AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Purnima 2024 : ಶಾಲಾ ಕಾಲೇಜುಗಳಲ್ಲಿ ಗುರು ಪೂರ್ಣಿಮೆಯನ್ನು ವಿಭಿನ್ನ ರೀತಿ ಆಚರಿಸಲು ಇಲ್ಲಿದೆ ಸಲಹೆಗಳು

ಗುರುವೆಂದರೆ ಕತ್ತಲೆಯಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವವನು ವ್ಯಕ್ತಿ. ಬದುಕಿಗೆ ಸರಿಯಾದ ದಾರಿ ತೋರಿದ ಗುರುಗಳಿಗೆ ಪ್ರಾಮಾಣಿಕ ಗೌರವ ಮತ್ತು ಕೃತಜ್ಞತೆಯನ್ನು ತೋರಿಸಲು ದಿನವೇ ಗುರು ಪೂರ್ಣಿಮೆ. ಹೀಗಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗುರುಪೂರ್ಣಿಮಾವನ್ನು ಆಚರಿಸಬಹುದಾಗಿದೆ. ಈ ಕುರಿತಾದ ಕೆಲವು ಸಲಹೆಗಳು ಇಲ್ಲಿದೆ.

Guru Purnima 2024 : ಶಾಲಾ ಕಾಲೇಜುಗಳಲ್ಲಿ ಗುರು ಪೂರ್ಣಿಮೆಯನ್ನು ವಿಭಿನ್ನ ರೀತಿ ಆಚರಿಸಲು ಇಲ್ಲಿದೆ ಸಲಹೆಗಳು
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jul 19, 2024 | 5:45 PM

Share

ಪ್ರತಿಯೊಬ್ಬರ ಜೀವನದಲ್ಲಿ ತಾಯಿ ಮತ್ತು ತಂದೆಯನ್ನು ಹೊರತುಪಡಿಸಿದರೆ ವಿಶಿಷ್ಟ ಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಭಾರತದಂತಹ ದೇಶದಲ್ಲಿ ಗುರುವು ಶಿಕ್ಷಣವನ್ನು ನೀಡುವುದು ಮಾತ್ರವಲ್ಲದೆ ತನ್ನ ಶಿಷ್ಯರಲ್ಲಿ ಮೌಲ್ಯಗಳನ್ನು ಹಾಗೂ ಜೀವನ ಪಾಠಗಳನ್ನು ಕಲಿಯುತ್ತಾನೆ. ಗುರುವಿಗೆ ಕೃತಜ್ಞತೆಯನ್ನು ಸಲ್ಲಿಸಲು ಮೀಸಲಾಗಿರುವ ದಿನವು ಗುರು ಪೂರ್ಣಿಮಾವಾಗಿದ್ದು, ಈ ಬಾರಿ ಜುಲೈ 21 ರಂದು ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಗುರು ಪೂರ್ಣಿಮೆಯನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ಆಚರಿಸುವುದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯವನ್ನು ಬಲಪಡಿಸಬಹುದು.

