ವಜ್ರ ಖಚಿತ ಬ್ಯಾಗ್ ಹಿಡಿದು ಬಂದ ನೀತಾ ಅಂಬಾನಿ; ಈ ದುಬಾರಿ ಬ್ಯಾಗ್ ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ
ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ತಮ್ಮ ವಿಶಿಷ್ಟ ದುಬಾರಿ ಸ್ಟೈಲ್ ಸ್ಟೇಟ್ಮೆಂಟ್ ಮೂಲಕವೇ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರು ತೊಡುವ ಆಭರಣಗಳಿಂದ ಹಿಡಿದು ಬಟ್ಟೆಗಳವರೆಗೆ ಅವರ ಸ್ಟೈಲ್ ಸ್ಟೇಟ್ಮೆಂಟ್ ಫ್ಯಾಶನ್ ಪ್ರಿಯರನ್ನು ಬೆರಗಾಗಿಸುವುದರಲ್ಲಿ ಎರಡು ಮಾತಿಲ್ಲ. ಇದೀಗ ಅವರು ತಮ್ಮ ದುಬಾರಿ ಬ್ಯಾಗ್ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ದೀಪಾವಳಿ ಪಾರ್ಟಿಗೆ ಅವರು ವಜ್ರದ ಹರಳುಗಳ ಹೊದಿಕೆಯಿರುವ ಮಿನಿ ಬ್ಯಾಗ್ ಹಿಡಿದು ಬಂದಿದ್ದಿದ್ದರು. ಈ ಬ್ಯಾಗ್ ಇದೀಗ ಫ್ಯಾಶನ್ ಪ್ರಿಯರ ಕಣ್ಣು ಕುಕ್ಕಿದೆ.

ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ (Nita Ambani) ಪರೋಪಕಾರದ ಜೊತೆಗೆ ತಮ್ಮ ಸ್ಟೈಲ್ ಸ್ಟೇಟ್ಮೆಂಟ್ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ತಮ್ಮ ಉಡುಗೆ, ಆಭರಣ, ಬ್ಯಾಗ್ ಸೇರಿದಂತೆ ತಮ್ಮ ವಿಭಿನ್ನ, ದುಬಾರಿ ಫ್ಯಾಶನ್ ಸೆನ್ಸ್ ಮೂಲಕವೇ ಎಲ್ಲರ ಗಮನ ಸೆಳೆಯುತ್ತಾರೆ. ಅದೇ ರೀತಿ ಇದೀಗ ನೀತಾ ಅಂಬಾನಿ ತಮ್ಮ ಬ್ಯಾಗ್ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ದೀಪಾವಳಿ ಪಾರ್ಟಿಗೆ ತಮ್ಮ ಕಿರಿ ಸೊಸೆ ರಾಧಿಕಾ ಮರ್ಚೆಂಟ್ ಜೊತೆ ಆಗಮಿಸಿದ್ದ ಸಂದರ್ಭದಲ್ಲಿ ಕೈಯಲ್ಲೊಂದು ವಜ್ರ ಖಚಿತ ಮಿನಿ ಬ್ಯಾಗ್ ಹಿಡಿದಿದ್ದರು. ಈ ಬ್ಯಾಗ್ ಇದೀಗ ಎಲ್ಲರ ಕಣ್ಣು ಕುಕ್ಕಿದ್ದು, ಇದರ ಬೆಲೆ ಎಷ್ಟಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ದುಬಾರಿ ಬ್ಯಾಗ್ ಸ್ಪೆಷಾಲಿಟಿ ಏನು? ಬೆಲೆ ಎಷ್ಟು? ಈ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ವಜ್ರ ಖಚಿತ ಬ್ಯಾಗ್ ಹಿಡಿದು ಬಂದ ನೀತಾ ಅಂಬಾನಿ:
ಅಕ್ಟೋಬರ್ 12 ರಂದು ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ನೀತಾ ಅಂಬಾನಿ ತನ್ನ ಕಿರಿ ಸೊಸೆ ರಾಧಿಕಾ ಮರ್ಚೆಂಟ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಈ ಒಂದು ಪಾರ್ಟಿಯಲ್ಲಿ ನೀತಾ ಅಂಬಾನಿ ಬೆಳ್ಳಿ ಬಣ್ಣದ ಸೀಕ್ವಿನ್ ಚೆವ್ರಾನ್ ಸೀರೆ ಧರಿಸಿದ್ದರು. ಜೊತೆಗೆ ಕೈಯಲ್ಲೊಂದು $2 ಮಿಲಿಯನ್ ಮೌಲ್ಯದ ಹರ್ಮಿಸ್ ಸ್ಯಾಕ್ ಬಿಜೌ ಬಿರ್ಕಿನ್ ಬ್ಯಾಗ್ ಹಿಡಿದು ಎಲ್ಲರ ಗಮನ ಸೆಳೆದಿದ್ದರು.
