Relationship Tips : ಪ್ರೀತಿಯಲ್ಲಿ ಬೀಳುವ ಮುನ್ನ ಹುಡುಗರು ಹುಡುಗಿಯಲ್ಲಿ ಈ ಗುಣಗಳನ್ನು ಹುಡುಕ್ತಾರಂತೆ

ಪ್ರೀತಿಗೆ ಕಣ್ಣಿಲ್ಲ. ಯಾವಾಗ ಯಾರ ಮೇಲೆ ಪ್ರೀತಿ ಹುಟ್ಟುತ್ತೆ ಎಂದೇಳುವುದು ಕಷ್ಟ. ಈ ಪ್ರೀತಿಗೆ ಜಾತಿ, ಧರ್ಮ, ಅಂತಸ್ತು, ವಯಸ್ಸಿನ ಅಂತರವಿಲ್ಲ. ಈಗೆಂದ ಮಾತ್ರಕ್ಕೆ ಎಲ್ಲರ ಮೇಲೂ ಪ್ರೀತಿ ಹುಟ್ಟುವುದಿಲ್ಲ. ಆದರೆ ಹುಡುಗರು ಹುಡುಗಿಯನ್ನು ಪ್ರೀತಿಸುವ ಮೊದಲು ಆಕೆಯ ಸೌಂದರ್ಯವನ್ನು ಮಾತ್ರ ನೋಡುವುದಿಲ್ಲ. ಆಕೆಯಲ್ಲಿ ಈ ಗುಣಗಳು ಇದೆಯೇ ಎಂದು ನೋಡುತ್ತಾರೆ. ಹಾಗಾದ್ರೆ ಹುಡುಗನ ಮನಸ್ಸು ಗೆಲ್ಲಲು ಹುಡುಗಿಯಲ್ಲಿ ಇರಲೇಬೇಕಾದ ಆ ಗುಣಗಳಾವುವು ಎನ್ನುವುದರ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

Relationship Tips : ಪ್ರೀತಿಯಲ್ಲಿ ಬೀಳುವ ಮುನ್ನ ಹುಡುಗರು ಹುಡುಗಿಯಲ್ಲಿ ಈ ಗುಣಗಳನ್ನು ಹುಡುಕ್ತಾರಂತೆ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 31, 2024 | 9:39 AM

ಪ್ರೀತಿಯೂ ಎರಡು ಮನಸ್ಸುಗಳ ಮಿಲನ. ಇಬ್ಬರೂ ವ್ಯಕ್ತಿಗಳ ನಡುವೆ ಸುಂದರವಾದ ಭಾವನೆ. ಈ ಪ್ರೀತಿ ಚಿಗುರಲು ಕಾರಣ ಬೇಕಿಲ್ಲ. ಆದರೆ ಒಬ್ಬ ಹುಡುಗನ ಹೃದಯದಲ್ಲಿ ಹುಡುಗಿಯೂ ಪ್ರೀತಿಯ ಮುದ್ರೆ ಒತ್ತಲು ಆಕೆಯಲ್ಲಿ ಈ ಕೆಲವು ಗುಣಗಳು ಇರಲೇಬೇಕು. ಈಗಿನ ಕಾಲದಲ್ಲಿ ಹುಡುಗ, ಹುಡುಗಿಯ ಅಂದ ಚಂದಕ್ಕೆ ಮರುಳಾಗುತ್ತಾರೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಈ ಆಕೆಯಲ್ಲೋ ಈ ಗುಣಗಳು ಇದೆಯೇ ಎಂದು ಗಮನಿಸುತ್ತಾನೆನೆ. ಒಂದು ವೇಳೆ ಆತನು ಬಯಸುವ ಈ ಎಲ್ಲಾ ಗುಣಗಳಿದ್ದರೆ ತನ್ನ ಸಂಗಾತಿಯಾಗಲು ಇವಳು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದು ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ.

