ಒಣದ್ರಾಕ್ಷಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಕಬ್ಬಿಣಾಂಶ, ನಾರಿನಂಶ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ತಾಮ್ರದಂತಹ ಹಲವಾರು ಪೋಷಕಾಂಶಗಳಿದ್ದು, ಇದನ್ನು ಸೇವಿಸುವುದರಿಂದ ದೇಹದ ದೌರ್ಬಲ್ಯ ದೂರವಾಗುವುದಲ್ಲದೆ ಜೀರ್ಣಾಂಗ ವ್ಯವಸ್ಥೆಯೂ ಬಲಗೊಳ್ಳುತ್ತದೆ. ಆದರೆ ಒಣದ್ರಾಕ್ಷಿಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ಅದರ ಸಂಪೂರ್ಣ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಒಣದ್ರಾಕ್ಷಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ನೀವು ಒಣದ್ರಾಕ್ಷಿಯನ್ನು ತಿನ್ನಲು ಬಯಸಿದರೆ ಒಂದು ದಿನದಲ್ಲಿ ಎಷ್ಟು ಪ್ರಮಾಣದಲ್ಲಿ ಒಣದ್ರಾಕ್ಷಿಯನ್ನು ಸೇವನೆ ಮಾಡಬೇಕು, ಅತಿಯಾದ ಒಣದ್ರಾಕ್ಷಿ ಸೇವನೆಯಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.
ಸಾಮಾನ್ಯವಾಗಿ ಒಂದು ದಿನದಲ್ಲಿ ಅರ್ಧ ಕಪ್ ನಿಂದ ಒಂದು ಕಪ್ ಒಣದ್ರಾಕ್ಷಿ ಸೇವನೆಯು ಸಾಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಂದರೆ ಸುಮಾರು 25 ರಿಂದ 50 ಗ್ರಾಂ ಒಣದ್ರಾಕ್ಷಿ ತಿನ್ನುವುದು ಪ್ರಯೋಜನಕಾರಿಯಾಗಿದೆ. ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಒಣದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಕಾರ್ಬೋಹೈಡ್ರೇಟ್, ಪ್ರೋಟೀನ್, ಕಬ್ಬಿಣ, ಮೆಗ್ನೇಸಿಯಂ, ಕ್ಯಾಲ್ಸಿಯಂ ಮತ್ತು ವಿಟಮಿನ್ಗಳಂತಹ ಪೋಷಕಾಂಶಗಳು ಒಣದ್ರಾಕ್ಷಿಯಲ್ಲಿ ಕಂಡುಬರುತ್ತದೆ. ಹಾಗಾಗಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಕ್ಯಾಲೋರಿ ಸೇವನೆಯು ಹೆಚ್ಚಾಗಬಹುದು. ಆದ್ದರಿಂದ ಒಂದು ದಿನದಲ್ಲಿ 50 ಗ್ರಾಂಗಿಂತ ಹೆಚ್ಚು ಒಣದ್ರಾಕ್ಷಿಯನ್ನು ತಿನ್ನಬಾರದು. ಅದರಲ್ಲೂ ಗರ್ಭಿಣಿಯರು ಹಾಗೂ ಮಧುಮೇಹಿಗಳು ಒಣದ್ರಾಕ್ಷಿಯ ಸೇವನೆ ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡಬೇಕು.
ತೂಕ ಹೆಚ್ಚಾಗುತ್ತದೆ:
ಹೆಚ್ಚು ಒಣದ್ರಾಕ್ಷಿಗಳನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಫ್ರಕ್ಟೋಸ್ ಮತ್ತು ಗ್ಲೂಕೋಸ್ ಇದೆ. ಈ ಕಾರಣದಿಂದ ಇದರ ಅತಿಯಾದ ಸೇವನೆಯಿಂದ ತೂಕವು ವೇಗವಾಗಿ ಹೆಚ್ಚಾಗುತ್ತದೆ. ಹಾಗಾಗಿ ಒಣದ್ರಾಕ್ಷಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಅವುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಗ್ಯಾಸ್ಟ್ರಿಕ್ ಆಗದಂತೆ ತಡೆಯಲು ಇಲ್ಲಿವೆ ಸರಳ ಮಾರ್ಗ
ಮಧುಮೇಹ ರೋಗಿಗಳಿಗೆ ಹಾನಿಕಾರಕ:
ಒಣದ್ರಾಕ್ಷಿಯು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದು ಮಧುಮೇಹಿಗಳಿಗೆ ಹಾನಿಕಾರಕವಾಗಿದೆ. ಆದ್ದರಿಂದ ಮಧುಮೇಹಿಗಳು ಒಣದ್ರಾಕ್ಷಿಗಳನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಇಲ್ಲದಿದ್ದರೆ ಇದು ಹಾನಿಕಾರಕವಾಗಿ ಪರಿಣಾಮಿಸಬಹುದು.
ಜೀವಕೋಶಗಳು ಹಾನಿಗೊಳಗಾಗಬಹುದು:
ಒಣದ್ರಾಕ್ಷಿ ಪಾಲಿಫಿನಾಲ್, ಬಯೋಫ್ಲೇವನಾಯ್ಡ್ ಮತ್ತು ಫೈಟೊನ್ಯೂಟ್ರಿಯೆಂಟ್ಗಳಂತಹ ಉತ್ಕರ್ಷಣ ನಿರೋಧಕಗಳಿಂದ ತುಂಬಿರುವುದರಿಂದ ಇದರ ಅತಿಯಾದ ಸೇವನೆಯಿಂದ ಜೀವಕೋಶಗಳಿಗೆ ಹಾನಿಯಾಗುವ ಸಾಧ್ಯತೆಯಿದೆ.
ಹೊಟ್ಟೆ ಸಂಬಂಧಿ ಸಮಸ್ಯೆ:
ಒಣದ್ರಾಕ್ಷಿಯಲ್ಲಿ ಫೈಬರ್ ಮತ್ತು ಫ್ರಕ್ಟೋಸ್ನಂತಹ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ, ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಒಣದ್ರಾಕ್ಷಿಯನ್ನು ಅತಿಯಾಗಿ ತಿನ್ನುವುದರಿಂದ ಮಲಬದ್ಧತೆ, ಗ್ಯಾಸ್, ಮತ್ತು ಹೊಟ್ಟೆನೋವಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: