Chanakya Niti: ಎಂದಿಗೂ ಇಂತಹ ಜನಗಳಿಗೆ ಸಹಾಯ ಮಾಡುವ ತಪ್ಪನ್ನು ಮಾಡಲೇಬೇಡಿ

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮನುಷ್ಯನ ಸಹಜ ಗುಣ. ಸಹಾಯ ಮಾಡುವುದು ತಪ್ಪಲ್ಲ, ಆದರೆ ಕಣ್ಣು ಮುಚ್ಚಿ ಎಲ್ಲರಿಗೂ ಸಹಾಯ ಮಾಡುವುದು ದೊಡ್ಡ ತಪ್ಪು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಇವರ ಪ್ರಕಾರ ನಾವು ಒಂದಿಷ್ಟು ಜನರಿಗೆ ಯಾವುದೇ ಕಾರಣಕ್ಕೂ ಹೆಲ್ಪ್‌ ಮಾಡ್ಬಾರ್ದು. ಯಾಕಂದ್ರೆ ಇದರಿಂದ ಕೊನೆಗೆ ನಾವೇ ಕಷ್ಟ ಅನುಭವಿಸಬೇಕಾಗುತ್ತದೆ. ಹಾಗಿದ್ರೆ ಯಾರಿಗೆಲ್ಲಾ ಸಹಾಯ ಮಾಡೋದು ತಪ್ಪು ಎಂಬುದನ್ನು ನೋಡೋಣ ಬನ್ನಿ.

Chanakya Niti: ಎಂದಿಗೂ ಇಂತಹ ಜನಗಳಿಗೆ ಸಹಾಯ ಮಾಡುವ ತಪ್ಪನ್ನು ಮಾಡಲೇಬೇಡಿ
ಚಾಣಕ್ಯ ನೀತಿ

Updated on: Oct 25, 2026 | 8:13 PM

ಸಹಾಯ (help) ಮನೋಭಾವ ಮನುಷ್ಯನಲ್ಲಿರುವ ಸದ್ಗುಣಗಳಲ್ಲಿ ಒಂದು. ಕಷ್ಟ ಎಂದು ಬಂದ ವ್ಯಕ್ತಿಗೆ ಮಾತ್ರವಲ್ಲ, ನೋವಿನಲ್ಲಿರುವ ಪ್ರಾಣಿ ಪಕ್ಷಿಗಳಂತಹ ಮುಗ್ಧ ಜೀವಿಗಳಿಗೂ ಸಹಾಯ ಮಾಡುವ ಅನೇಕರಿದ್ದಾರೆ. ಹೀಗೆ ಸಹಾಯ ಮಾಡೋದು ಒಳ್ಳೆಯದೇ, ಆದರೆ ಎಲ್ಲರಿಗೂ ಕಣ್ಣು ಮುಚ್ಚಿ ಸಹಾಯ ಮಾಡುವುದು ಒಳ್ಳೆಯದಲ್ಲ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಕೆಲವು ವ್ಯಕ್ತಿಗಳಿಗೆ ಹೆಲ್ಪ್‌ ಮಾಡಿದರೆ ಕೊನೆಗೆ ಅದರಿಂದ ನಿಮಗೆ ಹಾನಿಕಾರಕವಾಗಬಹುದು. ಉದಾಹರಣೆಗೆ ಕಷ್ಟದ ಸಂದರ್ಭದಲ್ಲಿ ಬೇರೆಯವರಿಗೆ ಹಣ ಕೊಟ್ಟು ಮೋಸ ಹೋದವರು ಅದೆಷ್ಟೋ ಜನರಿದ್ದಾರೆ. ಹಾಗಾಗಿ ಎಲ್ಲಾ ರೀತಿಯ ಜನರಿಗೆ ಸಹಾಯ ಮಾಡುವುದು ಒಳ್ಳೆಯದಲ್ಲ. ಹಾಗಿದ್ರೆ ಯಾವೆಲ್ಲಾ ಜನರಿಗೆ ಹೆಲ್ಪ್‌ ಮಾಡ್ಲೇಬಾರ್ದು ಎಂಬುದನ್ನು ನೋಡೋಣ ಬನ್ನಿ.

ನಿನ್ನನ್ನು ಅವಮಾನಿಸಿದ ಯಾರೊಬ್ಬರಿಗೂ ಸಹಾಯ ಮಾಡಬಾರದು:

ಕೆಲವೊಮ್ಮೆ ನೀವು ನಿಮ್ಮ ಜೀವನದಲ್ಲಿ ನಿಮ್ಮನ್ನು ಅವಮಾನಿಸಿದ ಯಾರಿಗಾದರೂ ಸಹಾಯ ಮಾಡುತ್ತೀರಿ. ಅಂತಹ ಜನರು ವಿಶ್ವಾಸಾರ್ಹವಲ್ಲ, ಮತ್ತು ಅವರಿಗೆ ಸಹಾಯ ಮಾಡುವುದು ಮತ್ತೊಂದು ಅವಮಾನಕ್ಕೆ ಕಾರಣವಾಗಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಾಗಿ ನಿಮ್ಮನ್ನು ಯಾರು ಅವಮಾನಿಸಿರುತ್ತಾರೋ, ಅವರು ಅವರು ಯಾವುದೇ ರೀತಿಯ ಸಹಾಯ ಕೇಳಿದರೂ ಅವರಿಗೆ ಹೆಲ್ಪ್‌ ಮಾಡ್ಬೇಡಿ.

