AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Emoji Day 2026: ಇಂದು ಎಮೋಜಿ ದಿನ; ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ

ಇಂದಿನ ಡಿಜಿಟಲ್ ಯುಗದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಈ ಎಮೋಜಿಗಳನ್ನು ಹೆಚ್ಚಾಗಿ ಬಳಸುತ್ತಾರೆ. ಹೌದು, ಸಿಟ್ಟು, ನಗು, ಖುಷಿ, ಕೋಪ ಹೀಗೆ ಎಲ್ಲಾ ಭಾವನೆಗಳನ್ನು ಪದಗಳಲ್ಲಿ ಹೇಳುವ ಬದಲು ಎಮೋಜಿಗಳ ಮೂಲಕವೇ ಹೇಳುಿವುದೇ ಹೆಚ್ಚು. ಈಗ ನಾವು ನೀವು ಬಳಸುವ ಈ ಎಮೋಜಿಯನ್ನು ಎಮೋಟಿಕಾನ್ ಎಂದು ಕರೆಯಲಾಗುತ್ತಿತ್ತು. ಈ ದಿನದ ಇತಿಹಾಸ ಸೇರಿದಂತೆ ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

World Emoji Day 2026: ಇಂದು ಎಮೋಜಿ ದಿನ; ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ
ಎಮೋಜಿImage Credit source: Andriy Onufriyenko/Moment/Getty Images
ಸಾಯಿನಂದಾ
|

Updated on: Jul 17, 2026 | 10:05 AM

Share

ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ. ಹೀಗಾಗಿ ಹೆಚ್ಚಿನವರು ಫೇಸ್​ಬುಕ್, ವಾಟ್ಸ್ಆ್ಯಪ್ (WhatsApp), ಇನ್​ಸ್ಟಾಗ್ರಾಮ್, ಟೆಲಿಗ್ರಾಂಗಳಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ. ನಾವೆಲ್ಲರೂ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದಕ್ಕಿಂತ ಎಮೋಜಿಗಳ ಮೂಲಕ ಹೇಳುವುದೇ ಹೆಚ್ಚು. ಹೀಗಾಗಿ ಈ ಎಮೋಜಿಗಳಿಗಾಗಿ ಒಂದು ದಿನ ಮೀಸಲಿಡಲಾಗಿದೆ. ಪ್ರತಿ ವರ್ಷ ಜುಲೈ 17 ರಂದು ವಿಶ್ವ ಎಮೋಜಿ ದಿನವನ್ನು (World Emoji Day) ಆಚರಿಸಲಾಗುತ್ತದೆ.

ವಿಶ್ವ ಎಮೋಜಿ ದಿನದ ಇತಿಹಾಸವೇನು?

ವಿಶ್ವ ಎಮೋಜಿ ಇತಿಹಾಸದತ್ತ ಕಣ್ಣಾಯಿಸಿದರೆ ಎಮೋಜಿಯನ್ನು ಮೊದಲು ಎಮೋಟಿಕಾನ್ ಎಂದು ಕರೆಯಲಾಗುತ್ತಿತ್ತು. ಆ ನಂತರದಲ್ಲಿ ಎಮೋಜಿಯಾಗಿ ಬದಲಾಯಿತು. ಎಮೋಜಿ ಎಂದರೇ ಚಿತ್ರ ಪದ ಎಂದರ್ಥ. ಎಮೋಜಿಗಳನ್ನು 1999 ರಲ್ಲಿ ಜಪಾನಿನ ಟೆಲಿಕಾಂ ಕಂಪನಿ ಎನ್​ಟಿಟಿ ಡೊಕೊಮೊದಲ್ಲಿ ಕೆಲಸ ಮಾಡುವಾಗ ಶಿಗೆಟಕಾ ಕುರಿಟಾ ಎಂಬುವವರು ಅಭಿವೃದ್ಧಿಪಡಿಸಿದರು. ಆದರೆ ಈ ಎಮೋಜಿಗಳು ಸಿಕ್ಕಾಪಟ್ಟೆ ಜನಪ್ರಿಯವಾದದ್ದು 2010ರಲ್ಲಿ.

ತದನಂತರದಲ್ಲಿಈ ಗೂಗಲ್, ಫೇಸ್ಬುಕ್ ಹಾಗೂ ಟ್ವಿಟರ್​ನಂತಹ ಜಾಗತಿಕ ಬ್ರ್ಯಾಂಡ್​ಗಳು ತಮ್ಮದೇ ಆದ ಎಮೋಜಿಗಳ ಆವೃತ್ತಿಗಳನ್ನು ರಚಿಸಿದವು. ವಿಶ್ವ ಎಮೋಜಿ ದಿನವನ್ನು ಜೆರೆಮಿ ಬರ್ಜ್ ರಚಿಸಿದ ಕಾರಣ ಅವರನ್ನು ಎಮೋಜಿ ಪೀಡಿಯಾದ ಸ್ಥಾಪಕ ಎಂದು ಕರೆಯುತ್ತಾರೆ. 2007 ರಲ್ಲಿ ಐಫೋನ್ ಬಿಡುಗಡೆಯಾದಾಗ, ಇದು ಜಪಾನಿನ ಪ್ರೇಕ್ಷಕರನ್ನು ಗುರಿಯಾಗಿಸಲು ಎಮೋಜಿ ಕೀಬೋರ್ಡ್ ಅನ್ನು ಒಳಗೊಂಡಿತ್ತು. ತದನಂತರದಲ್ಲಿ ಅಮೇರಿಕನ್ ಬಳಕೆದಾರರು ಎಮೋಜಿ ಕೀಬೋರ್ಡ್ ಅನ್ನು ಕಂಡುಕೊಂಡಾಗ ಯಶಸ್ಸು ಸಿಕ್ಕಿತು. ಈ ಹೀಗೆ ಎಮೋಜಿಗಳು ಸಂವಹನದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿತು.

ಇದನ್ನೂ ಓದಿ: World Snakes Day 2026: ವಿಶ್ವ ಹಾವುಗಳ ದಿನದ ಆಚರಣೆಯ ಹಿಂದಿದೆ ಈ ಉದ್ದೇಶ

ವಿಶ್ವ ಎಮೋಜಿ ದಿನದ ಮಹತ್ವವೇನು?

ವಾಟ್ಸಾಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಟ್ವಿಟರ್ ನಂತಹ ಡಿಜಿಟಲ್ ಪ್ಲಾಟ್ಫಾರ್ಮ್​ಗಳಲ್ಲಿ ಎಮೋಜಿಗಳು ಸಂವಹನವನ್ನು ಸುಲಭಗೊಳಿಸಿದೆ. ಟೆಕ್ ಜಗತ್ತಿನಲ್ಲಿ ಈ ದಿನವು ಮಹತ್ವದ್ದಾಗಿದೆ. ದಿನನಿತ್ಯದ ಸಂಭಾಷಣೆಗಳಲ್ಲಿ ಎಮೋಜಿಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us