Eid Al-Adha 2021: ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬದ ಹಿಂದಿದೆ ಪ್ರವಾದಿ ಇಬ್ರಾಹಿಂರ ರೋಚಕ ಕಥೆ

Bakrid 2021: ಈದ್-ಉಲ್-ಅಧಾ 2021: ಬಕ್ರಾ ಈದ್ ಅನ್ನು ಜುಲೈ 21 ರಂದು ಭಾರತದಾದ್ಯಂತ ಆಚರಿಸಲಾಗುವುದು. ಮುಸ್ಲಿಮರು ರಂಜಾನ್ ತಿಂಗಳ ಉಪವಾಸದ ಬಳಿಕ ಈದ್ಉಲ್ ಫಿತ್ರ್ ಹಬ್ಬ ಆಚರಿಸಿದ್ರೆ. ಇಸ್ಲಾಮಿಕ್ ಕ್ಯಾಲೆಂಡರಿನ ದುಲ್ಹಜ್ಜ್ ತಿಂಗಳ 10ರಂದು ಬಕ್ರೀದ್ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬಕ್ಕೆ ಇಸ್ಲಾಮಿನ ಇತಿಹಾಸದಲ್ಲಿ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ.

Eid Al-Adha 2021: ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬದ ಹಿಂದಿದೆ ಪ್ರವಾದಿ ಇಬ್ರಾಹಿಂರ ರೋಚಕ ಕಥೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jul 20, 2021 | 1:06 PM

ಈದ್-ಉಲ್-ಅಧಾ 2021 (Eid Al-Adha 2021) ಅನ್ನು ಜುಲೈ 21 ರಂದು ಭಾರತದಾದ್ಯಂತ ಆಚರಿಸಲಾಗುವುದು. ಹಾಗೂ ಜುಲೈ 20ಕ್ಕೆ ಸೌದಿ ಅರೇಬಿಯಾದಲ್ಲಿ ಈ ಹಬ್ಬ ಆಚರಿಸಲಾಗುತ್ತೆ. ಈದ್-ಉಲ್-ಅಧಾ(Bakrid) ಮುಸ್ಲಿಮರು ಆಚರಿಸುವ ಈದ್ಉಲ್ ಫಿತ್ರ್ ನಂತರದ ಎರಡನೇ ಪ್ರಮುಖ ಇಸ್ಲಾಮಿಕ್ ಹಬ್ಬವಾಗಿದೆ. ಈ ಹಬ್ಬವನ್ನು ಬಕ್ರಾ ಈದ್, ಬಕ್ರೀದ್, ಈದ್ ಅಲ್-ಅಧಾ, ಈದ್ ಕುರ್ಬಾನ್ ಅಥವಾ ಕುರ್ಬಾನ್ ಬಯಾರಾಮಿ ಎಂದೂ ಕರೆಯುತ್ತಾರೆ. ರಂಜಾನ್ ಹಬ್ಬ ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸಿದರೆ, ಬಕ್ರೀದ್ ಇಸ್ಲಾಮಿಕ್ ಭಕ್ತರು ಮಾಡುವ ವಾರ್ಷಿಕ ಹಜ್ ಯಾತ್ರೆಯನ್ನು ಮುಕ್ತಾಯಗೊಳಿಸುತ್ತದೆ.

