AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Telephone Day 2023: ರಾಷ್ಟ್ರೀಯ ಟೆಲಿಫೋನ್​ ದಿನದ ಇತಿಹಾಸ, ಮಹತ್ವ

ಟೆಲಿಫೋನ್​ ಕಂಡು ಹಿಡಿದ ಅಲೆಕ್ಸಾಂಡರ್ ಗ್ರಹಾಂ ಬೆಲ್ ಅವರ ಗಮನಾರ್ಹ ಆವಿಷ್ಕಾರದ ನೆನಪಿಗಾಗಿ ಪ್ರತಿ ವರ್ಷ ಏಪ್ರಿಲ್ 25 ರಂದು ರಾಷ್ಟ್ರೀಯ ಟೆಲಿಫೋನ್ ದಿನವೆಂದು ಆಚರಿಸಲಾಗುತ್ತದೆ.

National Telephone Day 2023: ರಾಷ್ಟ್ರೀಯ ಟೆಲಿಫೋನ್​ ದಿನದ ಇತಿಹಾಸ, ಮಹತ್ವ
ಟೆಲಿಫೋನ್​​
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on:Apr 25, 2023 | 9:37 AM

Share

ಮುಖ್ಯಾಂಶಗಳು

  • ಈಚಿನ ದಿನಗಳಲ್ಲಿ ಟೆಲಿಫೋನ್​ಗಳುಕಾಣಸಿಗುವುದು ಅಪರೂಪವಾಗಿದೆ.
  • ಅದರಲ್ಲೂ 21ನೇ ಶತಮಾನದ ತಲೆಮಾರುಗಳಿಗೆ ಟೆಲಿಫೋನ್​ಗಳ ಪರಿಚಯವೇ ಇರುವುದಿಲ್ಲ.
  • ಮೊಬೈಲ್​ಗಳು ಬಂದ ಮೇಲೆ ಮನೆ, ಕಚೇರಿಗಳಿಂದ ಟೆಲಿಫೋನ್​ಗಳು ಮಾಯವಾಗಿ ಬಿಟ್ಟಿವೆ.

ಈಚಿನ ದಿನಗಳಲ್ಲಿ ಟೆಲಿಫೋನ್​ಗಳು (Telephone) ಕಾಣಸಿಗುವುದು ಅಪರೂಪವಾಗಿದೆ. ಅದರಲ್ಲೂ 21ನೇ ಶತಮಾನದ ತಲೆಮಾರುಗಳಿಗೆ ಟೆಲಿಫೋನ್​ಗಳ ಪರಿಚಯವೇ ಇರುವುದಿಲ್ಲ. ಕನ್ನಡದ ಹಳೇ ಚಿತ್ರಗಳನ್ನು ನೋಡಿದರೇ ಟೆಲಿಫೋನ್​ಗಳು ಕಾಣಸಿಗುತ್ತವೆ. ಮೊಬೈಲ್​ಗಳು (Mobile) ಬಂದ ಮೇಲೆ ಮನೆ, ಕಚೇರಿಗಳಿಂದ ಟೆಲಿಫೋನ್​ಗಳು ಮಾಯವಾಗಿ ಬಿಟ್ಟಿವೆ. ಪ್ರತಿವರ್ಷ ಏಪ್ರಿಲ್​ 25ರಂದು ರಾಷ್ಟ್ರೀಯ ಟೆಲಿಫೋನ್​​ ದಿನವೆಂದು ಆಚರಿಸಲಾಗುತ್ತದೆ. ಟೆಲಿಫೋನ್​ ಕಂಡು ಹಿಡಿದ ಅಲೆಕ್ಸಾಂಡರ್ ಗ್ರಹಾಂ ಬೆಲ್ ಅವರ ಗಮನಾರ್ಹ ಆವಿಷ್ಕಾರದ ನೆನಪಿಗಾಗಿ ಪ್ರತಿ ವರ್ಷ ಏಪ್ರಿಲ್ 25 ರಂದು ರಾಷ್ಟ್ರೀಯ ಟೆಲಿಫೋನ್ ದಿನವೆಂದು ಆಚರಿಸಲಾಗುತ್ತದೆ.

