ಕೆಲವರನ್ನು ಕಂಡಾಕ್ಷಣ ನಾಯಿಗಳು ಹೆಚ್ಚು ಬೊಗಳುವುದೇಕೆ?

ನಾಯಿಗಳು ಕೆಲವರನ್ನು ಕಂಡಾಕ್ಷಣ ಹೆಚ್ಚಾಗಿ ಬೊಗಳುವುದೇಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಬಹುದು. ಕೆಲವೊಮ್ಮೆ ಮಲಗಿರುವ ನಾಯಿ ಏಕಾ ಏಕಿ ಎಚ್ಚರಗೊಂಡು ಕೂಗಲು ಶುರು ಮಾಡುತ್ತವೆ. ನಾಯಿಗಳು ಎಲ್ಲರನ್ನು ನೋಡಿದರೆ ಬೊಗಳುವುದಿಲ್ಲ. ಕಸ ಗುಡಿಸುವವರು, ಚಿಂದಿ ಆಯುವವರು, ಕುಡಿದು ತೂರಾಡುವವರು, ಭಿಕ್ಷುಕರು ಹೀಗೆ ಕೆಲವರನ್ನು ನೋಡದರೆ ವಿಪರೀತವಾಗಿ ಬೊಗಳುತ್ತವೆ. ಅವರು ಅಲ್ಲಿಂದ ಕಣ್ಮರೆಯಾಗುವವರೆಗೂ ಕೂಗುತ್ತಲೇ ಇರುತ್ತವೆ ಇದಕ್ಕೆ ಕಾರಣಗಳು ಹೀಗಿವೆ.

ಕೆಲವರನ್ನು ಕಂಡಾಕ್ಷಣ ನಾಯಿಗಳು  ಹೆಚ್ಚು ಬೊಗಳುವುದೇಕೆ?
ನಾಯಿ
Image Credit source: K9 Electronics

Updated on: May 06, 2025 | 9:26 AM

ನಾಯಿ(Dog)ಗಳು ಮನುಷ್ಯನ ಅತ್ಯುತ್ತಮ ಸ್ನೇಹಿತ, ಹಾಗೆಂದ ಮಾತ್ರಕ್ಕೆ ತನ್ನ ಮಾಲೀಕನನ್ನು ಬಿಟ್ಟು ಎಲ್ಲರನ್ನೂ ಪ್ರೀತಿಸುವುದಿಲ್ಲ, ಅದು ಕೂಡ ಮನುಷ್ಯನಂತೆಯೇ ಚ್ಯೂಸಿ. ಇನ್ನು ಬೀದಿ ನಾಯಿಗಳು ಕೂಡ ಎಲ್ಲರನ್ನೂ ಫ್ರೆಂಡ್ ಮಾಡಿಕೊಳ್ಳುವುದಿಲ್ಲ, ಹಾಗೆಯೇ ಎಲ್ಲರನ್ನು ನೋಡಿ ಬೊಗಳುವುದಿಲ್ಲ.  ಆದರೆ ಕೆಲವೇ ಕೆಲವರನ್ನು ನೋಡಿ ಅವರು ಕಣ್ಮರೆಯಾಗುವವರೆಗೂ ಕೂಗುತ್ತವೆ ಏಕೆ?.

ನಾಯಿಗಳು ತಾನಿದ್ದ ಮನೆಯನ್ನು ಕಾಯುವುದು ಮಾತ್ರವಲ್ಲದೆ ಕುಟುಂಬದ ಸದಸ್ಯನಂತೆಯೇ ಪ್ರೀತಿಸುತ್ತವೆ. ನಾಯಿಗಳು ಎಲ್ಲರನ್ನು ನೋಡಿದರೆ ಬೊಗಳುವುದಿಲ್ಲ. ಕಸ ಗುಡಿಸುವವರು, ಚಿಂದಿ ಆಯುವವರು, ಕುಡಿದು ತೂರಾಡುವವರು, ಭಿಕ್ಷುಕರು ಹೀಗೆ ಕೆಲವರನ್ನು ನೋಡದರೆ ವಿಪರೀತವಾಗಿ ಬೊಗಳುತ್ತವೆ. ಅವರು ಅಲ್ಲಿಂದ ಕಣ್ಮರೆಯಾಗುವವರೆಗೂ ಕೂಗುತ್ತಲೇ ಇರುತ್ತವೆ.