ಅಮಾವಾಸ್ಯೆ ಆದ ಬಳಿಕ ಕಾಣುವ ಮೊದಲ ಚಂದ್ರನನ್ನು ನೋಡಿದ ಹತ್ತು ದಿನಗಳ ನಂತರ ಬಕ್ರೀದ್ ಆಚರಿಸಲಾಗುತ್ತದೆ. ಮತ್ತು ಈ ವರ್ಷ ಇಸ್ಲಾಮಿಕ್ ಕ್ಯಾಲೆಂಡರ್‌ನ ಹನ್ನೆರಡನೇ ತಿಂಗಳಾದ ದುಲ್ಹಜ್ಜ್ ತಿಂಗಳ, ಜುಲೈ 12 ರ ಭಾನುವಾರ ಸಂಜೆ ಚಂದ್ರ ಕಾಣಿಸಿಕೊಂಡಿದ್ದಾನೆ. ಆದ್ದರಿಂದ, ಈದ್-ಉಲ್-ಅಧಾವನ್ನು ಜುಲೈ 21 ರಂದು ಭಾರತದಲ್ಲಿ ಆಚರಿಸಲಾಗುತ್ತೆ. ಅರಾಫಾ ಅಥವಾ ಮುಸ್ಲಿಂ ತೀರ್ಥಯಾತ್ರೆ (ಹಜ್) ಜುಲೈ 18 ರ ಸಂಜೆ ಪ್ರಾರಂಭವಾಗಿ ಜುಲೈ 19 ರ ಸಂಜೆ ಕೊನೆಗೊಳ್ಳುತ್ತದೆ. ಜುಲೈ 20 ರಂದು ಸೌದಿ ಅರೇಬಿಯಾ, ಯುಎಇ, ಕತಾರ್, ಉತ್ತರ ಅಮೆರಿಕ, ಲಂಡನ್‌ನಲ್ಲಿ ಈದ್-ಉಲ್-ಅಧಾ ಬಕ್ರೀದ್ ಹಬ್ಬವನ್ನು ಆಚರಿಸಲಾಗುವುದು. ಮತ್ತು ಭಾರತವು ಸಾಮಾನ್ಯವಾಗಿ ಸೌದಿ ಅರೇಬಿಯಾದ ಒಂದು ದಿನದ ನಂತರ ಹಬ್ಬವನ್ನು ಆಚರಿಸುತ್ತದೆ.

ಬಕ್ರೀದ್ ಹಬ್ಬದ ಇತಿಹಾಸ ಸುಮಾರು 4,000 ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಈ ಹಬ್ಬ ಆಚರಿಸಲಾಗುತ್ತೆ. ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್ ಅವರಿಗಿಂತ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಹಿಟ್ಟಿದ್ದ ಪ್ರವಾದಿ. ಇಸ್ಲಾಮಿಕ್ ನಂಬಿಕೆಗಳ ಪ್ರಕಾರ, ಪ್ರವಾದಿ ಇಬ್ರಾಹಿಂಗೆ ಒಮ್ಮೆ ಅಲ್ಲಾಹ್ನು ಅಗ್ನಿ ಪರೀಕ್ಷೆಯನ್ನು ಮಾಡುತ್ತಾನೆ. ಒಮ್ಮೆ ಅಲ್ಲಾಹ್ನು ಪ್ರವಾದಿ ಇಬ್ರಾಹಿಂ ಕನಸಿನಲ್ಲಿ ಕಾಣಿಸಿಕೊಂಡು ಪ್ರವಾದಿ ಬಳಿ ಇರುವ ಯಾವುದಾದರೂ ಆತ್ಯಮೂಲ್ಯವಾದ ವಸ್ತುವೊಂದನ್ನು ತನಗೆ ಬಲಿ ನೀಡಬೇಕು ಎಂದು ತ್ಯಾಗ ಮಾಡಬೇಕೆಂದು ಆದೇಶಿಸುತ್ತಾನೆ. ಇಂತಹದೊಂದು ಕನಸು ಬಿದ್ದ ಬಳಿಕ ಅನೇಕ ದಿನಗಳ ಕಾಲ ಪ್ರವಾದಿ ಇಬ್ರಾಹಿಂಗೆ ಇದು ಭಾದಿಸುತ್ತಿತ್ತು. ಬಳಿಕ ತನ್ನ ಕನಸಿನ ಕುರಿತು ತನ್ನ ಪತ್ನಿಯ ಬಳಿ ಹೇಳಿಕೊಳ್ಳುತ್ತಾರೆ. ಸಾಕಷ್ಟು ಚರ್ಚೆ ಬಳಿಕ ಪ್ರವಾದಿ ಇಬ್ರಾಹಿಂ ಹಾಗೂ ಆತನ ಪತ್ನಿ ಜೊತೆಗೂಡಿ ತಮ್ಮ ಒಬ್ಬನೇ ಮಗನನ್ನು ಅಲ್ಲಾಹ್ನಿಗೆ ಬಲಿ ನೀಡಲು ನಿರ್ಧರಿಸುತ್ತಾರೆ. ತಮ್ಮ ಪಾಳಿಗೆ ಇದ್ದ ಏಕೈಕ ಅತ್ಯಮೂಲ್ಯವಾದ ವ್ಯಕ್ತಿಯಾದ ಮಗನನ್ನೇ ತ್ಯಾಗ ಮಾಡಲು ಇಬ್ಬರೂ ನಿರ್ಧಸಿರುತ್ತಾರೆ. ನಂತರ ಇದಕ್ಕೆ ತನ್ನ ಮಗನಾದ ಇಸ್ಮಾಹಿಲ್ ಒಪ್ಪಗೆಯ ಕುರಿತು ಆತನಲ್ಲಿ ಚರ್ಚಿಸುತ್ತಾರೆ. ಅಲ್ಲಾಹ್ನಿಗಾಗಿ ಬಲಿಯಾಗಲು ಇಸ್ಮಾಯಿಲ್ ಹಿಂದೆ ಮುಂದೆ ಯೋಚಿಸದೇ ಕೂಡಲೇ ಒಪ್ಪಿಕೊಳ್ಳುತ್ತಾನೆ.

