Armed Forces Flag Day 2021: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಇತಿಹಾಸ, ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತವು 1949 ರಿಂದ ಪ್ರತಿ ವರ್ಷ ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸುತ್ತದೆ. ಆಗಸ್ಟ್ 28, 1949 ರಂದು ಈ ಆಚರಣೆ ಪ್ರಾರಂಭವಾಯಿತು. ಸ್ವಾತಂತ್ರ್ಯ ಸಿಕ್ಕಿ 2 ವರ್ಷಗಳ ನಂತರ ಪ್ರಾರಂಭವಾದ ಈ ಆಚರಣೆಯ ಮೊದಲ ಪ್ರಾಮುಖ್ಯತೆ ಸೈನಿಕರ ಕಲ್ಯಾಣವಾಗಿತ್ತು.

Armed Forces Flag Day 2021: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಇತಿಹಾಸ, ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ
Follow us
TV9 Web
| Updated By: preethi shettigar

Updated on: Dec 07, 2021 | 1:14 PM

ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಭಾರತದ ಧ್ವಜ ದಿನ ಎಂದೂ ಕರೆಯುತ್ತಾರೆ. ಭಾರತೀಯ ಸಶಸ್ತ್ರ ಪಡೆಗಳ ಕಲ್ಯಾಣಕ್ಕಾಗಿ ಭಾರತೀಯ ನಾಗರಿಕರಿಂದ ಕೊಡುಗೆಗಳನ್ನು ಸಂಗ್ರಹಿಸಲು ಈ ದಿನವನ್ನು ಆಚಸಲಾಗುತ್ತದೆ. ಭಾರತೀಯ ವಾಯುಸೇನೆ, ಭೂಸೇನೆ ಹಾಗೂ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಗೌರವ ಸಮರ್ಪಿಸುವ ಉದ್ದೇಶ ಕೂಡ ಆಚರಣೆಯ ಹಿಂದಿದೆ. ಸಶಸ್ತ್ರ ಪಡೆಗಳ ಧ್ವಜ ದಿನವನ್ನು (Armed Forces Flag Day 2021) ಪ್ರತಿ ವರ್ಷ ಡಿಸೆಂಬರ್ 7 ರಂದು ಆಚರಿಸಲಾಗುತ್ತದೆ.

ಇತಿಹಾಸ ಮತ್ತು ಮಹತ್ವ ಭಾರತವು 1949 ರಿಂದ ಪ್ರತಿ ವರ್ಷ ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸುತ್ತದೆ. ಆಗಸ್ಟ್ 28, 1949 ರಂದು ಈ ಆಚರಣೆ ಪ್ರಾರಂಭವಾಯಿತು. ಸ್ವಾತಂತ್ರ್ಯ ಸಿಕ್ಕಿ 2 ವರ್ಷಗಳ ನಂತರ ಪ್ರಾರಂಭವಾದ ಈ ಆಚರಣೆಯ ಮೊದಲ ಪ್ರಾಮುಖ್ಯತೆ ಸೈನಿಕರ ಕಲ್ಯಾಣವಾಗಿತ್ತು. ಆಗಿನ ರಕ್ಷಣಾ ಸಚಿವರು ನೇಮಿಸಿದ ಸಮಿತಿಯು ಡಿಸೆಂಬರ್ 7 ರಂದು ವಾರ್ಷಿಕ ಧ್ವಜ ದಿನವನ್ನು ಆಚರಸಿಲು ಒಪ್ಪಿಕೊಂಡಿತು. ಅದರಂತೆ ಪ್ರತಿ ವರ್ಷ ಈ ದಿನವನ್ನು ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಪುಟ್ಟ ಧ್ವಜವನ್ನು ಜನರಿಗೆ ನೀಡಿ, ಅವರು ಕೊಡುವಷ್ಟು ದೇಣಿಗೆ ಪಡೆಯಲಾಗುತ್ತದೆ. ಹೀಗೆ ಸಂಗ್ರಹಿಸಿದ ಹಣವನ್ನು ಸೈನಿಕರು ಹಾಗೂ ಅವರ ಕುಟುಂಬದ ಶ್ರೇಯೋಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ.

ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿಗೆ (ESM) ಸಹಾಯ ಮಾಡಲು ಸರ್ಕಾರವು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ನಿಧಿಯನ್ನು (AFFDF) ಸ್ಥಾಪಿಸಿತು. ಇದರಲ್ಲಿ ಸುಮಾರು 32 ಲಕ್ಷ ಇಎಸ್‌ಎಮ್‌ಗಳಿದ್ದು, ಪ್ರತಿ ವರ್ಷ 60,000ಕ್ಕೂ ಹೆಚ್ಚು ಜನರು ಈ ಕಾರ್ಯಕ್ಕೆ ಸೇರಿಕೊಳ್ಳುತ್ತಿದ್ದಾರೆ. ಧ್ವಜ ದಿನವು ಭಾರತೀಯರು ಭಾರತದ ಸೇನಾ ಪಡೆಗಳಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಲು ಮತ್ತು ತಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವಾಗಲೇ ಮರಣ ಹೊಂದಿದವರನ್ನು ಸ್ಮರಿಸಲು ಉತ್ತಮ ಅವಕಾಶ ನೀಡುತ್ತದೆ.

ಸಶಸ್ತ್ರ ಪಡೆಗಳ ಧ್ವಜ ದಿನದಂದು ಭಾರತೀಯ ಸಶಸ್ತ್ರ ಸೇವೆಗಳ ಮೂರು ಶಾಖೆಗಳು, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ನೀವು ನೀಡು ದೇಣಿಗೆಗೆ ಬದಲಾಗಿ ಮೂರು ಸೇವೆಗಳನ್ನು ಸೂಚಿಸುವ ಕೆಂಪು, ನೀಲಿ ಮತ್ತು ತಿಳಿ ನೀಲಿ ಬಣ್ಣದ ಚಿಕ್ಕ ಧ್ವಜಗಳನ್ನು ವಿತರಿಸಲಾಗುತ್ತದೆ.

ಸಶಸ್ತ್ರ ಪಡೆಗಳ ಧ್ವಜ ದಿನದ ನಿಧಿಗೆ ನಿಮ್ಮ ಕೊಡುಗೆ ಸಲ್ಲಿಸುವುದು ಹೇಗೆ? ಸಶಸ್ತ್ರ ಪಡೆಗಳ ಧ್ವಜ ದಿನದ ನಿಧಿಗೆ ಆನ್‌ಲೈನ್‌ನಲ್ಲಿ ಕೊಡುಗೆ ನೀಡಬಹುದು. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಸಶಸ್ತ್ರ ಪಡೆಗಳ ಧ್ವಜ ದಿನದ ನಿಧಿಗೆ ಆನ್‌ಲೈನ್ ಮೂಲಕ ಕೊಡುಗೆ ನೀಡಬಹುದು.

https://ksb.gov.in/DonateAFFDF.htm

ಇದನ್ನೂ ಓದಿ: ಸಿಯಾಚಿನ್​ನಲ್ಲಿ ಹೆಲಿಕಾಪ್ಟರ್ ಪತನ; ಪಾಕಿಸ್ತಾನ ಸೇನೆಯ ಇಬ್ಬರು ಮೇಜರ್​ಗಳ ಸಾವು

ಎಲ್​ಎಸಿ ಗಡಿ ಬಳಿ ಚೀನಾ ಮೇಲೆ ಕಣ್ಣಿಡಲು 4 ಇಸ್ರೇಲಿ ಹೆರಾನ್​ ಡ್ರೋನ್​​ಗಳನ್ನು ನಿಯೋಜಿಸಿದ ಭಾರತೀಯ ಸೇನೆ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