International Day of Peace 2024 : ವಿಶ್ವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಬಾರಿಸಲಾಗುತ್ತೆ ಪೀಸ್ ಬೆಲ್, ಏನಿದರ ವಿಶೇಷತೆ?

ಇಂದು ಅಂತಾರಾಷ್ಟ್ರೀಯ ಶಾಂತಿ ದಿನ. ಅಹಿಂಸೆ ಮತ್ತು ಕದನ ವಿರಾಮಕ್ಕೆ ಉತ್ತೇಜನ ನೀಡುವುರೊಂದಿಗೆ, ಎಲ್ಲಾ ದೇಶಗಳಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುವ ಮೂಲಕ ಪ್ರತಿ ವರ್ಷ ಸೆಪ್ಟೆಂಬರ್ 21 ರಂದು ಅಂತಾರಾಷ್ಟ್ರೀಯ ಶಾಂತಿ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಹಾಗಾದ್ರೆ ಈ ಅಂತಾರಾಷ್ಟ್ರೀಯ ಶಾಂತಿ ದಿನದ ಇತಿಹಾಸ ಹಾಗೂ ಆಚರಣೆ ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

International Day of Peace 2024 : ವಿಶ್ವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಬಾರಿಸಲಾಗುತ್ತೆ ಪೀಸ್ ಬೆಲ್, ಏನಿದರ ವಿಶೇಷತೆ?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 21, 2024 | 10:25 AM

ಶಾಂತಿ ನೆಲೆಸಿದ್ದರೆ ಮಾತ್ರ ಪ್ರತಿಯೊಂದು ದೇಶವು ಸಹೋದರತೆಯಿಂದ ಇರಲು ಹಾಗೂ ಸುಸ್ಥಿರ ಜೀವನವನ್ನು ನಡೆಸಲು ಸಾಧ್ಯ. ಯುದ್ಧ ಮತ್ತು ಹಿಂಸಾಚಾರದಿಂದ ಏನನ್ನು ಪಡೆದುಕೊಳ್ಳಲು ಸಾಧ್ಯವೇ ಇಲ್ಲ. ಇತಿಹಾಸ ತೆರೆದು ನೋಡಿದರೆ ವಿಶ್ವವು ಅನೇಕ ಯುದ್ಧಗಳು, ಹಿಂಸಾಚಾರ ಚುವಟಿಕೆಗಳಿಂದ ಕೊನೆಯಿಲ್ಲದೇ ನಡೆದಿದೆ. ಇದರಿಂದ ಆದದ್ದು ಸಾವು ನೋವುಗಳು ಬಿಟ್ಟರೆ ಬೇರೇನೂ ಅಲ್ಲ. ವಿಶ್ವ ಯದ್ಧದ ಸಂದರ್ಭದಲ್ಲಿ ಜಗತ್ತಿನಲ್ಲಿ ಶಾಂತಿ ಎನ್ನುವ ಪದಕ್ಕೆ ಅರ್ಥವೇ ಇರಲಿಲ್ಲ. ಹೀಗಾಗಿ ವಿಶ್ವ ಸಂಸ್ಥೆಯು ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲೂ ಶಾಂತಿಯನ್ನು ಕಾಪಾಡಲು, ಅಂತಾರಾಷ್ಟ್ರೀಯ ಯುದ್ಧಗಳಿಗೆ ಅಂತ್ಯ ಹಾಡಿ ಶಾಂತಿ ನೆಲೆಸಲು ಈ ದಿನವನ್ನು ಆಚರಿಸಲಾಯಿತು.

ಅಂತಾರಾಷ್ಟ್ರೀಯ ಶಾಂತಿ ದಿನದ ಇತಿಹಾಸ ಹಾಗೂ ಮಹತ್ವ:

ರಾಷ್ಟ್ರ ರಾಷ್ಟ್ರಗಳ ನಡುವೆ ಶಾಂತಿ ಮೂಡಿಸಿ ಸಹೋದರತ್ವವನ್ನು ಬೆಳೆಸುವ ಸಲುವಾಗಿ 1981 ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲು ನಿರ್ಧರಿಸಿತು.1982 ರಲ್ಲಿ ಈ ದಿನವನ್ನು ಸಪ್ಟೆಂಬರ್ ತಿಂಗಳ ಮೂರನೇ ಮಂಗಳವಾರದಂದು ಆಚರಿಸಲಾಯಿತು. ಅಂದಿನಿಂದ 1982 ರಿಂದ 2001 ರ ವರೆಗೆ ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಸೆಪ್ಟೆಂರ್ ತಿಂಗಳ ಮೂರನೇ ಮಂಗಳವಾರದಂದು ಆಚರಿಸಲಾಯಿತು. ಆ ಬಳಿಕ ವಿಶ್ವ ಸಂಸ್ಥೆಯು 2002 ರಿಂದ ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಸೆಪ್ಟೆಂಬರ್ 21 ನೇ ತಾರೀಕಿನಂದು ಆಚರಿಸಲು ನಿರ್ಧರಿಸಿತು.

ವಿಶ್ವ ಶಾಂತಿ ದಿನದಂದು ನ್ಯೂಯಾರ್ಕ್ ನಗರದಲ್ಲಿ ಇರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ವಿಶ್ವಸಂಸ್ಥೆಯ ಶಾಂತಿ ಗಂಟೆಯನ್ನು ಬಾರಿಸಲಾಗುತ್ತದೆ. ಪೀಸ್ ಬೆಲ್ ಅನ್ನು 1954 ರಲ್ಲಿ ಯುನೈಟೆಡ್ ನೇಷನ್ಸ್ ಅಸೋಸಿಯೇಷನ್ ಆಫ್ ಜಪಾನ್ ನೀಡಿದ ಕೊಡುಗೆಯಾಗಿದೆ. ಈ ಬೆಲ್‌ ಟವರ್ ಸಣ್ಣದೊಂದು ದೇಗುಲದಂತೆ ಇದೆ. ಇದು ಶಾಂತಿಯ ಪ್ರತೀಕ ಬುದ್ಧನ ಜನಿಸಿದ ಸ್ಥಳವನ್ನು ಸಂಕೇತಿಸುತ್ತದೆ. ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಹಾಗೂ 60ಕ್ಕೂ ಹೆಚ್ಚು ದೇಶದ ಮಕ್ಕಳು ನೀಡಿದ ನಾಣ್ಯಗಳು ಹಾಗೂ ಪದಕಗಳಿಂದ ಈ ಘಂಟೆಯನ್ನು ತಯಾರಿಸಲಾಗಿದೆ. ಈ ದಿನದಂದು ಎಲ್ಲಾ ರಾಷ್ಟ್ರಗಳಲ್ಲೂ ಶಾಂತಿಯ ಸಂಕೇತವಾಗಿ ಬಿಳಿ ಪಾರಿವಾಳಗಳನ್ನು ಹಾರಿಸುವ ಸಂಪ್ರದಾಯವಿದೆ.

ಇದನ್ನೂ ಓದಿ: ಈ ಮರೆವಿನ ಕಾಯಿಲೆ ಬರದಿರಲು ಏನು ಮಾಡಬೇಕು?

ಅಂತಾರಾಷ್ಟ್ರೀಯ ಶಾಂತಿ ದಿನದ ಮಹತ್ವ ಹಾಗೂ ಆಚರಣೆ

ವ್ಯಕ್ತಿಗಳು, ಸಮುದಾಯಗಳು ಮತ್ತು ರಾಷ್ಟ್ರಗಳ ನಡುವೆ ಶಾಂತಿ, ತಿಳುವಳಿಕೆ ಮತ್ತು ಸಹಯೋಗವನ್ನು ಬೆಳೆಸಲು ಸಲುವಾಗಿ ವಿಶ್ವಸಂಸ್ಥೆಯು ಜಾರಿಗೆ ತಂದ ಈ ದಿನವೂ ಮಹತ್ವದ್ದಾಗಿದೆ. ಹೀಗಾಗಿ ವಿಶ್ವಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಶಾಂತಿಯ ಅಗತ್ಯತೆ ಹಾಗೂ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ವಿವಿಧ ಕಾರ್ಯಕ್ರಮ, ಸಭೆಗಳು ಮತ್ತು ಸಮ್ಮೇಳನಗಳು ನಡೆಯುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್