AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ರಾಶಿಯವರಿಗೆ ಸಾಮಾನ್ಯ ವಿಷಯವೂ ದೊಡ್ಡದಾಗಿ ಭಾಸವಾಗುವುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 29) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಈ ರಾಶಿಯವರಿಗೆ ಸಾಮಾನ್ಯ ವಿಷಯವೂ ದೊಡ್ಡದಾಗಿ ಭಾಸವಾಗುವುದು
ಪ್ರಾತಿನಿಧಿಕ ಚಿತ್ರ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jun 29, 2023 | 12:30 AM

Share

ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ? ಯಾರಿಗೆ ಲಾಭ ಕಾದಿದೆ? ಯಾರಿಗೆ ನಷ್ಟ ಕಾದಿದೆ? ಹಾಗೂ ಯಾರಿಗೆ ಶುಭ, ಅಶುಭ? ತಿಳಿಯಿರಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಿದ್ಧ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:13 ರಿಂದ 03:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:08 ರಿಂದ 07:45ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:22 ರಿಂದ ಮಧ್ಯಾಹ್ನ 10:59ರ ವರೆಗೆ.

ಧನಸ್ಸು: ಮನಸ್ಸಿಗೆ ಬಂದಂತೆ ಮಾತಮಾಡದೇ ಅರ್ಥವತ್ತಾದ ಮಾತುಗಳನ್ನು ಅಡುವುದು ಒಳ್ಳೆಯದು. ಕಛೇರಿಯಲ್ಲಿ ನಿಮ್ಮ ಮಾತುಗಳಿಗೆ ಅನಾದರವು ಸಿಗಲಿದೆ. ನಿಮಗೆ ಸರಿಯಾದ ಮಾರ್ಗದರ್ಶನ ಕೊರತೆಯಿಂದ ದಾರಿ ತಪ್ಪುವಿರಿ. ವ್ಯಾಪರವು ನಿಮಗೆ ಕೈ ಹಿಡಿಯದಂತೆ ತೋರುವುದು. ತಂತ್ರಜ್ಞರಾಗಿದ್ದರೆ ನಿಮಗೆ ಉದ್ಯೋಗವನ್ನು ಬಹಳ ಜಾಗರೂಕತೆಯಿಂದ ಮಾಡಬೇಕಾದೀತು. ದುಃಖದ ವಿಷಯವನ್ನು ನೀವು ಧೈರ್ಯವಾಗಿ ಕೇಳುವಿರಿ. ನಿಮ್ಮ ಕನಸನ್ನು ನೀವು ಯಾರಿಗೂ ಸದ್ಯ ಹೇಳುವುದು ಬೇಡ. ನಿಮಗೆ ಇಷ್ಟವಲ್ಲದ ವಿಷಯವನ್ನು ಒತ್ತಾಯಿಸಿದರೂ‌ ಮಾಡಲು ಹೋಗುವುದಿಲ್ಲ.

ಮಕರ: ಇಂದು ಸರಿ‌ ಮಾಡಲು ಸಾಧ್ಯವಾಗದಷ್ಟು ನಿಮ್ಮ‌ ಮನಸ್ಸು ಕೆಡಲಿದೆ. ಲೆಕ್ಕಾಚಾರದ ವಿಷಯದಲ್ಲಿ ನೀವು ಹಿಂದುಳಿದಿರುವುದು ಎಲ್ಲರಿಗೂ ಗೊತ್ತಾಗುವುದು. ಕುಟುಂಬದ ಭಿನ್ನಾಭಿಪ್ರಾಯವನ್ನು ನೀವೇ ಪರಿಹರಿಸಿಕೊಳ್ಳಿ. ನಿಮ್ಮ ಮೇಲಿನ ಗೌರವ ಹಾಗು ಪ್ರೀತಿಯು ಇತರರಿಗೆ ಹೆಚ್ಚಾಗಬಹುದು. ಪ್ರಯಾಣದಲ್ಲಿ ಸುಖವಿರಲಿದೆ. ದಾಂಪತ್ಯದಲ್ಲಿ ಸಣ್ಣ ಮನಸ್ತಾಪಗಳು ಬಂದರೂ ಅಲ್ಲಿಯೇ ಶಾಂತವಾಗುವುದು. ಧಾರ್ಮಿಕ ಆಸಕ್ತಿಯು ಇಂದು ಕಡಿಮೆ ಇರಲಿದೆ. ವಿದ್ಯಾರ್ಥಿಗಳು ಗೊಂದಲವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುವಿರಿ. ಇಂದಿನ ಕೆಲಸವನ್ನು ಮುಗಿಸುವಾಗ ಸಂತೃಪ್ತಿ ಇರಲಿದೆ.

