AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Parenting Tips: ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗ್ತೀರಾ, ಪೋಷಕರು ಪಾಲಿಸಲೇಬೇಕಾದ ಸಲಹೆಗಳು ಇಲ್ಲಿವೆ

ಮನೆಯಲ್ಲಿಯೇ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುವ ಪೋಷಕರು ಸದಾ ಮಕ್ಕಳ ಚಿಂತೆಯಲ್ಲಿಯೇ ಮುಳುಗಿರುತ್ತಾರೆ. ಆದರೆ ನೀವು ಈ ಕುರಿತು ಮೊದಲೇ ತಯಾರಿ ನಡೆಸಿದ್ದರೆ ನಿಮಗೆ ಬೇಸರವೆನಿಸದು.

Parenting Tips: ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗ್ತೀರಾ, ಪೋಷಕರು ಪಾಲಿಸಲೇಬೇಕಾದ ಸಲಹೆಗಳು ಇಲ್ಲಿವೆ
Parents
TV9 Web
| Edited By: |

Updated on:Jul 26, 2022 | 4:04 PM

Share

ಮನೆಯಲ್ಲಿಯೇ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುವ ಪೋಷಕರು ಸದಾ ಮಕ್ಕಳ ಚಿಂತೆಯಲ್ಲಿಯೇ ಮುಳುಗಿರುತ್ತಾರೆ. ಆದರೆ ನೀವು ಈ ಕುರಿತು ಮೊದಲೇ ತಯಾರಿ ನಡೆಸಿದ್ದರೆ ನಿಮಗೆ ಬೇಸರವೆನಿಸದು. ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗುವ ಪೋಷಕರು ಏನು ಮಾಡಬೇಕು ಇಲ್ಲಿದೆ ಕೆಲವು ಸಲಹೆಗಳು.

ಪ್ರತಿಯೊಬ್ಬ ಪೋಷಕರು ಮಕ್ಕಳೊಂದಿಗೆ ಕಾಲ ಕಳೆಯಬೇಕು ಎಂದು ಬಯಸುತ್ತಾರೆ. ಆದರೆ ಇಬ್ಬರೂ ಕೆಲಸಕ್ಕೆ ಹೋಗುವುದು ಮುಖ್ಯವಾಗಿರುವುದರಿಂದ ಅನಿವಾರ್ಯವಾಗಿ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗಬೇಕಾಗುತ್ತದೆ. ಮಕ್ಕಳು ಮನೆಯಲ್ಲಿರುವಾಗ ಏನನ್ನು ಮಾಡಬೇಕು, ಏನು ಮಾಡಬಾರದು ಎಂಬುದರ ಕಡೆಗೆ ಹೆಚ್ಚು ಗಮನಕೊಡಬೇಕು.

ಮನೆಯ ಸುತ್ತಮುತ್ತಲಿನ ಪರಿಚಯವಿರುವ ನಂಬಿಕೆ ಇರುವ ಮೂರು ಜನರ ಮೊಬೈಲ್​ ನಂಬರ್ ನಿಮ್ಮ ಬಳಿ ಇರಲಿ. ಯಾವುದೇ ತುರ್ತು ಸಂದರ್ಭವಿದ್ದರೂ ಅವರಿಗೆ ಕರೆ ಮಾಡಿ ವಿಚಾರಿಸಬಹುದು. ಹಾಗೆಯೇ ಮಕ್ಕಳ ಮೇಲೆ ಕಣ್ಣಿಟ್ಟಿರುವಂತೆ ಹೇಳಬಹುದು.

ಕೆಲವು ನಿಯಮಗಳಿರಲಿ ಕೆಲವು ನಿಯಮಗಳನ್ನು ಸಿದ್ಧಪಡಿಸಿ, ಮಕ್ಕಳು ಇಡೀ ದಿನವು ಟಿವಿ ನೋಡುವಂತಿಲ್ಲ ಅಥವಾ ವಿಡಿಯೋ ಗೇಮ್ ಆಡುವಂತಿಲ್ಲ, ಯಾಕಾಗಿ ಪೋಷಕರು ಹೇಳಿದ ಮಾತುಗಳನ್ನು ಮಕ್ಕಳು ಕೇಳಬೇಕೆಂದು ಮನದಟ್ಟು ಮಾಡಿಕೊಡಿ, ಹಾಗೆಯೇ ಒಂದೊಮ್ಮೆ ಟಿವಿ ನೋಡಿದರೆ ಯಾವ ರೀತಿಯ ಶೋಗಳನ್ನು ವೀಕ್ಷಿಸಬೇಕು, ಅಡುಗೆ ಮನೆ ಅಥವಾ ಪಾತ್ರೆ ಬಳಕೆ ಹೇಗೆ ಮಾಡಬೇಕು ಎಂಬುದನ್ನೂ ತಿಳಿಸಿ.

