Chanakya Niti: ನಿಮ್ಮ ಜೀವನದ ಈ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎನ್ನುತ್ತಾರೆ ಚಾಣಕ್ಯ
ನಮ್ಮ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯಗಳನ್ನು ಸಹ ನಾವು ನಮ್ಮ ಹತ್ತಿರದವರೊಂದಿಗೆ ಶೇರ್ ಮಾಡಿಕೊಳ್ಳುತ್ತೇವೆ. ಹೀಗೆ ಪ್ರತಿಯೊಂದು ವಿಷಯಗಳನ್ನು ಹಂಚಿಕೊಳ್ಳಬಾರದು, ಈ ಕೆಲವೊಂದು ವಿಷಯಗಳನ್ನು ರಹಸ್ಯವಾಗಿ ಇಟ್ಟುಕೊಂಡಷ್ಟು ಒಳ್ಳೆಯದು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಹಾಗಿದ್ರೆ ಜೀವನಕ್ಕೆ ಸಂಬಂಧಿಸಿದ ಯಾವ ಸಂಗತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬುದನ್ನು ನೋಡೋಣ ಬನ್ನಿ.

ಮನುಷ್ಯ ಸಂಘ ಜೀವಿ. ಆತನ ಪ್ರತಿಯೊಂದು ಭಾವನೆಗಳನ್ನು, ಸುಖ ದುಃಖ, ನೋವು ನಲಿವಿನ ವಿಚಾರಗಳನ್ನು ಆತ ತನ್ನವರೊಂದಿಗೆ ಹಂಚಿಕೊಳ್ಳುತ್ತಾನೆ. ನೀವು ಕೂಡ ಇದೇ ರೀತಿ ನಿಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಸಂಗತಿಗಳನ್ನು ನಿಮ್ಮವರೊಂದಿಗೆ ಹಂಚಿಕೊಳ್ಳುತ್ತೀರಿ ಅಲ್ವಾ. ಆದ್ರೆ ಹೀಗೆ ಪ್ರತಿ ವಿಷಯಗಳನ್ನು ಶೇರ್ ಮಾಡುವುದು ತಪ್ಪು ಎನ್ನುತ್ತಾರೆ ಆಚಾರ್ಯ ಚಾಣಕ್ಯ (Chanakya Niti). ಅವರು ಹೇಳುವಂತೆ ನಾವು ನಮ್ಮ ಜೀವನಕ್ಕೆ ಸಂಬಂಧಿಸಿದ ಈ ಕೆಲವೊಂದು ವಿಚಾರಗಳನ್ನು ಯಾರೊಂದಿಗೂ ಶೇರ್ ಮಾಡಬಾರದಂತೆ, ಇದರಿಂದ ಮುಂದೊಂದು ದಿನ ಸಂಕಷ್ಟ ಎದುರಾಗುತ್ತದಂತೆ. ಹಾಗಿದ್ರೆ ಯಾವ ವಿಚಾರಗಳನ್ನು ರಹಸ್ಯವಾಗಿ ಇಟ್ಟುಕೊಂಡರೆ ಒಳ್ಳೆಯದು ಎಂಬುದನ್ನು ನೋಡೋಣ.
ನಿಮ್ಮ ಜೀವನದ ಈ ಸಂಗತಿಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರಿ:
ಆರ್ಥಿಕ ಪರಿಸ್ಥಿತಿ: ನಿಮ್ಮ ನಿಜವಾದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಯಾರೊಂದಿಗೂ ಶೇರ್ ಮಾಡಬಾರದು ಎನ್ನುತ್ತಾರೆ ಚಾಣಕ್ಯ. ನಿಮ್ಮ ಹಣಕಾಸಿನ ಸ್ಥಿತಿಗತಿಯ ಬಗ್ಗೆ ಹೇಳಿದಾಗ ಕೆಲವೊಬ್ಬರು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಕೌಟುಂಬಿಕ ಸಂಘರ್ಷ: ನಿಮ್ಮ ಕುಟುಂಬದೊಳಗೆ ನಡೆಯುವ ಜಗಳಗಳು, ಭಿನ್ನಾಭಿಪ್ರಾಯಗಳು ಅಥವಾ ಸಮಸ್ಯೆಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬಾರದು. ಏಕೆಂದರೆ ಕೆಲವರು ನಿಮ್ಮ ವೈಯಕ್ತಿಕ ವಿಷಯಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ನೀವು ಸಾಕಷ್ಟು ಹಾನಿಯನ್ನು ಎದುರಿಸಬೇಕಾಗುತ್ತದೆ.
ಭವಿಷ್ಯದ ಯೋಜನೆಗಳು: ನಿಮ್ಮ ಮುಂದಿನ ನಡೆ, ನಿಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಯಾರೊಬ್ಬರ ಬಳಿಯೂ ಹಂಚಿಕೊಳ್ಳಬೇಡಿ. ಇಂತಹ ವಿಷಯಗಳ ಬಗ್ಗೆ ಹೇಳಿದಾಗ ಕೆಲವು ಅಸೂಯೆ ಸ್ವಭಾವದ ಜನ ನಿಮ್ಮ ಯೋಜನೆಗಳಿಗೆ ಕಲ್ಲು ಹಾಕುವ ಸಾಧ್ಯತೆ ತುಂಬಾನೇ ಇರುತ್ತದೆ.
ಇದನ್ನೂ ಓದಿ: ಚಾಣಕ್ಯರ ಪ್ರಕಾರ ಪುರುಷರ ಈ ಗುಣಗಳಿಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರಂತೆ
ನಿಮ್ಮ ದೌರ್ಬಲ್ಯ: ನಿಮ್ಮ ದೌರ್ಬಲ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ತಪ್ಪನ್ನು ಮಾಡಬೇಡಿ ಎನ್ನುತ್ತಾರೆ ಚಾಣಕ್ಯ. ಏಕೆಂದರೆ ಕೆಲವರು ನಿಮ್ಮ ದೌರ್ಬಲ್ಯವನ್ನು ಅವರ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಹಾಗಾಗಿ ಇಂತಹ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




