
ಚಳಿಗಾಲದಲ್ಲಿ ಸೋಮಾರಿತನ (laziness), ಆಲಸ್ಯದ ಭಾವನೆ ಕಾಡುವುದು ತೀರಾ ಸಾಮಾನ್ಯ. ಅನೇಕರು ಬೆಳಗ್ಗೆ ಹಾಸಿಗೆಯಿಂದ ಏಳಲು ಕಷ್ಟಪಡುತ್ತಾರೆ. ಮತ್ತು ಇನ್ನೂ ಸ್ವಲ್ಪ ಹೊತ್ತು ಮಲಗುತ್ತಾರೆ. ಈ ಸೋಮಾರಿತನದಿಂದಾಗಿ ದಿನವಿಡೀ ಆಲಸ್ಯ ಇರುತ್ತದೆ. ಈ ಸೋಮಾರಿತನ ನಿಮ್ಮ ದೈನಂದಿನ ದಿನಚರಿ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ದಿನದ ಕೆಲಸವು ಕೂಡ ಸರಿಯಾಗಿ ಸಾಗುವುದಿಲ್ಲ. ಆದ್ದರಿಂದ, ಈ ಚಳಿಗಾಲದಲ್ಲಿ ಸೋಮಾರಿತನದಿಂದ ದೂರವಿರಲು ಮತ್ತು ದಿನವಿಡೀ ಸಕ್ರಿಯವಾಗಿರಲು ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಳಿಗ್ಗೆ ಬೇಗ ಎಳುವುದು: ಎಷ್ಟೇ ಚಳಿ ಇದ್ದರೂ ಸಹ ಬೆಳಿಗ್ಗೆ 6 ಗಂಟೆಗೆ ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮನ್ನು ಆರೋಗ್ಯವಾಗಿಡಲು ಮತ್ತು ನಿಮ್ಮ ಮನಸ್ಸನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ, ಬೇಗನೆ ಎದ್ದ ನಂತರ, ನೀವು ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಈ ಅಭ್ಯಾಸವು ಖಂಡಿತವಾಗಿ ಈ ಚಳಿಗಾಲದಲ್ಲಿ ನೀವು ದಿನವಿಡೀ ಸಕ್ರಿಯವಾಗಿರಲು ಸಹಾಯ ಮಾಡುತ್ತದೆ.
ಧ್ಯಾನ ಮಾಡಿ: ಚಳಿಗಾಲದಲ್ಲಿ ಬೇಗ ಎದ್ದು 10 ರಿಂದ 15 ನಿಮಿಷಗಳ ಕಾಲ ಧ್ಯಾನ ಮಾಡಿ. ಧ್ಯಾನವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹೀಗೆ ಮಾಡುವುದರಿಂದ ಕೋಪವನ್ನು ನಿಯಂತ್ರಿಸಬಹುದು ಮತ್ತು ಮನಸ್ಥಿತಿಯನ್ನು ಸುಧಾರಿಸಬಹುದು. ಜೊತೆಗೆ ಈ ಧ್ಯಾನ ಈ ಚಳಿಗಾಲದಲ್ಲಿ ನೀವು ದಿನವಿಡೀ ಆಕ್ಟಿವ್ ಆಗಿರಲು ಸಹ ಸಹಾಯ ಮಾಡುತ್ತದೆ.
ವ್ಯಾಯಾಮ ಮಾಡಿ: ಚಳಿಗಾಲದಲ್ಲಿ ಬೆಳಿಗ್ಗೆ ಎದ್ದು ವ್ಯಾಯಾಮ ಮಾಡುವುದು ಕಷ್ಟ. ಆದರೆ ಪ್ರತಿದಿನ ವ್ಯಾಯಾಮ ಮಾಡಲು ಪ್ರಯತ್ನಿಸಿ. ಸ್ಟ್ರೆಚಿಂಗ್, ಯೋಗ ಅಥವಾ ಸಣ್ಣ ನಡಿಗೆಯಂತಹ ಲಘು ವ್ಯಾಯಾಮವು ದೇಹವನ್ನು ಸಕ್ರಿಯವಾಗಿ ಮತ್ತು ಶಕ್ತಿಯುತವಾಗಿಡಲು ಸಹಾಯ ಮಾಡುತ್ತದೆ. ಇದು ಸೋಮಾರಿತನವನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ.
ಸೂರ್ಯನ ಬೆಳಕಿಗೆ ಮೈ ಒಡ್ಡಿಕೊಳ್ಳಿ: ಚಳಿಗಾಲದಲ್ಲಿ ಸೂರ್ಯನ ಬೆಳಕಿಗೆ ಮೈ ಒಡ್ಡಿಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಅದು ದೇಹದಲ್ಲಿ ವಿಟಮಿನ್ ಡಿ ಉತ್ಪಾದಿಸಲು ಸಹಾಯ ಮಾಡುತ್ತದೆ, ಅಲ್ಲದೆ ಮೂಳೆಗಳು ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ. ಆದ್ದರಿಂದ, ಬೆಳಗ್ಗೆ 7 ರಿಂದ 8 ಗಂಟೆಯ ನಡುವೆ, ನೀವು ಹೊರಗೆ ಹೋಗಿ ಸೌಮ್ಯವಾದ ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಇದು ದೇಹಕ್ಕೆ ವಿಟಮಿನ್ ಡಿ ನೀಡುತ್ತದೆ ಮತ್ತು ದೇಹವನ್ನು ರಿಫ್ರೆಶ್ ಮಾಡಲು, ಸೋಮಾರಿತನವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಆರೋಗ್ಯವಂತರಾಗಿರಲು ಚಳಿಗಾಲದಲ್ಲಿ ನಿಮ್ಮ ಜೀವನಶೈಲಿ, ದಿನಚರಿ ಹೀಗಿದ್ದರೆ ಚೆಂದ
ಉಗುರು ಬೆಚ್ಚಗಿನ ನೀರು ಕುಡಿಯಿರಿ: ಚಳಿಗಾಲದಲ್ಲಿ, ಬೆಳಿಗ್ಗೆ ಎದ್ದ ನಂತರ ನೀವು ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ದೇಹದಲ್ಲಿ ಸಂಗ್ರಹವಾದ ವಿಷವನ್ನು ತೆಗೆದುಹಾಕಲು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಬೆಳಿಗ್ಗೆ ಪೌಷ್ಟಿಕ ಉಪಹಾರವನ್ನು ಸೇವಿಸಿ ಇದರಿಂದ ನಿಮ್ಮ ದೇಹವು ಇಡೀ ದಿನ ಆಕ್ಟಿವ್ ಆಗಿರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