Event Calendar April 2025 : ಏಪ್ರಿಲ್ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳಾವುವು? ಇಲ್ಲಿದೆ ಮಾಹಿತಿ
2025 ರ ನಾಲ್ಕನೇ ತಿಂಗಳಾದ ಏಪ್ರಿಲ್ ಗೆ ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಏಪ್ರಿಲ್ ತಿಂಗಳಲ್ಲಿ ಮೂರ್ಖರ ದಿನ, ವಿಶ್ವ ಆರೋಗ್ಯ ದಿನ, ವಿಶ್ವ ಹೋಮಿಯೋಪತಿ ದಿನ, ಡಾ. ಬಿ.ಆರ್. ಅಬೇಂಡ್ಕರ್ ಜಯಂತಿ, ವಿಶ್ವ ಯಕೃತ್ ದಿನ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಒಳಗೊಂಡಿದೆ. ಪ್ರತಿಯೊಂದು ದಿನವೂ ಒಂದೊಂದು ಉದ್ದೇಶಗಳನ್ನು ಹೊಂದಿದ್ದು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಏಪ್ರಿಲ್ ತಿಂಗಳಲ್ಲಿ ಬರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ದಿನಗಳ ಬಗೆಗಿನ ಮಾಹಿತಿಯು ಇಲ್ಲಿದೆ.

2025 ರ ಏಪ್ರಿಲ್ (April) ತಿಂಗಳು ವರ್ಷದ 4ನೇ ತಿಂಗಳಾಗಿದ್ದು, ಈ ತಿಂಗಳಿನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಾಮಾನ, ಆರೋಗ್ಯ ಹಾಗೂ ಜನ್ಮದಿನ ಹೀಗೆ ಪ್ರತಿಯೊಂದು ದಿನವು ಒಂದೊಂದು ವಿಶೇಷತೆಗಳನ್ನು ಒಳಗೊಂಡಿದೆ. ಈ ಮಾಹಿತಿಯು ಸ್ಪರ್ಧಾತ್ಮಕ ತಯಾರಿ ನಡೆಸುವವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಹಾಗಾದ್ರೆ ಏಪ್ರಿಲ್ ನಲ್ಲಿ ಆಚರಿಸಲಾಗುವ ರಾಷ್ಟ್ರೀಯ (National) ಹಾಗೂ ಅಂತಾರಾಷ್ಟ್ರೀಯ (International) ದಿನಾಚರಣೆಗಳು ಬಗೆಗಿನ ಮಾಹಿತಿ ಇಲ್ಲಿದೆ.
ಏಪ್ರಿಲ್ ನಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ
* ಏಪ್ರಿಲ್ 01 – ಮೂರ್ಖರ ದಿನ
* ಏಪ್ರಿಲ್ 01 – ಒಡಿಶಾ ಸಂಸ್ಥಾಪನ ದಿನ
* ಏಪ್ರಿಲ್ 02 – ವಿಶ್ವ ಆಟಿಸಂ ಜಾಗೃತಿ ದಿನ
* ಏಪ್ರಿಲ್ 04 – ಅಂತಾರಾಷ್ಟ್ರೀಯ ಗಣಿ ಜಾಗೃತಿ ದಿನ
* ಏಪ್ರಿಲ್ 05 – ರಾಷ್ಟ್ರೀಯ ಕಡಲ ದಿನ
* ಏಪ್ರಿಲ್ 06 – ಅಂತಾರಾಷ್ಟ್ರೀಯ ಅಭಿವೃದ್ಧಿ ಮತ್ತು ಶಾಂತಿಗಾಗಿ ಕ್ರೀಡಾ ದಿನ
* ಏಪ್ರಿಲ್ 07 – ವಿಶ್ವ ಆರೋಗ್ಯ ದಿನ
* ಏಪ್ರಿಲ್ 10 – ವಿಶ್ವ ಹೋಮಿಯೋಪತಿ ದಿನ
* ಏಪ್ರಿಲ್ 11 – ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ
* ಏಪ್ರಿಲ್ 11- ರಾಷ್ಟ್ರೀಯ ಸಾಕುಪ್ರಾಣಿ ದಿನ
* ಏಪ್ರಿಲ್ 13 – ಜಲಿಯನ್ ವಾಲಾ ಬಾಗ್ ಹತ್ಯಾಕಂಡ
* ಏಪ್ರಿಲ್ 14 – ಡಾ. ಬಿ.ಆರ್ ಅಬೇಂಡ್ಕರ್ ಜಯಂತಿ
* ಏಪ್ರಿಲ್ 15 – ವಿಶ್ವ ಕಲಾ ದಿನ
* ಏಪ್ರಿಲ್ 17 – ವಿಶ್ವ ಹಿಮೋಫಿಲಿಯಾ ದಿನ
* ಏಪ್ರಿಲ್ 18 – ವಿಶ್ವ ಪರಂಪರೆ ದಿನ
* ಏಪ್ರಿಲ್ 19 – ವಿಶ್ವ ಯಕೃತ್ ದಿನ
* ಏಪ್ರಿಲ್ 21 – ರಾಷ್ಟ್ರೀಯ ನಾಗರಿಕ ಸೇವೆಗಳ ದಿನ
* ಏಪ್ರಿಲ್ 22 – ಭೂ ದಿನ
* ಏಪ್ರಿಲ್ 23 – ವಿಶ್ವ ಪುಸ್ತಕ ದಿನ
* ಏಪ್ರಿಲ್ 24 – ರಾಷ್ಟ್ರೀಯ ಪಂಚಾಯತ್ ರಾಜ್ ದಿನ
* ಏಪ್ರಿಲ್ 25 – ವಿಶ್ವ ಮಲೇರಿಯಾ ದಿನ
* ಏಪ್ರಿಲ್ 26 – ವಿಶ್ವ ಬೌದ್ಧಿಕ ಆಸ್ತಿ ದಿನ
* ಏಪ್ರಿಲ್ 26- ವಿಶ್ವ ಪಶುವೈದ್ಯಕೀಯ ದಿನ
* ಏಪ್ರಿಲ್ 29 – ಅಂತಾರಾಷ್ಟ್ರೀಯ ನೃತ್ಯ ದಿನ
* ಏಪ್ರಿಲ್ 30 – ಆಯುಷ್ಮಾನ್ ಭಾರತ್ ದಿವಸ್
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