ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಇಲ್ಲಿವೆ ಆಯುರ್ವೇದ ಸಲಹೆಗಳು

ತೂಕ ಇಳಿಸಿಕೊಳ್ಳಲು ಕೆಲವು ಮಂದಿ ಜಿಮ್, ವರ್ಕೌಟ್ ಎಂದು ಹೋದರೆ, ಹಲವರು ಡಯಟ್ ಮಾಡುತ್ತಾರೆ, ಇನ್ನೂ ಕೆಲವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನು ಪಡೆದುಕೊಂಡು ತೂಕ ಇಳಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ನೈಸರ್ಗಿಕವಾಗಿ ತೂಕ ಇಳಿಕೆ ಮಾಡುವುದು ಹೇಗೆ, ಆಯುರ್ವೇದದ ಕೆಲವು ಸಲಹೆಗಳು ಇಲ್ಲಿವೆ.

ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಇಲ್ಲಿವೆ ಆಯುರ್ವೇದ ಸಲಹೆಗಳು
ತೂಕ ಇಳಿಸಿಕೊಳ್ಳಲು ಸಲಹೆ
Follow us
TV9 Web
| Updated By: ನಯನಾ ರಾಜೀವ್

Updated on: May 06, 2022 | 11:33 AM

ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಫಾಸ್ಟ್​ಫುಡ್ ಕಲ್ಚರ್​ ಅಳವಡಿಕೆಯಿಂದಾಗಿ ಜನರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೇಣಿಸುತ್ತಿದೆ, ಉಬ್ಬಸ, ತೂಕ ಹೆಚ್ಚಳಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹದಂತಹ ತೊಂದರೆಗಳು ಜನರನ್ನು ಕಾಡುತ್ತಿದೆ. ಹಾಗೆಯೇ ತೂಕ ಇಳಿಸಿಕೊಳ್ಳಲು ಕೆಲವು ಮಂದಿ ಜಿಮ್, ವರ್ಕೌಟ್ ಎಂದು ಹೋದರೆ, ಹಲವರು ಡಯಟ್ ಮಾಡುತ್ತಾರೆ, ಇನ್ನೂ ಕೆಲವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನು ಪಡೆದುಕೊಂಡು ತೂಕ ಇಳಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ನೈಸರ್ಗಿಕವಾಗಿ ತೂಕ ಇಳಿಕೆ ಮಾಡುವುದು ಹೇಗೆ, ಆಯುರ್ವೇದದ ಕೆಲವು ಸಲಹೆಗಳು ಇಲ್ಲಿವೆ.

ಉಗುರು ಬೆಚ್ಚಗಿನ ನೀರು ಕುಡಿಯಿರಿ: ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇದು ಕೊಬ್ಬನ್ನು ತ್ವರಿತವಾಗಿ ಕರಗಿಸಲು ಸಹಾಯ ಮಾಡುತ್ತದೆ. ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಅದರಲ್ಲೂ ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಎದ್ದ ತಕ್ಷಣ ಬಿಸಿ ನೀರು ಕುಡಿಯುವುದು ದೇಹಕ್ಕೆ ಹಲವು ಆರೋಗ್ಯ ಲಾಭಗಳನ್ನು ನೀಡುತ್ತದೆ.

ದಾಲ್ಚಿನ್ನಿ : ಖಾಲಿ ಹೊಟ್ಟೆಯಲ್ಲಿ 1 ಚಮಚ ಜೇನುತುಪ್ಪದೊಂದಿಗೆ ಒಂದು ಚಿಟಿಕೆ ದಾಲ್ಚಿನ್ನಿ ಸೇವಿಸುವುದು ತೂಕ ಇಳಿಕೆಗೆ ಉತ್ತಮ. ನೈಸರ್ಗಿಕ ಮಸಾಲೆ ದಾಲ್ಚಿನ್ನಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ, ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ಕರಗಿಸುತ್ತದೆ.

