Chanakya Niti: ಚಾಣಕ್ಯರ ಪ್ರಕಾರ ಮಹಿಳೆಯರಿಗೆ ಇಷ್ಟವಾಗುವುದೇ ಈ ಗುಣಗಳಿರುವ ಪುರುಷರಂತೆ
ಪ್ರತಿಯೊಬ್ಬ ಮಹಿಳೆಗೂ ಇಷ್ಟವಾಗುವುದು ಸದ್ಗುಣಗಳನ್ನು ಹೊಂದಿರುವ ಪುರುಷರು. ಅದರಲ್ಲೂ ಈ ಕೆಲವೊಂದು ಗುಣಗಳನ್ನು ಹೊಂದಿರುವ ಪುರುಷರತ್ತ ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಪುರುಷರ ಯಾವ ಗುಣಗಳು ಮಹಿಳೆಯರಿಗೆ ಇಷ್ಟವಾಗುತ್ತದೆ, ಒಬ್ಬ ಆದರ್ಶ ಪುರುಷ ಯಾವೆಲ್ಲಾ ಗುಣಗಳನ್ನು ಹೊಂದಿರಲೇಬೇಕು ಎಂಬುದನ್ನು ನೋಡೋಣ ಬನ್ನಿ.

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ, ಯಶಸ್ಸು, ವೃತ್ತಿ ಜೀವನ, ಮಾತ್ರವಲ್ಲ ಪುರುಷರು ಮತ್ತು ಮಹಿಳೆಯರ ವೈಯಕ್ತಿಕ ಜೀವನ, ಸ್ವಭಾವ, ಜೀವನಶೈಲಿ ಮತ್ತು ಸಂಬಂಧಗಳ ಬಗ್ಗೆಯೂ ಸಾಕಷ್ಟು ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಉತ್ತಮ ಮನುಷ್ಯನಾಗಲು ಮಾತ್ರವಲ್ಲದೆ ವಿಶ್ವಾಸಾರ್ಹ ಜೀವನ ಸಂಗಾತಿಯಾಗಲು ಒಬ್ಬ ಪುರುಷನಿಗೆ ಯಾವೆಲ್ಲಾ ಗುಣಗಳು ಇರಬೇಕು, ಒಬ್ಬ ಪುರುಷನ ಯಾವ ಗುಣಗಳು ಮಹಿಳೆಯರಿಗೆ ಇಷ್ಟವಾಗುತ್ತದೆ ಎಂಬುದರ ಬಗ್ಗೆಯೂ ಹೇಳಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಹಿಳೆಯರಿಗೆ ಇಷ್ಟವಾಗುವುದೇ ಪುರುಷರ ಈ ಗುಣಗಳು:
ಮಹಿಳೆಯರು ತಮ್ಮನ್ನು ಅರ್ಥಮಾಡಿಕೊಳ್ಳುವ, ಗೌರವಿಸುವ, ಅವರ ಭಾವನೆಗಳನ್ನು ಗೌರವಿಸುವ ಮತ್ತು ಸಂಪೂರ್ಣ ಪ್ರಾಮಾಣಿಕತೆಯಿಂದ ಸಂಬಂಧಗಳನ್ನು ನಿರ್ವಹಿಸುವ ಪುರುಷರನ್ನು ಸಖತ್ ಇಷ್ಟಪಡುತ್ತಾರೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು.
ಗೌರವ: ಚಾಣಕ್ಯನ ಪ್ರಕಾರ, ಮಹಿಳೆಯರು ತಮ್ಮನ್ನು ಗೌರವಿಸುವ ಮತ್ತು ಪ್ರೀತಿಯಿಂದ ನಡೆಸಿಕೊಳ್ಳುವ ಪುರುಷರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಮಹಿಳೆಯರು ತಮ್ಮನ್ನು ಸಮಾನವಾಗಿ ಪರಿಗಣಿಸುವ, ತಮ್ಮ ಅಭಿಪ್ರಾಯಗಳಿಗೆ ಬೆಲೆ ನೀಡುವ ಮತ್ತು ತಮ್ಮ ಅಭಿಪ್ರಾಯಗಳನ್ನು ಗೌರವಿಸುವ ಪುರುಷರನ್ನು ಇಷ್ಟಪಡುತ್ತಾರೆ ಎನ್ನುತ್ತಾರೆ ಚಾಣಕ್ಯ.
ಪ್ರಾಮಾಣಿಕತೆ: ಯಾವುದೇ ಸಂಬಂಧದ ಅಡಿಪಾಯವೇ ಪ್ರಾಮಾಣಿಕತೆ. ಮಹಿಳೆಯರು ತಮ್ಮ ಮಾತಿಗೆ ಬದ್ಧರಾಗಿರುವ, ಸುಳ್ಳು ಮಾತುಗಳನ್ನಾಡದ ಮತ್ತು ಕಷ್ಟದ ಸಮಯದಲ್ಲಿ ತಮ್ಮೊಂದಿಗೆ ನಿಲ್ಲುವ ಪುರುಷರನ್ನು ಹೆಚ್ಚು ಇಷ್ಟಪಡುತ್ತಾರೆ. ಈ ಗುಣಗಳಿರುವ ಪುರುಷನೇ ತಮ್ಮ ಜೀವನಸಂಗಾತಿಯಾಗಬೇಕು ಎಂದು ಬಯಸುತ್ತಾರೆ.
