AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Loss: ನೀವು ತೂಕ ಇಳಿಸಿಕೊಳ್ಳುವ ಹಾದಿಯಲ್ಲಿದ್ದರೆ ಈ ತಪ್ಪುಗಳನ್ನು ಮಾಡಲೇಬೇಡಿ

ತೂಕ ಇಳಿಸಿಕೊಳ್ಳುವುದು ಸುಲಭ ಅಲ್ಲ, ತಾಳ್ಮೆ ಎಂಬುದು ಪ್ರಮುಖ ಪಾತ್ರವಹಿಸುತ್ತದೆ. ಏಕಾಏಕಿ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ. ತಾಳ್ಮೆ ಜತೆಗೆ ನಿತ್ಯ ವರ್ಕೌಟ್​ಗಳನ್ನು ಮಾಡಿದಾಗ ನಿಮಗೆ ಫಲಿತಾಂಶ ಸಿಗುತ್ತದೆ. ಹಾಗೆಯೇ ನೀವು ತಿನ್ನುವ ಆಹಾರ ಹೇಗಿರುತ್ತದೆ ಎಂಬುದರ ಮೇಲೆ ನಿಮ್ಮ ತೂಕವೂ ನಿರ್ಧಾರವಾಗುತ್ತದೆ. ಆದರೆ ತೂಕ ಕಳೆದುಕೊಳ್ಳುವ ಭರದಲ್ಲಿ ಇಂತಹ ತಪ್ಪುಗಳನ್ನು ಎಂದೂ ಮಾಡಬೇಡಿ.

Weight Loss: ನೀವು ತೂಕ ಇಳಿಸಿಕೊಳ್ಳುವ ಹಾದಿಯಲ್ಲಿದ್ದರೆ ಈ ತಪ್ಪುಗಳನ್ನು ಮಾಡಲೇಬೇಡಿ
Weight Loss
Follow us
TV9 Web
| Updated By: ನಯನಾ ರಾಜೀವ್

Updated on: Jul 26, 2022 | 1:32 PM

ತೂಕ ಇಳಿಸಿಕೊಳ್ಳುವುದು ಸುಲಭ ಅಲ್ಲ, ತಾಳ್ಮೆ ಎಂಬುದು ಪ್ರಮುಖ ಪಾತ್ರವಹಿಸುತ್ತದೆ. ಏಕಾಏಕಿ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ. ತಾಳ್ಮೆ ಜತೆಗೆ ನಿತ್ಯ ವರ್ಕೌಟ್​ಗಳನ್ನು ಮಾಡಿದಾಗ ನಿಮಗೆ ಫಲಿತಾಂಶ ಸಿಗುತ್ತದೆ. ಹಾಗೆಯೇ ನೀವು ತಿನ್ನುವ ಆಹಾರ ಹೇಗಿರುತ್ತದೆ ಎಂಬುದರ ಮೇಲೆ ನಿಮ್ಮ ತೂಕವೂ ನಿರ್ಧಾರವಾಗುತ್ತದೆ. ಆದರೆ ತೂಕ ಕಳೆದುಕೊಳ್ಳುವ ಭರದಲ್ಲಿ ಇಂತಹ ತಪ್ಪುಗಳನ್ನು ಎಂದೂ ಮಾಡಬೇಡಿ.

ತೂಕ ಇಳಿಸಿಕೊಳ್ಳಲು ಆತುರ ಮಾಡಬೇಡಿ ಇಷ್ಟೇ ದಿನದಲ್ಲಿ ತೂಕ ಇಳಿಸಿಕೊಳ್ಳಬೇಕು ಎಂದು ಅರ್ಜೆಂಟ್ ಮಾಡಬೇಡಿ, ನೀವು ಹೇಗೆ ನಿತ್ಯ ಆಹಾರ ಸೇವನೆ ಮಾಡುತ್ತೀರೋ ಹಾಗೆಯೇ ತೂಕ ಇಳಿಕೆಯೂ ಕೂಡ ನಿಧಾನವಾಗಿಯೇ ಆಗುತ್ತದೆ. ತೂಕ ಇಳಿಕೆಗೆ ವರ್ಷವೇ ಹಿಡಿಯಬಹುದು ಆದರೆ ತಾಳ್ಮೆ ಮುಖ್ಯವಾಗುತ್ತದೆ.

ತುಂಬಾ ವ್ಯಾಯಾಮದ ಅಗತ್ಯವಿಲ್ಲ ಬೇಗ ತೆಳ್ಳಗಾಗಬೇಕು ಎಂದು ಹೆಚ್ಚಿನ ಪ್ರಮಾಣದ ವ್ಯಾಯಾಮವನ್ನು ಮಾಡಿದರೆ ತೂಕ ಇಳಿಕೆಗಿಂತ ಆಯಾಸ ಹೆಚ್ಚುತ್ತದೆ. ನಿತ್ಯ ಇಂತಿಷ್ಟು ಸಮಯವೆಂದು ವ್ಯಾಯಾಮಕ್ಕೆ ಮೀಸಲಿಡಿ.

ಕೇವಲ ತೂಕ ಇಳಿಕೆಗೆ ಮಾತ್ರ ಗಮನಕೊಡಬೇಡಿ ಕೇವಲ ತೂಕ ಇಳಿಕೆಗೆ ಮಾತ್ರ ನಿಮ್ಮ ಪ್ರಾಧಾನ್ಯತೆ ಇರಬಾರದು ಅದರ ಜತೆಯಲ್ಲಿ ನಿಮ್ಮ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ.

ತೂಕ ಇಳಿಕೆ ನಿಧಾನವಾದರೆ ನಿಮ್ಮನ್ನು ನೀವು ಶಪಿಸಬೇಡಿ ಒಂದೊಮ್ಮೆ ತೂಕ ಇಳಿಸಿಕೊಳ್ಳುವುದು ನಿಧಾನವಾದರೆ ನಿಮ್ಮನ್ನು ನೀವು ಶಪಿಸಬೇಡಿ, ನೀವು ಮಾಡಿರುವ ವ್ಯಾಯಾಮ ಕಡಿಮೆಯಾಯಿತು, ಅಥವಾ ಆಹಾರವನ್ನು ಕಡಿಮೆ ತಿನ್ನಬೇಕಿತ್ತು ಎಂದು ಮನಸ್ಸಿನಲ್ಲೇ ಕೊರಗಬೇಡಿ.

ನಿದ್ರೆಯೂ ಮುಖ್ಯ ತೂಕ ಇಳಿಸಿಕೊಳ್ಳಬೇಕೆಂದು ನಿದ್ರೆಯನ್ನು ಬಿಟ್ಟು ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಬೇಡ, ನಿದ್ರೆಯು ಆರೋಗ್ಯಕ್ಕೆ ಅವಶ್ಯಕವಾಗಿ ಬೇಕೇ ಬೇಕು ಹೀಗಾಗಿ ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಕೂಡ ಮುಖ್ಯ.