
ಜೀವನದಲ್ಲಿ ಸಹಾಯ ಮನೋಭಾವವನ್ನು (Helping Nature) ಬೆಳೆಸಿಕೊಳ್ಳಬೇಕು, ಕಷ್ಟದಲ್ಲಿ ಇರುವವರಿಗೆ ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು ಎಂದೆಲ್ಲಾ ಹೇಳ್ತಾರೆ. ಹಲವರು ತಮ್ಮ ಕಷ್ಟದಲ್ಲಿರುವ ತಮ್ಮ ಸ್ನೇಹಿತರು, ಕುಟುಂಬಸ್ಥರಿಗೆ ಯಾವುದೇ ಸ್ವಾರ್ಥವಿಲ್ಲದೆ ತಮ್ಮ ಕೈಲಾಗುವ ಸಹಾವನ್ನು ಮಾಡುತ್ತಾರೆ. ಒಬ್ಬರಿಗೆ ಸಹಾಯ ಮಾಡುವ ಈ ಗುಣ ತುಂಬಾನೇ ಒಳ್ಳೆಯದು, ಆದರೆ ಒಂದಷ್ಟು ಜನರಿಗೆ ಮಾತ್ರ ಯಾವುದೇ ಕಾರಣಕ್ಕೂ ಸಹಾಯ ಮಾಡಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯರು (Acharya Chanakya). ಅವರ ಪ್ರಕಾರ, ಈ ಕೆಲವು ಜನರಿಗೆ ಸಹಾಯ ಮಾಡುವುದು ನಿಷ್ಪ್ರಯೋಜಕವಾಗಿರುವುದಲ್ಲದೆ, ಅದರಿಂದ ನೀವು ವಿಷಾದವನ್ನೂ ಪಡಬೇಕಾಗುತ್ತದೆ. ಹಾಗಿದ್ದರೆ ಎಂತಹ ಜನರಿಗೆ ಹೆಲ್ಪ್ ಮಾಡದಿರುವುದು ಒಳ್ಳೆಯದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಕೃತಘ್ನನಾಗಿರದ ವ್ಯಕ್ತಿ: ಚಾಣಕ್ಯರ ಪ್ರಕಾರ, ಕೃತಜ್ಞತೆ ಭಾವವಿರದ ವ್ಯಕ್ತಿಗೆ ಸಹಾಯ ಮಾಡುವುದು ನಿಷ್ಪ್ರಯೋಜಕ. ಅಂತಹ ಜನರು ನಿಮ್ಮಿಂದ ಸಹಾಯವನ್ನು ಸ್ವೀಕರಿಸುತ್ತಾರೆ, ಆದರೆ ಪ್ರತಿಯಾಗಿ ನಿಮಗೆ ಕೃತಘ್ನರಾಗಿರುವುದಿಲ್ಲ ಅಥವಾ ನಿಮಗೆ ನಿಷ್ಠೆಯನ್ನು ತೋರಿಸುವುದಿಲ್ಲ. ಅಂತಹ ಜನರು ನಿಮ್ಮಿಂದ ಸಹಾಯವನ್ನು ಸ್ವೀಕರಿಸಿದ ನಂತರವೂ ನಿಮ್ಮನ್ನು ಅವಮಾನಿಸಬಹುದು ಅಥವಾ ನಿಮ್ಮ ವಿರುದ್ಧ ಕೆಲಸ ಮಾಡಬಹುದು. ಇಂತಹ ಜನಗಳಿಂದ ಹಾನಿಯೇ ಹೆಚ್ಚು. ಹಾಗಾಗಿ ಅವರಿಗೆ ಸಹಾಯವನ್ನು ಮಾಡದಿರುವುದೇ ಒಳ್ಳೆಯದು.
ಸ್ವಾರ್ಥಿ ಮತ್ತು ಮೋಸಗಾರ ವ್ಯಕ್ತಿ: ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಇತರರನ್ನು ಬಳಸಿಕೊಳ್ಳುವವರಿಗೆ ಸಹಾಯ ಮಾಡದಂತೆ ಚಾಣಕ್ಯ ಸಲಹೆ ನೀಡಿದ್ದಾರೆ. ಇಂತಹ ಸ್ವಾರ್ಥಿ ಜನರು ಸಿಹಿ ಮಾತುಗಳು ಮತ್ತು ಹೊಗಳಿಕೆಯಿಂದ ನಿಮ್ಮನ್ನು ಮೆಚ್ಚಿಸಬಹುದು, ಆದರೆ ಅವರ ಉದ್ದೇಶವು ಯಾವಾಗಲೂ ಮೋಸದಿಂದಲೇ ಕೂಡಿರುತ್ತವೆ. ಹಾಗಾಗಿ ಎಂದಿಗೂ ಸಿಹಿ ಮಾತುಗಳನ್ನಾಡುವವರನ್ನು ಕುರುಡಾಗಿ ನಂಬಬಾರದು ಎಂದು ಚಾಣಕ್ಯ ಹೇಳುತ್ತಾರೆ. ಇಂತಹ ಜನರಿಗೆ ಸಹಾಯ ಮಾಡುವುದರಿಂದ ನಿಮಗೆ ನಷ್ಟವೇ ಹೆಚ್ಚಾಗುತ್ತದೆ.