ರಾಷ್ಟ್ರೀಯ ಟೆಲಿಫೋನ್​​ ದಿನದ ಇತಿಹಾಸ

ಅಲೆಕ್ಸಾಂಡರ್ ಗ್ರಹಾಂ ಬೆಲ್ ಸ್ಕಾಟಿಷ್ ಮೂಲದ ವಿಜ್ಞಾನಿ ಮತ್ತು ಸಂಶೋಧಕರಾಗಿದ್ದರು. 1876 ಏಪ್ರಿಲ್​ 25 ರಂದು ಮೊದಲ ಬಾರಿಗೆ ಬೆಲ್ ದೂರವಾಣಿ ಕಂಡುಹಿಡಿಯುವದರ ಮೂಲಕ ಸಂವಹನ ಮಾಧ್ಯಮಕ್ಕೆ ಹೊಸ ಭಾಷ್ಯ ಬರೆದರು.

ಇದನ್ನೂ ಓದಿ: Phone Booth : ಟೆಲಿಫೋನ್‌ ಬೂತ್‌ ಬಗ್ಗೆ ನಿಮಗೆ ಗೊತ್ತಾ..? ಪಕ್ಷಿ ಸಂಕುಲ ನಾಶಕ್ಕೆ ಕಾರಣವಾಗಿದೆ ಆಧುನಿಕ ತಂತ್ರಜ್ಞಾನ

ಅಲೆಕ್ಸಾಂಡರ್ ಗ್ರಹಾಂ ಬೆಲ್ 1876ರ ಮಾರ್ಚ್ 10ರಂದು ಬೆಲ್ ಪಕ್ಕದ ಕೋಣೆಯಲ್ಲಿದ್ದ ತನ್ನ ಸ್ನೇಹಿತ ಥೋಮಸ್ ವಾಟ್ಸನ್ ನೋಡನೆ ಮೊದಲ ಬಾರಿಗೆ ದೂರವಾಣಿ ಮೂಲಕ ಮಾತನಾಡುವ ಮೂಲಕ ಟೆಲಿಫೋನ್ ಆವಿಷ್ಕಾರವಾಯಿತು. ನಂತರದ ದಿನಗಳಲ್ಲಿ ಇವರು ಈ ದೂರವಾಣಿಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದರು 1877ರಲ್ಲಿ ಟಿಲಿಫೋನ್ ಕಂಪನಿಯನ್ನು ಸ್ಥಾಪಿಸಿದರು.

ಟೆಲಿಫೋನ್​ಗಳನ್ನು ನೋಡಿದಾಗ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತವೆ. ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದ ಮಧ್ಯೆಯೂ ಆ ದಿನಗಳ ನೆನಪು ಕಾಡುತ್ತಿರುತ್ತವೆ. ಮತ್ತು ನಾವು ಹೊಸ ಹೊಸ ತಂತ್ರಜ್ಞಾನಗಳತ್ತ ಮಾಡುತ್ತ, ಇವುಗಳಿಗೆಲ್ಲ ಬುನಾದಿ ಹಾಕಿದವರನ್ನು ಮರೆಯುತ್ತಿರುವುದು ಖೇದರದ ಸಂಗತಿಯಾಗಿದೆ. ಒಬ್ಬ ವ್ಯಕ್ತಿಯ ಆವಿಷ್ಕಾರವು ಇಂದು ನಾವು ಆನಂದಿಸುವ ಎಲ್ಲದಕ್ಕೂ ಕಾರಣವಾಗಿದೆ ಎಂಬುದು ನಂಬಲಾಗದ ಸಂಗತಿ. ಆಗಿನ ಕಾಲದಲ್ಲಿ ಟೆಲಿಫೋನ್​ ಅತಿ ವೇಗದ ಸಂಪರ್ಕ ಸಾಧನವಾಗಿತ್ತು.

ರಾಷ್ಟ್ರೀಯ ಟೆಲಿಫೋನ್​ ದಿನದ ದಿನಾಂಕಗಳು

ರಾಷ್ಟ್ರೀಯ ಟೆಲಿಫೋನ್​ ದಿನದ ದಿನಾಂಕಗಳು
ವರ್ಷ ದಿನಾಂಕ ದಿನ
2023 ಏಪ್ರಿಲ್​ 25 ಮಂಗಳವಾರ
2024 ಏಪ್ರಿಲ್​ 25 ಗುರುವಾರ
2025 ಏಪ್ರಿಲ್​ 25 ಶುಕ್ರವಾರ
2026 ಏಪ್ರಿಲ್​ 25 ಶನಿವಾರ
2027 ಏಪ್ರಿಲ್​ 25 ರವಿವಾರ

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:35 am, Tue, 25 April 23

Follow Us
ವಿವೇಕ ಬಿರಾದಾರ
ವಿವೇಕ ಬಿರಾದಾರ

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್