ನಾಯಿಗಳು ನಿಮ್ಮ ಮುಖಭಾವವನ್ನು ಅರ್ಥ ಮಾಡಿಕೊಳ್ಳುತ್ತವೆ
ನಾಯಿಗಳು ಮಾನವನ ದೇಹದ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತವೆ. ನಾಯಿಗಳನ್ನು ಯಾರಾದರೂ ದಿಟ್ಟಿಸಿ ನೋಡಿದರೆ, ಅಥವಾ ಅವರಿಂದ ತಮಗೆ ಏನಾದರೂ ತೊಂದರೆ ಇದೆ ಎಂದು ಭಾಸವಾದ ತಕ್ಷಣ ಅವು ಕೂಗಲು ಶುರು ಮಾಡುತ್ತವೆ. ಇನ್ನೂ ಕೆಲವರು ಪ್ರೀತಿಯಿಂದ ಅದರ ಹತ್ತಿರ ಹೋಗಿ ತಲೆಯ ಮೇಲೆ ಕೈಯಾಡಿಸಿದರೆ ಬಾಲ ಕುಣಿಸುತ್ತಾ ಸುಮ್ಮನಿರುತ್ತವೆ. ಅದಕ್ಕೆ ಪರಿಚಿತರಾಗಿರಬೇಕೆಂದೇನಿಲ್ಲ.

ಇದನ್ನೂ ಓದಿ
ಪ್ರೇಮ ವಿವಾಹ ಅಥವಾ ಕೋರ್ಟ್‌ ಮ್ಯಾರೇಜ್‌ ಆಗಲು ಈ ದಾಖಲೆಗಳು ಬೇಕೇ ಬೇಕು
ಪರಶುರಾಮರ ಬಗೆಗಿನ ಆಸಕ್ತಿದಾಯಕ ಕಥೆಗಳು
ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸುವ ಉದ್ದೇಶವೇನು?
ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ನಾಯಿಗಳಿಗೆ ಮನುಷ್ಯರಿಗಿಂತ ಹಲವು ಪಟ್ಟು ಹೆಚ್ಚಿನ ವಾಸನೆಯ ಪ್ರಜ್ಞೆ ಇರುತ್ತದೆ. ಅವು ಪ್ರತಿಯೊಬ್ಬ ವ್ಯಕ್ತಿಯ ವಿಶಿಷ್ಟ ವಾಸನೆಯನ್ನು ಗುರುತಿಸುತ್ತವೆ. ಯಾರೊಬ್ಬರ ಬಟ್ಟೆಗಳು ವಿಚಿತ್ರವಾದ ಅಥವಾ ಬಲವಾದ ವಾಸನೆಯನ್ನು ಹೊಂದಿದ್ದರೆ ನಾಯಿಗಳು ಬೊಗುಳಲು ಶುರು ಮಾಡುತ್ತವೆ.

ಮತ್ತಷ್ಟು ಓದಿ: ಹಲ್ಲಿ ಕಚ್ಚಿದ್ರೆ ಏನ್​​ ಮಾಡಬೇಕು? ಇದರಿಂದ ಮನುಷ್ಯ ಸಾಯುತ್ತಾನಾ?

ಹಿಂದಿನ ಘಟನೆಗಳು ಸಹ ಪ್ರಚೋದಿಸಬಹುದು
ಕೆಲವೊಮ್ಮೆ ಯಾವಾಗಲೂ ಯಾವುದೋ ಭಿಕ್ಷುಕ ಅಥವಾ ಇನ್ಯಾವು ದಾರಿಹೋಕ ನಾಯಿಯನ್ನು ಗದರಿಸಿರಬಹುದು, ಅಥವಾ ಯಾವುದೋ ಕಾರು ನಾಯಿಯ ದೇಹದ ಯಾವುದೇ ಭಾಗದ ಮೇಲೆ ಹತ್ತಿರಬಹುದು, ಆ ನಾಯಿಗಳು ಯಾವುದೇ ಕಾರನ್ನು ಕಂಡಾಕ್ಷಣ ಕೂಗುತ್ತಾ ಅದರ ಹಿಂದೆ ಹೋಗುತ್ತವೆ.

