
ದೇಹದಲ್ಲಿ ವಾತಾವರಣಕ್ಕೆ(weather) ತಕ್ಕಂತೆ ಬದಲಾವಣೆಗಳು ಆಗುತ್ತದೆ. ವಾತಾವರಣಕ್ಕೆ ಬೇಕಾದ ರೀತಿಯಲ್ಲಿ ದೇಹವನ್ನು ಕೂಡ ನಾವು ಸಿದ್ದ ಮಾಡಬೇಕು. ಅದಕ್ಕಾಗಿ ಕೆಲವೊಂದು ಆಹಾರಗಳಲ್ಲಿ ಋತುಮಾನಕ್ಕೆ ತಕ್ಕಂತೆ ಬದಲಾವಣೆ ಮಾಡುಬೇಕು ಎನ್ನುವುದು ತಜ್ಞರ ಸಲಹೆ. ಈಗಿನ ವಾತಾರಣಕ್ಕೆ ಈ ಆಹಾರಗಳನ್ನು ತಿನ್ನುವುದು ಉತ್ತಮ. ಚರ್ಮದ ಆರೈಕೆ (skin care) ಹಾಗೂ ರಕ್ಷಣೆಗೆ ಯಾವೆಲ್ಲ ಆಹಾರಗಳನ್ನು ಸೇವನೆ ಮಾಡಬೇಕು ಎಂಬುದನ್ನು ಚರ್ಮರೋಗ ತಜ್ಞರಾದ, ಡಾ. ಅಂಕುರ್ ಸರಿನ್ ಮತ್ತು ಡಾ. ಜುಶ್ಯಾ ಭಾಟಿಯಾ ಸರಿನ್ ಕೆಲವು ಆಹಾರಗಳನ್ನು ಸೇವನೆ ಮಾಡುವಂತೆ ಮಾರ್ಗದರ್ಶನ ನೀಡಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಚರ್ಮಕ್ಕೆ ಒಂದಲ್ಲ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾದ ಕೆಲವು ಆಹಾರ ಪದಾರ್ಥಗಳಿವೆ, ಇದರಿಂದ ವಿಟಮಿನ್ ಸಿ, ವಿಟಮಿನ್ ಇ, ಕಾಲಜನ್ ಉತ್ಪಾದಿಸುವ ಗುಣಗಳು ಹಾಗೂ ಚರ್ಮಕ್ಕೆ ಜಲಸಂಚಯನವನ್ನು ಸಹ ಒದಗಿಸುತ್ತವೆ. ಚರ್ಮಕ್ಕೆ ಹೊಳಪನ್ನು ತರುವ ಮತ್ತು ಚರ್ಮದ ರಕ್ಷಣೆ ಮಾಡುವ ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ. ಅಂತಹ ಆಹಾರಗಳು ಯಾವುವು, ಇಲ್ಲಿದೆ ನೋಡಿ.
ಪಾಲಕ್ ಎಲೆ : ಒಂದು ಬಟ್ಟಲು ಪಾಲಕ್ ಎಲೆಗಳನ್ನು ತಿಂದರೆ ಚರ್ಮಕ್ಕೆ ವಿಟಮಿನ್ ಎ ಸಿಗುತ್ತದೆ. ಪಾಲಕ್ ಎಲೆಗಳನ್ನು ತಿನ್ನುವುದರಿಂದ ಚರ್ಮದ ಬೆಳವಣಿಗೆ ಹಾಗೂ ರಕ್ಷಣೆ ಉತ್ತಮವಾಗಿರುತ್ತದೆ, ಬೇಯಿಸಿದ ಪಾಲಕ್ ತಿನ್ನಬೇಕು ಎಂಬುದು ತಜ್ಞರ ಸಲಹೆ.
ಕಿತ್ತಳೆ : ಪ್ರತಿದಿನ ಒಂದು ಕಿತ್ತಳೆ ತಿನ್ನುವುದರಿಂದ ವಿಟಮಿನ್ ಸಿ ಸಿಗುತ್ತದೆ. ಇದು ದೇಹದ ದೈನಂದಿನ ವಿಟಮಿನ್ ಸಿ ಅವಶ್ಯಕತೆಯ 90 ಪ್ರತಿಶತವನ್ನು ಪೂರೈಸುತ್ತದೆ. ಇದು ಕಾಲಜನ್ ಹೆಚ್ಚಿಸುತ್ತದೆ. ಇದಲ್ಲದೆ, ವರ್ಣದ್ರವ್ಯವು ಕಡಿಮೆ ಮಾಡುತ್ತದೆ.
ಆವಕಾಡೊ : ನಿಮ್ಮ ದಿನನಿತ್ಯದ ಆಹಾರದಲ್ಲಿ ಆವಕಾಡೊ ಸೇರಿಸಿ. ಇದು ದೇಹಕ್ಕೆ ಹೆಚ್ಚಿನ ಪ್ರಮಾಣದ ಬಯೋಟಿನ್ ನೀಡುತ್ತದೆ. ಹಾಗೂ ಇದು ಉಗುರುಗಳಿಗೂ ಪ್ರಯೋಜನವನ್ನು ನೀಡುತ್ತದೆ. ಆರೋಗ್ಯಕರ ಕೂದಲಿನ ಬೆಳವಣಿಗೆ ಮತ್ತು ಉಗುರು ಬೆಳವಣಿಗೆಗೆ ಆವಕಾಡೊವನ್ನು ಪ್ರತಿದಿನ ತಿನ್ನಬಹುದು.
ಇದನ್ನೂ ಓದಿ: ಗಂಡನಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು
ವಾಲ್ನಟ್: ಪ್ರತಿದಿನ 3 ರಿಂದ 4 ವಾಲ್ನಟ್ಸ್ ತಿನ್ನುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ಇದು ದೇಹದ ಒಮೆಗಾ -3 ಅಗತ್ಯವನ್ನು ಪೂರೈಸುತ್ತದೆ. ಹಾಗೂ ಚರ್ಮವನ್ನು ತೇವಗೊಳಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಚರ್ಮದ ಮೇಲೆ ಜಲಸಂಚಯನವನ್ನು ಕಾಪಾಡಿಕೊಳ್ಳುತ್ತದೆ. ಅಲ್ಲದೆ, ವಾಲ್ನಟ್ಸ್ ಸೇವನೆಯು ಕೂದಲಿಗೆ ಹೊಳಪನ್ನು ನೀಡುತ್ತದೆ. ವಾಲ್ನಟ್ಸ್ ಅನ್ನು ಆರೋಗ್ಯಕರ ತಿಂಡಿಯಾಗಿ ತಿನ್ನಬಹುದು. ಅವು ತೂಕ ನಿರ್ವಹಣೆಯಲ್ಲಿಯೂ ಸಹಾಯಕವಾಗಿವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