Banana Stem Chat : ಸಂಜೆ ಕಾಫಿ ಜೊತೆಗೆ ಬಾಳೆದಿಂಡಿನ ಚಾಟ್ಸ್, ಇಲ್ಲಿದೆ ರೆಸಿಪಿ

ಸುರಿಯುವ ಮಳೆ ಚಾಟ್ಸ್ ಏನಾದರೂ ತಿನ್ನಬೇಕು ಅನಿಸುವುದು ಸಹಜ. ಈಗಾಗಲೇ ವಿವಿಧ ಬಗೆಯ ಚಾಟ್ಸ್ ಗಳು ಲಭ್ಯವಿದ್ದು, ಆದರೆ ಬಾಳೆದಿಂಡಿನ ಚಾಟ್ ಮನೆಯಲ್ಲೇ ಮಾಡಬಹುದು. ಇದು ಆರೋಗ್ಯಕ್ಕೂ ಹಿತಕರ ಮಾತ್ರವಲ್ಲದೆ, ಬಾಯಿಗೂ ರುಚಿಕರ. ಈ ಕೆಲವು ಐಟಂ ಗಳಿದ್ದರೆ ಸಾಕು, ಮನೆಯಲ್ಲೇ ಆರೋಗ್ಯಕರವಾದ ಬಾಳೆದಿಂಡಿನ ಈ ಡಿಫರೆಂಟ್ ಚಾಟ್ಸ್ ಮಾಡಿ ಸವಿಯಬಹುದು.

Banana Stem Chat : ಸಂಜೆ ಕಾಫಿ ಜೊತೆಗೆ ಬಾಳೆದಿಂಡಿನ ಚಾಟ್ಸ್, ಇಲ್ಲಿದೆ ರೆಸಿಪಿ
ಬಾಳೆದಿಂಡಿನ ಚಾಟ್ಸ್
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 09, 2024 | 5:00 PM

ಬಾಳೆಹಣ್ಣು ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಬಾಳೆ ಗಿಡದ ಪ್ರತಿಯೊಂದು ಭಾಗವು ಬಹಳಷ್ಟು ಪ್ರಯೋಜನಕಾರಿಯಾಗಿದೆ. ಅದರಲ್ಲಿಯೂ ಈ ಬಾಳೆ ದಿಂಡಿನ ಪ್ರಯೋಜನವನ್ನು ತಿಳಿದವರೇ ಬಲ್ಲರು. ಕಲ್ಲನ್ನು ಕರಗಿಸುವ ಶಕ್ತಿಯಿರುವ ಈ ಬಾಳೆದಿಂಡನ್ನು ನಮ್ಮ ಹಿರಿಯರು ಅನೇಕ ರೋಗಗಳಿಗೆ ಮನೆ ಮದ್ದಾಗಿ ಬಳಸುತ್ತಿದ್ದರು. ಇದರಲ್ಲಿ ನಾರಿನಂಶ ಅಧಿಕವಾಗಿದ್ದು, ಪೊಟ್ಯಾಸಿಯಮ್, ಮೆಗ್ನೀಸಿಯಮ್, ತಾಮ್ರದ ಕಬ್ಬಿಣದಂತಹ ಇತರ ಖನಿಜಗಳನ್ನು ಮತ್ತು ವಿಟಮಿನ್ ಸಿ ಮತ್ತು ಬಿ 6 ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

ರೋಗವನ್ನು ಗುಣ ಪಡಿಸುವ ಈ ಬಾಳೆದಿಂಡಿನಲ್ಲಿ ಮೊಸರು ಬಜ್ಜಿ, ಕೋಸಂಬರಿ, ಪಲ್ಯ ಮುಂತಾದ ಅಡುಗೆಗಳನ್ನು ಮಾಡಿ ಸವಿದರೂ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೀಗಾಗಿ ಈ ಕೆಲವು ಐಟಂಗಳಿದ್ದರೆ ಸಾಕು, ಮನೆಯಲ್ಲೇ ಸುಲಭವಾಗಿ ರುಚಿಕರವಾದ ಬಾಳೆದಿಂಡಿನ ಚಾಟ್ ಮಾಡಿ ಸವಿದರೆ ನಾಲಿಗೆಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಬಲು ಪ್ರಯೋಜನಕಾರಿ.

ಬಾಳೆದಿಂಡಿನ ಚಾಟ್ ಮಾಡಲು ಬೇಕಾಗುವ ಪದಾರ್ಥಗಳು

ಬಾಳೆದಿಂಡು, ಈರುಳ್ಳಿ, ಟೊಮೇಟೊ, ಕೊತ್ತಂಬರಿ ಸೊಪ್ಪು, ಗರಂ ಮಸಾಲ, ಅಚ್ಚಖಾರದಪುಡಿ, ಚಾಟ್‌ ಮಸಾಲ, ಸೇವ್‌, ಕ್ಯಾರೆಟ್‌ ತುರಿ, ನಿಂಬೆರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಇದನ್ನೂ ಓದಿ: ಇದು ಕರಾವಳಿ ಸ್ಟೈಲ್​​ನ ಪತ್ರೊಡೆ, ಇದನ್ನು ಮಾಡುವುದು ತುಂಬಾ ಸುಲಭ

ಬಾಳೆದಿಂಡಿನ ಚಾಟ್ ಮಾಡುವ ವಿಧಾನ

* ಸಣ್ಣಗೆ ಬಾಳೆದಿಂಡು, ಈರುಳ್ಳಿ, ಟೊಮೇಟೊ, ಕೊತ್ತಂಬರಿ ಸೊಪ್ಪನ್ನು ಕತ್ತರಿಸಿಟ್ಟುಕೊಳ್ಳಬೇಕು.

* ಈಗಾಗಲೇ ಈ ಕತ್ತರಿಸಿಟ್ಟ ಬಾಳೆದಿಂಡು, ಈರುಳ್ಳಿ, ಟೊಮೇಟೊ, ಕೊತ್ತಂಬರಿ ಸೊಪ್ಪಿಗೆ ಗರಂ ಮಸಾಲ, ಅಚ್ಚಖಾರದಪುಡಿ, ಚಾಟ್‌ ಮಸಾಲ, ಕ್ಯಾರೆಟ್‌ ತುರಿ, ಸೇವ್‌, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

* ಆ ಬಳಿಕ ಇದರ ಮೇಲೆ ನಿಂಬೆ ರಸವನ್ನು ಹಿಂಡಿದರೆ ಕಾಫಿ ಜೊತೆಗೆ ಬಾಳೆದಿಂಡಿನ ಚಾಟ್ ಸವಿಯಲು ಸಿದ್ಧ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್