ಭಾರತದ ಶ್ರೇಷ್ಠ ಇಂಜಿನಿಯರ್ಗಳಲ್ಲಿ ಒಬ್ಬರಾದ ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನದ ನೆನಪಿಗಾಗಿ ಮತ್ತು ವಿಶ್ವದಾದ್ಯಂತ ಇಂಜಿನಿಯರ್ ಗಳ ಅಪಾರ ಕೊಡುಗೆಗಳು ಮತ್ತು ಸಾಧನೆಗಳನ್ನು ಗೌರವಿಸಲು ಪ್ರತಿವರ್ಷ ಸೆಪ್ಟೆಂಬರ್ 15 ರಂದು ರಾಷ್ಟ್ರೀಯ ಇಂಜಿನಿಯರ್ಗಳ (National Engineer’s Day) ದಿನವನ್ನು ಆಚರಿಸಲಾಗುತ್ತದೆ. ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಸೆಪ್ಟೆಂಬರ್ 15, 1861 ರಂದು ಜನಿಸಿದರು. ಭಾರತದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ವ್ಯಕ್ತಿಗಳಲ್ಲಿ ಅವರು ಅಗ್ರಗಣ್ಯರು. ಕೃಷ್ಣ ರಾಜ ಸಾಗರ ಅಣೆಕಟ್ಟು, ಮೈಸೂರು ಅರಮನೆ ಮತ್ತು ಬೆಂಗಳೂರು ನೀರು ಸರಬರಾಜು ಯೋಜನೆ ಸೇರಿದಂತೆ ಹಲವಾರು ಸಾಂಪ್ರದಾಯಿಕ ರಚನೆಗಳನ್ನು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಾಗಾಗಿಯೇ ಅವರ ಈ ಅತ್ಯಮೂಲ್ಯ ಕೊಡುಗೆಗಳನ್ನು ನೆನೆಯುವುದಕ್ಕಾಗಿ ಸೆಪ್ಟೆಂಬರ್ 15 ರಂದು ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ.
ಸರ್ಕಾರವು 1968 ರಲ್ಲಿ ಸೆಪ್ಟೆಂಬರ್ 15 ಅನ್ನು ಇಂಜಿನಿಯರ್ಗಳ ದಿನವೆಂದು ಘೋಷಿಸಿತು. ವಿಶ್ವೇಶ್ವರಯ್ಯನವರ ಪರಂಪರೆಯನ್ನು ಗೌರವಿಸಲು ಮತ್ತು ಸಮಾಜಕ್ಕೆ ಎಲ್ಲಾ ಇಂಜಿನಿಯರ್ಗಳ ಕೊಡುಗೆಗಳನ್ನು ಗುರುತಿಸಲು ಭಾರತದಾದ್ಯಂತ ಇಂಜಿನಿಯರ್ಗಳು ಈ ದಿನವನ್ನು ಆಚರಿಸುತ್ತಾರೆ. ಅದಲ್ಲದೆ ಈ ದಿನವನ್ನು ಆಚರಿಸುವ ಮೂಲಕ, ನಮ್ಮ ಜೀವನವನ್ನು ಉತ್ತಮಗೊಳಿಸುವ ಇಂಜಿನಿಯರ್ಗಳಿಗೆ ನಾವು ನಮ್ಮ ಮೆಚ್ಚುಗೆಯನ್ನು ತೋರಿಸಬಹುದು.
ಇಂಜಿನಿಯರ್ ಗಳ ದಿನದ ಮಹತ್ವವು ಸಮಾಜದಲ್ಲಿ ಅವರು ವಹಿಸುವ ನಿರ್ಣಾಯಕ ಪಾತ್ರವನ್ನು ಗುರುತಿಸುವುದರಲ್ಲಿದೆ. ಮೂಲಸೌಕರ್ಯ ಮತ್ತು ಸಾರಿಗೆಯಿಂದ ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣೆಯ ವರೆಗೆ, ಇಂಜಿನಿಯರ್ ಗಳು ದೈನಂದಿನ ಜೀವನದ ಭಾಗವಾಗಿರುತ್ತಾರೆ. ಸರಳ ಭಾಷೆಯಲ್ಲಿ ಹೇಳುವುದಾದರೆ ಇಂಜಿನಿಯರ್ಗಳ ಜಾಣ್ಮೆ ಮತ್ತು ಸೃಜನಶೀಲತೆಯನ್ನು ಕೊಂಡಾಡುವ ದಿನ ಇದು ಎಂದು ಹೇಳಬಹುದಾಗಿದೆ. ಈ ದಿನವನ್ನು ಶಿಕ್ಷಣ ಸಂಸ್ಥೆಗಳು, ಇಂಜಿನಿಯರ್ ಕಾಲೇಜುಗಳು ಮತ್ತು ವೃತ್ತಿಪರ ಸಂಸ್ಥೆಗಳು ನಾನಾ ರೀತಿಯ ಸೆಮಿನಾರ್ ಗಳನ್ನು ಆಯೋಜಿಸಲಾಗುತ್ತದೆ. ಜೊತೆಗೆ ವಿವಿಧ ಕಾರ್ಯಾಗಾರಗಳು ಮತ್ತು ಸಮ್ಮೇಳನಗಳನ್ನು ನಡೆಸಲಾಗುತ್ತದೆ.
ಇದನ್ನೂ ಓದಿ: ಯಾವ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ಅಗತ್ಯವಿರುತ್ತದೆ? ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡುವುದು ಹೇಗೆ?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