AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Daughters Day 2024: ರಾಷ್ಟ್ರೀಯ ಪುತ್ರಿಯರ ದಿನ; ಮಗಳೆಂದರೆ ಮಹಾಲಕ್ಷೀ… ಹೆಣ್ಣು ಮಗುವಿನ ಬಗ್ಗೆ ತಾತ್ಸಾರ ಬೇಡ

ಮನೆಯೊಂದು ನಗುತಿರಲು, ಮನೆಯಲ್ಲಿ ಖುಷಿ ಸಂತೋಷ ತುಂಬಿರಲು ಹೆಣ್ಣು ಮಗುವೊಂದು ಬೇಕು, ಮಗಳು ಎಂದರೆ ಮನೆಯ ಮಹಾಲಕ್ಷ್ಮೀ ಇದ್ದಂತೆ. ಹೀಗಿದ್ದರೂ ಹೆಣ್ಣು ಮಗು ಜನಿಸಿತೆಂದರೆ ತಾತ್ಸಾರ ಭಾವ ತೋರುವವರು ಇಂದಿಗೂ ನಮ್ಮ ಸಮಾಜದಲ್ಲಿದ್ದಾರೆ. ಹೀಗಾಗಿ ತಾರತಮ್ಯವನ್ನು ಹೋಗಲಾಡಿಸಿ ಗಂಡು ಹೆಣ್ಣು ಮಕ್ಕಳಿಬ್ಬರೂ ಸಮಾನರು ಎಂಬುದನ್ನು ಸಾರುವ ದೃಷ್ಟಿಯಿಂದ ಪ್ರತಿವರ್ಷ ಸೆಪ್ಟೆಂಬರ್‌ ತಿಂಗಳ ನಾಲ್ಕನೇ ಭಾನುವಾರ ಭಾರತದಲ್ಲಿ ರಾಷ್ಟ್ರೀಯ ಪುತ್ರಿಯರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

National Daughters Day 2024: ರಾಷ್ಟ್ರೀಯ ಪುತ್ರಿಯರ ದಿನ; ಮಗಳೆಂದರೆ ಮಹಾಲಕ್ಷೀ… ಹೆಣ್ಣು ಮಗುವಿನ  ಬಗ್ಗೆ ತಾತ್ಸಾರ ಬೇಡ
Daughters Day
ಮಾಲಾಶ್ರೀ ಅಂಚನ್​
| Edited By: |

Updated on: Sep 22, 2024 | 10:28 AM

Share

ಹೆಣ್ಣನ್ನು ಪೂಜಿಸುವ ದೇಶ ನಮ್ಮದು. ಭೂಮಿ, ಪ್ರಕೃತಿಯನ್ನೂ ಹೆಣ್ಣಿಗೆ ಹೋಲಿಸಲಾಗುತ್ತದೆ. ಹೆಣ್ಣಿಲ್ಲದೆ ಪ್ರಪಂಚವೇ ಇಲ್ಲ. ಅದನ್ನು ಊಹಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಹೀಗಿದ್ದರೂ ತಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿತೆಂದರೆ ಮನೆಗೆ ಮಹಾಲಕ್ಷ್ಮೀ ಬಂದಿತೆಂದು ಖುಷಿಪಡುವವರಿಗಿಂತ ಅಯ್ಯೋ ಹೆಣ್ಣು ಮಗು ಹುಟ್ಟಿತಾ ಅದರ ಜವಬ್ದಾರಿಗಳನ್ನು ಹೊರುವವರ್ಯಾರು ಎಂದು ಮುಖ ಸಿಂಡರಿಸಿ ಕೊಳ್ಳುವವರೇ ಹೆಚ್ಚು. ಹೀಗಾಗಿ ತಾರತಮ್ಯವನ್ನು ಹೋಗಲಾಡಿಸಿ ಗಂಡು ಹೆಣ್ಣು ಮಕ್ಕಳಿಬ್ಬರೂ ಸಮಾನರು ಎಂಬುದನ್ನು ಸಾರುವ ದೃಷ್ಟಿಯಿಂದ ಪ್ರತಿವರ್ಷ ಸೆಪ್ಟೆಂಬರ್‌ ತಿಂಗಳ ನಾಲ್ಕನೇ ಭಾನುವಾರ ಭಾರತದಲ್ಲಿ ರಾಷ್ಟ್ರೀಯ ಪುತ್ರಿಯರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

