AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Purnima 2024 : ಗುರು ಪೂರ್ಣಿಮೆಯಂದು ಗುರುವಿಗೆ ನೀಡಲು ಮನೆಯಲ್ಲೇ ಮಾಡಿ ಹಾಲಿನ ಪುಡಿ ಜಾಮೂನ್, ಇಲ್ಲಿದೆ ರೆಸಿಪಿ

ಗುರುವಿಲ್ಲದ ಬದುಕನ್ನು ಊಹೆ ಮಾಡುವುದು ಕಷ್ಟ. ಒಬ್ಬ ವ್ಯಕ್ತಿಗೆ ಸರಿಯಾದ ಮಾರ್ಗ ದರ್ಶನ ನೀಡಿ ಸನ್ಮಾರ್ಗದಲ್ಲಿ ನಡೆಸುವವರೇ ಈ ಗುರು. ಈ ಜಗತ್ತಿಗೆ ವೇದಗಳ ಜ್ಞಾನವನ್ನು ನೀಡಿದ ಮಹರ್ಷಿ ವ್ಯಾಸರ ಜನ್ಮವಾದದ್ದು ಆಷಾಢ ಮಾಸದ ಪೂರ್ಣಿಮೆಯಂದು ಹಾಗಾಗಿ ಈ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಈ ದಿನವು ಗುರುವಿಗೆ ಗೌರವ ಸಲ್ಲಿಸುವ ದಿನವಾಗಿ ನಿಮ್ಮ ಪ್ರೀತಿಯ ಗುರುವಿಗೆ ನಿಮ್ಮ ಕೈಯಾರೆ ಹಾಲಿನ ಪುಡಿಯ ಜಾಮೂನ್ ಮಾಡಿ ನೀಡಬಹುದು. ಹಾಗಾದ್ರೆ ಈ ರೆಸಿಪಿಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Guru Purnima 2024 : ಗುರು ಪೂರ್ಣಿಮೆಯಂದು ಗುರುವಿಗೆ ನೀಡಲು ಮನೆಯಲ್ಲೇ ಮಾಡಿ ಹಾಲಿನ ಪುಡಿ ಜಾಮೂನ್, ಇಲ್ಲಿದೆ ರೆಸಿಪಿ
Milk powder Jamun Image Credit source: Meta AI
ಸಾಯಿನಂದಾ
| Edited By: |

Updated on: Jul 19, 2024 | 6:04 PM

Share

ಗುರುವಿಲ್ಲದೇ ಅರಿವಿಲ್ಲ ಎಂಬ ಮಾತಿನಂತೆ ಗುರು ಪೂರ್ಣಿಮೆಯಂದು ಶಿಷ್ಯರು ಗುರುವಿಗೆ ಶಕ್ತಿಗೆ ಅನುಸಾರ ಗುರುದಕ್ಷಿಣೆಯನ್ನು ನೀಡಿ, ಗುರುವಿನ ಆಶೀರ್ವಾದವನ್ನು ಪಡೆಯುವುದಾಗಿದೆ. ಈ ಬಾರಿ ಜುಲೈ 21 ರಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತಿದ್ದು, ಗುರುವಿಗೆ ಏನಾದರೂ ಉಡುಗೊರೆಯನ್ನು ನೀಡಲು ಬಯಸಿದರೆ ನೀವೇ ನಿಮ್ಮ ಕೈಯಾರೆ ಸಿಹಿ ತಿಂಡಿಯನ್ನು ಮಾಡಿ ನೀಡಬಹುದು. ನಿಮ್ಮ ಈ ಪ್ರೀತಿಯನ್ನು ಕಂಡು ಶಿಕ್ಷಕರಿಗೆ ನಿಜಕ್ಕೂ ಖುಷಿಯಾಗುತ್ತದೆ.

ಹಾಲಿನ ಪುಡಿಯ ಜಾಮೂನ್ ಬೇಕಾಗುವ ಸಾಮಗ್ರಿಗಳು:

  • ಹಾಲಿನ ಪುಡಿ – 1/4 ಕೆಜಿ
  • ಬೆಣ್ಣೆ
  • ಬೇಕಿಂಗ್ ಸೋಡಾ
  • ಎರಡು ಚಮಚ ಮೈದಾ ಹಿಟ್ಟು
  • ಒಂದು ಕಪ್ ಹಾಲು
  • ರವೆ

ಪಾಕ ತಯಾರಿಸಲು ಬೇಕಾಗುವ ಸಾಮಗ್ರಿಗಳು:

  • ಎರಡು ಕಪ್ ನಷ್ಟು ಸಕ್ಕರೆ
  • ಏಲಕ್ಕಿ

ಇದನ್ನೂ ಓದಿ: ಶಾಲಾ ಕಾಲೇಜುಗಳಲ್ಲಿ ಗುರು ಪೂರ್ಣಿಮೆಯನ್ನು ವಿಭಿನ್ನ ರೀತಿ ಆಚರಿಸಲು ಇಲ್ಲಿದೆ ಸಲಹೆಗಳು

ಹಾಲಿನ ಪುಡಿ ಜಾಮೂನ್ ಮಾಡುವ ವಿಧಾನ:

  • ಮೊದಲಿಗೆ ಒಂದು ಪಾತ್ರೆಗೆ ಸಕ್ಕರೆ ಸೇರಿಸಿ ಒಂದು ಗ್ಲಾಸ್ ನೀರು, ಏಲಕ್ಕಿ ಹಾಕಿ ಪಾಕವನ್ನು ರೆಡಿಮಾಡಿಕೊಳ್ಳಿ.
  • ಮತ್ತೊಂದೆಡೆ ಒಂದು ಪಾತ್ರೆಗೆ ಹಾಲಿನ ಪುಡಿ, ರವೆ, ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಬೆಣ್ಣೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಈ ಮಿಶ್ರಣಕ್ಕೆ ಅಗತ್ಯವಿದ್ದಷ್ಟು ಹಾಲು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
  • ಈ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ಕೂಡಲೇ ಬಿಸಿ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕಂದು ಬಣ್ಣ ಬರುವರೆಗೂ ಕರಿಯಿರಿ.
  • ಕರಿದ ಈ ಜಾಮೂನುಗಳನ್ನು ಸಕ್ಕರೆ ಪಾಕಕ್ಕೆ ಹಾಕಿ ಮುಚ್ಚಳವನ್ನು ಮುಚ್ಚಿ, ಅರ್ಧ ಗಂಟೆಗಳ ಬಿಟ್ಟರೆ ಹಾಲಿನ ಪುಡಿ ಜಾಮೂನು ಸವಿಯಲು ಸಿದ್ಧ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More