ಮೂರ್ಖ ಮತ್ತು ಅಜ್ಞಾನಿ ವ್ಯಕ್ತಿ: ಮೂರ್ಖನಿಗೆ ಸಹಾಯ ಮಾಡುವುದು ನಿಷ್ಪ್ರಯೋಜಕ ಎಂದು ಚಾಣಕ್ಯರು ಹೇಳುತ್ತಾರೆ. ಏಕೆಂದರೆ ಮೂರ್ಖ ವ್ಯಕ್ತಿಗಳು ನಿಮ್ಮ ಪ್ರಯತ್ನಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ಮೂರ್ಖನಿಗೆ ಸಹಾಯ ಮಾಡುವುದು ಮರಳಿನಲ್ಲಿ ನೀರನ್ನು ಸುರಿದಂತಿದೆ. ಅಂತಹ ಜನರು ನಿಮ್ಮ ಸಲಹೆ ಅಥವಾ ಸಹಾಯವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಈ ಸಹಾಯದಿಂದ ನಿಮಗೆ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ.
ಇದನ್ನೂ ಓದಿ: ಹೆಣ್ಮಕ್ಳು ಸಾಧ್ಯವಾದಷ್ಟು ಇಂತಹ ಜನರಿಂದ ದೂರವಿರಬೇಕು ಎನ್ನುತ್ತಾರೆ ಚಾಣಕ್ಯ
ನಕಾರಾತ್ಮಕ ಮತ್ತು ಕೆಟ್ಟ ಮನಸ್ಸಿನ ಜನರು: ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವವರು ಅಥವಾ ಕೆಟ್ಟ ಸ್ವಭಾವವನ್ನು ಹೊಂದಿರುವವರಿಗೆ ಸಹಾಯ ಮಾಡಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಏಕೆಂದರೆ ಅಂತಹ ಜನರು ಇತರರಿಗೆ ಒಳ್ಳೆಯದನ್ನು ಬಯಸುವುದಿಲ್ಲ, ನಿಮ್ಮ ಸಹಾಯವನ್ನು ಅವರು ತಮ್ಮ ಸ್ವಾರ್ಥಕ್ಕಾಗಿ ಮತ್ತು ಕೆಟ್ಟ ಉದ್ದೇಶಗಳಿಗಾಗಿ ಬಳಸಬಹುದು. ಮತ್ತು ಅವರಿಗೆ ಸಹಾಯ ಮಾಡುವುದರಿಂದ ನಿಮ್ಮ ಸಮಯ ಮತ್ತು ಸಂಪನ್ಮೂಲ ಎರಡೂ ವ್ಯರ್ಥವಾಗಬಹುದು.
ಸೋಮಾರಿ ಮತ್ತು ಬೇಜವಾಬ್ದಾರಿ ವ್ಯಕ್ತಿ: ಸೋಮಾರಿಗಳು, ಬೇಜವಾಬ್ದಾರಿತನವನ್ನು ತೋರುವ ವ್ಯಕ್ತಿಗಳಿಗೆ ಸಹಾಯ ಮಾಡುವುದು ವ್ಯರ್ಥ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಈ ಸೋಮಾರಿ ಜನರು ಸಮಸ್ಯೆಗಳು ಎದುರಾದಾಗ ಅದನ್ನು ತಾವೇ ಪರಿಹರಿಸಿಕೊಳ್ಳುವುದಿಲ್ಲ, ಇತರರನ್ನು ಅವಲಂಬಿಸುತ್ತಾರೆ. ಇಂತಹ ಸೋವಾರಿಗಳಿಗೆ ನೀವು ಪದೇ ಪದೇ ಸಹಾಯ ಮಾಡಿದರೆ ಅವರು ಸ್ವಾವಲಂಬಿಗಳಾಗುವ ಬದಲು, ಅವರು ನಿಮ್ಮ ಮೇಲೆ ಇನ್ನಷ್ಟು ಅವಲಂಬಿತರಾಗುತ್ತಾರೆ. ಇದು ನಿಮ್ಮ ಸಮಯವನ್ನು ವ್ಯರ್ಥ ಮಾಡುವುದಲ್ಲದೆ, ಅವರ ಪ್ರಗತಿಗೂ ಅಡ್ಡಿಯಾದಂತೆ. ಹಾಗಾಗಿ ಸೋಮಾರಿಗಳಿಗೆ ಎಂದಿಗೂ ಸಹಾಯ ಮಾಡಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