Kitchen Hacks: ಸಾಬೂನಿನ ಉಳಿದ ತುಂಡುಗಳನ್ನು ಈ ರೀತಿ ಉಪಯೋಗಿಸಿ
ದೇಹದ ಅಂದದ ಜೊತೆಗೆ ಸ್ವಚ್ಛತೆಯನ್ನು ಕಾಪಾಡಲು ಬಹಳ ದುಬಾರಿ ಸಾಬೂನುಗಳನ್ನು ಖರೀದಿಸಿ ಅವುಗಳನ್ನು ಉಪಯೋಗ ಮಾಡುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿಯೂ ಅನೇಕ ರೀತಿಯ ಸಾಬೂನುಗಳು ಬಂದಿದ್ದು, ಆಯ್ಕೆಗಳು ಹೆಚ್ಚಾಗಿವೆ. ಜೊತೆಗೆ ಸಾಬೂನುಗಳನ್ನು ಬಳಸುವವರ ಸಂಖ್ಯೆಯೂ ಅಧಿಕವಾಗಿದೆ. ಆದರೆ ಎಷ್ಟೇ ಒಳ್ಳೆಯ ಸಾಬೂನುಗಳನ್ನೂ ಖರೀದಿಸಿ ತಂದರೂ, ಸ್ವಲ್ಪ ಸಮಯ ಕಳೆದ ನಂತರ ಸಾಬೂನು ತುಂಡುಗಳು ಉಳಿಯುವುದು ಸಾಮಾನ್ಯವಾಗಿದೆ. ಈ ಸಾಬೂನು ತುಂಡುಗಳು ಚಿಕ್ಕದಾದ ಮೇಲೆ ಕೆಳಗೆ ಬಿದ್ದು ಹಾಳಾಗುತ್ತದೆ. ಅಲ್ಲದೆ ಇದನ್ನು ಎಸೆಯುವ ಬದಲು ವಿವಿಧ ರೀತಿಯಲ್ಲಿ ಬಳಸಬಹುದು. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮಗೆ ಬಂದರೆ ಇಲ್ಲಿದೆ ಉತ್ತರ.
ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಹಾಗಾಗಿ ದೇಹದ ಅಂದದ ಜೊತೆಗೆ ಸ್ವಚ್ಛತೆಯನ್ನು ಕಾಪಾಡಲು ಬಹಳ ದುಬಾರಿ ಸಾಬೂನುಗಳನ್ನು ಖರೀದಿಸಿ ಅವುಗಳನ್ನು ಉಪಯೋಗ ಮಾಡುತ್ತಿದ್ದೇವೆ. ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿಯೂ ಅನೇಕ ರೀತಿಯ ಸಾಬೂನುಗಳು ಬಂದಿದ್ದು, ಆಯ್ಕೆಗಳು ಹೆಚ್ಚಾಗಿವೆ. ಜೊತೆಗೆ ಸಾಬೂನುಗಳನ್ನು ಬಳಸುವವರ ಸಂಖ್ಯೆಯೂ ಅಧಿಕವಾಗಿದೆ. ಆದರೆ ಎಷ್ಟೇ ಒಳ್ಳೆಯ ಸಾಬೂನುಗಳನ್ನೂ ಖರೀದಿಸಿ ತಂದರೂ, ಸ್ವಲ್ಪ ಸಮಯ ಕಳೆದ ನಂತರ ಸಾಬೂನು ತುಂಡುಗಳು ಉಳಿಯುವುದು ಸಾಮಾನ್ಯವಾಗಿದೆ. ಈ ಸಾಬೂನು ತುಂಡುಗಳು ಚಿಕ್ಕದಾದ ಮೇಲೆ ಕೆಳಗೆ ಬಿದ್ದು ಹಾಳಾಗುತ್ತದೆ. ಅಲ್ಲದೆ ಇದನ್ನು ಎಸೆಯುವ ಬದಲು ವಿವಿಧ ರೀತಿಯಲ್ಲಿ ಬಳಸಬಹುದು. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮಗೆ ಬಂದರೆ ಇಲ್ಲಿದೆ ಉತ್ತರ.
