ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ನಮ್ಮ ಕರ್ನಾಟಕದಲ್ಲಿ ನೀವು ಭೇಟಿ ನೀಡಲೇಬೇಕಾದ ಸ್ಥಳಗಳಿವು

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 18, 2024 | 5:09 PM

ಇನ್ನೇನೂ ಕ್ರಿಸ್ಮಸ್‌ ಬಂದೇ ಬಿಡ್ತು. ಈ ಕ್ರಿಸ್ಮಸ್‌ ಹಬ್ಬದ ಸಮಯದಲ್ಲಿ ಹೆಚ್ಚಿನವರು ಯುರೋಪ್‌ನಂತಹ ದೇಶಗಳಿಗೆ ಭೇಟಿ ನೀಡಲು ಇಷ್ಟ ಪಡ್ತಾರೆ. ಯುರೋಪ್‌ ಟ್ರಿಪ್‌ ತುಂಬಾ ದುಬಾರಿ, ಭಾರತದಲ್ಲಿಯೇ ಟ್ರಿಪ್‌ ಹೋಗುವ ಮೂಲಕ ಕ್ರಿಸ್ಮಸ್‌ ರಜೆಯನ್ನು ಎಂಜಾಯ್‌ ಮಾಡೋಣ ಎಂಬ ಯೋಜನೆಯಲ್ಲಿದ್ದರೆ, ಕಡಿಮೆ ಬಜೆಟ್‌ನಲ್ಲಿ ನಮ್ಮ ಕರ್ನಾಟಕದ ಈ ಕೆಲವು ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನೀವು ಕ್ರಿಸ್ಮಸ್‌ ಹಬ್ಬದ ಅನುಭವವನ್ನು ಪಡೆಯಬಹುದು.

ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ನಮ್ಮ ಕರ್ನಾಟಕದಲ್ಲಿ ನೀವು ಭೇಟಿ ನೀಡಲೇಬೇಕಾದ ಸ್ಥಳಗಳಿವು
ಸಾಂದರ್ಭಿಕ ಚಿತ್ರ
Follow us on

ಕ್ರಿಸ್ಮಸ್‌ ಹಬ್ಬಕ್ಕೆ ಇನ್ನೇನೂ ದಿನಗಣನೆ ಶುರುವಾಗಿದೆ. ವಿದೇಶಗಳಲ್ಲಿ ಮಾತ್ರವಲ್ಲ ಭಾರತದಲ್ಲೂ ಈ ಹಬ್ಬವನ್ನು ಬಲು ಜೋರಾಗಿಯೇ ಆಚರಿಸುತ್ತಾರೆ. ಕೆಲವರು ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಸಮಯದಲ್ಲಿ ಯುರೋಪ್‌ ಟ್ರಿಪ್‌ ಹೋಗಲು ಇಷ್ಟಪಡುತ್ತಾರೆ. ಇನ್ನೂ ಹೆಚ್ಚಿನವರು ಈ ಸ್ಪೆಷಲ್‌ ಒಕೇಷನ್‌ ಟೈಮ್‌ನಲ್ಲಿ ಭಾರತದಲ್ಲಿಯೇ ಕ್ರಿಸ್ಮಸ್‌ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಸ್ಥಳಗಳಿಗೆ ಪ್ರವಾಸ ಹೋಗಲು ಇಷ್ಟಪಡ್ತಾರೆ. ಈ ಬಾರಿಯ ಕ್ರಿಸ್‌ಮಸ್‌ ಹಬ್ಬದಂದು ನೀವು ಕೂಡಾ ಎಲ್ಲಾದ್ರೂ ಟ್ರಿಪ್‌ ಹೋಗೋ ಪ್ಲಾನ್‌ ಹಾಕ್ತಾ ಇದ್ದೀರಾ? ಹಾಗಿದ್ರೆ ಕಡಿಮೆ ಬಜೆಟ್‌ನಲ್ಲಿ ನಮ್ಮ ಕರ್ನಾಟಕದ ಈ ಕೆಲವು ಸ್ಥಳಗಳಿಗೆ ಭೇಟಿ ನೀಡಿ.

ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ಕರ್ನಾಟಕದ ಈ ಕೆಲವು ಸ್ಥಳಗಳಿಗೆ ತಪ್ಪದೆ ಟ್ರಿಪ್‌ ಹೋಗಿ:

ಬೆಂಗಳೂರು:

ನಮ್ಮ ರಾಜಧಾನಿ ಬೆಂಗಳೂರಿಗೆ ಭೇಟಿ ನೀಡಬೇಕು ಎಂಬ ಯೋಜನೆಯಲ್ಲಿದ್ದರೆ ನೀವು ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಸಮಯದಲ್ಲಿ ಇಲ್ಲಿಗೆ ಖಂಡಿತವಾಗಿಯೂ ಭೇಟಿ ನೀಡಬಹುದು. ಸಿಲಿಕಾನ್‌ ಸಿಟಿಯಲ್ಲಿನ ಸ್ಟ್ರೀಟ್‌ ಮತ್ತು ಮಾಲ್‌ ಶಾಪಿಂಗ್‌, ರಾತ್ರಿ ಸಮಯದ ಲೈಟಿಂಗ್‌ ಕಣ್ಣಿಗೊಂದು ಹಬ್ಬ ಅಂತಾನೇ ಹೇಳಬಹುದು. ಅಷ್ಟೇ ಅಲ್ಲದೆ ನೀವು ಇಲ್ಲಿನ ಹೆಸರಾಂತ ಸೇಂಟ್‌ ಮೇರಿಸ್‌ ಬೆಸಿಲಿಕಾ, ಸೇಂಟ್‌ ಪ್ಯಾಟ್ರಿಕ್ಸ್‌ ಚರ್ಚ್‌, ಹೋಲಿ ಟ್ರಿನಿಟಿ ಚರ್ಚ್‌, ಇನ್ಫೆಂಟ್‌ ಜೀಸಸ್‌ ಚರ್ಚ್‌, ಸೇಕ್ರೆಡ್‌ ಹಾರ್ಟ್‌ ಚರ್ಚ್‌ ಇತ್ಯಾದಿ ಚರ್ಚ್‌ಗಳಿಗೂ ಭೇಟಿ ನೀಡಬಹುದು ಮತ್ತು ಅಲ್ಲಿನ ಕ್ರಿಸ್ಮಸ್‌ ಹಬ್ಬದ ಸೊಬಗನ್ನು ಆನಂದಿಸಬಹುದು.

ಮೈಸೂರು:

ಕ್ರಿಸ್ಮಸ್‌ ಹಬ್ಬದ ರಜೆಯಲ್ಲಿ ಟ್ರಿಪ್‌ ಹೋಗುವಂತಹ ಪ್ಲಾನ್‌ನಲ್ಲಿದ್ದರೆ ನೀವು ಖಂಡಿತವಾಗಿಯೂ ಮೈಸೂರಿಗೆ ಭೇಟಿ ನೀಡಬಹುದು. ಇಲ್ಲಿ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವಂತೆ ಇಲ್ಲಿನ ಸೇಂಟ್‌ ಫಿಲೋಮಿನಾಸ್‌ ಚರ್ಚ್‌ನಲ್ಲಿ ಕ್ರಿಸ್ಮಸ್‌ ಹಬ್ಬವನ್ನು ಕೂಡಾ ಬಲು ಜೋರಾಗಿ ಆಚರಿಸುತ್ತಾರೆ. ಲೈಟಿಂಗ್ಸ್‌, ಲೈವ್‌ ಈವೆಂಟ್‌ ಇದ್ಯಾದಿಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಜೊತೆಗೆ ನೀವು ಕ್ರಿಸ್ಮಸ್‌ ಹಬ್ಬದ ಸೊಬಗನ್ನು ಕಣ್ತುಂಬಿಕೊಳ್ಳಲು ಸೇಂಟ್‌ ಅಂಟನಿ ಬೆಸಿಲಿಕಾ, ಸೇಂಟ್‌ ಬಾರ್ತಲೋಮಿವ್‌ ಚರ್ಚ್‌ಗಳಿಗೂ ಭೇಟಿ ನೀಡಬಹುದು. ಅಷ್ಟು ಮಾತ್ರವಲ್ಲದೆ ಮೈಸೂರು ಅರಮನೆ ಸೇರಿದಂತೆ ಇನ್ನೂ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.

