Eid Al Adha Mubarak 2021: ಬಕ್ರೀದ್ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್
Happy Eid Al Adha 2021: ಈದ್-ಉಲ್-ಅಧಾದದ ಶುಭಾಶಯಗಳು. ಸಾಮೂಹಿಕ ಅನುಭೂತಿ, ಸಾಮರಸ್ಯ ಮತ್ತು ಒಳ್ಳೆಯ ಸೇವೆಯಲ್ಲಿ ಸೇರ್ವಡಿಸುವಂತಹ ಮನೋಭಾವವನ್ನು ಹೆಚ್ಚಿಸಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಈದ್-ಉಲ್-ಅಧಾವನ್ನು ಭಾರತದಾದ್ಯಂತ ಇಂದು ಆಚರಿಸಲಾಗುತ್ತಿದೆ. ಮುಸ್ಲಿಮರು ಆಚರಿಸುವ ಈದ್ಉಲ್ ಫ್ರಿತ್ ನಂತರದ ಎರಡನೇ ಪ್ರಮುಖ ಇಸ್ಲಾಮಿಕ್ ಹಬ್ಬ. ಅಮಾವಸ್ಯೆ ದಿನ ಕಳೆದ ನಂತರ ಕಾಣುವ ಮೊದಲ ಚಂದ್ರನನ್ನು ನೋಡಿದ ಹತ್ತು ದಿನಗಳ ಬಳಿಕ ಬಕ್ರೀದ್ ಆಚರಿಸಲಾಗುತ್ತದೆ. ಇಸ್ಲಾಮಿಕ್ ಭಕ್ತರು ಕೈಗೊಳ್ಳುವ ವಾರ್ಷಿಕ ಹಜ್ ಯಾತ್ರೆಯನ್ನು ಮುಕ್ತಾಯಗೊಳಿಸುವ ದಿನ. ಈ ದಿನದ ವಿಶೇಷವಾಗಿ ಕೇಂದ್ರ ರಾಜ್ಯ ನಾಯಕರು, ಗಣ್ಯರು ಮುಸ್ಲಿಮರಿಗೆ ಶುಭಾಶಯ ಕೋರಿದ್ದಾರೆ.
ಮುಸ್ಲಿಮರು ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಬಕ್ರೀದ್ ಕೂಡಾ ಒಂದು. ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಕೈಗೊಳ್ಳುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ವಿಶೇಷ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಬಕ್ರೀದ್ ಹಬ್ಬದ ವಿಶೇಷವಾಗಿ ದೇಶದ ಮುಸ್ಲಿಮರಿಗೆ ಉರ್ದು ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.
ಈದ್-ಉಲ್-ಅಧಾದದ ಶುಭಾಶಯಗಳು. ಸಾಮೂಹಿಕ ಅನುಭೂತಿ, ಸಾಮರಸ್ಯ ಮತ್ತು ಒಳ್ಳೆಯ ಸೇವೆಯಲ್ಲಿ ಸೇರ್ವಡಿಸುವಂತಹ ಮನೋಭಾವವನ್ನು ಹೆಚ್ಚಿಸಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Eid Mubarak!
Best wishes on Eid-ul-Adha. May this day further the spirit of collective empathy, harmony and inclusivity in the service of greater good.
— Narendra Modi (@narendramodi) July 21, 2021
ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಬಕ್ರೀದ್ ಹಬ್ಬದ ವಿಶೇಷವಾಗಿ ದೇಶದ ಮುಸ್ಲಿಮರಿಗೆ ಉರ್ದು ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದು, ಜನರು ಕೊವಿಡ್ 19 ಸುರಕ್ಷತಾ ಮಾರ್ಗ ಸೂಚಿಗಳನ್ನು ಅನುಸರಿಸುವಂತೆ ಹೇಳಿದ್ದಾರೆ.
تمام ہم وطنوں کو عید مبارک۔ عید الاضحیٰ محبت، ایثار اور قربانی کے جذبے کا اظہار کرنے اور ایک شمولیتی معاشرہ میں اتحاد اور اخوت کے لئے کام کرنے کا تہوار ہے۔ آئیے، ہم کووڈ۔19سے متعلق رہنما خطوط پر عمل کرتے ہوئے معاشرے کے ہر ایک طبقے کی خوشحالی کے لئے کام کریں۔
— President of India (@rashtrapatibhvn) July 21, 2021
ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬ ಸರ್ವರಿಗೂ ಮಂಗಳ ತರಲಿ. ಸಹೋದರತೆ, ಐಕ್ಯತೆಯನ್ನು ಇನ್ನಷ್ಟು ಬಲಿಷ್ಟಗೊಳಿಸಲಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶುಭ ಹಾರೈಸಿದ್ದಾರೆ.