ವಿಶ್ವದ ದುಬಾರಿ ಬ್ಯಾಗ್ ಇದು:
ವರದಿಗಳ ಪ್ರಕಾರ, ಈ ಸ್ಯಾಕ್ ಬಿಜೌ ಬ್ಯಾಗ್ ಅತ್ಯಂತ ಬೆಲೆಬಾಳುವ ಹರ್ಮಿಸ್ ಬಿರ್ಕಿನ್ ಬ್ರ್ಯಾಂಡ್‌ನ ಸ್ಪೆಷಲ್ ಎಡಿಷನ್ ಮಿನಿಯೇಚರ್ ಬ್ಯಾಗ್ ಆಗಿದೆ. ಈವರೆ ಕೇವಲ ಮೂರು ಸ್ಯಾಕ್ ಬಿಜೌ ಬಿರ್ಕಿನ್ ಬ್ಯಾಗ್‌ಗಳನ್ನು ತಯಾರಿಸಲಾಗಿದ್ದು, ಈ ಪ್ರತಿ ಬ್ಯಾಗ್‌ನ ಬೆಲೆ $2 ಮಿಲಿಯನ್ ಡಾಲರ್ ಅಂದರೆ ಸುಮಾರು 17 ಕೋಟಿ ರೂ.
ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ನಮ್ಮ ಭಾರತ ಮಾತ್ರವಲ್ಲ ಈ ದೇಶಗಳಲ್ಲೂ ಬೆಳಕಿನ ಹಬ್ಬ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ
ಈ ಬ್ಯಾಗ್ ವಿಶೇಷತೆಗಳೇನು?
ಈ ದುಬಾರಿ ಬ್ಯಾಗನ್ನು 18 ಕ್ಯಾರೆಟ್ ವೈಟ್ ಗೋಲ್ಡ್‌ನಿಂದ ತಯಾರಿಸಲಾಗಿದ್ದು, ಇದರಲ್ಲಿ 3,025 ವಜ್ರಗಳಿವೆ. ಈ ಬ್ಯಾಗ್‌ನ ಫ್ಲಾಪ್ ಮೊಸಳೆಯ ಚರ್ಮದಂತೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಈ ಬ್ಯಾಗ್ ಫ್ಲಾಪ್, ಹ್ಯಾಂಡಲ್‌ಗಳು, ಲಾಕ್ ಮತ್ತು ಕ್ಲೋಚೆಟ್ ಒಳಗೊಂಡಿದೆ. ಈ ವಿಶೇಷ ಬ್ಯಾಗನ್ನು ಹರ್ಮಿಸ್‌ನ ಸೃಜನಶೀಲ ನಿರ್ದೇಶಕ ಪಿಯರೆ ಹಾರ್ಡಿ ವಿನ್ಯಾಸಗೊಳಿಸಿದ್ದಾರೆ. ವಿಶ್ವದಲ್ಲಿ ಕೇವಲ ಮೂರೇ ಮೂರು ಈ ಬ್ಯಾಗ್ ಇದ್ದು, ಅದರಲ್ಲಿ ಒಂದು ನೀತಾ ಅಂಬಾನಿ ಬಳಿಯಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




