
ಜೀವನದಲ್ಲಿ ಯಶಸ್ಸನ್ನು (success) ಸಾಧಿಸಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಯಶಸ್ಸನ್ನು ಗಳಿಸುವುದು ಹೇಗೆ ಎಂಬುದನ್ನು ಅನೇಕರಿಗೆ ಗೊತ್ತಿಲ್ಲ. ಆಚಾರ್ಯ ಚಾಣಕ್ಯರ ಯಶಸ್ಸನ್ನು ಸಾಧಿಸಲು ಏನು ಮಾಡಬೇಕು, ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂಬುದರ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಒಳ್ಳೆಯ ಗುಣಗಳ ಜೊತೆಗೆ ಸಮಯದ ಸರಿಯಾದ ಸದ್ಬಳಕೆಯಂತಹ ಕೆಲವು ನಿಮಯಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು ಎಂದಿದ್ದಾರೆ. ಹಾಗಿದ್ರೆ ಯಾವೆಲ್ಲಾ ನಿಯಮಗಳನ್ನು ಪಾಲಿಸುವ ಮೂಲಕ ಲೈಫಲ್ಲಿ ಸಕ್ಸಸ್ ಸಾಧಿಸಬಹುದು ಎಂಬುದನ್ನು ನೋಡೋಣ ಬನ್ನಿ.
ಚಾಣಕ್ಯರ ಪ್ರಕಾರ, ಸಮಯವನ್ನು ಗೌರವಿಸದ ಹಾಗೂ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳದ ವ್ಯಕ್ತಿಗೆ ಎಂದಿಗೂ ಯಶಸ್ಸು ಸಿಗುವುದಿಲ್ಲ. ಪ್ರತಿಯೊಂದು ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ವೃತ್ತಿಜೀವನದ ಪ್ರಗತಿಗೆ ನಿರ್ಣಾಯಕವಾಗಿದೆ. ಕಳೆದು ಹೋದ ಸಮಯವನ್ನು ಯಾರಿಂದಲೂ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಇಂದಿನ ಕೆಲಸವನ್ನು ಇಂದೇ ಮಾಡಿ, ಸೋಮಾರಿತನವನ್ನು ಬಿಟ್ಟು ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಿ.
ಜೀವನದಲ್ಲಿ ಪ್ರಗತಿ ಸಾಧಿಸಲು ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನೀವು ಯಾವುದರಲ್ಲಿ ಶ್ರೇಷ್ಠರಾಗಿದ್ದೀರಿ ಮತ್ತು ಎಲ್ಲಿ ಸುಧಾರಣೆ ಅಗತ್ಯವಿದೆ ಎಂಬುದನ್ನು ನೀವು ತಿಳಿದಿರಬೇಕು. ತಮ್ಮ ದೌರ್ಬಲ್ಯಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿಕೊಳ್ಳುವ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ.
ನಿಮ್ಮ ಮುಂದಿನ ನಡೆ ಅಥವಾ ಪ್ರಮುಖ ಯೋಜನೆಯ ಬಗ್ಗೆ ಅವು ಪೂರ್ಣಗೊಳ್ಳುವವರೆಗೆ ಯಾರಿಗೂ ಹೇಳಬೇಡಿ. ನಿಮ್ಮ ರಹಸ್ಯಗಳನ್ನು ನಿಮ್ಮಲ್ಲಿಯೇ ಭದ್ರವಾಗಿ ಬಚ್ಚಿಟ್ಟುಕೊಳ್ಳುವ ಒಂದು ಸಣ್ಣ ಅಭ್ಯಾಸ ನಿಮ್ಮ ಸಹೋದ್ಯೋಗಿಗಳು ಅಥವಾ ವಿರೋಧಿಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗದಂತೆ ತಡೆಯುತ್ತದೆ ಮತ್ತು ನಿಮ್ಮ ಗೆಲುವಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ಯೋಜನೆಗಳನ್ನು ಯಾರಿಗೂ ಶೇರ್ ಮಾಡಬೇಡಿ.
ಇದನ್ನೂ ಓದಿ: ಹೆಣ್ಮಕ್ಳು ತಾವು ಮದುವೆಯಾಗುವ ಹುಡುಗನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
ಕೆಲವೊಮ್ಮೆ, ನಿಮ್ಮ ವೃತ್ತಿಜೀವನದಲ್ಲಿ ದೊಡ್ಡ ಪ್ರಗತಿ ಸಾಧಿಸಲು ನೀವು ಅಪಾಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಚಾಣಕ್ಯರ ಪ್ರಕಾರ, ವೈಫಲ್ಯದ ಭಯದಿಂದ ಹೊಸ ಹೆಜ್ಜೆಗಳನ್ನು ಇಡಲು ಹೆದರುವ ವ್ಯಕ್ತಿಯು ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ತಪ್ಪುಗಳಿಂದ ಕಲಿಯಿರಿ ಮತ್ತು ಧೈರ್ಯದಿಂದ ಮುಂದುವರಿಯಿರಿ.
ಆಚಾರ್ಯ ಚಾಣಕ್ಯ ತಾಳ್ಮೆಯನ್ನು ಅತ್ಯಂತ ಶಕ್ತಿಶಾಲಿ ಸದ್ಗುಣಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ. ಪ್ರತಿಕೂಲ ಸಂದರ್ಭಗಳಲ್ಲಿಯೂ ತಾಳ್ಮೆಯನ್ನು ಕಾಯ್ದುಕೊಳ್ಳುವ ವ್ಯಕ್ತಿಯು ಅಂತಿಮವಾಗಿ ಯಶಸ್ವಿಯಾಗುತ್ತಾನೆ. ತಾಳ್ಮೆಯ ಮೂಲಕ, ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಯಶಸ್ಸನ್ನು ಸಾಧಿಸಬಹುದು. ಕೋಪಗೊಂಡಾಗಲೂ ತಾಳ್ಮೆಯಿಂದಿರುವ ಮತ್ತು ಆತುರವನ್ನು ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುವ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗುತ್ತಾನೆ ಎಂದು ಚಾಣಕ್ಯ ಹೇಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