Chanakya Niti: ಈ ನಾಲ್ಕು ತಪ್ಪು ನಿರ್ಧಾರಗಳು ಜೀವವನ್ನು ಹಾಳು ಮಾಡಬಹುದು ಎನ್ನುತ್ತಾರೆ ಚಾಣಕ್ಯ

ಸರಿಯಾದ ಸಮಯದಲ್ಲಿ, ಸರಿಯಾದ ಆಲೋಚನೆ ಮತ್ತು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಮಾತ್ರ ವ್ಯಕ್ತಿಯನ್ನು ಸರಿಯಾದ ಹಾದಿಯಲ್ಲಿ ಕೊಂಡೊಯ್ಯಬಹುದು ಮತ್ತು ಆತನ ಜೀವನವನ್ನು ಸುಧಾರಿಸಬಹುದು. ಹಾಗಾಗಿ ಪ್ರತಿಯೊಂದು ನಿರ್ಧಾರಗಳನ್ನು ಸಹ ಯೋಚಿಸಿ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಅದರಲ್ಲೂ ಈ ನಾಲ್ಕು ವಿಚಾರಗಳಿಗೆ ಸಂಬಂಧಪಟ್ಟಂತೆ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೇ ಜೀವನವೇ ಹಾಳಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ.

Chanakya Niti: ಈ ನಾಲ್ಕು ತಪ್ಪು ನಿರ್ಧಾರಗಳು ಜೀವವನ್ನು ಹಾಳು ಮಾಡಬಹುದು ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿ
Image Credit source: Pinterest

Updated on: Apr 14, 2026 | 6:25 PM

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿ ಅನೇಕಾರು ವಿಷಯಗಳ ಬಗ್ಗೆಯೂ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿ ಜೀವನದಲ್ಲಿ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು ಜೀವನವನ್ನೇ ಹಾಳು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. ಅವರ ಪ್ರಕಾರ, ನೀವು ಈ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೆ, ನೀವು ನಿಮ್ಮ ಜೀವನದುದ್ದಕ್ಕೂ ವಿಷಾದಿಸಬೇಕಾಗುತ್ತದೆ, ಇದಲ್ಲದೆ ಆ ನಿರ್ಧಾರಗಳು ಭವಿಷ್ಯದಲ್ಲಿ ಸಮಸ್ಯೆಗಳನ್ನು ತಂದೊಡ್ಡಬಹುದು. ಆದ್ದರಿಂದ ಯಾವುದೇ ರೀತಿಯ ಹಾನಿಯನ್ನು ತಪ್ಪಿಸಲು ಈ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರ ವಹಿಸುವುದು ಒಳ್ಳೆಯದು. ಹಾಗಿದ್ದರೆ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸುವು ಅಗತ್ಯ ಎಂಬುದನ್ನು ನೋಡೋಣ ಬನ್ನಿ.

ಈ ತಪ್ಪು ನಿರ್ಧಾರಗಳಿಂದ ಜೀವನವೇ ಹಾಳಾಗಬಹುದು:

ಯೋಚಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು: ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ಆತುರದ ನಿರ್ಧಾರವು ಯಾವಾಗಲೂ ಹಾನಿಗೆ ಕಾರಣವಾಗುತ್ತದೆ. ಅನೇಕ ಜನರು ಭಾವನೆಗೆ ಒಳಗಾಗಿ ಅಥವಾ ಒತ್ತಡಕ್ಕೊಳಗಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದು ಉದ್ಯೋಗಗಳನ್ನು ಬದಲಾಯಿಸುವುದು, ಉಳಿತಾಯ ಮಾಡುವುದು ಅಥವಾ ಸಂಬಂಧಗಳನ್ನು ಕೊನೆಗೊಳಿಸುವುದು ಅಥವಾ ಹಣವನ್ನು ಹೂಡಿಕೆ ಮಾಡುವುದು ಹೀಗೆ ಯಾವುದೇ ವಿಚಾರದಲ್ಲಿ ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಭವಿಷ್ಯದಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಇರುತ್ತದೆ.