ಕೊನೆಗೆ ಇಬ್ರಾಹಿಂ ತನ್ನ ಮಗನನ್ನು ಬಲಿಕೊಡಲು ಬಲಿಪೀಠದಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾನೆ. ತನ್ನ ಮಗನ ಕುತ್ತಿಗೆಯ ಭಾಗಕ್ಕೆ ಕತ್ತರಿಸಲು ಮುಂದಾಗುತ್ತಾನೆ ಈ ವೇಳೆ ಅವನಿಗೆ ಅನೇಕ ಅಡೆ-ತಡೆಗಳು ಎದುರಾಗುತ್ತವೆ. ದೇವರ ನೆನೆದು ಭಕ್ತಿಯಿಂದ ಮಗನನ್ನು ತ್ಯಾಗ ಮಾಡಲು ಇಬ್ರಾಹಿಂ ಮುಂದಾಗುತ್ತಾನೆ ಆಗ ಮಗನ ಕುತ್ತಿಗೆಗೆ ಕತ್ತಿ ತರುತ್ತಿದ್ದಂತೆ ಇಸ್ಮಾಯಿಲ್ ಮಾಯವಾಗಿ ಆತನ ಜಾಗದಲ್ಲಿ ಕುರಿಯೊಂದು ಕಾಣಿಸಿಕೊಳ್ಳುತ್ತದೆ. ಅಲ್ಲಾಹನು ಪ್ರವಾದಿ ಇಬ್ರಾಹಿಂರ ಭಕ್ತಿ, ನಂಬಿಕೆ, ವಿಶ್ವಾಸವನ್ನು ಪರೀಕ್ಷಿಸಿದ್ದು ಇದರಲ್ಲಿ ಪ್ರವಾದಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಈ ಹಬ್ಬವನ್ನು ಬಲಿದಾನ, ತ್ಯಾಗದ ಸಂಕೇತವಾಗಿ ಆಚರಿಸಲಾಗುತ್ತೆ.

ಜುಲ್ ಹಿಜ್ಜಾದ ಒಂಬತ್ತನೇ ದಿನವನ್ನು ಮುಸ್ಲಿಂ ತೀರ್ಥಯಾತ್ರೆಯಾದ ಹಜ್ ದಿನವೆಂದು ಆಚರಿಸಿದರೆ, ಹತ್ತನೇ ದಿನವನ್ನು ಈದ್-ಉಲ್-ಅಧಾ (ಬಕ್ರೀದ್) ಎಂದು ಆಚರಿಸಲಾಗುತ್ತದೆ. ಈದ್-ಉಲ್-ಅಧಾ ಎಂಬುದು ಪ್ರವಾದಿ ಇಬ್ರಾಹಿಂ ಅಲ್ಲಾಹನ ಸಂಪೂರ್ಣ ಸಮರ್ಪಣೆಯ ಸ್ಮರಣಾರ್ಥವಾಗಿದೆ.

