನಕ್ಕೆರಡು ಬಾರಿ ಸೇವಿಸಿದರೆ ಆಮಶಂಕೆ ಅತಿಸಾರ ಗುಣಮುಖವಾಗುವುದು.
* ಎಳೆ ಮಾವಿನ ಎಲೆಯನ್ನು ಕಚ್ಚಿ ಅಗಿಯುವುದರಿಂದ ವಸಡುಗಳಲ್ಲಿ ಆಗುತ್ತಿರುವ ರಕ್ತಸ್ರಾವ ಕಡಿಮೆಯಾಗುತ್ತದೆ.
* ಗಾಯವಾಗಿದ್ದರೆ ಒಣಗಿದ ಮಾವಿನ ಎಲೆಯನ್ನು ಸುಟ್ಟು ಅದರ ಬೂದಿಯನ್ನು ಗಾಯದ ಮೇಲೆ ಹಾಕಿದ್ದಲ್ಲಿ ರಕ್ತಸ್ರಾವವಾಗುತ್ತಿದ್ದರೆ ನಿಂತುಹೋಗುತ್ತದೆ. ಅದಲ್ಲದೇ ಗಾಯವು ಬೇಗನೇ ಮಾಗುತ್ತದೆ.
ಇದನ್ನೂ ಓದಿ: ಮಧುಮೇಹಿಗಳು ಮಾವಿನ ಹಣ್ಣು ತಿನ್ನಬಹುದಾ?; ಉತ್ತರ ಇಲ್ಲಿದೆ
* ಮೂತ್ರ ಪಿಂಡದ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರು ಒಂದು ಲೋಟದಲ್ಲಿ ಒಂದು ಚಮಚ ಮಾವಿನ ಎಲೆಗಳ ಪುಡಿಯನ್ನು ಹಾಕಿ ರಾತ್ರಿಯಿಡೀ ನೀರಿನಲ್ಲಿ ಹಾಕಿಡಿ. ಬೆಳಗ್ಗೆ ಎದ್ದು ಈ ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿರುವ ಕಲ್ಲು ಮೂತ್ರದ ಮೂಲಕ ಹೊರ ಬರುತ್ತದೆ.
* ಮಾವಿನ ಎಲೆಗಳನ್ನು ನೀರಿನಲ್ಲಿ ನೆನೆಸಿ ಮುಚ್ಚಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದರೆ, ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತವೆ.
* ಸ್ನಾನದ ನೀರಿಗೆ ಮಾವಿನ ಎಲೆಯನ್ನು ಸೇರಿಸಿ, ಆ ನೀರಿನಿಂದ ಸ್ನಾನ ಮಾಡಿದರೆ ರಿಫ್ರೆಶ್ ಅನುಭವ ನೀಡುತ್ತದೆ.