ನಿಮಗಿದು ಗೊತ್ತೇ: ಈ ದೇಶದಲ್ಲಿ ಕೇವಲ ಒಂದೇ ಜೈಲಿದೆ, ಟ್ವಿಟರ್​ನಲ್ಲಿರುವ ಹಕ್ಕಿಗೆ ಹೆಸರಿದೆ ಎಂದು ಗೊತ್ತಾ?

Do You Know: ನೀವು ಇಲ್ಲಿಯವರೆಗೂ ಕೇಳಿರದ, ಗೂಗಲ್​ನಲ್ಲಿ ಕಂಡಿರದ, ಜನರ ಮನಸ್ಸಿನಲ್ಲೇ ಉಳಿದುಕೊಂಡಿರುವ ಕೆಲವು ಅದ್ಭುತ ವಿಚಾರಗಳನ್ನು ನಿಮಗಿದು ಗೊತ್ತೇ ಸರಣಿ ಮೂಲಕ ಟಿವಿ9 ಕನ್ನಡ ಡಿಜಿಟಲ್ ನಿಮಗೆ ನೀಡುತ್ತಿದೆ.

ನಿಮಗಿದು ಗೊತ್ತೇ: ಈ ದೇಶದಲ್ಲಿ ಕೇವಲ ಒಂದೇ ಜೈಲಿದೆ, ಟ್ವಿಟರ್​ನಲ್ಲಿರುವ ಹಕ್ಕಿಗೆ ಹೆಸರಿದೆ ಎಂದು ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us
ಕಿರಣ್ ಹನುಮಂತ್​ ಮಾದಾರ್
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 25, 2023 | 6:30 AM

ನೀವು ಇಲ್ಲಿಯವರೆಗೂ ಕೇಳಿರದ, ಗೂಗಲ್​ನಲ್ಲಿ ಕಂಡಿರದ, ಜನರ ಮನಸ್ಸಿನಲ್ಲೇ ಉಳಿದುಕೊಂಡಿರುವ ಕೆಲವು ಅದ್ಭುತ ವಿಚಾರಗಳು ಇಲ್ಲಿದೆ. ಈ ದೇಶದಲ್ಲಿ ಕೇವಲ ಒಂದೇ ಜೈಲಿದೆ, ಆಲೂಗಡ್ಡೆಯ ಆಕಾರದಲ್ಲಿ ಗ್ರಹವಿದೆ. ಟ್ವಿಟರ್​ನಲ್ಲಿರುವ ಹಕ್ಕಿಗೆ ಹೆಸರಿದೆ ಎಂದು ಗೊತ್ತಾ? ಈ ಎಲ್ಲ ವಿಚಾರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಲಿಚ್ಟೆನ್‌ಸ್ಟೈನ್​ಲ್ಲಿ ಕೇವಲ ಒಂದೇ ಜೈಲು ಇದೆ.

ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವೆ ಬೆಸೆದುಕೊಂಡಿರುವ ಲಿಚ್ಟೆನ್‌ಸ್ಟೈನ್ ದೇಶವು ಒಂದೇ ಜೈಲನ್ನು ಹೊಂದಿದೆ. ಅದರಲ್ಲಿ ಒಟ್ಟು 10 ರಿಂದ 20 ಜನರನ್ನು ಮಾತ್ರ ಇದ್ದಾರೆ. ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯನ್ನ ಹೊಂದಿರುವ ಅಪರಾಧಿಯನ್ನ ಮಾತ್ರ ಆಸ್ಟ್ರಿಯಾ ಅಥವಾ ಸ್ವಿಟ್ಜರ್ಲೆಂಡ್‌ನ ಜೈಲುಗಳಿಗೆ ಕಳುಹಿಸಲಾಗುತ್ತದೆ.

ಆಲ್ಕೋಹಾಲ್ ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರಲು ಕೇವಲ ಆರು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಆಲ್ಕೋಹಾಲ್ ಪ್ರಿಯರೇ ನೀವು ಅದನ್ನ ಸೇವಿಸಿದ ಕೇವಲ 6 ​​ನಿಮಿಷಗಳಲ್ಲಿ ನಿಮ್ಮ ಮೆದುಳಿನ ಮೇಲೆ ಅದು ಪರಿಣಾಮ ಬೀರುತ್ತದೆ. ಹೌದು ಆಲ್ಕೋಹಾಲ್​ಯುಕ್ತ ಪಾನೀಯವು ನೀವು ಯೋಚಿಸುವುದಕ್ಕಿಂತ ಹೆಚ್ಚು ವೇಗವಾಗಿ ನಿಮ್ಮ ತಲೆಗೆ ಹೋಗುತ್ತದೆ. ಹೈಡೆಲ್ಬರ್ಗ್ ಯೂನಿವರ್ಸಿಟಿ ಆಸ್ಪತ್ರೆಯ ಸಂಶೋಧಕರು ಆಲ್ಕೋಹಾಲ್ ಸೇವಿಸಿದ ಕೇವಲ ಆರು ನಿಮಿಷಗಳಲ್ಲಿ ಮೆದುಳಿನ ಪರಿಣಾಮ ಬಿರುತ್ತದೆ ಎಂದು ಕಂಡುಹಿಡಿದಿದೆ.

