ಭಾರತದಲ್ಲಿ ಧಾರ್ಮಿಕವಾಗಿ ಬಾಳೆಎಲೆಗೆ ವಿಶೇಷವಾದ ಮಹತ್ವ ನೀಡಲಾಗಿದೆ. ಶುಭ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಬಾಳೆ ಎಲೆಯು ಅವಶ್ಯಕವಾಗಿರಲೇ ಬೇಕು. ಇಂದಿಗೂ ಹಲವೆಡೆಯಲ್ಲಿ ಪ್ರತಿದಿನ ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿಯಿದೆ. ಕೆಲವೆಡೆಗಳಲ್ಲಿ ಈ ಪದ್ಧತಿಯನ್ನು ಹಬ್ಬ ಹರಿದಿನಗಳಲ್ಲಿ ಮಾತ್ರ ಕಾಣಬಹುದಾಗಿದೆ. ಆದರೆ ಈ ಎಲೆಗೆ ರೋಗಗಳನ್ನು ಗುಣಪಡಿಸುವ ಶಕ್ತಿಯಿದ್ದು, ಔಷಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಈ ಬಾಳೆಎಲೆಯು ತ್ವಚೆರಕ್ಷಣೆಯಲ್ಲಿ ಬಹುಮುಖ್ಯವಾಗಿದೆ.
ಸಾಂದರ್ಭಿಕ ಚಿತ್ರ
Follow us on
ನಾವಿಂದು ಆಧುನಿಕ ಕಾಲಘಟ್ಟಕ್ಕೆ ತೆರೆದುಕೊಂಡಿದ್ದೇವೆ. ಹೀಗಾಗಿ ನಮ್ಮ ಹಿರಿಯರು ಮಾಡಿಕೊಂಡು ಬಂದಿರುವ ಆಚಾರ ವಿಚಾರಗಳನ್ನು ಪಾಲನೆ ಮಾಡುವುದನ್ನೇ ನಿಲ್ಲಿಸಿ ಬಿಟ್ಟಿದ್ದೇವೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಆಚಾರ ವಿಚಾರಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ನಮ್ಮ ಹಿರಿಯರು ದಿನನಿತ್ಯ ಬಾಳೆ ಎಲೆಯಲ್ಲಿ ಊಟ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದರು. ಆದರೆ ಪೂರ್ವಜರು ಜೀವನದಲ್ಲಿ ಅಳವಡಿಸಿಕೊಂಡ ಕೆಲವೊಂದು ಆಚರಣೆಗಳಿಂದ ಆರೋಗ್ಯಕ್ಕೆ ಪ್ರಯೋಜನಕಾರಿ ಅಂಶಗಳಿದ್ದವು ಎನ್ನುವುದನ್ನು ಮರೆಯುವಂತಿಲ್ಲ.
ಚಿಕ್ಕ ಗಾಯವಾಗಿದ್ದರೆ ಬಾಳೆ ಎಲೆಯ ರಸ ಹಚ್ಚುವುದರಿಂದ ಶೀಘ್ರವೇ ವಾಸಿಯಾಗುತ್ತದೆ.
ಒಂದು ಐಸ್ ತುಂಡನ್ನು ಬಾಳೆ ಎಲೆಯಲ್ಲಿ ಸುತ್ತಿ, ಮಸಾಜ್ ಮಾಡುವುದರಿಂದ ಒತ್ತಡ ಕಡಿಮೆಯಾಗಿ ಆರಾಮದಾಯಕ ಅನುಭವವಾಗುತ್ತದೆ.
ಚರ್ಮದ ಅಲರ್ಜಿಯಿರುವವರು ಬಾಳೆ ಎಲೆ ರಸ ಹಾಕುವುದರಿಂದ ಗುಣ ಮುಖವಾಗುತ್ತದೆ.
ಬಾಳೆ ಎಲೆಯ ಕಷಾಯವನ್ನು ದಿನಕ್ಕೆ ಒಂದು ಬಾರಿ ಕುಡಿಯುವುದರಿಂದ ಜ್ವರವೂ ಕಡಿಮೆಯಾಗುತ್ತದೆ.
ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಜೀರ್ಣಕ್ರಿಯೆಯು ಸುಧಾರಿಸುತ್ತದೆ.
ಒಣಗಿದ ಬಾಳೆ ಎಲೆಯ ಸೇವನೆಯಿಂದ ರಕ್ತಸ್ರಾವದಿಂದ ಕೂಡಿದ ಭೇದಿಯು ನಿವಾರಣೆಯಾಗುತ್ತದೆ
ಬಾಳೆ ಎಲೆಯ ರಸವನ್ನು ತೆಗೆದು ಕೂದಲ ಬುಡಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡುವುದರಿಂದ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.