Beyond Ice Cream: ಹಲ್ಲು ತೆಗೆದ ನಂತರ ಐಸ್ ಕ್ರೀಮ್ ಬದಲು ಈ ಆಹಾರ ಸೇವಿಸಬಹುದು? ಇಲ್ಲಿದೆ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 06, 2023 | 3:13 PM

ವಿಸ್ಡಮ್ ಟೀತ್ (ಬಾಚಿಹಲ್ಲು) ಅಥವಾ ಬುದ್ಧಿವಂತಿಕೆಯ ಹಲ್ಲನ್ನು ತೆಗೆದುಹಾಕಿದ ನಂತರ ನೀವು ಸಾಮಾನ್ಯವಾಗಿ ತಿನ್ನುವ ಆಹಾರಕ್ಕೆ ಮರಳಲು ಸಾಧ್ಯವಿಲ್ಲ. ಆದರೆ ಇದರರ್ಥ ನೀವು ಪೋಷಕಾಂಶಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಕು ಎಂದಲ್ಲ. ಹಾಗಾದರೆ ಯಾವ ರೀತಿಯ ಆಹಾರ ಸೇವಿಸಬೇಕು ಇಲ್ಲಿದೆ ಮಾಹಿತಿ.

Beyond Ice Cream: ಹಲ್ಲು ತೆಗೆದ ನಂತರ ಐಸ್ ಕ್ರೀಮ್ ಬದಲು ಈ ಆಹಾರ ಸೇವಿಸಬಹುದು? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us on

ವಿಸ್ಡಮ್ ಟೀತ್ ಅಥವಾ ಬಾಚಿಹಲ್ಲು (ಬುದ್ಧಿವಂತಿಕೆಯ ಹಲ್ಲುಗಳು) ಸಾಮಾನ್ಯವಾಗಿ ನಾವು 18 ರಿಂದ 21 ವರ್ಷ ವಯಸ್ಸಿನವರಾಗಿದ್ದಾಗ, ದವಡೆಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಎರಡು ಹೊಸ ಹಲ್ಲುಗಳು ಹುಟ್ಟಿಕೊಳ್ಳುತ್ತವೆ. ಈ ಹಲ್ಲುಗಳನ್ನು ವಿಸ್ಡಮ್ ಟೀತ್ (ಬಾಚಿಹಲ್ಲು) ಎಂದು ಕರೆಯಲಾಗುತ್ತದೆ. ಅವುಗಳನ್ನು ಬುದ್ಧಿವಂತಿಕೆಯ ಸಂಕೇತವೆಂದು ಹೇಳಲಾಗುತ್ತದೆ. ಹಾಗಾಗಿ ಅದನ್ನು ಬುದ್ಧಿವಂತಿಕೆಯ ಹಲ್ಲುಗಳು ಎಂದು ಕರೆಯಲಾಗುತ್ತದೆ. ಆದರೆ ಇದಕ್ಕೂ ನಮ್ಮ ಬುದ್ದಿವಂತಿಕೆಗೂ ಯಾವುದೇ ಸಂಬಂಧವಿಲ್ಲ.