ಅತಿ ಕಿರಿಯ ಒಲಿಂಪಿಯನ್ 10 ವರ್ಷ ವಯಸ್ಸಿನವರು.

ಅಧಿಕೃತ ಒಲಿಂಪಿಕ್ ದಾಖಲೆಗಳ ಪ್ರಕಾರ, ಒಲಿಂಪಿಕ್ ಪದಕವನ್ನು ಗೆದ್ದ ಅತ್ಯಂತ ಕಿರಿಯ ಕ್ರೀಡಾಪಟು ಗ್ರೀಕ್ ಜಿಮ್ನಾಸ್ಟ್ ಡಿಮಿಟ್ರಿಯೊಸ್ ಲೌಂಡ್ರಾಸ್, ಅವರು 10 ವರ್ಷ ವಯಸ್ಸಿನವರಾಗಿದ್ದಾಗಲೇ 1896 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೂರನೇ ಸ್ಥಾನ ಪಡೆದರು.

ಇದನ್ನೂ ಓದಿ:ನಿಮಗಿದು ಗೊತ್ತೇ: ಈ ದೇಶದಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ಕಾನೂನುಬಾಹಿರ, ಕಣ್ಣುಗುಡ್ಡೆಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳಬಹುದು?

ಆಲೂಗಡ್ಡೆಯ ಆಕಾರದಲ್ಲಿ ಗ್ರಹವಿದೆ.

ಪ್ಲೂಟೊದ ಗಾತ್ರದಂತೆಯೇ, ಕುಬ್ಜ ಗ್ರಹ ಹೌಮಿಯಾ ನೆಪ್ಚೂನ್‌ನ ಆಚೆಗೆ ಸೂರ್ಯನನ್ನು ಸುತ್ತುತ್ತದೆ ಮತ್ತು ಗುರುಗ್ರಹದಂತೆಯೇ ಉಂಗುರಗಳನ್ನು ಹೊಂದಿದೆ. ಆದರೆ ಈ ವಸ್ತುವನ್ನು ಇನ್ನಷ್ಟು ಆಸಕ್ತಿದಾಯಕವಾಗಿಸುವ ಅಂಶವೆಂದರೆ ಅದು ಆಲೂಗಡ್ಡೆಯ ಆಕಾರದಲ್ಲಿದೆ.

US ಸುಪ್ರೀಂ ಕೋರ್ಟ್ ಕಟ್ಟಡದಲ್ಲಿ ಬಾಸ್ಕೆಟ್‌ಬಾಲ್ ಅಂಕಣವಿದೆ.

US ಸುಪ್ರೀಂ ಕೋರ್ಟ್ ಕಟ್ಟಡದ ಮೇಲಿನ ಮಹಡಿಯಲ್ಲಿ ಬಾಸ್ಕೆಟ್‌ಬಾಲ್ ಅಂಕಣವಿದೆ. ಹೌದು ಹಿಂದೆ ಇದ್ದ ಕೊಠಡಿಯನ್ನ 1940 ರ ದಶಕದಲ್ಲಿ ನ್ಯಾಯಾಲಯದ ಉದ್ಯೋಗಿಗಳು ಸೇರಿ ಮೊದಲು ವ್ಯಾಯಾಮ ಮಾಡಲು ಬಳಸ ತೊಡಗಿದರು, ನಂತರ ಬಾಸ್ಕೆಟ್‌ಬಾಲ್ ಅಂಕಣವನ್ನ ನಿರ್ಮಿಸಲಾಯಿತು. ಇದನ್ನು ಈಗ ದೇಶದ ಅತ್ಯುನ್ನತ ನ್ಯಾಯಾಲಯಎಂದು ಕರೆಯಲಾಗುತ್ತದೆ.

ಇದನ್ನೂ ಓದಿ:Food Astrology: ಆಹಾರದಲ್ಲೂ ಜ್ಯೋತಿಷ್ಯ -ನಾವು ತಿನ್ನುವ ಆಹಾರವೂ ನಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ! ನಿಮಗಿದು ಗೊತ್ತಾ?

ಟ್ವಿಟರ್ ಹಕ್ಕಿಗೆ ಹೆಸರಿದೆ.

ಹೌದು ಇದರ ಹೆಸರು ಲಾರಿ, ಸಾಮಾಜಿಕ ಮಾಧ್ಯಮದ ಕುಖ್ಯಾತ ಬ್ಲೂಬರ್ಡ್‌ಗೆ ಮಾಜಿ NBA ಆಟಗಾರ ಲ್ಯಾರಿ ಬರ್ಡ್ ಹೆಸರನ್ನು ಇಡಲಾಯಿತು, ಅವರು ಟ್ವಿಟರ್ ಸಹಸಂಸ್ಥಾಪಕ ಬಿಜ್ ಸ್ಟೋನ್ ಅವರ ಹೋಮ್ಸ್ಟೇಟ್ ತಂಡವಾದ ಬಾಸ್ಟನ್ ಸೆಲ್ಟಿಕ್ಸ್‌ಗಾಗಿ ಆಡುತ್ತಿದ್ದರು.