ಟಿವಿ, ಮೊಬೈಲ್ ಸ್ಕ್ರೀನ್ ನೋಡುವುದನ್ನು ಕಡಿಮೆ ಮಾಡುವುದರಿಂದಾಗುವ 8 ಪ್ರಯೋಜನಗಳಿವು

|

Updated on: Jan 18, 2024 | 7:19 PM

ಜೀವನಶೈಲಿ ಬದಲಾದಂತೆಲ್ಲ ಒಂದೊಂದೇ ಚಟಗಳು ಅಂಟಿಕೊಳ್ಳುತ್ತವೆ. ಈಗ ಪ್ರತಿಯೊಂದಕ್ಕೂ ಮೊಬೈಲ್ ಬೇಕೇ ಬೇಕು. ಆದರೆ, ಮೊಬೈಲ್, ಟಿವಿಯ ಸ್ಕ್ರೀನ್ ನೋಡುವ ಸಮಯವನ್ನು ಕಡಿಮೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಆಗುವ 8 ಪ್ರಯೋಜನಗಳು ಇಲ್ಲಿವೆ.

ಟಿವಿ, ಮೊಬೈಲ್ ಸ್ಕ್ರೀನ್ ನೋಡುವುದನ್ನು ಕಡಿಮೆ ಮಾಡುವುದರಿಂದಾಗುವ 8 ಪ್ರಯೋಜನಗಳಿವು
ಸಾಂದರ್ಭಿಕ ಚಿತ್ರ
Image Credit source: iStock
Follow us on

ಕೈಯಲ್ಲಿ ಮೊಬೈಲ್ ಇದ್ದರೆ ಬೇರಾವ ಉಸಾಬರಿಯೂ ಬೇಡ. ಮೊದಲೆಲ್ಲ ಮೊಬೈಲ್ ಮಾತನಾಡಲು ಮಾತ್ರ ಬಳಕೆಯಾಗುತ್ತಿತ್ತು. ಆದರೀಗ ಬಿಲ್ ಪೇ ಮಾಡುವುದರಿಂದ ಹಿಡಿದು ಸಿನಿಮಾ ನೋಡುವವರೆಗೆ ಪ್ರತಿಯೊಂದಕ್ಕೂ ಮೊಬೈಲ್ ಬೇಕೇಬೇಕು. ಆದರೆ, ಇದು ನಮ್ಮ ಕಣ್ಣು ಹಾಗೂ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ, ಸ್ಕ್ರೀನ್ ನೋಡುವ ಸಮಯವನ್ನು ಕಡಿಮೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಆಗುವ 8 ಪ್ರಯೋಜನಗಳು ಇಲ್ಲಿವೆ.

ಸುಧಾರಿತ ನಿದ್ರೆಯ ಗುಣಮಟ್ಟ:

ಸ್ಕ್ರೀನಿಂಗ್ ಸಮಯವನ್ನು ಕಡಿಮೆಗೊಳಿಸುವುದು ಅದರಲ್ಲೂ ವಿಶೇಷವಾಗಿ ಮಲಗುವ ಮುನ್ನ ಮೊಬೈಲ್, ಟಿವಿಯನ್ನು ನೋಡುವುದನ್ನು ಕಡಿಮೆ ಮಾಡುವುದರಿಂದ ನಿಮ್ಮ ನಿದ್ರೆಯ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಬಹುದು.

ಹೆಚ್ಚಿನ ಏಕಾಗ್ರತೆ:

ಸ್ಕ್ರೀನಿಂಗ್ ಸಮಯವನ್ನು ಕಡಿಮೆ ಮಾಡುವುದರಿಂದ ನಿಮ್ಮ ಗಮನ ಮತ್ತು ಏಕಾಗ್ರತೆಯನ್ನು ತೀಕ್ಷ್ಣಗೊಳಿಸುತ್ತದೆ. ಇದು ನಿಮ್ಮ ದೈನಂದಿನ ಕಾರ್ಯಗಳಲ್ಲಿ ನಿಮ್ಮನ್ನು ಹೆಚ್ಚು ಉತ್ಪಾದಕ ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ.