  1. ಸಾಂಸ್ಕೃತಿಕ ಕಾರ್ಯಕ್ರಮಗಳು : ವಿದ್ಯಾರ್ಥಿಗಳು ಗುರು ಪೂರ್ಣಿಮೆಯಂದು ಗುರುವಿಗೆ ಗೌರವ ಸಲ್ಲಿಸಲು ನೃತ್ಯಗಳು ಮತ್ತು ಹಾಡುಗಳನ್ನು ಹಾಡುವ ಮೂಲಕ ಆಚರಿಸಬಹುದು. ಈ ನೃತ್ಯ, ಪ್ರಹಸನಗಳಲ್ಲಿ ಪ್ರಸಿದ್ಧ ಗುರುಗಳು ಮತ್ತು ಅವರ ಶಿಷ್ಯರ ಕಥೆಗಳನ್ನು ಚಿತ್ರಿಸಬಹುದಾಗಿದೆ. ಈ ದಿನದಂದು ವಸ್ತುಪ್ರದರ್ಶನವನ್ನು ಆಯೋಜಿಸಬಹುದು.
  2. ಭಾಷಣ ಮತ್ತು ಕವನ ವಾಚನಗಳು ಸ್ಪರ್ಧೆ : ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಭಾಷಣಗಳು ಅಥವಾ ಕವನ ವಾಚಿಸುವ ಮೂಲಕ ಗುರುಗಳ ಮೇಲಿನ ಗೌರವ ಸಲ್ಲಿಸಬಹುದಾಗಿದೆ.
  3. ಗುರು ಪೂರ್ಣಿಮಾ ಕಾರ್ಡ್‌ ತಯಾರಿಕೆ : ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ತಮ್ಮ ಕೈಯಿಂದಲೇ ತಯಾರಿಸಿದ ಕಾರ್ಡ್‌ಗಳನ್ನು ನೀಡಬಹುದು. ಈ ಕಾರ್ಡ್‌ಗಳಲ್ಲಿ ಶಿಕ್ಷಕರ ಕುರಿತಾದ ಸಾಲುಗಳನ್ನು ಬರೆಯಬಹುದು. ಇದು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಪ್ರದರ್ಶಿಸುತ್ತದೆ.
  4. ಮಾಹಿತಿ ಕಾರ್ಯಾಗಾರಗಳು ಹಾಗೂ ಸೆಮಿನಾರ್‌ಗಳು : ಈ ದಿನದಂದು ಕಾರ್ಯಗಾರಗಳನ್ನು ಆಯೋಜಿಸುವುದು. ವೃತ್ತಿ ಪರಿಣಿತಿ ಹೊಂದಿರುವ ಹಿರಿಯ ಶಿಕ್ಷಕರನ್ನು ಆಹ್ವಾನಿಸಿ, ಮಕ್ಕಳಿಗೆ ಅಮೂಲ್ಯವಾದ ಜೀವನ ಪಾಠಗಳ ಬಗ್ಗೆ ತಿಳಿಸುವುದು ಹಾಗೂ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಲು ತಿಳಿಸುವುದು.
  5. ಶಿಕ್ಷಕರಿಗೆ ವಿವಿಧ ಉಡುಗೊರೆಗಳನ್ನು ನೀಡುವುದು : ವಿದ್ಯಾರ್ಥಿಗಳು ಶಾಲೆಗಳಲ್ಲಿ ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆಗಳನ್ನು ನೀಡುವ ಮೂಲಕ ಅವರಿಂದ ಆಶೀರ್ವಾದವನ್ನು ಪಡೆಯುವ ಮೂಲಕ ಆಚರಿಸಬಹುದು.
  6. ಚರ್ಚಾ ಸ್ಪರ್ಧೆಯನ್ನು ಆಯೋಜಿಸುವುದು ಆಧುನಿಕ ಕಾಲದಲ್ಲಿ ಗುರುವಿನ ಪಾತ್ರ ಎನ್ನುವ ವಿಷಯದ ಕುರಿತು ಚರ್ಚಾ ಸ್ಪರ್ಧೆಯನ್ನು ಆಯೋಜಿಸಬಹುದಾಗಿದೆ. ಇದು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುತ್ತದೆ. ಹಾಗೂ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆಯಾಗಿದೆ.
  7. ನೆಚ್ಚಿನ ಶಿಕ್ಷಕರಿಗೆ ವಿಡಿಯೋ ಸಂದೇಶಗಳು : ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಮೆಚ್ಚುಗೆ ವ್ಯಕ್ತಪಡಿಸುವ ವಿಡಿಯೋವನ್ನು ಮಾಡಿ, ಅದನ್ನು ಅಸೆಂಬ್ಲಿಯ ಸಂದರ್ಭದಲ್ಲಿ ಪ್ಲೇ ಮಾಡಬಹುದಾಗಿದೆ.
  8. ಶಿಕ್ಷಕರಿಗಾಗಿ ಪ್ರಶಸ್ತಿ ಪ್ರಧಾನ ಸಮಾರಂಭ : ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿಶಾಲಾ ಶಿಕ್ಷಕರನ್ನು ಗೌರವಿಸಲು ಇದೊಂದು ಒಳ್ಳೆಯ ವೇದಿಕೆಯಃದೆ. ವಿದ್ಯಾರ್ಥಿಗಳೆಲ್ಲರೂ ಸೇರಿ ಕಾರ್ಯಕ್ರಮವನ್ನು ಆಯೋಜಿಸಿ ಶಾಲಾ ಶಿಕ್ಷಕರಿಗೆ ಸನ್ಮಾನಿಸಬಹುದು.
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