Road Trip Tips: ಬೇಸಿಗೆಯಲ್ಲಿ ರೋಡ್ ಟ್ರಿಪ್ ಹೋಗಲು ಯೋಜಿಸುತ್ತಿದ್ದೀರಾ? ಈ ಸಲಹೆ ಪಾಲಿಸಿ
ಸುಗಮ ಮತ್ತು ಆನಂದದಾಯಕ ಪ್ರವಾಸವನ್ನು ಮಾಡಬೇಕೆಂಬುದುದು ಎಲ್ಲರ ಬಯಕೆ. ಈ ಬೇಸಿಗೆಯಲ್ಲಿ ರೋಡ್ ಟ್ರಿಪ್ ಹೋಗಲು ಯೋಜಿಸಿದ್ದೀರಾ, ಪ್ರವಾಸ ಹೋಗುವ ಮೊದಲು ನೀವು ಪಾಲಿಸಬೇಕಾದ ಅಗತ್ಯ ಸಲಹೆಗಳು ಇಲ್ಲಿವೆ.
ಹೆಚ್ಚಿನ ಜನರು ರೋಡ್ ಟ್ರಿಪ್ ಮಾಡಲು ಇಷ್ಟಪಡುತ್ತಾರೆ. ಹೊಸ ಸ್ಥಳಗಳನ್ನು ಅನ್ವೇಷಿಸಲು ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಅದ್ಭುತವಾದ ಕ್ಷಣಗಳನ್ನು ಕಳೆಯಲು ರೋಡ್‌ಟ್ರಿಪ್‌ಗಳು ಉತ್ತಮ ಮಾರ್ಗವಾಗಿದೆ. ಆದರೆ ಈ ರಸ್ತೆ ಪ್ರವಾಸನ್ನು ಮಾಡುವ ಮೊದಲು ಅಗತ್ಯ ಯೋಜನೆಗಳನ್ನು ರಚಿಸುವುದು ಮುಖ್ಯವಾಗಿರುತ್ತದೆ. ಸುಗಮ ಮತ್ತು ಆನಂದದಾಯಕ ಪ್ರವಾಸವನ್ನು ಕೈಗೊಳ್ಳಬೇಕೆಂದರೆ ಅದರ ಹಿಂದೆ ಒಂದು ಉತ್ತಮ ಯೋಜನೆಯ ಅಗತ್ಯವಿರುತ್ತದೆ. ನೀವು ಹೋಗಬೇಕಾದ ಸ್ಥಳ, ಮಾರ್ಗಗಳಿಂದ ಹಿಡಿದು ಅಗತ್ಯ ವಸ್ತುಗಳ ಪ್ಯಾಕಿಂಗ್ ಮಾಡುವುದನ್ನು ಯೋಜಿಸುವವರೆಗೆ ಈ ಕೆಲವು ಅಗತ್ಯ ಸಲಹೆಗಳನ್ನು ನೀವು ಪಾಲಿಸಬೇಕಾಗುತ್ತದೆ. ಹಾಪ್ ಎನ್ ಬಾಪ್ ನ ಸಂಸ್ಥಾಪಕರಾದ ಏಕ್ತಾ ಮೋಹನಾನಿ ಕಮ್ರಾ ಅವರು ಬೇಸಿಗೆಯ ಪ್ರವಾಸವನ್ನು ಯೋಜಿಸಲು ಸಹಾಯ ಮಾಡುವ ಐದು ಅಗತ್ಯ ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ನಿಮ್ಮ ಮಾರ್ಗವನ್ನು ಯೋಜಿಸಿ: ಈಗ ಇರುವ ಬೇಸಿಗೆ ಶಾಖದ ಪರಿಸ್ಥಿತಿಯನ್ನು ಪರಿಗಣಿಸಿ, ಯಾವ ಸ್ಥಳ ಪ್ರವಾಸಕ್ಕೆ ಯೋಗ್ಯವೆಂದು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಮಾರ್ಗವನ್ನು ಯೋಜಿಸಿ. ನೀವು ಸರಿಯಾದ ಮಾರ್ಗದಲ್ಲಿ ತೆರಳಲು ನಕ್ಷೆ ಅಥವಾ ಜಿಪಿಎಸ್ನ್ನು ಬಳಸಿ.
