
ನಾಳೆ ಅಂತಾರಾಷ್ಟ್ರೀಯ ಯೋಗ ದಿನ (ಜೂ.21) (international yoga day 2025) ಆಚರಣೆ ಮಾಡಲಾಗುತ್ತದೆ. ಪ್ರತಿದಿನ ಯೋಗ ಮಾಡಬೇಕು, ಆದರೆ ನಾಳೆ ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಕೆಲವರಿಗೆ ಯೋಗ ಮಾಡಲು ಹೆದರಿಕೆ. ಯೋಗದ ಬಗ್ಗೆ ಯಾವುದೇ ತರಬೇತಿಗೆ ಹೋಗದೇ, ಕೆಲವೊಂದು ರೀಲ್ಸ್ ನೋಡಿ ಮಾಡುವುದು ಸರಿಯಾದ ಕ್ರಮವಲ್ಲ ಎಂಬ ಭಯ ಇರುತ್ತದೆ. ಇನ್ನು ಕೆಲವರಿಗೆ ಯೋಗ ಮಾಡುವುದು ಮಧ್ಯೆದಲ್ಲಿ ಬಿಟ್ಟರೆ ಎಲ್ಲಿ ಮತ್ತೆ ಸಮಸ್ಯೆ ಆಗುತ್ತದೆ ಎಂಬ ಭಯ ಕೂಡ ಇದೆ. ಯೋಗ ಮಾಡಲು ಯಾವುದೇ ತರಬೇತಿ ಬೇಕಿಲ್ಲ. ಯೋಗ ಮಾಡಲು ಮನೆಯ ಒಂದು ಮೂಲೆ, ಯೋಗ ಮ್ಯಾಟ್ ಸಾಕು, ಯಾವುದೇ ದುಬಾರಿ ಖರ್ಚುಗಳನ್ನು ಮಾಡಬೇಕಿಲ್ಲ. ಯೋಗ ಎನ್ನುವುದು ಎಲ್ಲಾ ವಯಸ್ಸಿನವರಿಗೆ ಮತ್ತು ಎಲ್ಲಾ ದೇಹಗಳಿಗೂ ಸುಲಭ ಮತ್ತು ಸೂಕ್ತವಾಗಿದೆ. ಈ ಅಂತಾರಾಷ್ಟ್ರೀಯ ಯೋಗ ದಿನದಂದು, ಆರಂಭದಲ್ಲಿ ಈ ಸುಲಭ ಯೋಗಗಳನ್ನು ಮಾಡಿ ಇಲ್ಲಿದೆ ನೋಡಿ.
ತಾಡಾಸನ (ಪರ್ವತ ಭಂಗಿ): ನೇರವಾಗಿ ನಿಂತುಕೊಳ್ಳಿ, ಪಾದಗಳನ್ನು ಒಟ್ಟಿಗೆ ಇರಿಸಿ, ತೋಳುಗಳನ್ನು ದೇಹಕ್ಕೆ ಹತ್ತಿರ ಇರಿಸಿ. ಭುಜಗಳನ್ನು ಸಡಿಲವಾಗಿ ಮತ್ತು ಕುತ್ತಿಗೆ ಎತ್ತಿ ಈ ಯೋಗವನ್ನು ಮಾಡಿ.
ಬಾಲಾಸನ (ಮಗುವಿನ ಭಂಗಿ): ಮೊಣಕಾಲುಗಳ ಮೇಲೆ ಕುಳಿತುಕೊಳ್ಳಿ, ನಿಮ್ಮ ಹಣೆಯನ್ನು ನೆಲದ ಮೇಲೆ ಇರಿಸಿ ಮತ್ತು ನಿಮ್ಮ ತೋಳುಗಳನ್ನು ಮುಂದಕ್ಕೆ ಚಾಚಿ.