- ನಿಮ್ಮ ಮನೆಯ ಬಾಗಿಲು ಮರದ್ದಾದರೆ ಕೆಲವು ಬಾರಿ ಅವುಗಳನ್ನು ಹಾಕಿ, ತೆಗೆಯುವಾಗ ಶಬ್ದ ಬರುತ್ತದೆ. ಆಗ ನೀವು ಡೋರ್ ಸೈಡರ್ ಗಳಿಗೆ ಉಳಿದ ಈ ಸಾಬೂನು ತುಂಡುಗಳನ್ನು ಸರಿಯಾಗಿ ಹಚ್ಚಿರಿ. ಈ ರೀತಿ ಮಾಡಿದರೆ ಬಾಗಿಲಿನಿಂದ ಶಬ್ದ ಬರುವುದಿಲ್ಲ.
- ಕೆಲವೊಮ್ಮೆ ವಾರ್ಡ್ ರೋಬ್ ಅಥವಾ ಕಪಾಟುಗಳಿಂದ ಕೆಟ್ಟ ವಾಸನೆ ಬರುತ್ತದೆ. ಅಲ್ಲದೆ ತೊಳೆಯುವ ಬಟ್ಟೆಯನ್ನು ಹಾಕಿಡುವ ಬ್ಯಾಗ್ ನಲ್ಲಿಯೂ, ಜೊತೆಗೆ ಇತರ ಶೆಲ್ಫ್ ಗಳಿಂದಲೂ ವಾಸನೆ ಬರುತ್ತದೆ. ಇದನ್ನು ತಡೆಯಲು ಫ್ರೆಶನರ್ ಗಳನ್ನು ಬಳಸುವ ಬದಲು ಉಳಿದಿರುವ ಸಾಬೂನು ತುಂಡುಗಳನ್ನು ಟಿಶ್ಯೂ ಪೇಪರ್ ಅಥವಾ ಬಟ್ಟೆಯಲ್ಲಿ ಕಟ್ಟಿ ವಾಸನೆ ಬರುವ ಜಾಗದಲ್ಲಿ ಇಡುವುದು ಉತ್ತಮ.
- ಜಾಕೆಟ್, ಬ್ಯಾಗ್, ಪ್ಯಾಂಟ್ ಜಿಪ್ ಗಳು ಸರಿಯಾಗಿ ಹಾಕಲು ಅಥವಾ ತೆಗೆಯಲು ಬರದಿದ್ದಾಗ ಈ ಉಳಿದ ಸಾಬೂನಿನ ತುಂಡುಗಳು ಕೆಲಸಕ್ಕೆ ಬರುತ್ತದೆ. ಕೆಲವೊಮ್ಮೆ ಜಿಪ್ ಗಳು ತುಂಬಾ ಗಟ್ಟಿಯಾಗಿರುತ್ತದೆ ಅವುಗಳನ್ನು ಎಳೆಯಲು ಎಷ್ಟೇ ಬಲ ಹಾಕಿದರೂ ಸಾಕಾಗುವುದಿಲ್ಲ. ಆಗ ಈ ಉಳಿದ ಸಾಬೂನನ್ನು ಅವುಗಳ ಮೇಲೆ ಹಚ್ಚಿದರೆ ಯಾವುದೇ ರೀತಿಯ ಜಿಪ್ ಸಮಸ್ಯೆ ಇರುವುದಿಲ್ಲ.
- ಮನೆಯ ಅಥವಾ ಗೇಟ್ ನ ಬೀಗಗಳು ಹಳೆಯದಾಗಿದ್ದಾಗ, ಅವುಗಳನ್ನು ತೆರೆಯುವುದು ಮತ್ತು ಲಾಕ್ ಮಾಡುವುದು ತುಂಬಾ ಕಷ್ಟವಾಗುತ್ತದೆ. ನೀವು ಅವುಗಳನ್ನು ಸುಲಭವಾಗಿ ತೆರೆಯಬೇಕಾದರೆ ನಿಮ್ಮ ಶಕ್ತಿಯನ್ನು ಬಳಸುವ ಬದಲು ಅದಕ್ಕೆ ಸಾಬೂನನ್ನು ಹಚ್ಚುವುದರಿಂದ ಲಾಕ್ ಸುಲಭವಾಗಿ ತೆರೆಯುತ್ತದೆ.
(ಸೂಚನೆ: ಅಂತರ್ಜಾಲದಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ. ಮುಂದಿನ ಯಾವುದೇ ಪರಿಣಾಮಗಳಿಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ.)
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