ಗ್ರೀನ್ ಟೀ: 2010ರಲ್ಲಿ ಪ್ರಕಟವಾದ ಅಧ್ಯಯನವು ಕೆಫೀನ್ ಅಥವಾ ಕ್ಯಾಟೆಚಿನ್‌ಗಳನ್ನು ಒಳಗೊಂಡಿರುವ ಹಸಿರು ಚಹಾದ ಪೂರಕಗಳು ತೂಕ ನಷ್ಟದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತವೆ ಎಂದು ಹೇಳಿದೆ. ಇದು ದೇಹದ ಚಯಾಪಚಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಹಾಯ ಮಾಡುತ್ತದೆ. ಇದು ಕ್ಯಾಟೆಚಿನ್ ಫ್ಲೇವನಾಯ್ಡ್ ಅನ್ನು ಹೊಂದಿದೆ, ಇದು ಉತ್ಕರ್ಷಣ ನಿರೋಧಕ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ನಿಮ್ಮ ತೂಕ ಕಳೆದುಕೊಳ್ಳಲು ದಿನದಲ್ಲಿ ಒಂದು ಕಪ್ ಗ್ರೀನ್ ಟೀ ಸೇವನೆ ಸಾಕು.

ನಿಂಬೆ: ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ನಿಂಬೆ ರಸ ಸೇವನೆ ತೂಕ ಇಳಿಕೆಗೆ ಸಹಕಾರಿಯಾಗಿದೆ. ನಿಂಬೆ ಅತ್ಯಂತ ಪ್ರಸಿದ್ಧವಾದ ನೈಸರ್ಗಿಕ ತೂಕ ನಷ್ಟದ ಮನೆ ಮದ್ದಾಗಿದೆ. ಆದರೆ ಕೀಲು ನೋವು ಮತ್ತು ಅಧಿಕ ಆಮ್ಲೀಯತೆಯಿರುವ ಜನರು ಇದರ ಸೇವನೆ ತಪ್ಪಿಸಬೇಕು.

ನೆಲ್ಲಿಕಾಯಿ: ಸ್ಥೂಲಕಾಯತೆ, ಥೈರಾಯ್ಡ್‌, ಮಧುಮೇಹ ಮತ್ತು ಮಲಬದ್ಧತೆಯ ಎಲ್ಲಾ ಅಸ್ವಸ್ಥತೆಗಳಿಗೆ ಸೂಕ್ತವಾದದ್ದು ನೆಲ್ಲಿಕಾಯಿ. ಇದರಲ್ಲಿರುವ ಹುಳಿ ಅಂಶ ನಿಮ್ಮ ಕೊಬ್ಬನ್ನು ತ್ವರಿತವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಕರಿಮೆಣಸು: ಬೆಳಗ್ಗೆ ನಿಂಬೆ ನೀರಿನೊಂದಿಗೆ ಒಂದು ಚಿಟಿಕೆ ಕರಿಮೆಣಸನ್ನು ಸಹ ಉಪಯೋಗಿಸಬಹುದು. ಇದು ನಿಮ್ಮ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ

-ಜೇನು: ಜೇನು ತೂಕ ಇಳಿಕೆಯಲ್ಲಿ ಹೆಚ್ಚು ಜನಪ್ರಿಯ ಆಹಾರ ಪದಾರ್ಥ. ಇದು ಅನಗತ್ಯ ಕೊಬ್ಬನ್ನು ತೆಗೆದು ಹಾಕುತ್ತದೆ. ಆದರೆ ಇದನ್ನು ನೀವು ಎಂದಿಗೂ ಬಿಸಿ ನೀರಿನಲ್ಲಿ ಸೇವಿಸಬಾರದು. ಬದಲಿಗೆ ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಬೇಕು.

ತ್ರಿಫಲಾ: ಮಲಗುವ ವೇಳೆ ಬೆಚ್ಚಗಿನ ನೀರಿನ ಜೊತೆ ತ್ರಿಫಲಾ ಸೇವಿಸುವುದರಿಂದ ನಮ್ಮ ದೇಹದ ವಿಷವನ್ನು ಇದು ಹೊರಹಾಕುತ್ತದೆ. ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸುತ್ತದೆ, ಜೊತೆಗೆ ದೇಹವನ್ನು ಡಿಟಾಕ್ಸ್ ಮಾಡುತ್ತದೆ.

ಇವುಗಳ ಬಳಕೆ ಕಡಿಮೆ ಮಾಡಿ -ಸಕ್ಕರೆ -ಮೈದಾ -ಮದ್ಯಪಾನ -ಕಾಫಿ -ಕರಿದ ತಿಂಡಿಗಳು

ಜೀವನಶೈಲಿ, ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!