ಇದನ್ನೂ ಓದಿ: ನೀವು ಅರೇಂಜ್ ಮ್ಯಾರೇಜ್ ಆಗ್ತಾ ಇದ್ದೀರಾ? ಮೊದಲ ಭೇಟಿಯಲ್ಲಿ ಈ ತಪ್ಪು ಮಾಡ್ಬೇಡಿ

ಮಂಗಳೂರು:

ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಸಮಯದಲ್ಲಿ ಬಜೆಟ್‌ ಫ್ರೆಂಡ್ಲಿ ಟ್ರಿಪ್‌ ಹೋಗುವ ಯೋಜನೆಯಲ್ಲಿದ್ದರೆ ನೀವು ಉಡುಪಿ ಮಂಗಳೂರು ಕಡೆ ಪ್ರವಾಸ ಬರಬಹುದು. ಇಲ್ಲಿಯೂ ಕೂಡಾ ಕ್ರಿಸ್ಮಸ್‌ ಹಬ್ಬವನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಇಲ್ಲಿನ ಕ್ರಿಸ್ಮಸ್‌ ಹಬ್ಬದ ಆಚರಣೆಯನ್ನು ಕಣ್ತುಂಬಿಕೊಳ್ಳಬೇಕೆಂದರೆ ಮಂಗಳೂರಿನ ಮಿಲಾಗ್ರಿಸ್‌ ಚರ್ಚ್‌, ಸೇಂಟ್‌ ಫಿಲೋಮಿನಾ ಕ್ಯಾಥೆಡ್ರಲ್‌, ಸೇಂಟ್‌ ಮೇರಿಸ್‌ ಬೆಸಿಲಿಕಾ, ಮೌಂಟ್‌ ರೋಸರಿ ಚರ್ಚ್‌ಗೆ ಭೇಟಿ ನೀಡಬಹುದು. ಅಷ್ಟೇ ಅಲ್ಲದೆ ಕ್ರೈಸ್ತರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ಕಾರ್ಕಳದ ಅತ್ತೂರಿನ ಸಂತ ಲಾರೆನ್ಸ್‌ ಚರ್ಚ್‌ಗೂ ಭೇಟಿ ನೀಡಬಹುದು. ಅಷ್ಟೇ ಅಲ್ಲದೆ ನೀವು ಇಲ್ಲಿ ಹಲವಾರು ಬೀಚ್‌, ಸುಪ್ರಸಿದ್ಧ ದೇವಾಲಯಗಳು, ಪಿಕ್‌ನಿಕ್‌ ಸ್ಪಾಟ್‌ಗಳಿಗೂ ಭೇಟಿ ನೀಡಬಹುದು.

ಇಷ್ಟು ಮಾತ್ರವಲ್ಲದೆ ಕಾರವಾರ, ಮಡಿಕೇರಿ, ಚಿಕ್ಕಮಗಳೂರು ಇತ್ಯಾದಿ ಸ್ಥಳಗಳಿಗೆ ಟ್ರಿಪ್‌ ಹೋಗುವ ಮೂಲಕ ಕ್ರಿಸ್ಮಸ್‌ ರಜೆಯನ್ನು ಎಂಜಾಯ್‌ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