  • ಹುಡುಗಿಯೂ ನೋಡಲು ಸುಂದರವಾಗಿದ್ದರೆ ಮಾತ್ರ ಸಾಲುವುದಿಲ್ಲ. ಆಕೆಗೆ ಬುದ್ಧಿವಂತಿಕೆಯೂ ಅಷ್ಟೇ ಮುಖ್ಯ. ಹುಡುಗನೊಬ್ಬನು ಹುಡುಗಿಯನ್ನು ಇಷ್ಟ ಪಡುವ ಮುನ್ನ ಆಕೆಯಲ್ಲಿ ಬುದ್ಧಿವಂತಳೇ ಎಂದು ನೋಡುತ್ತಾನೆ. ಕೆಲವೊಂದು ಪರಿಸ್ಥಿತಿಯನ್ನು ಎದುರಿಸಲು ಈ ಗುಣವು ಅಗತ್ಯವಾಗಿ ಬೇಕಾಗುತ್ತದೆ.
  • ಎಷ್ಟೇ ಹುಡುಗರು ಅಪ್ಡೇಟ್ ಆಗಿದ್ದರೂ ಸಂಸ್ಕಾರವಂತ ಕುಟುಂಬದ ಹುಡುಗಿಯನ್ನೇ ಹೆಚ್ಚು ಇಷ್ಟ ಪಡುತ್ತಾರೆ. ಒಂದು ವೇಳೆ ನೋಟದಿಂದಲೇ ಆಕೆಯೂ ಹುಡುಗನ ಮನಸ್ಸನ್ನು ಕದಿದ್ದರೂ, ಆಕೆಯಲ್ಲಿ ಸಂಸ್ಕಾರವಿದೆಯೇ, ಕುಟುಂಬದ ಹಿನ್ನಲೆ ಹಾಗೂ ನಡೆ ನುಡಿಯ ಬಗ್ಗೆ ತಿಳಿದುಕೊಳ್ಳುತ್ತಾರೆ.
  • ಒಬ್ಬರಿಗೆ ನಿಮ್ಮ ಮೇಲೆ ಪ್ರೀತಿಯ ಭಾವನೆಯೊಂದು ಮೂಡಬೇಕಾದರೆ ನಿಮ್ಮ ಉಡುಗೆ ತೊಡುಗೆಗಳು ಕೂಡ ಮುಖ್ಯವಾಗುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಹುಡುಗನು ಹುಡುಗಿಯ ಪ್ರೀತಿಯಲ್ಲಿ ಬೀಳುವ ಮೊದಲು ಆಕೆಯ ಡ್ರೆಸ್ಸಿಂಗ್‌ ಸೆನ್ಸ್ ಹೇಗಿದೆ ಎಂದು ಗಮನಿಸುತ್ತಾನೆ. ಒಂದು ವೇಳೆ ಆಕೆಯ ನಮ್ಮ ಸಂಸ್ಕೃತಿಗೆ ಹೊಂದುವಂತಹ ಉಡುಗೆ ತೊಡುಗೆಗಳನ್ನು ಧರಿಸಿದ್ದರೆ ಆಕೆಗೆ ಖಂಡಿತ ಮನಸೋಲುತ್ತಾನೆ.
  • ಪ್ರತಿಯೊಬ್ಬ ವ್ಯಕ್ತಿಗೂ ಗೌರವ ನೀಡುವುದು ಹಾಗೂ ಪಡೆದುಕೊಳ್ಳುವ ಗುಣವಿರಲೇ ಬೇಕು. ಇಂತಹ ಗುಣವಿರುವ ಹುಡುಗಿಯೂ ತನ್ನ ಸಂಗಾತಿಯಾದರೆ ಎಲ್ಲರನ್ನು ಗೌರವದಿಂದ ಕಾಣುತ್ತಾಳೆ ಎಂದುಕೊಳ್ಳುತ್ತಾನೆ. ಹೀಗಾಗಿ ಹಿರಿಯರನ್ನು ಗೌರವದಿಂದ ಕಾಣುವ ಹುಡುಗಿಯ ಮೇಲೆ ಹುಡುಗರಿಗೆ ಬೇಗನೇ ಪ್ರೀತಿಯೂ ಮೂಡುತ್ತದೆ.
  • ಪ್ರೀತಿಗೆ ಬೀಳುವ ಮುನ್ನ ಅಥವಾ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವ ಮೊದಲು ಹುಡುಗನು ಹುಡುಗಿಯ ಸ್ವಭಾವವನ್ನು ಸೂಕ್ಷ್ಮವಾಗಿ ಗಮನಿಸುತ್ತಾನೆ. ತನ್ನ ಮೇಲೆ ತನಗೆ ಕೀಳರಿಮೆ ಭಾವನೆಯುಳ್ಳ ಹುಡುಗಿಯನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ನೋಡುವುದಕ್ಕೆ ಸುಂದರವಿಲ್ಲದಿದ್ದರೂ ಆತ್ಮವಿಶ್ವಾಸದಿಂದ ಇರುವ ಹುಡುಗಿಯನ್ನು ಬೇಗನೇ ಇಷ್ಟ ಪಡುತ್ತಾನೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