ಕುಂಭ: ನಿಮ್ಮ ಮಾತಿನಿಂದ ಇನ್ನೊಬ್ಬರಿಗೆ ಬೇಸರಗವಾಗಲಿದ್ದು ಗೊತ್ತಾದ ಕೂಡಲೆ ಅದನ್ನು ನಿಲ್ಲಿಸಿ. ನಿಯಮ ಉಲ್ಲಂಘನೆ‌ ಮಾಡಿ ದಂಡ ತುಂಬುವಿರಿ. ಉದ್ಯೋಗದಿಂದ‌‌ ಕೆಲವರನ್ನು ಕೈ ಬಿಡುವಿರಿ. ನಿಮಗೆ ಸಿಗುವ ಅವಕಾಶಗಳು ಬೇರೆಯವರ ಪಾಲಾಗಬಹುದು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಮನೆಯವರ ಮಾತು ಉತ್ಸಾಹ ಭಂಗವನ್ನು ಮಾಡುವ ಸಾಧ್ಯತೆ ಇದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಸಹಾಯವನ್ನು ನೀವು ಕೇಳುವಿರಿ. ನೀರಿನಿಂದ‌ ಆದಷ್ಟು ದೂರವಿರಿ. ಒಬ್ಬೊಂಟಿಯಾಗಿರುವುದು ನಿಮಗೆ ಕಷ್ಟವಾದೀತು. ಆರೋಗ್ಯವನ್ನು ನೀವು ನಿರ್ಲಕ್ಷಿಸುವಿರಿ. ಸಾಮಾನ್ಯ ವಿಷಯವೂ ನಿಮಗೆ ದೊಡ್ಡಾದಾಗಿ ಕಾಣುವುದು.

ಮೀನ: ನಿರುದ್ಯೋಗವು ನಿಮ್ಮ ಮನಸ್ಸಿಗೆ ಬಹಳ‌ ಕಿರಿಕಿರಿಯಾಗಲಿದೆ. ಆಸಕ್ತಿಕರ ವಿಚಾರವನ್ನು ನೀವು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ನಿಮ್ಮ ಮೇಲೆ‌ ಕೆಲವು ಆಕ್ಷೇಪಗಳು ಬರಬಹುದು. ಕಾರ್ಯದಲ್ಲಿ ಶ್ರದ್ಧೆಯು ಕಾರಣಾಂತರಗಳಿಂದ ಕಡಿಮೆ ಆಗಬಹುದು. ತಿಳಿವಳಿಕೆಯ ಕೊರತೆಯಿಂದ ನೀವು ಕಷ್ಟಪಡಬೇಕಾದೀತು. ಹಿತಶತ್ರುಗಳಿಂದ ಕೆಲವು ವಿಚಾರಕ್ಕೆ ತೊಂದರೆಯಾಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಅನಂತರ ಆಲಸ್ಯದಿಂದ ನೀವು ಸೋಲುವಿರಿ. ಆರ್ಥಿಕವಾಗಿ ನಿಮ್ಮ ಅಲ್ಪ ವೃದ್ಧಿಯು ಸಂತಸವನ್ನು ಕೊಡಲಿದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