ಸುಟ್ಟ ಗಾಯಕ್ಕೆ ಟೂತ್ ಪೇಸ್ಟ್ ಹಚ್ಚುವ ಅಭ್ಯಾಸವಿದೆಯೇ, ಇಂದೇ ನಿಲ್ಲಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 21, 2024 | 1:01 PM

ಅಡುಗೆ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರು ಸ್ವಲ್ಪ ಎಚ್ಚರ ತಪ್ಪಿದರೂ ಕೈ ಸುಟ್ಟುಕೊಳ್ಳುತ್ತಾರೆ. ಬಿಸಿ ಬಿಸಿ ಬಾಣಲೆ ಅಥವಾ ಒಲೆಯ ಬೆಂಕಿಯೂ ಸರಿಸಲು ಹೋಗಿ ಸುಟ್ಟ ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಗಾಯವಾದ ತಕ್ಷಣವೇ ಮನೆ ಮದ್ದಿನ ಮೊರೆ ಹೋಗುತ್ತಾರೆ. ಹೆಚ್ಚಿನವರು ಸುಟ್ಟ ಗಾಯಕ್ಕೆ ಪೇಸ್ಟ್ ಹಚ್ಚುತ್ತಾರೆ. ಆದರೆ ಬೆಂಕಿ ತಾಗಿಸಿಕೊಂಡು ಗಾಯವಾದಾಗ ಪೇಸ್ಟ್ ಹಚ್ಚುವ ಕೆಲಸವನ್ನು ಯಾವತ್ತೂ ಮಾಡಲೇಬಾರದು. ಒಳಿತಿಗಿಂತ ಇದರಿಂದ ಆಗುವ ಕೆಡುಕು ಹೆಚ್ಚು.

ಸುಟ್ಟ ಗಾಯಕ್ಕೆ ಟೂತ್ ಪೇಸ್ಟ್ ಹಚ್ಚುವ ಅಭ್ಯಾಸವಿದೆಯೇ, ಇಂದೇ ನಿಲ್ಲಿಸಿ
GettyImages
Follow us on

ಅಡುಗೆ ಮನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಬಿಸಿ ತಾಗಿಸಿಕೊಂಡು ಉರಿ ಅನುಭವವಾಗಿರುತ್ತದೆ. ಕೆಲವೊಮ್ಮೆ ಆತುರದಲ್ಲಿ ಕೆಲಸ ಮಾಡುತ್ತಿರುವಾಗಲೇ ಕೈಗೆ ಬೆಂಕಿ ತಾಗುತ್ತದೆ. ಇಲ್ಲದಿದ್ದರೆ ಬಿಸಿ ಬಿಸಿ ಪದಾರ್ಥಗಳು ಕೈ ತಪ್ಪಿ ಮೈ ಮೇಲೆ ಚೆಲ್ಲಿಕೊಳ್ಳುವುದಿದೆ. ಈ ವೇಳೆಯಲ್ಲಿ ವಿಪರೀತ ಉರಿ ಅನುಭವದ ನಡುವೆ ಗಾಯ ಪ್ರಮಾಣ ಎಷ್ಟಿದೆ ಎಂದು ನೋಡಲು ಹೋಗುವುದಿಲ್ಲ. ಮೊದಲು ಟೂತ್ ಪೇಸ್ಟ್ ಅನ್ನು ಗಾಯಕ್ಕೆ ಹಚ್ಚಿಕೊಂಡು ಬಿಡುತ್ತೇವೆ. ಆದರೆ ಆ ಕ್ಷಣಕ್ಕೆ ತಂಪಿನ ಅನುಭವಾಗಬಹುದು. ಕೆಲವೊಮ್ಮೆ ಈ ಮನೆ ಮದ್ದುಗಳಿಂದ ಗಂಭೀರವಾದ ಪರಿಣಾಮ ಬೀರಬಹುದು.

ಗಾಯಕ್ಕೆ ಟೂತ್ ಪೇಸ್ಟ್ ಬಳಸಲೇ ಬೇಡಿ

ಸುಟ್ಟ ಗಾಯಕ್ಕೆ ತಕ್ಷಣವೇ ಟೂತ್ ಪೇಸ್ಟ್ ಹಚ್ಚುವುದರಿಂದ ಆ ವೇಳೆ ತಂಪಿನ ಅನುಭವವಾಗಿ, ನೋವಿನ ತೀವ್ರತೆಯೂ ಕಡಿಮೆಯಾಗಬಹುದು. ಆದರೆ ಗಾಯಕ್ಕೆ ಟೂತ್ ಪೇಸ್ಟ್ ಹಚ್ಚಿದರೆ ಚರ್ಮಕ್ಕೆ ಹಾನಿಯಾಗುವುದಂತೂ ಖಚಿತ. ಇದರಲ್ಲಿ ಸೋಡಿಯಂ ಫ್ಲೋರೈಡ್ ಎಂಬ ಸಂಯುಕ್ತವು ಇದ್ದು, ಚರ್ಮಕ್ಕೆ ಹಾನಿಕಾರಕವಾಗಿದೆ.

