
ಹೆಚ್ಚಾಗಿ ಹುಡುಗರು ತಮಗೆ ಇಷ್ಟವಾಗುವಂತ ಹುಡುಗಿಯೊಂದಿಗೆ ಫ್ಲರ್ಟ್ ಮಾಡಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವಕಾಶ ಸಿಕ್ಕಾಗೆಲ್ಲಾ ತಾವು ಇಷ್ಟಪಟ್ಟ ಹುಡುಗಿಯೊಂದಿಗೆ ಮಾತನಾಡಲು ಪ್ರಯತ್ನಿಸುವಂತಹದ್ದು, ಆಕೆಗೆ ಮೆಸೇಜ್ ಮಾಡುವಂತಹದ್ದನ್ನು ಮಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಈ ಹುಡುಗರು ತೋರ್ಪಡಿಸುವ ಕೆಲವೊಂದು ಗುಣಗಳು ಹುಡುಗಿಯರಿಗೆ (girls don’t like these qualities in guys) ತುಂಬಾ ಕಿರಿಕಿರಿಯನ್ನು ಉಂಟು ಮಾಡುತ್ತದೆ, ಅವರಿಗೆ ತುಂಬಾನೇ ಸಿಟ್ಟುತರಿಸುತ್ತದೆ ಹಾಗಾಗಿ ಪ್ರತಿಯೊಬ್ಬ ಹುಡುಗನೂ ತಾನು ಒಬ್ಬ ಹುಡುಗಿಯ ಜೊತೆ ಮಾತನಾಡುವಾಗ ಈ ಕೆಲವು ವಿಷಯಗಳ ಬಗ್ಗೆ ಮಾತನಾಡಬಾರದು ಎಂಬ ವಿಚಾರವನ್ನು ರಿಲೇಷನ್‌ಶಿಪ್ ಕೋಚ್ ಜವಾಲ್ ಭಟ್ (Javal Bhat) ತಿಳಿಸಿದ್ದಾರೆ. ಜವಾಲ್ ಹೇಳಿರುವಂತೆ, ಹುಡುಗಿಯರಿಗೆ ಹುಡುಗರ ಯಾವ ಗುಣಗಳು ಇಷ್ಟವಾಗುವುದಿಲ್ಲ ಎಂಬುದನ್ನು ನೋಡೋಣ ಬನ್ನಿ.
ಫೋನ್ ನಂಬರ್ ಕೇಳುವುದು: ಕೆಲವು ಹುಡುಗರು ಒಬ್ಬ ಹುಡುಗಿ ತಮಗೆ ಪರಿಚಯವಾದರೆ ಸಾಕು ಆಕೆಯ ಬಳಿ ಫೋನ್ ನಂಬರ್ ಕೇಳುತ್ತಾರೆ. ಹೀಗೆ ಪದೇ ಪದೇ ಫೋನ್ ನಂಬರ್ ಕೇಳುವುದು, ಕಿರಿಕಿರಿ ಮಾಡುವುದು ಯಾವ ಹುಡುಗಿಗೂ ಇಷ್ಟವಾಗುವುದಿಲ್ಲವೆಂದು ಜವಾಲ್ ಹೇಳುತ್ತಾರೆ.
ಹಿಂದಿನ ಕಥೆಗಳನ್ನು ಕೇಳುವುದು: ತಮ್ಮ ಹಿಂದಿನ ಪ್ರೇಮಕಥೆ, ಬ್ರೇಕಪ್ ಬಗ್ಗೆ ಯಾರು ಕೂಡ ಯಾರೊಂದಿಗೂ ಹಂಚಿಕೊಳ್ಳಲು ಅಷ್ಟಾಗಿ ಇಷ್ಟಪಡುವುದಿಲ್ಲ. ತಮಗೆ ತೀರಾ ಹತ್ತಿರದವರ ಬಳಿ ಮಾತ್ರ ಇಂತಹ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹೀಗಿರುವಾಗ ಒಬ್ಬ ಹುಡುಗ ಒಂದು ಹುಡುಗಿಯ ಬಳಿ ಆಕೆಯ ಪಾಸ್ಟ್ ಲೈಫ್ ಸ್ಟೋರಿ ಬಗ್ಗೆ ಕೇಳಿದರೆ ಅದು ಆಕೆಗೆ ಇಷ್ಟವಾಗುವುದಿಲ್ಲ. ಇದರಿಂದ ಆಕೆಗೆ ನೋವಾಗುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಈ ವಿಷಯದ ಬಗ್ಗೆ ಮಾತನಾಡಬಾರದು ಎನ್ನುತ್ತಾರೆ ಜವಾಲ್.
ವಿಡಿಯೋ ಇಲ್ಲಿದೆ ನೋಡಿ:
ಫೋಟೋ ಕೇಳುವುದು: ಕೆಲ ಹುಡುಗರು ತಮಗೆ ಇಷ್ಟವಾಗುವಂತಹ ಹುಡುಗಿಯ ಬಳಿ ಪದೇ ಪದೇ ಆಕೆಯ ಫೋಟೋವನ್ನು ಕೇಳುತ್ತಾರೆ. ಫೋಟೋ ಕಳಿಸು ಎಂದು ಕಿರಿಕಿರಿ ಮಾಡುತ್ತಾರೆ. ಖಂಡಿತವಾಗಿಯೂ ಹುಡುಗರ ಈ ಗುಣ ಯಾವ ಹುಡುಗಿಗೂ ಇಷ್ಟವಾಗುವುದಿಲ್ಲವಂತೆ. ಈ ಗುಣ ಹುಡುಗಿಯರಿಗೆ ಕೋಪ ತರಿಸುವ ಸಾಧ್ಯತೆ ಇರುತ್ತದೆ ಎಂದು ಜವಾಲ್ ಹೇಳುತ್ತಾರೆ.
ಇದನ್ನೂ ಓದಿ: ಈ ಅಭ್ಯಾಸಗಳೇ ಹಾಲು ಜೇನಿನಂತಹ ಸಂಬಂಧ ಹಾಳಾಗಲು ಮುಖ್ಯ ಕಾರಣ
ಅತಿಯಾಗಿ ಹೊಗಳುವುದು: ಕೆಲವು ಹುಡುಗರು ತಮಗೆ ಇಷ್ಟವಾಗುವ ಹುಡುಗಿಯ ಸೌಂದರ್ಯದ ಬಗ್ಗೆ ಪದೇ ಪದೇ ಹೊಗಳುತ್ತಿರುತ್ತಾರೆ. ನೀನು ತುಂಬಾ ಸುಂದರವಾಗಿದ್ದೀಯಾ, ಬೋಲ್ಡ್ ಆಗಿದ್ದೀಯಾ ಅಂತೆಲ್ಲಾ ಹೇಳುತ್ತಿರುತ್ತಾರೆ. ಈ ಗುಣ ಕೂಡಾ ಹುಡುಗಿಯರಿಗೆ ಇಷ್ಟವಾಗುವುದಿಲ್ಲ, ಇಂತಹ ಹೊಗಳಿಕೆಗಳು ಅವರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ ಎಂದು ಜವಾಲ್ ಹೇಳುತ್ತಾರೆ.
ಏನ್ ಮಾಡ್ತಿದ್ದೀಯಾ ಅನ್ನೋದು: ಕೆಲವರು ಹುಡುಗಿಯರಿಗೆ ಪದೇ ಪದೇ ಮೆಸೇಜ್ ಮಾಡುತ್ತಾ, ಏನ್ ಮಾಡ್ತಿದ್ದೀಯಾ, ನನ್ ಜೊತೆ ಮಾತಾಡು ಅಂತೆಲ್ಲಾ ಹೇಳುತ್ತಿರುತ್ತಾರೆ. ಈ ಮಾತುಗಳು ಹುಡುಗಿಯರಿಗೆ ಹಿಂಸೆ, ಕಿರಿಕಿರಿಯನ್ನು ಉಂಟು ಮಾಡುತ್ತದೆ. ಅದರಿಂದ ಅವರು ನಿಮ್ಮಿಂದ ಆದಷ್ಟು ದೂರವಿರಲು ಬಯಸುತ್ತಾರೆ. ಹಾಗಾಗಿ ಇಂತಹ ಪ್ರಶ್ನೆಗಳನ್ನು ಯಾವುದೇ ಹುಡುಗಿಯ ಬಳಿಯೂ ಕೇಳಬೇಡಿ ಎಂದು ಜವಾಲ್ ಹೇಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