Chanakya Niti: ಈ ಅಭ್ಯಾಸಗಳು ವ್ಯಕ್ತಿಯ ಗೌರವವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ
ಕೆಲವೊಂದು ಅಭ್ಯಾಸಗಳು, ತಿಳಿದೋ ತಿಳಿಯದೆಯೋ ಮಾಡುವ ಕೆಲವೊಂದು ತಪ್ಪುಗಳು ಸಮಾಜ, ಕುಟುಂಬ ಮತ್ತು ಕೆಲಸದ ಸ್ಥಳದಲ್ಲಿ ವ್ಯಕ್ತಿಯ ಗೌರವವನ್ನು ಕುಗ್ಗುವಂತೆ ಮಾಡುತ್ತದೆ. ಆ ಅಭ್ಯಾಸಗಳನ್ನು ತಕ್ಷಣ ಸರಿಪಡಿಸದಿದ್ದರೆ, ಸಂಪಾದಿಸಿದ ಗೌರವವೆಲ್ಲಾ ಹಾಳಾಗಿ ಹೋಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಿದ್ದರೆ ಯಾವ ಅಭ್ಯಾಸಗಳು ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುತ್ತದೆ ಎಂಬುದನ್ನು ನೋಡೋಣ ಬನ್ನಿ.

ಶ್ರೀಮಂತಿಕೆ ಮಾತ್ರವಲ್ಲ ಸಮಾಜದಲ್ಲಿ ಗೌರವವೂ (reputation) ಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಈ ಗೌರವವನ್ನು ಗಳಿಸುವಲ್ಲಿ ವ್ಯಕ್ತಿಯ ನಡವಳಿಕೆ ಮತ್ತು ಅಭ್ಯಾಸಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೌದು ಒಳ್ಳೆಯ ನಡವಳಿಕೆ, ಅಭ್ಯಾಸಗಳು ಸಮಾಜದಲ್ಲಿ ವ್ಯಕ್ತಿಯ ಗೌರವವನ್ನು ಹೆಚ್ಚಿಸುವಂತೆ ತಿಳಿದೋ ತಿಳಿಯದೆಯೋ ಮಾಡುವ ತಪ್ಪುಗಳು, ಕೆಲವೊಂದು ದೈನಂದಿನ ಕೆಟ್ಟ ಅಭ್ಯಾಸಗಳು ಕುಟುಂಬ, ಸಮಾಜ ಮತ್ತು ಕೆಲಸದ ಸ್ಥಳದಲ್ಲಿ ವ್ಯಕ್ತಿಯ ಗೌರವನ್ನು ಹಾಳು ಮಾಡುತ್ತದೆ ಮತ್ತು ಆ ವ್ಯಕ್ತಿ ಅಪಹಾಸ್ಯಕ್ಕೆ ಗುರಿಯಾಗುತ್ತಾನೆ. ನಿಮಗೂ ಈ ಅಭ್ಯಾಸಗಳಿದ್ದರೆ ತಕ್ಷಣ ಅದನ್ನು ಬದಲಿಸಿ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ದೈನಂದಿನ ಜೀವನದ ಯಾವ ಅಭ್ಯಾಸಗಳು ನಮ್ಮ ಗೌರವಕ್ಕೆ ಧಕ್ಕೆಯನ್ನು ಉಂಟು ಮಾಡುತ್ತವೆ ಎಂಬುದನ್ನು ನೋಡೋಣ ಬನ್ನಿ.
ಈ ದೈನಂದಿನ ಅಭ್ಯಾಸಗಳು ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು:
ಅತಿಯಾಗಿ ಮಾತನಾಡುವುದು: ಚಾಣಕ್ಯ ನೀತಿಯ ಪ್ರಕಾರ, ಪ್ರತಿಯೊಂದು ವಿಷಯದ ಬಗ್ಗೆಯೂ ಅನಗತ್ಯ ಮಾತನಾಡಲು ಪ್ರಯತ್ನಿಸುವ ವ್ಯಕ್ತಿಯು ತನ್ನ ಗಂಭೀರತೆಯನ್ನು ಕಳೆದುಕೊಳ್ಳುತ್ತಾನೆ. ಅನಗತ್ಯ ಮಾತು ತಪ್ಪು ತಿಳುವಳಿಕೆಯನ್ನು ಸೃಷ್ಟಿಸುವುದಲ್ಲದೆ, ವ್ಯಕ್ತಿಯ ಇಮೇಜ್‌ಗೆ ಹಾನಿ ಮಾಡುತ್ತದೆ. ಹಾಗಾಗಿ ಹಿತಮಿತವಾಗಿ ಮಾತನಾಡಬೇಕು. ಮುಖ್ಯವಾಗಿ ಎಲ್ಲಿ ಹೇಗೆ ಮಾತನಾಡಬೇಕು ಎಂಬುದು ತಿಳಿದಿರಬೇಕು.