ಸುಟ್ಟ ಗಾಯಕ್ಕೆ ಆ ತಕ್ಷಣಕ್ಕೆ ಪ್ರಥಮ ಚಿಕಿತ್ಸೆ ಹೀಗಿರಲಿ

* ಸುಟ್ಟಗಾಯವಾದಾಗ ಮೊದಲು ತಣ್ಣಗಿನ ನೀರು ಹಾಕಿ ಇದರಿಂದ ಸ್ವಲ್ಪ ಮಟ್ಟಗಿನ ಉರಿ ಕಡಿಮೆಯಾಗುತ್ತದೆ.

* ಗುಳ್ಳೆಗಳು ಬಾರದೆ ಇರಲು ಜೇನುತುಪ್ಪ ಲೇಪಿಸುವುದನ್ನು ಮರೆಯಬೇಡಿ.

* ಬ್ಯಾಂಡೇಜ್ ಸುತ್ತಬೇಡಿ. ಆದಷ್ಟು ಗಾಳಿಯಾಡಲು ಬಿಡುವುದು ಒಳ್ಳೆಯದು.

* ಬಿಸಿಲಿಗೆ ಒಡ್ಡಿಕೊಳ್ಳುವುದು ಬೇಡ, ಇದರಿಂದ ಉರಿಯ ತೀವ್ರತೆಯೂ ಹೆಚ್ಚಾಗಬಹುದು.

* ಗಾಯವು ದೊಡ್ಡ ಪ್ರಮಾಣದಲ್ಲಿದ್ದರೆ ತಕ್ಷಣವೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಅಗತ್ಯ.

ಸುಟ್ಟ ಗಾಯದ ಕಲೆ ನಿವಾರಣೆಗೆ ಮನೆಮದ್ದುಗಳು

* ಸುಟ್ಟ ಗಾಯಕ್ಕೆ ಕೊಬ್ಬರಿ ಎಣ್ಣೆ ಲೇಪಿಸುತ್ತ ಬಂದರೆ ಚರ್ಮವು ಮೊದಲಿನಂತೆ ಆಗುತ್ತದೆ.

* ಬೆಂಕಿಯಿಂದಾದ ಗಾಯಕ್ಕೆ ಜೇನು ತುಪ್ಪ ಹಚ್ಚುವುದರಿಂದ ಉರಿ ಕಡಿಮೆಯಾಗಿ ಗುಳ್ಳೆಗಳಾಗುವುದಿಲ್ಲ.

* ಲೋಳೆರಸವನ್ನು ಲೇಪಿಸುವುದರಿಂದ ಉರಿ ಕಡಿಮೆಗೊಳಿಸಿ ಚರ್ಮವು ಮೊದಲಿನಬಣ್ಣಕ್ಕೆ ಬರುತ್ತದೆ.

ಇದನ್ನೂ ಓದಿ: ಕಿರಿಕಿರಿಯನ್ನುಂಟು ಮಾಡುವ ಬಾಯಿಹುಣ್ಣಿಗೆ ಹೇಳಿ ಗುಡ್ ಬೈ , ಇಲ್ಲಿದೆ ಸರಳ ಮನೆ ಮದ್ದು

* ಅಡುಗೆ ಸೋಡವನ್ನು ಹಚ್ಚುವುದರಿಂದ ಗುಳ್ಳೆ ಬರುವುದಿಲ್ಲ. ಗಾಯ ಬೇಗನೇ ಗುಣಮುಖವಾಗಿ ಹೊಸ ಚರ್ಮವು ಬರುತ್ತದೆ.

* ಪುದೀನಾ
ಎಲೆಯನ್ನು ರುಬ್ಬಿ ತೆಳುವಾದ ಹತ್ತಿ ಬಟ್ಟೆಗೆ ಹಾಕಿ ಸುಟ್ಟ ಗಾಯದ ಮೇಲೆ ಹಿಂಡಿದರೆ ಉರಿ ಕಡಿಮೆಯಾಗಿ ಗಾಯವು ಒಣಗುತ್ತದೆ. ಕಲೆಯೂ ನಿವಾರಣೆಯಾಗಿ ಚರ್ಮವು ಮೊದಲಿನಂತೆ ಆಗುತ್ತದೆ.

* ಬಾಳೆಹಣ್ಣಿನ ಸಿಪ್ಪೆಯನ್ನು ಸುಟ್ಟಗಾಯದ ಮೇಲೆ ಒತ್ತಿ ಹಿಡಿಯುವುದರಿಂದ ಗಾಯದ ಉರಿಯ ಪ್ರಮಾಣವು ಕಡಿಮೆಯಾಗಿ ಕಲೆಯೂ ನಿವಾರಣೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 12:36 pm, Wed, 21 February 24