ಇನ್ನು ಈ ಹಲ್ಲು ಹುಳುಕಾದಾಗ ತೆಗೆಸುವುದು ಸಾಕಷ್ಟು ನೋವಿನ ಕೆಲಸ. ಆದರೆ ಇದು ದೀರ್ಘಾವಧಿಯಲ್ಲಿ ನಿಮ್ಮ ಒಸಡು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ಹಲ್ಲು ಹುಳುಕಾದಲ್ಲಿ ಅದಕ್ಕೆ ಅಗತ್ಯವಾಗಿರುವ ಟ್ರೀಟ್ಮೆಂಟ್ ತೆಗೆದುಕೊಳ್ಳುವುದು ಉತ್ತಮ. ಹಲ್ಲು ಕೀಳಿಸಿದ ಬಳಿಕ ಮೆತ್ತಗಿರುವ ಆಹಾರ ಸೇವನೆ ಮುಖ್ಯವಾಗುತ್ತದೆ. ಅಮೇರಿಕನ್ ಡೆಂಟಲ್ ಅಸೋಸಿಯೇಷನ್ ಪ್ರಕಾರ, ಅನೇಕ ಬಾರಿ ಬುದ್ಧಿವಂತ ಹಲ್ಲುಗಳು ಸರಿಯಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಆಗಾಗ ಒಸಡಿನ ಮೃದು ಅಂಗಾಂಶಗಳನ್ನು ನೋಯಿಸುತ್ತವೆ, ಈ ನೋವು ಸೋಂಕಿಗೆ ಕಾರಣವಾಗುತ್ತದೆ ಮತ್ತು ಹತ್ತಿರದ ಹಲ್ಲುಗಳಿಗೆ ಹಾನಿ ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ, ಹಲ್ಲು ಹೊರತೆಗೆಯುವುದು ಅನಿವಾರ್ಯವಾಗುತ್ತದೆ. ಬಳಿಕ ಇದರ ಚೇತರಿಕೆಗೆ ಎರಡರಿಂದ ಮೂರು ವಾರಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಚಿಕಿತ್ಸೆಯ ಬಳಿಕ ನೀವು ತಿನ್ನುವ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಬಾಯಿಯ ಶಸ್ತ್ರಚಿಕಿತ್ಸಕರು ಸಾಮಾನ್ಯವಾಗಿ ಹಲ್ಲು ತೆಗೆದ ನೋವು ಗುಣವಾಗುವವರೆಗೆ ನಿಮಗೆ ಮೃದುವಾದ ಆಹಾರವನ್ನು ತಿನ್ನಲು ಸೂಚಿಸುತ್ತಾರೆ.

ಹಲ್ಲನ್ನು ತೆಗೆದ ನಂತರ ಮೃದುವಾದ ಆಹಾರವನ್ನು ಸೇವಿಸುವುದು ಏಕೆ ಮುಖ್ಯ?

ಮೊದಲೇ ಹೇಳಿದಂತೆ, ಬಾಚಿಹಲ್ಲನ್ನು ತೆಗೆದ ಬಳಿಕ (ಕೀಳಿಸಿಕೊಂಡ ಬಳಿಕ) ಸಾಮಾನ್ಯವಾಗಿ ನೀವು ದಿನನಿತ್ಯ ತಿನ್ನುವ ಆಹಾರಕ್ಕೆ ಮರಳಲು ಸಾಧ್ಯವಿಲ್ಲ. ಆದರೆ ಇದರರ್ಥ ನೀವು ಪೋಷಕಾಂಶಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಕು ಎಂದಲ್ಲ. ತಜ್ಞರ ಪ್ರಕಾರ, ಹಲ್ಲನ್ನು ತೆಗೆದ ಸ್ಥಳದಲ್ಲಿ ಆಹಾರದ ತುಂಡುಗಳು ಸಿಲುಕಿಕೊಳ್ಳುವುದನ್ನು ತಡೆಯಲು ಆರೋಗ್ಯಕರವಾಗಿರುವ ಮತ್ತು ತಿನ್ನಲು ಸುಲಭವಾದ ಆಹಾರವನ್ನು ಆರಿಸಿಕೊಳ್ಳುವುದು ಮುಖ್ಯ. ಇದಲ್ಲದೆ, ಇಂತಹ ಆಹಾರವು ನೋವನ್ನು ಗುಣಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ, ಜೊತೆಗೆ ಶಸ್ತ್ರಚಿಕಿತ್ಸೆಯ ನಂತರ ಯಾವುದೇ ರೀತಿಯ ಸೋಂಕು ತಗಲುವುದನ್ನು ತಪ್ಪಿಸುತ್ತದೆ.

ಹಲ್ಲನ್ನು ತೆಗೆದ ನಂತರ ಯಾವ ರೀತಿಯ ಆಹಾರವನ್ನು ಸೇವಿಸಬೇಕು?

