56 ವರ್ಷ ವಯಸ್ಸಿನಲ್ಲೂ ಸಖತ್‌ ಯಂಗ್‌ ಆಗಿ ಕಾಣುವ ನಟಿ ಖುಷ್ಬೂ ಬ್ಯೂಟಿ ಸೀಕ್ರೆಟ್‌ ಏನ್‌ ಗೊತ್ತಾ?

ಒಂದು ಕಾಲದಲ್ಲಿ ಸ್ಟಾರ್‌ ಹೀರೋಯಿನ್‌ ಆಗಿ ಮಿಂಚಿದ್ದ ದಕ್ಷಿಣ ಭಾರತದ ಫೇಮಸ್‌ ನಟಿ ಖುಷ್ಬೂ ಸುಂದರ್‌ ಇಂದಿಗೂ ಸಖತ್‌ ಯಂಗ್‌ ಆಗಿದ್ದಾರೆ. 56 ನೇ ವಯಸ್ಸಿನಲ್ಲೂ ತರುಣಿಯಂತೆ ಕಾಣುವ ಇವರು ದುಬಾರಿ ಸ್ಕಿನ್‌ಕೇರ್‌ಗಳ ಮೊರೆ ಹೋಗ್ತಾರೆ ಎಂದು ಸಾಕಷ್ಟು ಜನ ಭಾವಿಸುತ್ತಾರೆ. ಆದರೆ ಇದೀಗ ಸ್ವತಃ ನಟಿ ಖುಷ್ಬೂ ಅವರೇ ತಮ್ಮ ಬ್ಯೂಟಿ ಸೀಕ್ರೆಟ್‌ ಏನು ಎಂಬುದನ್ನು ಬಹಿರಂಗಪಡಿಸಿದ್ದು, ತ್ವಚೆಯನ್ನು ಯೌವ್ವನದಿಂದಿಡಲು ಪ್ರತಿನಿತ್ಯ ಮುಖಕ್ಕೆ ಅಡುಗೆ ಮನೆಯಲ್ಲಿ ಲಭ್ಯವಿರುವ ಈ ಮೂರು ವಸ್ತುಗಳನ್ನು ಹಚ್ಚುತ್ತೇನೆ ಎಂದು ಹೇಳಿದ್ದಾರೆ.

56 ವರ್ಷ ವಯಸ್ಸಿನಲ್ಲೂ ಸಖತ್‌ ಯಂಗ್‌ ಆಗಿ ಕಾಣುವ ನಟಿ ಖುಷ್ಬೂ ಬ್ಯೂಟಿ ಸೀಕ್ರೆಟ್‌ ಏನ್‌ ಗೊತ್ತಾ?
ನಟಿ ಖುಷ್ಬೂ ಸುಂದರ್‌
Image Credit source: Social Media

Updated on: Oct 14, 2026 | 5:49 PM

ಸಿನಿಮಾ ಹಾಗೂ ರಾಜಕೀಯ ರಂಗದಲ್ಲಿ ಸದಾ ಸಕ್ರಿಯವಾಗಿರುವ ಬಹುಭಾಷ ನಟಿ ಖುಷ್ಬೂ ಸುಂದರ್‌ (Kushbu Sundar) ತಮ್ಮ ಸೌಂದರ್ಯದ ಕಾರಣದಿಂದಲೂ ಸಖತ್ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಖುಷ್ಬೂ ತೂಕ ಇಳಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು.  80, 90 ರ ದಶಕದಲ್ಲಿ ದಕ್ಷಿಣ ಭಾರತದ ಸಿನಿಮಾ ರಂಗವನ್ನು ಆಳಿದ ನಟಿ ಖುಷ್ಬೂ ಇಂದಿಗೂ ತಮ್ಮ 56 ವಯಸ್ಸಿನಲ್ಲೂ ಸಖತ್‌ ಯಂಗ್‌ ಆಗಿದ್ದಾರೆ. ಇವರ ಸೌಂದರ್ಯದ ಗುಟ್ಟೇನು ಎಂಬ ಕುತೂಹಲ ಬಹುತೇಕರಿಗೆ ಇದ್ದೇ ಇರುತ್ತದೆ. ಇದೀಗ ಇವರು ಸಂದರ್ಶನವೊಂದರಲ್ಲಿ ತಮ್ಮ ಬ್ಯೂಟಿ ಸೀಕ್ರೆಟ್‌ ಏನೆಂಬುದನ್ನು ಬಹಿರಂಗಪಡಿಸಿದ್ದು, ಅವರು ತಮ್ಮ ಚರ್ಮದ ಆರೈಕೆಗಾಗಿ ಸಾಂಪ್ರದಾಯಿಕ ಮತ್ತು ನೈಸರ್ಗಿಕ ಪರಿಹಾರಗಳನ್ನೇ ಬಳಸುತ್ತೇನೆ ಎಂಬುದನ್ನು ಹೇಳಿಕೊಂಡಿದ್ದಾರೆ. ಮುಖದ ಕಾಂತಿಯನ್ನು ಕಾಪಾಡಿಕೊಳ್ಳಲು ನಟಿ ಖುಷ್ಭೂ ಯಾವೆಲ್ಲಾ ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತಾರೆ ಎಂಬುದ ಪೂರ್ಣ ವಿವರ ಇಲ್ಲಿದೆ.