ಕೆಟ್ಟವರ ಸಹವಾಸ ಮಾಡುವುದು: ನೀವು ಕೆಟ್ಟವರ ಸಹವಾಸ ಮಾಡಲು ಪ್ರಾರಂಭಿಸಿದಾಗ, ನಿಮ್ಮ ಜೀವನ ನಿಧಾನವಾಗಿ ಕುಸಿಯಲು ಪ್ರಾರಂಭಿಸುತ್ತದೆ ಎನ್ನುತ್ತಾರೆ ಚಾಣಕ್ಯ.  ಆಚಾರ್ಯ ಚಾಣಕ್ಯರ ಪ್ರಕಾರ, ಒಂದು ಕೆಟ್ಟ ಹಣ್ಣು ಇಡೀ ಬುಟ್ಟಿಯ ಹಣ್ಣುಗಳನ್ನು ಹಾಳು ಮಾಡುವಂತೆ, ಕೆಟ್ಟವರ ಸಹವಾಸವು ನಿಮ್ಮ ಆಲೋಚನೆ ಮತ್ತು ಅಭ್ಯಾಸಗಳನ್ನು ಸಹ ಹಾಳುಮಾಡುತ್ತದೆ. ಇದರಿಂದ ನಿಮ್ಮ ಖ್ಯಾತಿ, ಜೀವನ ಎರಡೂ ಹಾಳಾಗುತ್ತದೆ. ಹಾಗಾಗಿ ಜೀವನದಲ್ಲಿ ಮುಂದುವರಿಯಲು ಬಯಸಿದರೆ  ನಿಮ್ಮನ್ನು ಪ್ರೇರೇಪಿಸುವ ಬುದ್ಧಿವಂತ, ಸಕಾರಾತ್ಮಕ ಮನಸ್ಥಿತಿಯ  ಜನರ ಸಹವಾಸದಲ್ಲಿರಿ.

ಇದನ್ನೂ ಓದಿ: ಅಭ್ಯಾಸಗಳು ಪುರುಷರ ಬದುಕನ್ನೇ ಸರ್ವನಾಶ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ ಚಾಣಕ್ಯ

ಹಣದ ದುರುಪಯೋಗ: ನೀವು ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಬಳಸದಿದ್ದರೆ, ಮುಂದೊಂದು ದಿನ ವಿಷಾದಿಸಬೇಕಾಗುತ್ತದೆ. ಅನೇಕ ಜನರು, ಎಚ್ಚರಿಕೆಯನ್ನು ಪರಿಗಣಿಸದೆ, ತಮ್ಮ ಹಣವನ್ನು ತಪ್ಪು ಸ್ಥಳಗಳಲ್ಲಿ ಖರ್ಚು ಮಾಡಲು ಅಥವಾ ಹೂಡಿಕೆ ಮಾಡಲು ನಿರ್ಧರಿಸುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ನೀವು ಯಾವಾಗಲೂ ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಬೇಕು. ಅನಗತ್ಯ ಖರ್ಚು ಮತ್ತು ದುರಾಸೆಯು ಹಣಕಾಸಿನ ಸಂಕಷ್ಟ ಎದುರಾಗಲು ಕಾರಣವಾಗಬಹುದು.

ಶಿಕ್ಷಣ ಮತ್ತು ಸಮಯವನ್ನು ನಿರ್ಲಕ್ಷಿಸುವುದು: ಆಚಾರ್ಯ ಚಾಣಕ್ಯರ ಪ್ರಕಾರ, ತಮ್ಮ ಸಮಯ ಮತ್ತು ಶಿಕ್ಷಣಕ್ಕೆ ಬೆಲೆ ಕೊಡದ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ನಿಮ್ಮ ಸಮಯ ಮತ್ತು ಜ್ಞಾನವು ನಿಮ್ಮ ದೊಡ್ಡ ಆಸ್ತಿಯಾಗಿದೆ. ಅವುಗಳನ್ನು ವ್ಯರ್ಥ ಮಾಡುವುದರಿಂದ ಜೀವನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಪ್ರತಿದಿನ ಹೊಸದನ್ನು ಕಲಿಯಲು ಮತ್ತು ಸಮಯವನ್ನು ಸರಿಯಾಗಿ ವ್ಯಯಿಸಿದರೆ ಮಾತ್ರ ಜೀವನದಲ್ಲಿ ಮುಂದುವರೆಯಲು ಸಾಧ್ಯ ಎಂದಿದ್ದಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us