karnataka Dasara 2024 : ದಸರಾಕ್ಕೆ ಉತ್ತರ ಕರ್ನಾಟಕದಲ್ಲಿ ತಾಲಿಪಟ್ಟು ತಿನಿಸಿನ ಘಮ, ಇಲ್ಲಿದೆ ರೆಸಿಪಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 21, 2024 | 12:57 PM

ನಾಡಹಬ್ಬ ದಸರಾವನ್ನು ಮೈಸೂರಿನಲ್ಲಿ ಮಾತ್ರ ಅದ್ದೂರಿಯಾಗಿ ಆಚರಿಸುವುದಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯದೊಂದಿಗೆ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ದಸರಾ ಹಬ್ಬದಂದು ಮನೆಯಲ್ಲಿ ವಿಶೇಷವಾದ ಖಾದ್ಯಗಳನ್ನು ಮಾಡಲಾಗುತ್ತದೆ. ಆದರೆ ಈ ಹಬ್ಬಕ್ಕೆ ಉತ್ತರ ಕರ್ನಾಟಕದ ಭಾಗದಲ್ಲಿ ಸಾಂಪ್ರದಾಯಿಕ ಜೋಳದ ತಾಲಿಪಟ್ಟು ತಿನಿಸನ್ನು ಮಾಡುತ್ತಾರೆ. ಹಾಗಾದ್ರೆ ಈ ಸಾಂಪ್ರಾದಾಯಿಕ ರೆಸಿಪಿಯನ್ನು ಮಾಡುವುದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.

karnataka Dasara 2024 : ದಸರಾಕ್ಕೆ ಉತ್ತರ ಕರ್ನಾಟಕದಲ್ಲಿ ತಾಲಿಪಟ್ಟು ತಿನಿಸಿನ ಘಮ, ಇಲ್ಲಿದೆ ರೆಸಿಪಿ
ತಾಲಿಪಟ್ಟು
Follow us on

ಉತ್ತರ ಕರ್ನಾಟಕದ ಮಂದಿಯು ಖಾರ ಪ್ರಿಯರಾಗಿದ್ದು, ಖಡಕ್ ಜೋಳದ ರೊಟ್ಟಿಯೊಂದಿಗೆ ಚಟ್ನಿಯೊಂದಿಗೆ ಸಾಕು. ಆದರೆ ಈ ಜೋಳದ ಹಿಟ್ಟಿನಿಂದ ಮಾಡುವ ವಿಶೇಷ ಸಾಂಪ್ರಾದಾಯಿಕ ತಿನಿಸು ತಾಲಿಪಟ್ಟು ಇಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ದಸರಾಕ್ಕೆ ಎಲ್ಲರ ಮನೆಯಲ್ಲಿ ಈ ತಾಲಿಪಟ್ಟು ತಿನಿಸನ್ನು ಮಾಡಿಯೇ ಮಾಡುತ್ತಾರೆ. ರೊಟ್ಟಿಗಿಂತಲೂ ರುಚಿಕರವೂ ಹಾಗೂ ಆರೋಗ್ಯಕ್ಕೂ ಒಳ್ಳೆಯದು ಎನ್ನಬಹುದು. ಮಸಾಲೆ ಮಿಶ್ರಿತ ಈ ತಿನಿಸು ಖಾರ ಖಾರವಾಗಿದ್ದು ತಿನ್ನಲು ಅಷ್ಟೇ ರುಚಿಕರವಾಗಿರುತ್ತದೆ.

ಜೋಳದ ತಾಲಿಪಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು:

* ಒಂದು ಕಪ್ ಜೋಳದ ಹಿಟ್ಟು

* 50 ಗ್ರಾಂ ಗೋಧಿ ಹಿಟ್ಟು

* 50 ಗ್ರಾಂ ಕಡಲೆ ಹಿಟ್ಟು

* ಜೀರಿಗೆ

* ಅರಶಿನ

* ಶುಂಠಿ ಬೆಳ್ಳುಳ್ಳಿ ಪೇಸ್ಟ್

* ಅಜೈನಾ

* ಹಸಿಮೆಣಸಿನ ಕಾಯಿ

* ಖಾರದ ಪುಡಿ

* ಈರುಳ್ಳಿ

* ಕೊತ್ತಂಬರಿ ಪುಡಿ

* ಕೊತ್ತಂಬರಿ ಸೊಪ್ಪು

* ಉಪ್ಪು

* ಎಣ್ಣೆ

ಜೋಳದ ತಾಲಿಪಟ್ಟು ಮಾಡುವ ವಿಧಾನ:

* ಒಂದು ಪಾತ್ರೆಗೆ ಜೋಳದ ಹಿಟ್ಟು, ಗೋಧಿ ಹಿಟ್ಟು, ಕಡಲೆ ಹಿಟ್ಟು, ಜೀರಿಗೆ, ಅರಶಿನ, ಅಜೈನಾ, ಉಪ್ಪು, ಹಸಿಮೆಣಸಿನ ಕಾಯಿ, ಖಾರದ ಪುಡಿ, ಈರುಳ್ಳಿ, ಕೊತ್ತಂಬರಿ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಒಮ್ಮೆ ಕಲಸಿಕೊಳ್ಳಿ. * ನಂತರದಲ್ಲಿ ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಿ. ಕಲಸಿದ ಬಳಿಕ ಹತ್ತು ನಿಮಿಷ ಹಾಗೆಯೇ ಬಿಡಿ.

* ಇದಾದ ಬಳಿಕ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ.

* ಬಾಳೆ ಎಲೆಯ ಮೇಲೆ ಎಣ್ಣೆ ಹಚ್ಚಿಕೊಂಡು ಅದರ ಮೇಲೆ ಉಂಡೆಯನ್ನಿಟ್ಟು ಹಿಟ್ಟನ್ನು ತಟ್ಟಿಕೊಳ್ಳಿ.

* ತಟ್ಟಿದ ತಾಲಿಪಟ್ಟನ್ನು ಕಾವಲಿಗೆ ಹಾಕಿ ಎರಡು ಕಡೆ ಕಾಯಿಸಿಕೊಂಡರೆ ಜೋಳದ ತಾಲಿಪಟ್ಟು ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