ಹಲ್ಲನ್ನು ಕಿಳಿಸಿದ ಬಳಿಕ ಜನರು ಐಸ್ ಕ್ರೀಮ್ ತಿನ್ನುವುದನ್ನು ನೋಡುತ್ತೀರಿ. ಇದು ನೋವು ಪೀಡಿತ ಪ್ರದೇಶವನ್ನು ತಂಪಾಗಿಸಲು ಸಹಾಯ ಮಾಡುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಇದು ತಿನ್ನಲು ಸುಲಭ. ಆದರೆ ಅತಿಯಾದ ಐಸ್ ಕ್ರೀಮ್ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಶಸ್ತ್ರಚಿಕಿತ್ಸೆಯ ನಂತರ ನೀವು ತಿನ್ನಬಹುದಾದ ಕೆಲವು ಆರೋಗ್ಯಕರ ಮತ್ತು ರುಚಿಕರವಾದ ಮೃದು ಆಹಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದ್ದು ಇವು ನಿಮ್ಮ ಆರೋಗ್ಯಕ್ಕೂ ಒಳ್ಳೆಯದಾಗಿದೆ.

ಇದನ್ನೂ ಓದಿ:ನಿಮ್ಮ ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುವ ದೈನಂದಿನ ಅಭ್ಯಾಸಗಳು

ಬಾಚಿಹಲ್ಲು ತೆಗೆದ ನಂತರ ತಿನ್ನಬೇಕಾದ 5 ಆಹಾರಗಳ ಬಗ್ಗೆ ಇಲ್ಲಿವೆ ಮಾಹಿತಿ:

1. ಬೇಯಿಸಿದ ಮೊಟ್ಟೆಗಳು: ಮೊಟ್ಟೆ ಯಾವುದೇ ಸಮಯದಲ್ಲಿಯೂ ನಿಮ್ಮ ರಕ್ಷಿಸಬಹುದಾದ ಆಹಾರವಾಗಿದೆ. ಇದನ್ನು ತಿನ್ನವುದು ಸುಲಭ ಮತ್ತು ಹಲವಾರು ಅಗತ್ಯ ಪೋಷಕಾಂಶಗಳನ್ನು ನಿಮಗೆ ನೀಡುತ್ತದೆ.

2. ಜಜ್ಜಿದ ಆಲೂಗಡ್ಡೆ: ಬೇಯಿಸಿದ ಮೊಟ್ಟೆಗಳನ್ನು ಜಜ್ಜಿದ ಆಲೂಗಡ್ಡೆಯ ಒಂದು ಭಾಗದೊಂದಿಗೆ ಸೇರಿಸಿ ಆರೋಗ್ಯಕರವಾಗಿ ಊಟವನ್ನು ತಯಾರಿಸಿಕೊಳ್ಳಬಹುದು. ಆಲೂಗಡ್ಡೆ ಪಿಷ್ಟ ಪದಾರ್ಥ ಆದರೂ, ಅವು ನೋವು ಗುಣಪಡಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ಸಹ ಹೊಂದಿವೆ. ನಿಮ್ಮ ಇಚ್ಛೆಯಂತೆ ನಿಮಗೆ ಬೇಕಾದ ರೀತಿಯಲ್ಲಿ ಆಲೂಗಡ್ಡೆ ಬಳಸಿಕೊಂಡು ಆಹಾರ ತಯಾರಿಸಬಹುದು ಆದರೆ ಅದಕ್ಕೆ ಹೆಚ್ಚುವರಿ ಮಸಾಲೆ ಸೇರಿಸುವುದನ್ನು ತಪ್ಪಿಸಿ. ಜಜ್ಜಿದ ಆಲೂಗಡ್ಡೆಯನ್ನು ಸರಳವಾಗಿ ಬಳಸಿಕೊಳ್ಳಲು ಪ್ರಯತ್ನಿಸಿ.

3. ಲಸ್ಸಿ: ಐಸ್ ಕ್ರೀಮ್ ತಿನ್ನುವುದರಿಂದ ಕ್ಯಾಲೊರಿ ಹೆಚ್ಚುತ್ತದೆ ಎನ್ನುವರಿಗೆ ಚಿಂತೆ ಮಾಡುವ ಅಗತ್ಯವಿಲ್ಲ. ಇದರ ಬದಲು ಲಸ್ಸಿ ಉತ್ತಮ ಆಯ್ಕೆಯಾಗಿದೆ. ಇದು ನಿಮಗೆ ಅದೇ ಹಿತವಾದ ಸಂವೇದನೆಯನ್ನು ನೀಡುತ್ತದೆ ಮತ್ತು ಇದು ಮೊಸರಾಗಿರುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ. ಜೊತೆಗೆ ಪೋಷಕಾಂಶಗಳನ್ನು ನೀಡುತ್ತದೆ.

