ಸಂಬಂಧದ ಜೀವಾಳವೇ ನಂಬಿಕೆ, ಸಂಗಾತಿಯ ನಂಬಿಕೆ ಗಳಿಸಲು ಈ ಮಾರ್ಗಗಳನ್ನು ಅನುಸರಿಸಿ
ಪ್ರೀತಿ ಹುಟ್ಟಲು ಕಾರಣಬೇಕಿಲ್ಲ, ಆದರೆ ನಂಬಿಕೆ ಗಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಬಿಡಿ. ಗಳಿಸಿದ ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟವೇ. ಹೀಗಾಗಿ ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಯ ಮೇಲೆ ನಂಬಿಕೆಯೇ ಇಲ್ಲದಿದ್ದರೆ ಆ ಸಂಬಂಧವು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಇತ್ತೀಚೆಗಿನ ದಿನಗಳಲ್ಲಿ ನಂಬಿಕೆಯ ಕೊರತೆಯಿಂದಾಗಿ ಸಂಬಂಧಗಳು ಮುರಿದು ಬೀಳುತ್ತಿದೆ. ಹೀಗಾಗಿ ಪ್ರತಿಯೊಂದು ಸಂಬಂಧದಲ್ಲಿ ನಂಬಿಕೆಯನ್ನು ಬೆಳೆಸುವಲ್ಲಿ ಕೆಲವು ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಒಂದು ವೇಳೆ ಸಂಬಂಧದಲ್ಲಿ ನಂಬಿಕೆಯನ್ನು ಗಳಿಸಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ.
ಪ್ರೀತಿಯೂ ಮಧುರ ಭಾವನೆಯಾದರೆ, ನಂಬಿಕೆಯೆನ್ನುವುದು ಸಂಬಂಧದ ತಳಹದಿ. ಸಂಬಂಧವು ನಿಂತಿರುವುದೇ ನಂಬಿಕೆಯ ಮೇಲೆ. ಹೀಗಾಗಿ ವಿಶ್ವಾಸ ಹಾಗೂ ನಂಬಿಕೆಯನ್ನು ಗಳಿಸಿಕೊಳ್ಳುವುದು ಕಷ್ಟವೇ. ಒಮ್ಮೆ ನಂಬಿಕೆಯನ್ನು ಗಳಿಸಿಕೊಂಡರೆ ದೀರ್ಘಕಾಲದವರೆಗೆ ಆ ನಂಬಿಕೆವು ಸಂಬಂಧವನ್ನು ಕಾಯುತ್ತದೆ. ಒಂದು ವೇಳೆ ನೀವು ನಂಬಿದ ವ್ಯಕ್ತಿಯೂ ನಿಮಗೆ ಮೋಸ ಮಾಡಿದರೆ ಅದರಿಂದ ಆಗುವ ನೋವು ಹೇಳಲು ಸಾಧ್ಯವಿಲ್ಲ. ಆ ವ್ಯಕ್ತಿಯ ಮೇಲೆ ಮತ್ತದೇ ನಂಬಿಕೆಯೂ ಹುಟ್ಟಿಕೊಳ್ಳಲು ಸಾಧ್ಯವಿಲ್ಲ.
ಸಂಬಂಧದಲ್ಲಿ ನಂಬಿಕೆ ಗಳಿಸಿಕೊಳ್ಳಬೇಕಾದರೆ ಹೀಗೆ ಮಾಡಿ:
ಇಬ್ಬರೂ ಅರ್ಥ ಮಾಡಿಕೊಳ್ಳಿ: ಜೀವನದಲ್ಲಿ ವ್ಯಕ್ತಿಯ ಜೊತೆಗೆ ಪ್ರೀತಿಯನ್ನು ಹೇಗೆ ಪರಸ್ಪರ ಹಂಚಿಕೊಳ್ಳುತ್ತಾರೆ ಅದೇ ರೀತಿ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ನೀವು ಜೊತೆಯಾಗಿ ಬದುಕುವ ಹಿಂದಿರುವ ಕಾರಣವನ್ನು ಅರ್ಥ ಮಾಡಿಕೊಂಡು ಬದುಕಿದರೆ ಒಬ್ಬರ ಮೇಲೆ ಇನ್ನೊಬ್ಬರಿಗೆ ನಂಬಿಕೆಯೂ ಬೆಳೆಯುತ್ತವೆ. ಸಂಗಾತಿಗೆ ಇಷ್ಟವಾಗದ ಕೆಲಸದ ಬಗ್ಗೆ ಅಪ್ಪಿತಪ್ಪಿಯೂ ಯೋಚಿಸಬೇಡಿ.
