Chanakya Niti: ಈ ಅಭ್ಯಾಸಗಳಿದ್ದರೆ ನೀವು ಜೀವನಪರ್ಯಂತ ಬಡವರಾಗಿಯೇ ಉಳಿಯುತ್ತೀರಿ ಜೋಕೆ!

ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಮಾನವಕುಲಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳ ಬಗ್ಗೆ ಹೇಳಿದ್ದಾರೆ. ಹೌದು ಶ್ರೀಮಂತಿಕೆ, ಯಶಸ್ವಿ ಜೀವನ, ದಾಂಪತ್ಯ ಜೀವನ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ. ಅದೇ ರೀತಿ ಅವರು ಕೆಲವರು ಎಷ್ಟೇ ಸಂಪಾದನೆ ಮಾಡಿದರೂ ಬಡವರಾಗಿಯೇ ಉಳಿಯುತ್ತಾರೆ. ಇದಕ್ಕೆ ಅವರ ಕೆಲವೊಂದು ಅಭ್ಯಾಸಗಳೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಹಾಗಿದ್ದರೆ ಬಡತನಕ್ಕೆ ಕಾರಣವಾಗುವ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಅಭ್ಯಾಸಗಳಿದ್ದರೆ ನೀವು ಜೀವನಪರ್ಯಂತ ಬಡವರಾಗಿಯೇ ಉಳಿಯುತ್ತೀರಿ ಜೋಕೆ!
ಚಾಣಕ್ಯ ನೀತಿ
Image Credit source: Pinterest

Updated on: Jun 07, 2026 | 6:39 PM

ಪ್ರತಿಯೊಬ್ಬರೂ ಸಹ ಶ್ರೀಮಂತಿಕೆಯನ್ನು ಗಳಿಸಬೇಕು, ಸಮೃದ್ಧ ಜೀವನವನ್ನು ಸಾಗಿಸಬೇಕು ಎಂದು ಬಯಸುತ್ತಾರೆ. ಇದರ ಸಲುವಾಗಿ ಕಷ್ಟಪಟ್ಟು ಕೆಲಸವನ್ನು ಕೂಡ ಮಾಡ್ತಾರೆ. ಆದರೆ ಕೆಲವರು ಎಷ್ಟು ಸಂಪಾದನೆ ಮಾಡಿದರೂ ಸಹ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುವುದಿಲ್ಲ. ಇದಕ್ಕೆ ಅವರ ಕೆಲವೊಂದು ಅಭ್ಯಾಸಗಳೇ ಕಾರಣ. ನಿಮ್ಮಲ್ಲೂ ಈ ರೀತಿಯ ಅಭ್ಯಾಸಗಳಿದ್ದರೆ, ನೀವು ಕೂಡ ಜೀವನಪರ್ಯಂತ ಬಡವರಾಗಿಯೇ (poor) ಉಳಿಯಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಚಾಣಕ್ಯರು ಹೇಳಿರುವಂತೆ ನಮ್ಮ ಯಾವ ಅಭ್ಯಾಸಗಳು ನಮ್ಮನ್ನು ಬಡತನಕ್ಕೆ ನೂಕುತ್ತವೆ ಎಂಬುದನ್ನು ನೋಡೋಣ ಬನ್ನಿ.

ಬಡತನಕ್ಕೆ ಕಾರಣವಾಗುವ ಅಭ್ಯಾಸಗಳಿವು:

ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡದಿರುವುದು: ಯಾವಾಗಲೂ ಆದಾಯದ ಒಂದು ಭಾಗವನ್ನು ಉಳಿತಾಯ ಮಾಡಬೇಕು. ಹಣ ಉಳಿತಾಯ ಮಾಡದವರು ಬಡವರಾಗಿಯೇ ಉಳಿಯುತ್ತಾರೆ. ಆಚಾರ್ಯ ಚಾಣಕ್ಯರು ಹೇಳುವಂತೆ ಒಬ್ಬ ವ್ಯಕ್ತಿಯು ತನ್ನ ಆದಾಯದ ಒಂದು ಭಾಗವನ್ನು ಭವಿಷ್ಯಕ್ಕಾಗಿ ಯಾವಾಗಲೂ ಉಳಿಸಬೇಕು, ಮತ್ತು ಉಳಿತಾಯ ಮಾಡಿದ ಹಣವನ್ನು ಸರಿಯಾದ ಕಡೆ ಹೂಡಿಕೆ ಮಾಡಬೇಕು. ಈ ಬುದ್ಧಿವಂತಿಕೆಯಿದ್ದರೆ ಮಾತ್ರ ಶ್ರೀಮಂತಿಕೆ ಗಳಿಸಲು ಸಾಧ್ಯ.

ಅನಗತ್ಯ ಖರ್ಚು ಮಾಡುವುದು: ಯಾರು ಅನಗತ್ಯವಾಗಿ ಖರ್ಚು ಮಾಡುತ್ತಾರೋ ಅವರು ಕ್ರಮೇಣ ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ, ಇದು ಮುಂದೊಂದು ದಿನ ಅವರನ್ನು ಬಡತನಕ್ಕೆ ನೂಕುತ್ತದೆ. ಚಾಣಕ್ಯ ತತ್ವದ ಪ್ರಕಾರ, ಹಣವನ್ನು ಯೋಜಿತವಲ್ಲದೆ ಖರ್ಚು ಮಾಡಬಾರದು. ಯಾವುದೇ ಕಾರಣವಿಲ್ಲದೆ ಹಣವನ್ನು ಖರ್ಚು ಮಾಡುವ ಅಭ್ಯಾಸ ಒಳ್ಳೆಯದಲ್ಲ. ಈ ಅಭ್ಯಾಸ ವ್ಯಕ್ತಿಯನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ.

ಇದನ್ನೂ ಓದಿ: ಕಷ್ಟಪಟ್ಟು ಗಳಿಸಿದ ಹಣವನ್ನು ಉಳಿಸಬೇಕೇ? ಹಾಗಿದ್ರೆ ಸರಳ ಸಲಹೆ ಪಾಲಿಸಿ ಸಾಕು

ಸಾಲ ಮಾಡುವುದು: ಅನಗತ್ಯ ಸಾಲ ತೆಗೆದುಕೊಳ್ಳಬಾರದು, ಈ ಅಭ್ಯಾಸವು ಒಬ್ಬ ವ್ಯಕ್ತಿಯನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ.  ಆಚಾರ್ಯ ಚಾಣಕ್ಯ ಹೇಳುವಂತೆ, ಕಾರಣವಿಲ್ಲದೆ ಯಾರಿಂದಲೂ ಸಾಲ ಪಡೆಯಬಾರದು. ಏಕೆಂದರೆ ಈ ಅಭ್ಯಾಸವು ನಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತದೆ. ಮತ್ತು ಜೀವನಪರ್ಯಂತ ಸಾಲವನ್ನೇ ತೀರಿಸುತ್ತಾ ಕೂರಬೇಕಾಗುತ್ತದೆ. ಹಾಗಾಗಿ ಅನಗತ್ಯ ವಿಚಾರಕ್ಕೆ ಎಂದಿಗೂ ಸಾಲವನ್ನು ಪಡೆಯಬೇಡಿ.

ಸೋಮಾರಿತ: ಸೋಮರಿತನ ಕೂಡ ಬಡತನಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಚಾಣಕ್ಯ. ನಿಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ನೀವು ಬಯಸದಿದ್ದರೆ ನೀವು ಸೋಮಾರಿತನವನ್ನು ಬಿಟ್ಟುಬಿಡಬೇಕು. ಸೋಮಾರಿತನವನ್ನು ಬಿಟ್ಟರೆ ಮಾತ್ರ ಹಣ ಸಂಪಾದಿಸಲು ಸಾಧ್ಯ, ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us