ಸುರಕ್ಷತೆಯ ಭಾವನೆ: ಮಹಿಳೆಯರು ದೈಹಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಸುರಕ್ಷಿತವಾಗಿರುವಂತೆ ಮಾಡುವ, ಕಷ್ಟಕರ ಸಂದರ್ಭಗಳಲ್ಲಿ ತಮ್ಮೊಂದಿಗೆ ನಿಲ್ಲುವ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡುವ ಪುರುಷರಲ್ಲಿ ಸುರಕ್ಷತೆಯ ಭಾವವನ್ನು ಬಯಸುತ್ತಾರೆ. ಜೊತೆಗೆ ಈ ಸುರಕ್ಷತೆಯ ಭಾವನೆಯನ್ನು ನೀಡುವ ಪುರುಷನನ್ನು ಇಷ್ಟಪಡುತ್ತಾರೆ.
ಶಾಂತತೆ ಮತ್ತು ತಾಳ್ಮೆ: ಮಹಿಳೆಯರು ಪುರುಷರಲ್ಲಿ ಕೋಪ ಮತ್ತು ಕಿರಿಕಿರಿ ಸ್ವಭಾವವನ್ನು ಇಷ್ಟಪಡುವುದಿಲ್ಲ. ಬದಲಿಗೆ ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಶಾಂತ ಮತ್ತು ಸಂಯಮದಿಂದ ಇರುವ ಪುರುಷರತ್ತ ಮಹಿಳೆಯರಿಗೆ ಹೆಚ್ಚು ಆಕರ್ಷಕವಾಗಿರುತ್ತಾರೆ ಎನ್ನುತ್ತಾರೆ ಚಾಣಕ್ಯ.
ಜವಾಬ್ದಾರಿಯುತ ಪುರುಷ: ಆಚಾರ್ಯ ಚಾಣಕ್ಯರು ಜವಾಬ್ದಾರಿಯುತ ಪುರುಷನನ್ನು ಸಮಾಜ ಮತ್ತು ಕುಟುಂಬದ ಬೆನ್ನೆಲುಬು ಎಂದು ಪರಿಗಣಿಸಿದ್ದಾರೆ. ತನ್ನ ಕರ್ತವ್ಯಗಳನ್ನು ನಿಭಾಯಿಸುವ ಮತ್ತು ಮಹಿಳೆಯರಿಗೆ ಮಾನಸಿಕ ಮತ್ತು ಭಾವನಾತ್ಮಕ ಭದ್ರತೆಯನ್ನು ಒದಗಿಸಬಲ್ಲ ಪುರುಷರನ್ನು ಮಹಿಳೆಯರು ಇಷ್ಟಪಡುತ್ತಾರೆ.
ಇದನ್ನೂ ಓದಿ: ಪುರುಷರು ಈ ವಿಷಯಗಳನ್ನು ಯಾರ ಬಳಿಯೂ ಶೇರ್ ಮಾಡಲೇಬಾರದು
ಒಳ್ಳೆಯ ಕೇಳುಗ: ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯರು ತಮ್ಮ ಮಾತುಗಳನ್ನು ಶಾಂತವಾಗಿ ಆಲಿಸುವ ಮತ್ತು ಬುದ್ಧಿವಂತಿಕೆಯಿಂದ ಪ್ರತಿಕ್ರಿಯಿಸುವ ಪುರುಷರನ್ನು ಮೆಚ್ಚುತ್ತಾರೆ.
ಹಾಸ್ಯ ಮತ್ತು ಸಕಾರಾತ್ಮಕ ಚಿಂತನೆ: ಆಚಾರ್ಯ ಚಾಣಕ್ಯರು ಹೇಳುವಂತೆ, ಬಿಕ್ಕಟ್ಟಿನ ಸಮಯದಲ್ಲೂ ತಾಳ್ಮೆ ಮತ್ತು ನಗುವನ್ನು ಕಾಯ್ದುಕೊಳ್ಳುವವರೇ ನಿಜವಾದ ಬುದ್ಧಿವಂತರು. ಮಹಿಳೆಯರು ಸಕಾರಾತ್ಮಕ, ಹಾಸ್ಯಪ್ರಜ್ಞೆಯನ್ನು ಹೊಂದಿರುವ ಮತ್ತು ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿರುವ ಪುರುಷರನ್ನು ಇಷ್ಟಪಡುತ್ತಾರೆ.
ಸಮರ್ಪಣೆ ಮತ್ತು ನಿಷ್ಠೆ: ಮಹಿಳೆಯರು ಸಂಬಂಧದಲ್ಲಿ ನಿಷ್ಠರಾಗಿರುವ, ಸಂಪೂರ್ಣವಾಗಿ ಸಮರ್ಪಿತರಾಗಿರುವ ಪುರುಷರನ್ನು ಇಷ್ಟಪಡುತ್ತಾರೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