ಖುಷ್ಬು ಸುಂದರ್ ಅವರ ನೈಸರ್ಗಿಕ ಸೌಂದರ್ಯದ ಗುಟ್ಟೇನು?

ನಟಿ ಖುಷ್ಬೂ ಸುಂದರ್ ತಮ್ಮ ಹೊಳೆಯುವ ಚರ್ಮದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಅವರು ಚರ್ಮದ ಆರೈಕೆಗಾಗಿ ಹಸಿ ಹಾಲು, ಕೇಸರಿ ಮತ್ತು ತೆಂಗಿನಕಾಯಿ ಅಥವಾ ಬಾದಾಮಿ ಎಣ್ಣೆಯನ್ನು ಬಳಸುತ್ತಾರೆ ಎಂಬುದನ್ನು ಹೇಳಿದ್ದಾರೆ.

“ನಾನು ಬೆಳಿಗ್ಗೆ 4:30 ರಿಂದ 5 ರ ಸುಮಾರಿಗೆ ಎಚ್ಚರಗೊಳ್ಳುತ್ತೇನೆ. ಮನೆಯಲ್ಲಿರುವ ಎಲ್ಲರಿಗೂ ಚಹಾ ತಯಾರಿಸು ವೇಳೆ, ಹಸಿ ಹಾಲನ್ನು ನನ್ನ ಮುಖಕ್ಕೆ ಹಚ್ಚಿಕೊಳ್ಳುತ್ತೇನೆ. ಕೆಲವೊಮ್ಮೆ ನಾನು ಕೇಸರಿ ದಳವನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಮುಖಕ್ಕೆ ಹಚ್ಚಿಕೊಳ್ಳುತ್ತೇನೆ. ಕೆಲವೊಮ್ಮೆ ನನ್ನ ಮನಸ್ಥಿತಿಗೆ ಅನುಗುಣವಾಗಿ, ನಾನು ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯಿಂದ ನನ್ನ ಮುಖಕ್ಕ ಮಸಾಜ್ ಮಾಡುತ್ತೇನೆ. ಹೀಗೆ ಪ್ರತಿದಿನ ಈ ಸರಳ ಸ್ಕಿನ್‌ ಕೇರ್‌ ಅನ್ನು ಅನುಸರಿಸುತ್ತೇನೆ” ಎಂದು ಖುಷ್ಬೂ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಹಸಿ ಹಾಲು ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ:

ಖುಷ್ಬೂ ಸುಂದರ್ ತಮ್ಮ ಮುಖವನ್ನು ಸ್ವಚ್ಛಗೊಳಿಸಲು ಹಸಿ ಹಾಲನ್ನು ಬಳಸುತ್ತಾರೆ. ಹಸಿ ಹಾಲು ಚರ್ಮಕ್ಕೆ ನೈಸರ್ಗಿಕ ಕ್ಲೆನ್ಸರ್ ಮತ್ತು ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ಆಳದಿಂದ ಕಲ್ಮಶಗಳನ್ನು ತೆಗೆದುಹಾಕುತ್ತದೆ, ಶುಷ್ಕತೆಯನ್ನು ತೆಗೆದುಹಾಕುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ತಜ್ಞರ ಪ್ರಕಾರ, ಹಸಿ ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲ ಸಮೃದ್ಧವಾಗಿದ್ದು,  ಇದು ಸತ್ತ ಚರ್ಮದ ಕೋಶಗಳನ್ನು ನಿಧಾನವಾಗಿ ತೆಗೆದುಹಾಕುತ್ತದೆ ಮತ್ತು ಚರ್ಮದ ವಿನ್ಯಾಸವನ್ನು ಸುಧಾರಿಸುತ್ತದೆ. ಇದರ ನಿಯಮಿತ ಬಳಕೆಯಿಂದ ಕಾಂತಿಯುತ ಚರ್ಮವನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಕೇಸರಿಯು ಕಪ್ಪು ಕಲೆಗಳು ಮತ್ತು ವರ್ಣದ್ರವ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.

