ಈಜಿಪ್ಟಿನ ರಾಣಿ ಕ್ಲಿಯೋಪಾತ್ರಾ (Cleopatra) ಕತ್ತೆಯ ಹಾಲನ್ನು (donkey’s milk) ಮೈಮೇಲೆ ಸುರಿದುಕೊಂಡು ಸ್ನಾನ ಮಾಡುತ್ತಿದ್ದಳು. ಅದಕ್ಕೆ ಅವಳು ಸೌಂದರ್ಯದ ಖನಿಯಾಗಿದ್ದಳು. ಅದಕ್ಕೇ ಈಗಿನ ಕಾಲದ ಮಹಿಳೆಯರಿಗೂ ಅದು ಅನ್ವಯವಾಗುತ್ತದೆಂದು ಕತ್ತೆ ಹಾಲಿನಿಂದ ತಯಾರಿಸಿದ ಸಾಬೂನನ್ನು ಬಳಸಿದರೆ ಮಹಿಳೆ ತನ್ನ ದೇಹ ಸಿರಿಯನ್ನು ಸುಂದರವಾಗಿಟ್ಟುಕೊಳ್ಳಬಹುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಮಾಜಿ ಸಚಿವೆ ಮೇನಕಾ ಗಾಂಧಿ (Maneka Gandhi) ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ (BJP) ಜೊತೆ ಗುರುತಿಸಿಕೊಂಡಿರುವ ಮನೇಕಾ ಗಾಂಧಿ, ಪ್ರಾಣಿ ಹಕ್ಕು ಹೋರಾಟಗಾರರಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ.
ಲಡಾಖ್ ಸಮುದಾಯವು ಸಾಬೂನು ತಯಾರಿಸಲು ಕತ್ತೆ ಹಾಲನ್ನು ಬಳಸುತ್ತದೆ. ಇದು ಮಹಿಳೆಯರ ಚರ್ಮವನ್ನು ಸುಂದರವಾಗಿಡುತ್ತದೆ ಎಂದು ಮೇನಕಾ ಗಾಂಧಿ ಹೇಳಿದ್ದಾರೆ. ಬಿಜೆಪಿ ಸಂಸದೆ ಮತ್ತು ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಮಾಡಿದ ಭಾಷಣವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ, ಅಲ್ಲಿ ಅವರು ಕತ್ತೆ ಹಾಲಿನಿಂದ ತಯಾರಿಸಿದ ಸಾಬೂನು ಮಹಿಳೆಯ ದೇಹವನ್ನು ಸುಂದರವಾಗಿಡಲು ಸಹಾಯ ಮಾಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
Also Read:
ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಚೌಪಾಲ್ ಯೋಜನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಈಜಿಪ್ಟ್‌ನ ರಾಣಿ ಕ್ಲಿಯೋಪಾತ್ರಾ ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದರು. ದೆಹಲಿಯಲ್ಲಿ ಕತ್ತೆ ಹಾಲಿನಿಂದ ತಯಾರಿಸಿದ ಸೋಪ್‌ಗಳು 500 ರೂ ದರದಲ್ಲಿದೆ ಎಂದು ತಿಳಿಸಿದರು. ಲಡಾಖ್‌ನಲ್ಲಿ ಸಾಬೂನು ತಯಾರಿಸಲು ಕತ್ತೆಯ ಹಾಲನ್ನು ಬಳಸುವ ಸಮುದಾಯದ ಕುರಿತು ಅವರು ಮಾತನಾಡಿದರು.
गधे के दूध का साबुन औरत के शरीर को खूबसूरत रखता है”इनकी सुंदरता की राज आजा के सामने आई जो गधे के दूध से बनी और गोबर से बनी साबुन का प्रोडक्ट यूज करती हैं
◆ BJP सांसद @Manekagandhibjp का बयान #BJP | BJP | #ManekaGandhi | Maneka Gandhi pic.twitter.com/rXW1aY1t6o
— AZAD ALAM (@Azad24906244) April 2, 2023
“ನೀವು ಕೊನೆಯ ಬಾರಿಗೆ ಕತ್ತೆಯನ್ನು ಯಾವಾಗ ನೋಡಿದ್ದೀರಿ? ಅವುಗಳ ಸಂಖ್ಯೆಯೇ ಕುಸಿಯುತ್ತಿದೆ. ಬಟ್ಟೆ ಒಗೆಯುವವರು ಕತ್ತೆಗಳ ಬಳಕೆಯನ್ನು ನಿಲ್ಲಿಸಿದ್ದಾರೆ. ಲಡಾಖ್‌ನಲ್ಲಿ ಈ ಸಮುದಾಯವು ಕತ್ತೆಗಳ ಸಂಖ್ಯೆಯಲ್ಲಿ ಕುಸಿತವನ್ನು ಕಾಣತೊಡಗಿದರು. ಆದ್ದರಿಂದ ಅವರು ಕತ್ತೆಯ ಹಾಲನ್ನು ಸಾಬೂನು ತಯಾರಿಸಲು ಪ್ರಾರಂಭಿಸಿದರು. ಕತ್ತೆಯ ಹಾಲಿನಿಂದ ತಯಾರಿಸಿದ ಸಾಬೂನುಗಳು ಮಹಿಳೆಯ ದೇಹವನ್ನು ಶಾಶ್ವತವಾಗಿ ಸುಂದರವಾಗಿ ಇಡುತ್ತದೆ ಎಂದು ಸಚಿವೆ ಮೇನಕಾ ಹೇಳಿದ್ರು. ಆದರೆ “ಪ್ರಾಣಿಗಳಿಂದ ಹಣ ಸಂಪಾದಿಸುವ” ಜನರ ವಿರುದ್ಧ ತಾನು ಬಲವಾಗಿ ನಿಲ್ಲುವುದಾಗಿ ಗಾಂಧಿ ಹೇಳಿದರು. ಮಾಜಿ ಕೇಂದ್ರ ಸಚಿವರು ಅನೇಕ ಪ್ರದೇಶಗಳಲ್ಲಿ ಶೀಘ್ರಗತಿಯಲ್ಲಿ ಅರಣ್ಯನಾಶ ಆಗುತ್ತಿರುವ ಬಗ್ಗೆಯೂ ಮಾತನಾಡಿದರು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