4. ಬಾಳೆಹಣ್ಣು: ಇದು ಬಹಳ ಮೃದುವಾಗಿದ್ದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಜೊತೆಗೆ ಈ ಹಣ್ಣು ತಿನ್ನುವುದರಿಂದ ನಿಮ್ಮ ಒಂದು ಔತಣದಷ್ಟು ಪೋಷಕಾಂಶಗಳನ್ನು ನೀಡುತ್ತದೆ. ಇದಲ್ಲದೆ, ಇದು ವರ್ಷಪೂರ್ತಿ ಹೇರಳವಾಗಿ ಲಭ್ಯವಿದ್ದು ಇದರಿಂದ ನಿಮಗೆ ಬೇಕಾದ ರೀತಿಯ ಸಲಾಡ್ ಮಾಡಿಕೊಳ್ಳಬಹುದು. ಜೊತೆಗೆ ಬಾಳೆಹಣ್ಣಿನೊಂದಿಗೆ ಜೇನುತುಪ್ಪ ಬೆರಸಿಯೂ ತಿನ್ನಬಹುದು.

5. ಸೂಪ್ /ಸಾರು: ಈ ಸಮಯದಲ್ಲಿ ಕೆಲವು ಉತ್ತಮ ಪ್ರೋಟೀನ್ ಗಳನ್ನು ಸಹ ತಿನ್ನುವುದು ಮುಖ್ಯವಾಗಿರುತ್ತದೆ. ಆದ್ದರಿಂದ, ಕನಿಷ್ಠ ಮಸಾಲೆಗಳು ಮತ್ತು ಬೆಣ್ಣೆಯೊಂದಿಗೆ ಸರಳ ಸೂಪ್ ಅಥವಾ ತರಕಾರಿ / ಚಿಕನ್ ಹಾಕಿ ಸೂಪ್ ತಯಾರಿಸಲು ಪ್ರಯತ್ನಿಸಿ. ಆದಷ್ಟು ಆಹಾರವನ್ನು ಮಿಕ್ಸಿಯಲ್ಲಿ ಸಣ್ಣ ಮಾಡಿಕೊಂಡು ತಿನ್ನಿ.

ಹಲ್ಲನ್ನು ತೆಗೆದ ನಂತರ ಯಾವ ಆಹಾರಗಳನ್ನು ತಪ್ಪಿಸಬೇಕು?

ಹಲ್ಲನ್ನು ಕೀಳಿಸಿಕೊಂಡು ಬಂದ ನಂತರ ಏನನ್ನು ತಿನ್ನಬಾರದು ಎಂದು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಘನ ಮತ್ತು ಕಠಿಣ ಆಹಾರದ ಜೊತೆಗೆ ಆಲ್ಕೋಹಾಲ್, ನಿಕೋಟಿನ್ (ಸಿಗರೇಟ್), ಬಿಸಿ ಆಹಾರ ಮತ್ತು ಹೆಚ್ಚುವರಿ ಮಸಾಲೆಗಳನ್ನು ಸಹ ತಪ್ಪಿಸಬೇಕು. ಕೆಫೀನ್ ಅನ್ನು ಸಹ ತ್ಯಜಿಸಲು ಸಲಹೆ ನೀಡಲಾಗಿದ್ದರೂ, ಕೆಲವು ದಂತವೈದ್ಯರು ಹೇಳುವಂತೆ, ನೀವು ಒಂದು ಕಪ್ ಕಾಫಿ ಅಥವಾ ಚಹಾವನ್ನು (ಆದರೆ ಅದಕ್ಕಿಂತ ಹೆಚ್ಚು ಅಲ್ಲ) ಸೇವಿಸಬಹುದು. ನೀವು ಇದನ್ನು ಕೋಲ್ಡ್ ಕಾಫಿ ಅಥವಾ ಐಸ್ಡ್ ಚಹಾದ ರೂಪದಲ್ಲಿಯೂ ಆನಂದಿಸಬಹುದು, ಆದರೆ ಹೇಳಿದಂತೆ, ಮಿತವಾಗಿರಲಿ.

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 3:12 pm, Thu, 6 July 23