ಮೋಸಗಾರರಿಗೆ ಸಹಾಯ ಮಾಡುವುದು ಒಳ್ಳೆಯದಲ್ಲ:

ಇತರರನ್ನು ಮೋಸಗೊಳಿಸುವ ಮತ್ತು ಸಂಬಂಧಗಳಲ್ಲಿ ನಿಷ್ಠರಾಗಿರದ ಜನರಿಗೆ ಸಹಾಯ ಮಾಡುವುದು ಅಪಾಯಕಾರಿ ಎನ್ನುತ್ತಾರೆ ಚಾಣಕ್ಯ. ಏಕೆಂದರೆ ಅಂತಹ ಜನರು ತಮ್ಮ ಸ್ವಂತ ಹಿತಾಸಕ್ತಿಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಅವರ ಸ್ವಂತಕ್ಕಾಗಿ ನಿಮ್ಮ ಸಹಾಯ ಕೇಳಬಹುದು. ಕೊನೆಗೆ ನಿಮ್ಮ ಸಹಾಯಕ್ಕೆ ಕೃತಜ್ಞರಾಗಿರದೆ ನಿಮಗೆಯೇ ಮೋಸ ಮಾಡಬಹುದು. ಅಂತಹ ಜನರಿಂದ ಆದಷ್ಟು ದೂರವಿರುವುದೇ ಒಳ್ಳೆಯದು.

ಸೋಮಾರಿ ವ್ಯಕ್ತಿಗೆ ಸಹಾಯ ಮಾಡೋದು ಒಳ್ಳೆಯದಲ್ಲ:

ಆಚಾರ್ಯ ಚಾಣಕ್ಯರ ಪ್ರಕಾರ, ಕಷ್ಟಪಟ್ಟು ಕೆಲಸ ಮಾಡಲು ಇಷ್ಟವಿಲ್ಲದ ಮತ್ತು ತಮ್ಮ ಕೆಲಸವನ್ನು ಮಾಡಲು ಇತರರನ್ನು ಅವಲಂಬಿಸಿರುವ ಸೋಮಾರಿಗಳಿಗೆ ಸಹಾಯ ಮಾಡುವುದನ್ನು ತಪ್ಪಿಸಬೇಕು. ಅಂತಹ ಜನರು ಪ್ರತಿಯೊಂದಕ್ಕೂ ಇತರರನ್ನೇ ಅವಲಂಬಿಸುತ್ತಾರೆ. ಇಂತಹ ವ್ಯಕ್ತಿಗಳಿಗೆ ಸಹಾಯ ಮಾಡಿದರೆ ನಿಮ್ಮ ಸಮಯವೇ ವ್ಯರ್ಥವಾಗುತ್ತದೆ. ಹಾಗಾಗಿ ಇಂತಹ ಜನಗಳಿಂದ ಆದಷ್ಟು ದೂರವಿರಿ.

ಇದನ್ನೂ ಓದಿ: ಪ್ರತಿನಿತ್ಯ ಬೆಳಗ್ಗೆ 10 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡುವುದರ ಪ್ರಯೋಜನಗಳೇನು?

ಕೆಟ್ಟ ಸ್ವಭಾವದ ಜನರಿಗೆ ಸಹಾಯ ಮಾಡ್ಬೇಡಿ:

ಕೆಟ್ಟ ಸ್ವಭಾವದ ಜನರೊಂದಿಗೆ ಸೇರುವುದು ಒಳ್ಳೆಯದಲ್ಲ, ಅದೇ ರೀತಿ ಅವರಿಗೆ ಸಹಾಯ ಕೂಡ ಮಾಡಬಾರದು. ಏಕೆಂದರೆ ಅಂತಹ ಜನರಿಗೆ ನೀವು ಎಷ್ಟೇ ಸಹಾಯ ಮಾಡಿದರೂ ಅವರಿಂದ ನಿಮಗೆಯೇ ಹಾನಿ ಹೆಚ್ಚು. ಅಲ್ಲದೆ ಕೆಟ್ಟವರ ಸಹವಾಸದಲ್ಲಿದ್ದರೆ ಸಮಾಜದಲ್ಲಿ ನಿಮ್ಮ ಗೌರವವೂ ಹಾಳಾಗುತ್ತದೆ.

ದುರಹಂಕಾರಿಗಳಿಗೆ ಸಹಾಯ ಮಾಡಬೇಡಿ:

ದುರಹಂಕಾರದ ವ್ಯಕ್ತಿಗಳಿಗೆ ಯಾವ ರೀತಿಯ ಸಹಾಯವನ್ನು ನೀವು ಮಾಡಬಾರದು. ಏಕೆಂದರೆ ಅವರು ನೀವು ಮಾಡಿದ ಸಹಾಯವನ್ನು ಮರೆತು ಬಿಡುತ್ತಾರೆ ಜೊತೆಗೆ ನೀವು ಕಷ್ಟ ಎಂದು ಹೋದಾಗ ನಿಮಗೆ ಸಹಾಯ ಮಾಡಲು ಹಿಂಜರಿಯುತ್ತಾರೆ. ಇದರಿಂದ ನೀವೇ ಅವಮಾನವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ದುರಹಂಕಾರಿಗಳಿಗೆ ಹೆಲ್ಪ್‌ ಮಾಡೋದು ಒಳ್ಳೆಯದಲ್ಲ ಎಂದು ಚಾಣಕ್ಯರು ಹೇಳಿರೋದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us