ಕೋಪ ನಿಯಂತ್ರಣದ ಕೊರತೆ: ಅತಿಯಾದ ಕೋಪವು ವಿನಾಶಕ್ಕೆ ಕಾರಣವಾಗುತ್ತದೆ, ಅಲ್ಲದೆ ಅತಿಯಾದ ಕೋಪ ಮನುಷ್ಯನ ದೊಡ್ಡ ಶತ್ರು ಎಂದು ಆಚಾರ್ಯ ಚಾಣಕ್ಯರು ಬಣ್ಣಿಸಿದ್ದಾರೆ. ಪದೇ ಪದೇ ಕೋಪಗೊಳ್ಳುವ ವ್ಯಕ್ತಿಯು ತನ್ನ ಮಾತು ಮತ್ತು ನಡವಳಿಕೆಯ ಮೂಲಕ ಗೌರವವನ್ನು ಕಳೆದುಕೊಳ್ಳುತ್ತಾನೆ. ಕಚೇರಿಯಲ್ಲಿರಲಿ ಅಥವಾ ಮನೆಯಲ್ಲಿರಲಿ, ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚಾಗಿ ವಿಷಾದಕ್ಕೆ ಕಾರಣವಾಗುತ್ತವೆ. ಅಲ್ಲದೆ ಸಣ್ಣಪುಟ್ಟ ವಿಷಯಕ್ಕೆ ಕೋಪ ಮಾಡಿಕೊಳ್ಳುವುದರಿಂದ ವ್ಯಕ್ತಿಯ ಗೌರವವೂ ಹಾಳಾಗುತ್ತದೆ.
ದುರಾಸೆ ಮತ್ತು ಸ್ವಾರ್ಥ: ಅತಿಯಾದ ದುರಾಸೆಯು ವ್ಯಕ್ತಿಯನ್ನು ನೈತಿಕತೆಯಿಂದ ದೂರ ಮಾಡುತ್ತದೆ. ಪ್ರತಿಯೊಂದು ಕೆಲಸವನ್ನು ಸ್ವಾರ್ಥ ಉದ್ದೇಶವನ್ನು ಇಟ್ಟುಕೊಂಡು ಮಾಡಿದಾಗ, ಜನ ನಿಮ್ಮ ಮೇಲೆ ನಂಬಿಕೆಯನ್ನು ಇಡುವುದಿಲ್ಲ ಮುಖ್ಯವಾಗಿ ನಿಮಗಮ ಮೇಲಿನ ಗೌರವವನ್ನೂ ಕಳೆದುಕೊಳ್ಳುತ್ತಾರೆ.
ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳದಿರುವುದು: ಸಮಯದ ಮಹತ್ವವನ್ನು ಅರ್ಥಮಾಡಿಕೊಳ್ಳದ ವ್ಯಕ್ತಿಯನ್ನು ಇತರರು ಬೇಜವಾಬ್ದಾರಿ ಎಂದು ಪರಿಗಣಿಸುತ್ತಾರೆ. ಚಾಣಕ್ಯರ ಪ್ರಕಾರ, ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದರಿಂದ ಗೌರವ ಸಿಗುತ್ತದೆ, ಅದೇ ಕೆಲಸದಲ್ಲಿ ವಿಳಂಬ ಮಾಡುವುದರಿಂದ ಕೆಲಸದ ಸ್ಥಳದಲ್ಲಿ ನಿಮ್ಮ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಭಾವನಾತ್ಮಕವಾಗಿ ಗಟ್ಟಿಗೊಳ್ಳಲು ಚಾಣಕ್ಯರು ಹೇಳಿರುವ ಈ ಗುಣಗಳನ್ನು ಬೆಳೆಸಿಕೊಳ್ಳಿ
ದುರಹಂಕಾರ: ದುರಹಂಕಾರವನ್ನು ಅವನತಿಗೆ ಕಾರಣವೆಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅತಿಯಾದ ಹೆಮ್ಮೆ ಮತ್ತು ದುರಹಂಕಾರ ಕಾಲ ಕ್ರಮೇಣ ವ್ಯಕ್ತಿಯ ಗೌರವವನ್ನು ಹಾಳು ಮಾಡುತ್ತದೆ, ಅಂತಹ ವ್ಯಕ್ತಿಗೆ ಯಾವ ಕಿಮ್ಮತ್ತು ಸಹ ಇರೋದಿಲ್ಲ.
ನಕಾರಾತ್ಮಕ ಚಿಂತನೆ ಮತ್ತು ದೂರು ನೀಡುವ ಅಭ್ಯಾಸಗಳು: ಎಲ್ಲದರ ಬಗ್ಗೆಯೂ ದೂರು ನೀಡುವುದು ಮತ್ತು ನಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವುದು ಸಹ ಒಬ್ಬ ವ್ಯಕ್ತಿಯ ಖ್ಯಾತಿಗೆ ಹಾನಿ ಮಾಡುತ್ತದೆ. ನಕಾರಾತ್ಮಕ ಯೋಚನೆಗಳನ್ನು ಇಟ್ಟುಕೊಂಡಿರುವ ಜನರಿಗೆ ಯಾವ ಗೌರವವೂ ಸಹ ಇರೋದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