ಸುರಕ್ಷತಾ ನಿಯಮಗಳು ಮನೆಯಲ್ಲಿ ಒಬ್ಬರೇ ಇರುವಾಗ ಸುರಕ್ಷತಾ ನಿಯಮಗಳನ್ನು ಹೇಗೆ ಪಾಲಿಸಬೇಕು, ಬೆಂಕಿ, ದರೋಡೆ, ವೈದ್ಯಕೀಯ ತುರ್ತು ಪರಿಸ್ಥಿತಿ ಬಂದರೆ ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿಸಿಕೊಡಿ. ಮನೆಯಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಿಸಿ. ಮದ್ಯ, ತಂಬಾಕು, ಸಿಗರೇಟ್, ಕಾರಿನ ಕೀ, ಬೆಂಕಿಪೊಟ್ಟಣ ಸೇರಿದಂತೆ ಇತರೆ ವಸ್ತುಗಳನ್ನು ಮಕ್ಕಳಿಂದ ದೂರವಿರುವಂತೆ ನೋಡಿಕೊಳ್ಳಿ. ಒಂದೊಮ್ಮೆ ಬೆಂಕಿ ಹೊತ್ತಿಕೊಂಡರೆ ಫೈರ್ ಎಸ್ಟಿಂಗ್ವಿಷರ್ ಬಳಕೆ ಮಾಡುವುದು ಹೇಗೆ ಎಂಬುದನ್ನೂ ಹೇಳಿರಿ.

ಮನೆಯಲ್ಲಿ ಎಲ್ಲಾ ವ್ಯವಸ್ಥೆಯೂ ಇರಲಿ ಮನೆಯಿಂದ ಹೊರಡುವ ಮುನ್ನ ಮನೆಯಲ್ಲಿ ಮಕ್ಕಳಿಗೆ ಬೇಕಾದ ವಸ್ತುಗಳು, ಆಹಾರ ಪದಾರ್ಥಗಳೆಲ್ಲವನ್ನೂ ಕೈಗೆ ಸಿಗುವಂತೆ ಇರಿಸಿರಿ. ಹಾಗೆಯೇ ಯಾವ ಸಮಯದಲ್ಲಿ ಆಹಾರವನ್ನು ಸೇವಿಸಬೇಕು, ಯಾವ ಸಮಯದಲ್ಲಿ ಓದಬೇಕು, ಯಾವ ಸಮಯದಲ್ಲಿ ಆಟವಾಡಬೇಕು ಎನ್ನುವ ಟೈಂಟೇಬಲ್ ರಚಿಸಿ.

ಮನೆಯ ಬಾಗಿಲನ್ನು ತೆಗೆಯುವುದು ಹೇಗೆ? ಬಾಗಿಲನ್ನು ತೆಗೆಯುವುದು ಹೇಗೆ ಎಂಬುದನ್ನೂ ತಿಳಿಸಿರಿ, ಹಾಗೆಯೇ ಪರಿಚಯವಿಲ್ಲದವರು ಬಂದು ಚಾಕಲೇಟ್ ಅಥವಾ ಇನ್ಯಾವುದೇ ಆಮಿಷವೊಡ್ಡಿದರೂ ಮನೆಯ ಬಾಗಿಲನ್ನೂ ಯಾವುದೇ ಕಾರಣಕ್ಕೆ ತೆರೆಯಬಾರದು ಮೊದಲು ಕಿಟಕಿ ಮೂಲಕ ವೀಕ್ಷಿಸಬೇಕು, ನಿಮಗೆ ಪರಿಚಯವಿದ್ದರೆ ಮಾತ್ರ ಬಾಗಿಲು ತೆರೆಯಬೇಕು ಎಂಬುದನ್ನೂ ಮಕ್ಕಳಿಗೆ ತಿಳಿ ಹೇಳುವುದು ಮುಖ್ಯ.

Published On - 4:04 pm, Tue, 26 July 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