ಮಾರ್ಜರಿ ಆಸನ : ಎರಡು ಕೈ ಹಾಗೂ ಕಾಲಿನ ಮೇಲೆ ನಿಂತು, ಉಸಿರನ್ನು ಒಳಗೆಳೆದುಕೊಳ್ಳುತ್ತಾ ಸೊಂಟವನ್ನು ಕೆಳಕ್ಕೆ ಇಳಿಸಿ ತಲೆಯನ್ನು ಮೇಲಕ್ಕೆತ್ತಿ ನಿಲ್ಲಬೇಕು. ಹಸುವಿನಂತಿರಬೇಕು. ನಂತರ ಉಸಿರನ್ನು ಬಿಡುತ್ತಾ ಸೊಂಟ ಮತ್ತು ಗಲ್ಲವನ್ನು ಎದೆಯೆತ್ತರಕ್ಕೆ ಎತ್ತಬೇಕು.
ಇದನ್ನಓದಿ; ವಿಶ್ವ ನಿರಾಶ್ರಿತರ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ತಿಳಿಯಿರಿ
• ಬೆನ್ನುಮೂಳೆಯನ್ನು ನಮ್ಯವಾಗಿಸುತ್ತದೆ
• ಕುತ್ತಿಗೆ ಮತ್ತು ಬೆನ್ನಿನಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ
• ನಿಮ್ಮ ಉಸಿರಾಟದ ಮೇಲೆ ಗಮನಹರಿಸಲು ನಿಮಗೆ ಕಲಿಸುತ್ತದೆ.
ಕೋಬ್ರಾ ಭಂಗಿ :ಹೊಟ್ಟೆಯ ಮೇಲೆ ಮಲಗಿ, ನಿಮ್ಮ ಕೈಗಳನ್ನು ನಿಮ್ಮ ಭುಜಗಳ ಕೆಳಗೆ ಇರಿಸಿ. ಉಸಿರಾಡುವಾಗ, ನಿಮ್ಮ ಎದೆಯನ್ನು ಮೇಲಕ್ಕೆತ್ತಿ, ಸೊಂಟವನ್ನು ನೆಲದ ಮೇಲೆ ಇರಿಸಿ.
• ಬೆನ್ನನ್ನು ಬಲಪಡಿಸುತ್ತದೆ
• ಮನೋಸ್ಥೈರ್ಯ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ
• ದೇಹದ ಭಂಗಿಯನ್ನು ಸುಧಾರಿಸುತ್ತದೆ.
ವೃಕ್ಷಾಸನ : ಒಂದು ಕಾಲಿನ ಮೇಲೆ ನಿಂತು, ಇನ್ನೊಂದು ಕಾಲಿನ ಹಿಮ್ಮಡಿಯನ್ನು ತೊಡೆಯ ಮೇಲೆ ಇರಿಸಿ, ಕೈಮುಗಿದು ಮೇಲಕ್ಕೆ ಎತ್ತಬೇಕು.
• ಸಮತೋಲನ ಮತ್ತು ಗಮನವನ್ನು ಸುಧಾರಿಸುತ್ತದೆ
• ಕಾಲುಗಳು ಮತ್ತು ಹೃದಯದ ಆರೋಗ್ಯವನ್ನು ಬಲಪಡಿಸುತ್ತದೆ
• ಮಾನಸಿಕ ಶಾಂತಿಯನ್ನು ಒದಗಿಸುತ್ತದೆ.
ಉತ್ತರಾಸನ: ನೇರವಾಗಿ ನಿಂತು ಉಸಿರು ಬಿಡುತ್ತಾ ಸೊಂಟದಿಂದ ಮುಂದಕ್ಕೆ ಬಾಗಿ. ನೀವು ಮೊಣಕಾಲುಗಳನ್ನು ಸ್ವಲ್ಪ ಬಗ್ಗಿಸಬಹುದು.
• ಸ್ನಾಯುಗಳು ಮತ್ತು ಬೆನ್ನುಮೂಳೆಯನ್ನು ಹಿಗ್ಗಿಸುತ್ತದೆ
• ಮಾನಸಿಕ ಆಯಾಸವನ್ನು ಕಡಿಮೆ ಮಾಡುತ್ತದೆ
• ನಮ್ಯತೆಯನ್ನು ಸುಧಾರಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Fri, 20 June 25