ಒಬ್ಬರು ಇನ್ನೊಬ್ಬರನ್ನು ಗೌರವದಿಂದ ಕಾಣಿ: ಸಂಬಂಧದಲ್ಲಿ ಒಬ್ಬರು ಇನ್ನೊಬ್ಬರಿಗೆ ಗೌರವವನ್ನು ನೀಡುವುದು ಹಾಗೂ ತೆಗೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಗೌರವವು ಮಾತಿನಲ್ಲಿ ಇರಲಿ ಹಾಗೂ ನಡೆ ನುಡಿಯಲ್ಲಿ ಇರಲಿ. ನಿಮ್ಮ ನೀಡುವ ಗೌರವದಿಂದ ನಿಮ್ಮ ಸಂಗಾತಿಗೆ ನಿಮ್ಮ ಮೇಲಿನ ಪ್ರೀತಿಯೂ ಹೆಚ್ಚಾಗಿ ನಂಬಿಕೆ ಹೆಚ್ಚಾಗಲು ಕಾರಣವಾಗುತ್ತದೆ.
ನಿಮ್ಮ ನಡೆ ನುಡಿ ಸ್ಥಿರವಾಗಿರಲಿ: ನಂಬಿಕೆಯ ವಿಚಾರದಲ್ಲಿ ನಡೆ ನುಡಿಯೂ ಕೂಡ ಒಳಪಡುತ್ತದೆ. ಸಂಗಾತಿಗೆ ಅಥವಾ ನಿಮ್ಮ ಎದುರಿಗಿರುವ ವ್ಯಕ್ತಿಗೆ ನಿಮ್ಮ ಮೇಲೆ ನಂಬಿಕೆ ಹುಟ್ಟಬೇಕಾದರೆ ನಿಮ್ಮ ನಡೆ ನುಡಿಯಲ್ಲಿ ಸ್ಥಿರತೆಯೂ ಬಹಳ ಮುಖ್ಯ. ಒಂದೊಂದು ಕ್ಷಣ ಒಂದೊಂದು ರೀತಿಯಲ್ಲಿ ವರ್ತಿಸುವುದನ್ನು ಸಂಗಾತಿಯು ಗಮನಿಸುತ್ತಿರಬಹುದು. ಹೀಗಾಗಿ ನಡೆ ನುಡಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಿ.
ಇದನ್ನೂ ಓದಿ:ನಿಮ್ಮ ಪ್ರಕಾರ ಪ್ರೀತಿ ಎಂದರೆ ಅದು ಕೇವಲ ಆಕರ್ಷಣೆಯೇ?
ಸಂಗಾತಿಗೆ ಪ್ರೈವೆಸಿ ನೀಡಿ: ಒಬ್ಬರಿಗೊಬ್ಬರು ಸಮಯ ನೀಡುವುದರ ಜೊತೆಗೆ ಪರಸ್ಪರ ಸ್ಪೇಸ್ ನೀಡುವುದು ಬಹಳ ಒಳ್ಳೆಯದು. ಸಂಗಾತಿಯ ಪ್ರೈವೆಸಿಯನ್ನುಯನ್ನು ಕಸಿದುಕೊಳ್ಳಬೇಡಿ. ಅವರ ವೈಯಕ್ತಿಕ ಕೆಲಸವನ್ನು ಖುಷಿಯಿಂದ ಮಾಡುವಂತಹ ವಾತಾವರಣವನ್ನು ನಿರ್ಮಿಸಿಕೊಟ್ಟರೆ ಸಂಬಂಧದ ಬೇರು ಮತ್ತಷ್ಟು ಗಟ್ಟಿಯಾಗುತ್ತದೆ.
ಮಾತುಕತೆಯಿಂದ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿಕೊಳ್ಳಿ: ಪ್ರತಿಯೊಂದು ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಹೀಗಾದಾಗ ಕಠೋರವಾದ ಮಾತುಗಳಿಂದ ನಿಮ್ಮ ಮೇಲೆ ಇದ್ದ ನಂಬಿಕೆಯೂ ಹಾಳಾಗಬಹುದು. ಹೀಗಾಗಿ ತಾಳ್ಮೆಯಿಂದ ಯೋಚಿಸಿ ಮಾತನಾಡಿ, ಆದಷ್ಟು ಭಿನ್ನಾಭಿಪ್ರಾಯಗಳು ಬಾರದಂತೆ ತಪ್ಪಿಸುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