ಇದನ್ನೂ ಓದಿ: ಕಂಪ್ಯೂಟರ್​, ಮೊಬೈಲ್​ ಒತ್ತಡದಿಂದ ನಮ್ಮ ಕಣ್ಣನ್ನು ಕಾಪಾಡುವುದು ಹೇಗೆ?

ಸುಧಾರಿತ ಕಣ್ಣಿನ ಆರೋಗ್ಯ:

ಟಿವಿ, ಮೊಬೈಲ್ ನೋಡುವುದನ್ನು ಕಡಿಮೆ ಮಾಡುವುದರಿಂದ ಕಣ್ಣಿನ ಆಯಾಸ, ಶುಷ್ಕತೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ದೃಷ್ಟಿಯನ್ನು ರಕ್ಷಿಸುತ್ತದೆ ಮತ್ತು ದೀರ್ಘಾವಧಿಯ ಕಣ್ಣಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ದೈಹಿಕ ಚಟುವಟಿಕೆ ಹೆಚ್ಚಳ:

ಸ್ಕ್ರೀನಿಂಗ್ ಸಮಯ ಕಡಿಮೆ ಮಾಡುವುದರಿಂದ ನೈಸರ್ಗಿಕವಾಗಿ ಹೆಚ್ಚು ದೈಹಿಕ ಚಟುವಟಿಕೆಗೆ ಕಾರಣವಾಗುತ್ತದೆ. ಇದು ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಉತ್ತಮ ಒಟ್ಟಾರೆ ದೈಹಿಕ ಆರೋಗ್ಯವನ್ನು ಉತ್ತೇಜಿಸುತ್ತದೆ.

ಉತ್ತಮ ಮಾನಸಿಕ ಆರೋಗ್ಯ:

ಟಿವಿ, ಮೊಬೈಲ್ ನೋಡುವ ಸಮಯವನ್ನು ಸೀಮಿತಗೊಳಿಸುವುದರಿಂದ ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆಗೊಳಿಸಬಹುದು. ಇದರಿಂದ ಹೆಚ್ಚು ಸಕಾರಾತ್ಮಕ ಮನಸ್ಥಿತಿ ಮತ್ತು ಮಾನಸಿಕ ಯೋಗಕ್ಷೇಮವನ್ನು ಬೆಳೆಸಬಹುದು.

ಸೃಜನಶೀಲತೆ ಹೆಚ್ಚಳ:

ಸ್ಕ್ರೀನಿಂಗ್ ಸಮಯವನ್ನು ಕಡಿಮೆ ಮಾಡಿದರೆ ನಿಮ್ಮ ಮೆದುಳಿಗೆ ಸೃಜನಾತ್ಮಕ ಚಿಂತನೆ ಮತ್ತು ಕ್ರಿಯೇಟಿವ್ ಆಗಿ ಯೋಚಿಸಲು ಅವಕಾಶ ಸಿಗುತ್ತದೆ.

ಇದನ್ನೂ ಓದಿ: ಸೋಂಪಿನ ಕಾಳಿನ ಸೇವನೆಯಿಂದ ದೃಷ್ಟಿ ಚುರುಕಾಗುತ್ತಾ?

ಹವ್ಯಾಸಗಳಿಗೆ ಹೆಚ್ಚಿನ ಸಮಯ:

ನಿಮ್ಮ ಮೊಬೈಲ್, ಟಿವಿ ಸಮಯವನ್ನು ಕಡಿಮೆ ಮಾಡುವುದರಿಂದ ದಿನದ ಹೆಚ್ಚಿನ ಸಮಯವನ್ನು ಮುಕ್ತಗೊಳಿಸುತ್ತದೆ. ಇದರಿಂದ ನಿಮ್ಮ ಹವ್ಯಾಸಗಳಿಗೆ ಹೆಚ್ಚು ಸಮಯ ಕೊಡಬಹುದು.

ಉತ್ತಮ ನಿದ್ರೆಗೆ ಸಹಕಾರಿ:

ಮೊಬೈಲ್, ಟಿವಿ ಕಡಿಮೆ ನೋಡುವುದರಿಂದ ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಸಹಕಾರಿಯಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