ನಿಮ್ಮ ವಾಹನವನ್ನು ಪರಿಶೀಲಿಸಿ: ನಿಮ್ಮ ರೋಡ್ ಟ್ರಿಪ್‌ನ್ನು ಪ್ರಾರಂಭಿಸುವ ಮೊದಲು, ನಿಮ್ಮ ವಾಹನವು ಉತ್ತಮ ಸ್ಥಿತಿಯಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸುರಕ್ಷಿತ ಮತ್ತು ಶಾಂತ ರೀತಿಯ ಪ್ರವಾಸಕ್ಕಾಗಿ ನಿಮ್ಮ ವಾಹನವನ್ನು ಸರ್ವಿಸ್ ಮಾಡಿ ಹಾಗೂ ಟೈರ್‌ಗಳು, ಬ್ರೇಕ್‌ಗಳು ಮತ್ತು ತೈಲವನ್ನು ಪರಿಶೀಲಿಸಿ.
ಇದನ್ನೂ ಓದಿ: ಸಕ್ಕರೆ ಕಾಯಿಲೆ ವಿರುದ್ಧ ಜಾಗೃತಿ: 40 ದಿನಗಳಲ್ಲಿ ಕಾಶ್ಮೀರ-ಕನ್ಯಾಕುಮಾರಿ ಸೈಕಲ್ ಯಾತ್ರೆ ಮಾಡಿದ ಧಾರವಾಡದ ವ್ಯಕ್ತಿ
ಹೆಚ್ಚು ಜಾಗವಿರುವ ಪ್ಯಾಕೆಜ್ ಬ್ಯಾಗ್ ಇರಿಸಿ: ತಿಂಡಿ ಮತ್ತು ನೀರು ಸೇರಿದಂತೆ ನಿಮ್ಮ ಪ್ರವಾಸಕ್ಕೆ ಬೇಕಾದ ಎಲ್ಲ ಅಗತ್ಯ ವಸ್ತುಗಳ ಪಟ್ಟಿಯನ್ನು ಮಾಡಿ. ಪ್ರಯಾಣದಲ್ಲಿ ಯಾವುದೇ ಕಿರಿಕಿರಿಯನ್ನು ಉಂಟುಮಾಡದಂತೆ ಸ್ಮಾರ್ಟ್ ಪ್ಯಾಕ್ ಮಾಡಿ ಮತ್ತು ಆರಾಮದಾಯಕ ಬಟ್ಟೆಗಳನ್ನು ಧರಿಸಿ.
ಬಹು ಚಾಲಕರು: ಪ್ರಯಾಣದಲ್ಲಿ ವಿಳಂಬ ಮತ್ತು ದೀರ್ಘಾವಧಿಯ ನಿಲುಗಡೆಯನ್ನು ತಪ್ಪಿಸಲು ಕನಿಷ್ಟ ಇಬ್ಬರು ವ್ಯಕ್ತಿಗಳಿಗಾದರೂ ಡ್ರೈವಿಂಗ್ ಗೊತ್ತಿರಬೇಕು. ಇದರಿಂದ ಒಬ್ಬ ಡ್ರೈವ್ ಮಾಡುವಾಗ ಇನ್ನೊಬ್ಬ ವಿಶ್ರಾಂತಿ ಪಡೆಯಬಹುದು.
ಬೇಗ ಪ್ರಯಾಣಿಸಿ: ಶಾಖದ ಹೊಡೆತದಿಂದ ತಪ್ಪಿಸಲು ಬೆಳಗ್ಗೆ ಬೇಗನೆ ನಿಮ್ಮ ಪ್ರಯಾಣವನ್ನು ಆರಂಭಿಸಬೇಕು. ಇದರಿಂದ ನೀವು ನಿಮ್ಮ ಪ್ರವಾಸದ ಸ್ಥಳಕ್ಕೆ ಬೇಗ ತಲುಪುವುದರ ಜೊತೆಗೆ ಬೇಸಿಗೆ ಬಳಲಿಕೆಯ ಅಪಾಯವು ನಿಮಗೆ ಇರುವುದಿಲ್ಲ.
Published On - 6:49 pm, Sat, 8 April 23