ಈ ತ್ಯಾಗದ ಕುರುಹಾಗಿ ಮುಸ್ಲಿಮರು ಈದ್ ಉಲ್ ಅಧಾ ದಿವಸ ಮೇಕೆ ಅಥವಾ ಕುರಿಯನ್ನು ಬಲಿ ನೀಡುತ್ತಾರೆ. ಸಂಪ್ರದಾಯದ ಪ್ರಕಾರ, ಬಲಿ ನೀಡಲಾದ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಒಂದು ಭಾಗವು ಕುಟುಂಬ ವರ್ಗ, ಸ್ನೇಹಿತರು ಮತ್ತು ನೆರೆಹೊರೆಯವರಿಗೆ, ಎರಡನೇ ಭಾಗವನ್ನು ಬಡವರು ಮತ್ತು ನಿರ್ಗತಿಕರಿಗೆ ವಿತರಿಸಲಾಗುತ್ತದೆ. ಹಾಗೆಯೇ ಮೂರನೇ ಭಾಗವನ್ನು ಕುಟುಂಬಕ್ಕೆ ಮೀಸಲಿಡಲಾಗುತ್ತದೆ. ಆದರೆ ವಾಸ್ತವವಾಗಿ ಇಲ್ಲಿ ಕುರಿ ಸಾಂಕೇತಿಕವಷ್ಟೇ. ಬದಲಾಗಿ ಈ ಹಬ್ಬವು ಮನುಷ್ಯನ ಮನಸ್ಸಿನಲ್ಲಿರುವ ಮತ್ಸರ, ಲೋಭ, ಮೋಹ ಮೊದಲಾದವುಗಳನ್ನು ಬಲಿ ನೀಡಬೇಕೆಂಬುದನ್ನು ಸೂಚಿಸುತ್ತದೆ.

ಸರಳ ಆಚರಣೆಗೆ ಸೂಚನೆ ಸಾಮಾನ್ಯವಾಗಿ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಅದರಂತೆ ಬೆಳಿಗ್ಗೆ ಮಸೀದಿ ಹಾಗೂ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಈ ಬಾರಿ ಕೂಡ ಕೋವಿಡ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಬ್ಬ ಆಚರಣೆಗೆ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಸರ್ಕಾರದ ಈ ಆದೇಶದಂತೆ ಈ ಬಾರಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಹೇರಲಾಗಿದೆ. ಹಾಗೆಯೇ ಮಸೀದಿಗಳಲ್ಲಿ ಒಂದು ಬಾರಿ 50 ಜನರು ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದ್ದು, ಪ್ರಾರ್ಥನೆ ನಿರ್ವಹಿಸುವಾಗ ಪ್ರತಿಯೊಬ್ಬರು ಕನಿಷ್ಠ ಆರು ಅಡಿಗಳ ಅಂತರ ಕಾಯ್ದುಕೊಳ್ಳಬೇಕು. ಪ್ರಾರ್ಥನೆ ಮಾಡಲು ಬೇಕಿರುವ ಮುಸಲ್ಲಾವನ್ನು (ಬಟ್ಟೆ) ಮನೆಯಿಂದಲೇ ತೆಗೆದುಕೊಂಡು ಹೋಗಬೇಕು. ಇನ್ನು ಪರಸ್ಪರ ಆಲಿಂಗನ ಮತ್ತು ಹಸ್ತಲಾಘವ ಮಾಡಬಾರದು. ಅಲ್ಲದೆ 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಈದ್ಗಾ ಅಥವಾ ಮಸೀದಿಗೆ ತೆರಳುವಂತಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ: Eid al-Adha 2021: ಕರ್ನಾಟಕದಲ್ಲಿ ಬಕ್ರೀದ್ ಹಬ್ಬ ಯಾವಾಗ..? ಇಲ್ಲಿದೆ ಮಾಹಿತಿ

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