ತಂದೆ ಸಚಿನ್‌ ತೆಂಡೂಲ್ಕರ್‌ ಹಾದಿಯಲ್ಲೇ ಸಾಗಿದ ಪುತ್ರ; ಅರ್ಜುನ್-ಸಾನಿಯಾ ವಯಸ್ಸಿನ ಅಂತರವೆಷ್ಟು ಗೊತ್ತಾ?

ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್‌ ಸಾನಿಯಾ ಚಾಂದೋಕ್‌ ಎಂಬವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಸಖತ್‌ ಸುದ್ದಿಯಲ್ಲಿದ್ದಾರೆ. ಸಾನಿಯಾ ಚಂದೋಕ್‌ ಅರ್ಜುನ್‌ಗಿಂತ ವಯಸ್ಸಿನಲ್ಲಿ ದೊಡ್ಡವರಂತೆ. ಮದುವೆ ವಿಚಾರದಲ್ಲಿ ಮಗ ತಂದೆಯ ಹಾದಿಯಲ್ಲೇ ಸಾಗಿದ್ದು, ಅರ್ಜುನ್-ಸಾನಿಯಾ ವಯಸ್ಸಿನ ಅಂತರವೆಷ್ಟು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ತಂದೆ ಸಚಿನ್‌ ತೆಂಡೂಲ್ಕರ್‌ ಹಾದಿಯಲ್ಲೇ ಸಾಗಿದ ಪುತ್ರ; ಅರ್ಜುನ್-ಸಾನಿಯಾ ವಯಸ್ಸಿನ ಅಂತರವೆಷ್ಟು ಗೊತ್ತಾ?
ಅರ್ಜುನ್ ತೆಂಡೂಲ್ಕರ್‌-ಸಾನಿಯಾ ಚಾಂದೋಕ್‌
Image Credit source: Social Media

Updated on: Aug 18, 2025 | 2:23 PM

ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಇತ್ತೀಚಿಗೆ ಸಾನಿಯಾ ಚಾಂದೋಕ್‌ (Arjun Tendulkar- Sania Chandhok) ಎಂಬವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಹಳ ಖಾಸಗಿಯಾಗಿ ಆಪ್ತ ಸ್ನೇಹಿತರು ಮತ್ತು ಕುಟುಂಬವರ್ಗದ ಸಮ್ಮುಖದಲ್ಲಿ ಇವರಿಬ್ಬರ ನಿಶ್ಚಿತಾರ್ಥ ನೆರವೇರಿದ್ದು, ಇವರಿಬ್ಬರ ಎಂಗೇಜ್‌ಮೆಂಟ್‌ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಸೃಷ್ಟಿಸಿದೆ. ಇನ್ನೂ ಮದುವೆ ವಿಚಾರದಲ್ಲಿ ಅರ್ಜುನ್‌ ತನ್ನ ತಂದೆ ಸಚಿನ್‌ ತೆಂಡೂಲ್ಕರ್‌ ಅವರ ಹಾದಿಯಲ್ಲೇ ಸಾಗಿದ್ದು, ಸಾನಿಯಾ ಅರ್ಜುನ್‌ಗಿಂತ ವಯಸ್ಸಿನಲ್ಲಿ ದೊಡ್ಡವರೆಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಇವರಿಬ್ಬರ ನಡುವಿನ ವಯಸ್ಸಿನ ಅಂತರವೆಷ್ಟು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಅರ್ಜುನ್‌ ತೆಂಡೂಲ್ಕರ್‌-ಸಾನಿಯಾ ಚಾಂದೋಕ್‌ ನಡುವಿನ ವಯಸ್ಸಿನ ಅಂತರವೆಷ್ಟು?

ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಇತ್ತೀಚೆಗೆ ಸಾನಿಯಾ ಚಾಂದೋಕ್‌ ಎಂಬವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇವರ ನಿಶ್ಚಿತಾರ್ಥದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಿಶ್ಚಿತಾರ್ಥದ ಚಿತ್ರಗಳು ಇನ್ನೂ ಬಹಿರಂಗಗೊಂಡಿಲ್ಲ. ಇನ್ನೂ ಸಾನಿಯಾ ಅರ್ಜುನ್‌ಗಿಂತ ವಯಸ್ಸಿನಲ್ಲಿ ದೊಡ್ಡವರು ಎಂದು ಹೇಳಲಾಗುತ್ತಿದೆ. 25 ವರ್ಷದ ವರ್ಷ ವಯಸ್ಸಿನ ಅರ್ಜುನ್ ತೆಂಡೂಲ್ಕರ್, ತಮಗಿಂತ 1 ವರ್ಷ ದೊಡ್ಡವರಾದ 26 ವರ್ಷ ವಯಸ್ಸಿನ ಸನ್ನಿಯಾ ಚಾಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ತಮ್ಮ ಪತ್ನಿ ಅಂಜಲಿಗಿಂತ ಐದು ವರ್ಷ ಚಿಕ್ಕವರು. ಇದೀಗ ಪುತ್ರ ಅರ್ಜುನ್‌ ಕೂಡ ಮದುವೆ ವಿಚಾರದಲ್ಲಿ ತಂದೆ ಹಾದಿಯಲ್ಲೇ ಸಾಗಿದ್ದು, ತಮ್ಮಗಿಂತ ವಯಸ್ಸಿನಲ್ಲಿ ಒಂದು ವರ್ಷ ದೊಡ್ಡವರಾದ ಸಾನಿಯಾ ಚಾಂದೋಕ್‌ ಅವರನ್ನು ಮದುವೆಯಾಗಲಿದ್ದಾರೆ.  ಸಪ್ಟೆಂಬರ್ 24, 1999 ರಲ್ಲಿ ಜನಿಸಿದ ಅರ್ಜುನ್‌ಗೀಗ 25 ವರ್ಷ ವಯಸ್ಸು. ಜೂನ್‌ 23, 1998 ರಲ್ಲಿ ಜನಿಸಿದ ಸಾನಿಯಾಗೆ 26 ವರ್ಷ ವಯಸ್ಸು.

ಇದನ್ನೂ ಓದಿ
ಹೆಂಡತಿಯಾದವಳು ತನ್ನ ಗಂಡನಿಂದ ಬಯಸೋದು ಇದನ್ನು ಮಾತ್ರವಂತೆ
ಗಂಡನಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು
ಗಂಡನ ಕೋಪವನ್ನು ಈ ರೀತಿ ಕಮ್ಮಿ ಮಾಡಿ
ಗಂಡ-ಹೆಂಡ್ತಿಯ ನಡುವೆ ವಯಸ್ಸಿನ ಅಂತರ ಎಷ್ಟಿದ್ದರೆ ಸೂಕ್ತ?

ಇದನ್ನೂ ಓದಿ: ಗಂಡ-ಹೆಂಡ್ತಿ ನಡುವೆ ಏಜ್‌ ಗ್ಯಾಪ್‌ ಎಷ್ಟಿರಬೇಕು? ದಾಂಪತ್ಯ ಜೀವನದಲ್ಲಿ ನಿಜಕ್ಕೂ ವಯಸ್ಸಿನ ಅಂತರ ಮುಖ್ಯವೇ?

ನಿಶ್ಚಿತಾರ್ಥದ ಫೋಟೋಗಳು ಎಲ್ಲೂ ಬಹಿರಂಗಗೊಂಡಿಲ್ಲ:

ಮಾಧ್ಯಮ ವರದಿಗಳ ಪ್ರಕಾರ, ಅರ್ಜುನ್ ಮತ್ತು ಸಾನಿಯಾ ಅವರ ನಿಶ್ಚಿತಾರ್ಥವು ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದಿದ್ದು, ಇಡೀ ಕಾರ್ಯಕ್ರಮವು ತುಂಬಾ ಖಾಸಗಿಯಾಗಿತ್ತು. ನಿಶ್ಚಿತಾರ್ಥದ ಒಂದೇ ಒಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Mon, 18 August 25