ತ್ಯಾಗ, ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬ ಸರ್ವರಿಗೂ ಮಂಗಳ ತರಲಿ. ಪರಸ್ಪರ ಸಹೋದರತೆ, ಐಕ್ಯತೆಯನ್ನು ಇನ್ನಷ್ಟು ಬಲಪಡಿಸಲಿ ಎಂದು ಮುಖ್ಯಮಂತ್ರಿ @BSYBJP ರವರು ನಾಡಿನ ಜನತೆಗೆ ಶುಭ ಕೋರಿದ್ದಾರೆ.#EidAlAdha #Bakrid2021 pic.twitter.com/SL0QyYAc83
— CM of Karnataka (@CMofKarnataka) July 21, 2021
4,000 ವರಷಗಳ ಹಿಂದೆ ಪ್ರವಾದಿ ಅಬ್ರಾಹಿಂ ಕನಸಿನಲ್ಲಿ ಅಲ್ಲಾಹ್ನರನ್ನು ಕಂಡರು. ತಾನು ಹೆಚ್ಚಾಗಿ ಪ್ರೀತಿಸುವವರನ್ನು ತ್ಯಾಗ ಮಾಡುವ ಸಂದರ್ಭ ಬಂದಾಗ ತಾನು ಹೆಚ್ಚಾಗಿ ಪ್ರೀತಿಸುವ ಏಕೈಕ ಪುತ್ರನನ್ನು ತ್ಯಾಗ ಮಾಡಲು ಮುಂದಾದರು. ಕೊನೆಗೆ ಇಬ್ರಾಹಿಂ ತನ್ನ ಮಗನನ್ನು ಬಲಿಕೊಡಲು ಬಲಿಪೀಠದಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾರೆ. ತನ್ನ ಮಗನ ಕುತ್ತಿಗೆಯ ಭಾಗಕ್ಕೆ ಕತ್ತರಿಸಲು ಮುಂದಾಗುತ್ತಾರೆ. ಈ ವೇಳೆ ಅವನಿಗೆ ಅನೇಕ ಅಡೆ-ತಡೆಗಳು ಎದುರಾಗುತ್ತವೆ. ಮಗನ ಕುತ್ತಿಗೆಗೆ ಕತ್ತಿ ತರುತ್ತಿದ್ದಂತೆ ಇಸ್ಮಾಯಿಲ್ ಮಾಯವಾಗಿ ಆತನ ಜಾಗದಲ್ಲಿ ಕುರಿಯೊಂದು ಕಾಣಿಸಿಕೊಳ್ಳುತ್ತದೆ. ಅಲ್ಲಾಹನು ಪ್ರವಾದಿ ಇಬ್ರಾಹಿಂರ ಭಕ್ತಿ, ನಂಬಿಕೆ, ವಿಶ್ವಾಸವನ್ನು ಪರೀಕ್ಷಿಸಿದ್ದು ಇದರಲ್ಲಿ ಪ್ರವಾದಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಈ ಹಬ್ಬವನ್ನು ಬಲಿದಾನ, ತ್ಯಾಗದ ಸಂಕೇತವಾಗಿ ಆಚರಿಸಲಾಗುತ್ತೆ. ತ್ಯಾಗದ ಕಥೆಯನ್ನು ಹಿಬ್ರೂ ಬೈಬಲ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:
Eid Al-Adha 2021: ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬದ ಹಿಂದಿದೆ ಪ್ರವಾದಿ ಇಬ್ರಾಹಿಂರ ರೋಚಕ ಕಥೆ
Eid Al-Adha 2021: ನಾಳೆಯೇ ಬಕ್ರೀದ್; ಇಂದು ರಾತ್ರಿಯಿಂದಲೇ ಬೆಂಗಳೂರು ಪ್ರವೇಶಿಸುವ ಎಲ್ಲ ವಾಹನಗಳ ತಪಾಸಣೆ
Published On - 10:08 am, Wed, 21 July 21