ನಾಯಿಯು ಮನುಷ್ಯನ ಭಾವನೆ ಅರ್ಥ ಮಾಡಿಕೊಳ್ಳುತ್ತವೆ
ನಾಯಿಗಳು ವಾಸನೆಯನ್ನು ಮಾತ್ರವಲ್ಲ, ಮಾನವ ಭಾವನೆಗಳನ್ನು ಸಹ ಗ್ರಹಿಸಬಲ್ಲವು. ಒಬ್ಬ ವ್ಯಕ್ತಿಯು ಭಯಭೀತರಾಗಿದ್ದಾಗ ತಾವೂ ಕೂಡ ಭಯ ಪಡುತ್ತವೆ. ಮತ್ತೊಂದೆಡೆ, ಆತ್ಮವಿಶ್ವಾಸ, ಶಾಂತ ವ್ಯಕ್ತಿ ಅವರಿಗೆ ಸುರಕ್ಷಿತ ಎಂದು ತೋರುತ್ತದೆ.

ತಾವಿರುವ ಪ್ರದೇಶವನ್ನು ಕಾಪಾಡಿಕೊಳ್ಳುತ್ತವೆ
ಬೀದಿ ನಾಯಿಗಳಿಗೂ ತನ್ನದೇ ಆದ ವ್ಯಾಪ್ತಿಗಳಿರುತ್ತವೆ. ತಾವಿರುವ ಸುತ್ತಮುತ್ತಲಿನ ಪ್ರದೇಶವನ್ನು ತಮ್ಮದೇ ಎಂದು ಪರಿಗಣಿಸುತ್ವೆ. ಅಲ್ಲಿ ಯಾರೂ ಬರದಂತೆ ಎಚ್ಚರಿಕೆವಹಿಸುತ್ತವೆ. ಹಾಗಾಗಿಯೂ ಕೆಲವೊಮ್ಮೆ ಬೊಗಳುತ್ತವೆ.

ಅನಗತ್ಯವಾಗಿ ಬೊಗಳುವುದನ್ನು ನಿಲ್ಲಿಸುವುದು ಹೇಗೆ?
ನಾಯಿ ಮರಿಯಾಗಿರುವಾಗಲೇ ಬೇರೆ ಬೇರೆ ವ್ಯಕ್ತಿಗಳೊಂದಿಗೆ ಪರಿಚಯಿಸಿ, ಇದರಿಂದ ಅವು ಅಪರಿಚಿತರಿಗೆ ಹೆದರುವುದಿಲ್ಲ. ನಾಯಿಗಳಿಗೆ ಪ್ರೀತಿ ತೋರಿಸಿ. ನಾಯಿ ಅತಿಯಾಗಿ ಬೊಗಳುತ್ತಿದ್ದರೆ, ಅದಕ್ಕೆ ಆಟಿಕೆ ನೀಡಿ ಗಮನ ಬೇರೆಡೆ ಹರಿಯುವಂತೆ ಮಾಡಿ. ನೀವು ಕೆಲವು ಸೂಚನೆಗಳನ್ನು ಕಲಿಸಿ, ಆಗ ನೀವು ಏನು ಹೇಳುತ್ತಿದ್ದೀರ ಎಂದು ಅವು ಅರ್ಥ ಮಾಡಿಕೊಳ್ಳುತ್ತವೆ.

ಬೊಗಳುವುದು ನಾಯಿಯ ಸಂವಹನ ವಿಧಾನ
ಬೊಗಳುವುದು ನಾಯಿ ಮಾತನಾಡುವ ವಿಧಾನ, ಅವು ಭಯ, ಆತಂಕ, ಅಸ್ವಸ್ಥತೆ ಎಲ್ಲವನ್ನೂ ಬೊಗಳುವ ಮೂಲಕವೇ ಹೊರಹಾಕುತ್ತವೆ. ಅವುಗಳ ಸಂಕೇತಗಳನ್ನು ನೀವು ಕೂಡ ಅರ್ಥ ಮಾಡಿಕೊಳ್ಳಬೇಕು.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