ತೆಂಗಿನೆಣ್ಣೆ ತ್ವಚೆಯನ್ನು ಪೋಷಿಸಲು ಸಹಕಾರಿ:

ಖುಷ್ಬೂ ಅವರು ತಮ್ಮ ತ್ವಚೆಯನ್ನು ಆಳವಾಗಿ ತೇವಗೊಳಿಸಲು ಮತ್ತು ಪೋಷಿಸಲು ಮುಖವನ್ನು ತೆಂಗಿನ ಎಣ್ಣೆಯಿಂದ ಮಸಾಜ್‌ ಮಾಡುತ್ತಾರೆ. ತಜ್ಞರ ಪ್ರಕಾರ, ತೆಂಗಿನ ಎಣ್ಣೆ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳಂತಹ ವಯಸ್ಸಾದ ಚಿಹ್ನೆಗಳನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯಿಂದ ಮುಖವನ್ನು ನಿಯಮಿತವಾಗಿ ಮಸಾಜ್ ಮಾಡುವುದರಿಂದ ಮುಖದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ, ಇದು ತ್ವಚೆಯು ಯಂಗ್‌ ಆಗಿ ಕಾಣಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕಥಕ್‌ನಿಂದ ಹರಿಕಥೆಯವರೆಗೆ.. ಭಾರತೀಯ ಕಲಾ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುತ್ತಿರುವ ಶರತ್ ಆರ್. ಪ್ರಭಾತ್!

ಖುಷ್ಬೂ ಸುಂದರ್‌ ಸ್ಕಿನ್‌ ಕೇರ್‌ ರುಟೀನ್‌ ಬಗ್ಗೆ ತಜ್ಞರು ಏನು ಹೇಳುತ್ತಾರೆ?

ಖುಷ್ಬು ಸುಂದರ್ ಅವರ ಸ್ಕಿನ್‌ ಕೇರ್‌ ರುಟೀನ್‌ ನೈಸರ್ಗಿಕ ಮತ್ತು ಸುರಕ್ಷಿತ ಎಂದು ತಜ್ಞರು ಒಪ್ಪುತ್ತಾರೆ. ಆದರೆ ಇವು ನೈಸರ್ಗಿಕ ಉತ್ಪನ್ನಗಳಾಗಿದ್ದರೂ ಇವು ಎಲ್ಲಾ ಪ್ರಕಾರದ ಚರ್ಮಗಳಿಗೆ ಅನ್ವಯಿಸಬಾರದು. ಅದನ್ನು ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಅಳವಡಿಸಿಕೊಳ್ಳಬೇಕು. ಉದಾಹರಣೆಗೆ ನಿಮ್ಮ ಚರ್ಮವು ತುಂಬಾ ಎಣ್ಣೆಯುಕ್ತವಾಗಿದ್ದರೆ ಅಥವಾ ಮೊಡವೆಗಳಿಂದ ಕೂಡಿದ್ದರೆ, ತೆಂಗಿನ ಎಣ್ಣೆಯನ್ನು ಬಳಸುವುದು ಅಷ್ಟು ಸೂಕ್ತವಲ್ಲ. ಇನ್ನೂ ಹಸಿ ಹಾಲು ಸೂಕ್ಷ್ಮ ಜೀವಿಗಳನ್ನು ಹೊಂದಿರುತ್ತದೆ. ಇದನ್ನು ಸೂಕ್ಷ್ಮ ಮತ್ತು ಮೊಡವೆಯುಕ್ತ ಚರ್ಮಕ್ಕೆ ಹಚ್ಚುವುದು ಸೂಕ್ತವಲ್ಲ. ಯಾವುದೇ ಸ್ಕಿನ್‌ ಕೇರ್‌ ಮಾಡಿದರೂ ಮೊದಲು ಪ್ಯಾಚ್ ಟೆಸ್ಟ್‌ ಮಾಡುವುದು ಅತೀ ಅವಶ್ಯಕ ಎನ್ನುತ್ತಾರೆ ತಜ್ಞರು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us