Relationship Tips: ಅತಿಯಾದ ಸ್ಮಾರ್ಟ್‌ಫೋನ್ ಬಳಕೆ ನಿಮ್ಮ ದಾಂಪತ್ಯದ ಸಂಬಂಧವನ್ನು ಹಾಳುಮಾಡಬಹುದು

| Updated By: ಅಕ್ಷತಾ ವರ್ಕಾಡಿ

Updated on: Dec 13, 2022 | 7:30 PM

ಭಾರತದಲ್ಲಿ ಶೇಕಡಾ 88ರಷ್ಟು ದಂಪತಿಗಳ ಸಂಬಂಧ ಹಾಳಾಗಲು ಕಾರಣ ಅತಿಯಾದ ಸ್ಮಾರ್ಟ್‌ಫೋನ್ ಬಳಕೆ ಎಂದು ಅಧ್ಯಯನದ ಫಲಿತಾಂಶಗಳು ಸೂಚಿಸುತ್ತವೆ.

Relationship Tips:  ಅತಿಯಾದ ಸ್ಮಾರ್ಟ್‌ಫೋನ್ ಬಳಕೆ ನಿಮ್ಮ ದಾಂಪತ್ಯದ ಸಂಬಂಧವನ್ನು ಹಾಳುಮಾಡಬಹುದು
ಸಾಂದರ್ಭಿಕ ಚಿತ್ರ
Image Credit source: praetorianphoto
Follow us on

ಸ್ಮಾರ್ಟ್‌ಫೋನ್‌(Smartphone) ಗಳು ಜನರನ್ನು ಪರಸ್ಪರ ಸಂಪರ್ಕಿಸುವಲ್ಲಿ ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಅದೆಷ್ಟೋ ದೇಶ ವಿದೇಶದ ವ್ಯಕ್ತಿಗಳೊಂದಿಗೆ ಸುಲಭವಾಗಿ ಮಾತುಕತೆ ನಡೆಸಬಹುದಾಗಿದೆ. ಆದರೆ ಅತಿಯಾದರೆ ಅಮೃತವು ವಿಷ ಎನ್ನುವ ಮಾತಿದೆ. ಆದರಂತೆಯೇ ಇಂದು ತಂತ್ರಜ್ಞಾನ ಬೆಳೆಯುತ್ತಿದಂತೆ ಜನರು ಸಂಬಂಧ (Relationship)ಗಳ ಬೆಲೆ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂದು ಭಾರತದಲ್ಲಿ ಶೇಕಡಾ 88ರಷ್ಟು ದಂಪತಿಗಳ ಸಂಬಂಧ ಹಾಳಾಗಲು ಪ್ರಮುಖ ಕಾರಣ ಅತಿಯಾದ ಸ್ಮಾರ್ಟ್‌ಫೋನ್ ಬಳಕೆ ಎಂದು ಅಧ್ಯಯನದ ಫಲಿತಾಂಶ ಸ್ಪಷ್ಟಪಡಿಸಿದೆ.

ವಿವೋ ತನ್ನ ನಾಲ್ಕನೇ ಆವೃತ್ತಿಯ ಸ್ವಿಚ್ ಆಫ್ ಅಧ್ಯಯನದಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಸಂಬಂಧಗಳ ಮೇಲೆ ಅವುಗಳ ಪ್ರಭಾವ 2022(Smartphones and their impact on human relationships 2022) ಎಂಬ ಶೀರ್ಷಿಕೆಯ ಸಂಶೋಧನೆಯನ್ನು ಪ್ರಕಟಿಸಿದೆ. ಶೇಕಡಾ 67ರಷ್ಟು ಭಾರತೀಯರು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವಾಗಲೂ ಫೋನ್‌ ಬಳಸುತ್ತಾರೆ ಎಂದು ಸ್ವತಃ ಅವರೇ ಒಪ್ಪಿಕೊಂಡಿರುವ ಅಂಶ ಸಂಶೋಧನೆಯಿಂದ ತಿಳಿದುಬಂದಿದೆ. ಇದಲ್ಲದೇ ಶೇಕಡಾ 70ರಷ್ಟು ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಮುಳುಗಿರುವಾಗ ಅವರ ಸಂಗಾತಿಯು ಮಾತುಕತೆ ನಡೆಸಲು ಮುಂದಾದರೆ ಅವರು ಕಿರಿಕಿರಿಗೊಳ್ಳುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ.

ಇದನ್ನು ಓದಿ: ನಿಮ್ಮ ಸಂಗಾತಿಯ ಬಳಿ ಕ್ಷಮೆ ಕೇಳುವಾಗ, ಈ ತಪ್ಪುಗಳನ್ನು ಮಾಡಬೇಡಿ

ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯಿಂದ ಶೇಕಡಾ 66 ರಷ್ಟು ಜನರು ಸಂಬಂಧವನ್ನು ದುರ್ಬಲಗೊಳಿಸಿದ್ದಾರೆ, ಇದರಿಂದಾಗಿ ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಕಂಡು ಬರುತ್ತಿದೆ ಎಂದು ತಿಳಿದುಬಂದಿದೆ. ಇದಲ್ಲದೆ, ಶೇಕಡಾ 58 ರಷ್ಟು ಜನರು ಊಟ ಮಾಡುವಾಗ ಸ್ಮಾರ್ಟ್‌ಫೋನ್ ಬಳಸುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ ಜೊತೆಗೆ ಶೇಕಡಾ 86ರಷ್ಟು ಮಲಗುವ ಮೊದಲು ಫೋನ್ ನೋಡುತ್ತಾರೆ ಎಂದು ಹೇಳುತ್ತಾರೆ ಮತ್ತು ಶೇಕಡಾ 60ರಷ್ಟು ಜನರು ಕುಟುಂಬದೊಂದಿಗೆ ಕುಳಿತು ಮಾತನಾಡುವಾಗ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ ಎಂದು ಅಧ್ಯಯನವು ತಿಳಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: