AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Alzheimer’s Day 2024: ಈ ಮರೆವಿನ ಕಾಯಿಲೆ ಬರದಿರಲು ಏನು ಮಾಡಬೇಕು?

ವಯಸ್ಸಾದಂತೆ ಅನೇಕ ರೋಗಗಳು ನಮ್ಮನ್ನು ಭಾದಿಸುವುದು ಸಾಮಾನ್ಯ. ಅದರಲ್ಲಿಯೂ ಮರೆವಿನ ಕಾಯಿಲೆ ಇನ್ನಿಲ್ಲದಂತೆ ಕಾಡುತ್ತದೆ. ಹಿರಿಯರು ಹೇಳಿದಂತೆ ಮರೆವು ವರವೂ ಹೌದು, ಶಾಪವೂ ಹೌದು. ಈ ಮರೆವಿನ ಸ್ಥಿತಿಯನ್ನು ಅಥವಾ ವಯಸ್ಸಾದ ಬಳಿಕ ಒಂದೊಂದೇ ವಿಷಯದ ಬಗ್ಗೆ ಜ್ಞಾಪಕ ಶಕ್ತಿ ಕುಂದುತ್ತಾ ಬರುವುದನ್ನು ನಾವು ಅಲ್ಝೈಮರ್ (Alzheimer’s) ಎಂದು ಕರೆಯಲಾಗುತ್ತದೆ. ಈ ದಿನದ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 21 ರಂದು ಅಂದರೆ ವಿಶ್ವ ಅಲ್ಝೈಮರ್ಸ್- ಡಿಮೆನ್ಶಿಯಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸವೇನು? ಅಲ್ಝೈಮರ್ ಕಾಯಿಲೆಯ ಹಂತಗಳು ಯಾವವು? ತಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

World Alzheimer’s Day 2024: ಈ ಮರೆವಿನ ಕಾಯಿಲೆ ಬರದಿರಲು ಏನು ಮಾಡಬೇಕು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 21, 2024 | 10:06 AM

Share

ವಯಸ್ಸಾದಂತೆ ಅನೇಕ ರೋಗಗಳು ನಮ್ಮನ್ನು ಭಾದಿಸುವುದು ಸಾಮಾನ್ಯ. ಅದರಲ್ಲಿಯೂ ಮರೆವಿನ ಕಾಯಿಲೆ ಇನ್ನಿಲ್ಲದಂತೆ ಕಾಡುತ್ತದೆ. ಹಿರಿಯರು ಹೇಳಿದಂತೆ ಮರೆವು ವರವೂ ಹೌದು, ಶಾಪವೂ ಹೌದು. ಈ ಮರೆವಿನ ಸ್ಥಿತಿಯನ್ನು ಅಥವಾ ವಯಸ್ಸಾದ ಬಳಿಕ ಒಂದೊಂದೇ ವಿಷಯದ ಬಗ್ಗೆ ಜ್ಞಾಪಕ ಶಕ್ತಿ ಕುಂದುತ್ತಾ ಬರುವುದನ್ನು ನಾವು ಅಲ್ಝೈಮರ್ (Alzheimer’s) ಎಂದು ಕರೆಯಲಾಗುತ್ತದೆ. ಈ ದಿನದ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 21 ರಂದು ಅಂದರೆ ವಿಶ್ವ ಅಲ್ಝೈಮರ್ಸ್- ಡಿಮೆನ್ಶಿಯಾ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಅಲ್ಝೈಮರ್ ದಿನದ ಇತಿಹಾಸ;

ಈ ಮರೆವಿನ ಕಾಯಿಲೆಯ ಹಲವು ಶತಮಾನಗಳ ಇತಿಹಾಸವನ್ನು ಹೊಂದಿದೆ. ಆದರೆ, ಈ ರೀತಿಯ ಪ್ರಕರಣ ಮೊದಲು ಬೆಳಕಿಗೆ ಬಂದು ಅದನ್ನು ಗುರುತಿಸಿದ್ದು ಜರ್ಮನ್‌ ಮನೋವೈದ್ಯ ಅಲೋಯಿಸ್‌ ಅಲ್ಝೈಮರ್. ಹಾಗಾಗಿ ಆ ವೈದ್ಯರ ಹೆಸರನ್ನೇ ಇದಕ್ಕೆ ಇಡಲಾಯಿತು. ಇದು 50 ವರ್ಷ ವಯಸ್ಸಿನ ಮಹಿಳೆಯೊಬ್ಬರಲ್ಲಿ ಕಾಣಿಸಿಕೊಂಡಿತ್ತು ಬಳಿಕ ಅವರು 1906ರಲ್ಲಿ ಈ ಕಾಯಿಲೆಯಿಂದ ಮೃತಪಟ್ಟರು. ಇದರ ಕುರಿತು ಈ ವೈದ್ಯರು ಸಾರ್ವಜನಿಕವಾಗಿ ಮಾಹಿತಿ ನೀಡಿದರು. ಬಳಿಕ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದವು.

ಈ ದಿನದ ಮಹತ್ವ;

ಜನರಲ್ಲಿ ಮರೆವಿನ ಕಾಯಿಲೆಯ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಸೂಕ್ತ ಸಮಯದಲ್ಲಿ ಅಲ್ಝೈಮರ್ ಲಕ್ಷಣಗಳನ್ನು ಗುರುತಿಸಿ, ವೈದ್ಯರನ್ನು ಭೇಟಿಯಾದರೆ ಕಾಯಿಲೆ ಬೀರುವ ಪರಿಣಾಮಗಳನ್ನು ಹಲವು ರೀತಿಯಲ್ಲಿ ಕಡಿಮೆ ಮಾಡಬಹುದಾಗಿದೆ. ಹಾಗಾಗಿ ಈ ರೋಗಕ್ಕೆ ಸರಿಯಾದ ಮಾಹಿತಿಯ ಅವಶ್ಯಕತೆ ಇದೆ. ಈ ಕಾಯಿಲೆಯೂ ಬುದ್ದಿಮಾಂದ್ಯತೆಯ ಲಕ್ಷಣಗಳನ್ನೂ ಹೊಂದಿರುವುದರಿಂದ ಜನರು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಗಳಿರುತ್ತದೆ.

ಅಲ್ಝೈಮರ್ ಕಾಯಿಲೆಯ ಹಂತಗಳು;

ಈ ಕಾಯಿಲೆಯನ್ನು ಅವುಗಳ ಗುಣಲಕ್ಷಣಗಗಳ ಆಧಾರದಲ್ಲಿ ನಾಲ್ಕು ಹಂತಗಳನ್ನು ಮಾಡಲಾಗಿದ್ದು ಆರಂಭಿಕ, ಎರಡನೇ, ಮಧ್ಯಮ ಮತ್ತು ತೀವ್ರ ಹಂತದ ಮರೆವಿನ ಕಾಯಿಲೆಯನ್ನು ನೋಡಬಹುದಾಗಿದೆ. ಮೊದಲ ಹಂತದಲ್ಲಿ ಅಲ್ಝೈಮರ್ ಇರುವ ವ್ಯಕ್ತಿಗಳಲ್ಲಿ ಯಾವುದೇ ರೀತಿಯ ದೌರ್ಬಲ್ಯ ಕಂಡು ಬರುವುದಿಲ್ಲ. ಸಣ್ಣ ಪುಟ್ಟ ಮರೆವುಗಳು ಮಾತ್ರ ಇರುತ್ತದೆ. ಎರಡನೇ ಹಂತದಲ್ಲಿ ಮರೆವು ಸ್ವಲ್ಪ ಹೆಚ್ಚುತ್ತದೆ. ಸ್ವಲ್ಪ ಕಷ್ಟಪಟ್ಟು ನೆನಪಿಸಿಕೊಂಡರೆ ಮರೆತ ವಿಷಯ ನೆನಪಾಗುತ್ತದೆ. ಮಧ್ಯಮ ಹಂತದಲ್ಲಿ ಮರೆವು ಇನ್ನಷ್ಟು ಹೆಚ್ಚುತ್ತದೆ. ವ್ಯಕ್ತಿಗಳನ್ನು ಗುರುತಿಸಲು ಕಷ್ಟವಾಗುತ್ತದೆ. ಈ ಸಮಯದಲ್ಲಿ ವೈದ್ಯರನ್ನು ಭೇಟಿ ಮಾಡಲೇಬೇಕು ಇಲ್ಲವಾದಲ್ಲಿ ಇದನ್ನು ತಡೆಯುವುದು ಕಷ್ಟವಾಗುತ್ತದೆ. ತೀವ್ರ ಅಥವಾ ಕೊನೆಯ ಹಂತದಲ್ಲಿ ವ್ಯಕ್ತಿಯು ಮಾತನಾಡುವುದನ್ನೇ ಮರೆಯುತ್ತಾರೆ. ಅಲ್ಲದೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ಮಧುಮೇಹ ಕುರುಡುತನಕ್ಕೆ ಕಾರಣವಾಗಬಹುದು, ಆರಂಭಿಕ ಲಕ್ಷಣಗಳಿವು

ತಡೆಯುವುದು ಹೇಗೆ?

ಈ ಮರೆವು ಹೋಗಲಾಡಿಸಲು ದೈಹಿಕವಾಗಿ ಆರೋಗ್ಯವಾಗಿರುವುದರ ಜೊತೆಗೆ ಮಾನಸಿಕವಾಗಿಯೂ ಸಂತೋಷವಾಗಿರುವುದು ಬಹಳ ಮುಖ್ಯವಾಗುತ್ತದೆ. ಯಾವುದೇ ಸ್ಥಿತಿಯಲ್ಲಿಯೂ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಲು ಬಿಡಬೇಡಿ. ಜೊತೆಗೆ ಒಳ್ಳೆಯ ಆಲೋಚನೆಗಳನ್ನು ಮಾಡುವ ಮೂಲಕ ಮನಸ್ಸು ಸಂತೋಷವಾಗಿ ಇರುವಂತೆ ನೋಡಿಕೊಳ್ಳಿ. ನಿಮಗೆ ಹೆಚ್ಚು ಹೆಚ್ಚು ಆಸಕ್ತಿ ಇರುವ ಕೆಲಸಗಳನ್ನು ಮಾಡಿ. ಅಂದರೆ ನಿಮಗಿಷ್ಟವಾದ ಹಾಡುಗಳನ್ನು ಹಾಡುವುದು, ನೆಚ್ಚಿನ ಸಂಗೀತವನ್ನು ಕೇಳುವುದು, ಅಡುಗೆ ಮಾಡುವುದು, ತೋಟಗಾರಿಕೆ, ಕ್ರೀಡೆ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳಿ. ಈ ರೀತಿ ಮಾಡಿದರೆ ಯಾವ ರೋಗವೂ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. ರೋಗಲಕ್ಷಣಗಳು ಕಂಡು ಬಂದರೆ ತಡಮಾಡದೆಯೇ ಸೈಕಿಯಾಟ್ರಿಸ್‌, ಜೆರಿಯಾಟ್ರಿಕ್‌ ಪಿಜಿಷಿಯನ್‌ ಅಥವಾ ನ್ಯೂರೊಲಜಿಸ್ಟ್‌ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