ರಾಷ್ಟ್ರೀಯ ಪುತ್ರಿಯರ ದಿನದ ಇತಿಹಾಸ:

ಪುರುಷರಷ್ಟೇ ಹೆಣ್ಣು ಮಕ್ಕಳು ಕೂಡಾ ಸಮಾನ ಸ್ಥಾನಮಾನವನ್ನು ಹೊಂದಿದ್ದ ಕಾಲವೊಂದಿತ್ತು. ಆದರೆ ಕಾಲಕ್ರಮೇಣ ಹೆಣ್ಣು ಅಬಲೆ, ಆಕೆ ಮನೆ ಕೆಲಸಕ್ಕೆ ಮಾತ್ರ ಸೀಮಿತ ಎಂಬ ನಿಯಮಾವಳಿಗಳು ಬರಲಾರಂಭಿಸಿದವು. ಅಷ್ಟೇ ಯಾಕೆ ಹೆಣ್ಣು ಮಗು ಹುಟ್ಟಿದರೆ ಅದು ಮನೆಗೆ ಅಶುಭ ಎನ್ನುವ ಕಾಲ ಕೂಡಾ ಬಂತು. ವರ ದಕ್ಷಿಣೆ ಪದ್ಧತಿ ತಲೆ ದೂರಿದ ಬಳಿಕ ತಮಗೆ ಏನಾದರೂ ಹೆಣ್ಣು ಮಗು ಜನಿಸಿದರೆ ಅವಳಿಗೆ ಮದುವೆ ಯಾರು ಮಾಡುತ್ತಾರೆ, ವರದಕ್ಷಿಣೆ ಯಾರು ಕೊಡುತ್ತಾರೆ ಎಂದೆಲ್ಲಾ ಯೋಚಿಸಿ ಹೆಣ್ಣು ಮಕ್ಕಳು ಜನಿಸುವುದೇ ಅಶುಭವೆಂದು ಪರಿಗಣಿಸಿ ಹೆಣ್ಣು ಭ್ರೂಣವನ್ನು ಗರ್ಭದಲ್ಲಿಯೇ ಹೊಸುಕಿ ಹಾಕಲು ಶುರು ಮಾಡಿದರು. ನಂತರದ ದಿನಗಳಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಗಣನೀಯವಾಗಿ ಕುಸಿಯಲು ಆರಂಭಿಸಿತು. ಈ ನಿಟ್ಟಿನಲ್ಲಿ ಸಮಾಜದಲ್ಲಿನ ಈ ಪಿಡುಗನ್ನು ಹೋಗಲಾಡಿಸಿ ಹೆಣ್ಣು ಮಗುವಿನ ಮಹತ್ವವನ್ನು ತಿಳಿಸಲು ಹೆಣ್ಣು ಮಗುವಿಗೂ ಗಂಡು ಮಗುವಿನಷ್ಟೇ ಸಮಾನ ಸ್ಥಾನಮಾನವನ್ನು ನೀಡಲು ಹಲವಾರು ಜಾಗೃತಿ ಕಾರ್ಯಗಳು ನಡೆದವು. ಇದರ ಭಾಗವಾಗಿಯೇ ಭಾರತದಲ್ಲಿ 2007 ರಂದು ರಾಷ್ಟ್ರೀಯ ಪುತ್ರಿಯರ ದಿನವನ್ನು ಆಚರಿಸಲು ಆರಂಭಿಸಲಾಯಿತು. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್‌ ನಾಲ್ಕನೇ ಭಾನುವಾರದಂದು ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್‌ 24 ರಂದು ಅಂದರೆ ಇಂದು ರಾಷ್ಟ್ರೀಯ ಪುತ್ರಿಯರ ದಿನವನ್ನು ಆಚರಿಸಲಾಗುತ್ತಿದೆ.

ಪುತ್ರಿಯರ ದಿನದ ಮಹತ್ವ:

ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಂತೆ ಸಮಾನವಾದ ಮಹತ್ವ ಮತ್ತು ಗೌರವವನ್ನು ನೀಡುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಇಂದಿಗೂ ಈ ಸಮಾಜದಲ್ಲಿ ಕೆಲವು ಕಡೆ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಿಗಿಂತ ಕೀಳಾಗಿ ನೋಡಲಾಗುತ್ತಿದೆ. ಹೆಣ್ಣು ಎಷ್ಟೇ ಸಾಧಿಸಿದರೂ ಆಕೆ ಗಂಡನ ಮನೆಗೆ ಹೋದ ಮೇಲೆ ಮನೆ ಕೆಲಸವೇ ಮಾಡಬೇಕಲ್ವಾ ಎಷ್ಟು ಸಾಧನೆ ಮಾಡಿದರೂ ಏನು ಪ್ರಯೋಜನ ಎಂದು ಆಕೆಗೆ ಪ್ರೋತ್ಸಾಹ ನೀಡದೆ ಚುಚ್ಚು ಮಾತುಗಳನ್ನು ಆಡುವವರೇ ಹೆಚ್ಚು. ಆದರೆ ಹೊರೆಯೆಂದು ಭಾವಿಸುವ ಹೆಣ್ಣು ಮಗಳಾಗಿ, ಅಕ್ಕತಂಗಿಯಾಗಿ, ಮಡದಿಯಾಗಿ ಕೊನೆಗೆ ತಾನೂ ತಾಯಿಯಾಗುವ ಅಭೂತಪೂರ್ವ ಶಕ್ತಿ. ಹೀಗಾಗಿ ಹೆಣ್ಣು ಮಗುವಿನ ಬಗೆಗಿನ ಸಮಾಜದ ಈ ಸಂಕುಚಿತ ಮನಸ್ಥಿತಿಯನ್ನು ಹೋಗಲಾಡಿಸುವ ನಿಟ್ಟಿನಿಂದ ಹಾಗೂ ಪುತ್ರಿಯರ ಮಹತ್ವವನ್ನು ಸಾರುವ ಉದ್ದೇಶದಿಂದ ರಾಷ್ಟ್ರೀಯ ಪುತ್ರಿಯರ ದಿನವನ್ನು ಆಚರಿಸಲಾಗುತ್ತದೆ.

ಮಗಳೆಂದರೆ ಮನೆಯ ಮಹಾಲಕ್ಷ್ಮೀ ಹಾಗಾಗಿ ಹೆಣ್ಣು ಮಗುವ ಬಗ್ಗೆ ತಾತ್ಸಾರ ಬೇಡ:

ಒಂದು ಕಡೆ ಕೆಲ ತಂದೆ-ತಾಯಿಯರಂತೂ ತಮ್ಮ ಪುತ್ರಿಯರನ್ನು ಅದೃಷ್ಟ ಲಕ್ಷ್ಮಿ ಎಂದು ಪರಿಗಣಿಸಿದರೆ ಇನ್ನೊಂದೆಡೆ ಕೆಲವರು ತಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ತಾತ್ಸಾರ ಭಾವವನ್ನು ತೋರುತ್ತಾರೆ. ಗಂಡು ವಂಶೋದ್ಧಾರಕ, ಹೆಣ್ಣು ಯಾವತ್ತೂ ಮನೆಯಿಂದ ಆಚೆ ಹೋಗುವವಳು ನಾವ್ಯಾಕೆ ಅವಳ ಮೇಲೆ ಖರ್ಚು ಮಾಡಬೇಕು, ಏಕೆ ಓದಿಸಬೇಕು ಎನ್ನುವ ಮನಸ್ಥಿತಿ ಇಂದಿಗೂ ನಮ್ಮ ಸಮಾಜದಲ್ಲಿದೆ. ಹೀಗೆ ಮನೆ ಮಂದಿ, ಸಮಾಜದ ತಾತ್ಸಾರ ಭಾವವನ್ನು ಮೆಟ್ಟಿ ನಿಂತು ಸಾಧನೆ ಮಾಡಿದ ಅದೆಷ್ಟೋ ದಿಟ್ಟ ಹೆಣ್ಣು ಮಕ್ಕಳು ನಮ್ಮ ಸಮಾಜದಲ್ಲಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು